Xi Jinping: ಗೃಹಬಂಧನದಲ್ಲಿದ್ದಾರಾ ಚೀನಾ ಅಧ್ಯಕ್ಷ ಷೀ ಜಿನ್‌ಪಿಂಗ್?
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂಬ ಬಗ್ಗೆ ವದಂತಿಗಳು ಹರಿದಾಡುತ್ತಿವೆಯೇ ಹೊರತು ಅದಕ್ಕೆ ಯಾವುದೇ ಸಾಕ್ಷಿಗಳಾಗಲಿ, ಆ ಬಗ್ಗೆ ಅಧಿಕೃತ ಮಾಹಿತಿಯಾಗಲಿ ಇನ್ನೂ ಹೊರಬಿದ್ದಿಲ್ಲ.
ಬೀಜಿಂಗ್: ಚೀನಾದ ಅಧ್ಯಕ್ಷ ಷೀ ಜಿನ್‌ಪಿಂಗ್ (xi Jinping) ಅವರನ್ನು ಗೃಹಬಂಧನದಲ್ಲಿ (House Arrest) ಇರಿಸಲಾಗಿದೆಯೇ? ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಟ್ವಿಟ್ಟರ್ ಸೇರಿದಂತೆ ಹಲವೆಡೆ ಹರಿದಾಡುತ್ತಿದೆ. ಕಳೆದ 2 ವರ್ಷಗಳಿಂದ ಚೀನಾ ಅಧ್ಯಕ್ಷ (China President) ಷೀ ಜಿನ್‌ಪಿಂಗ್ ಬೀಜಿಂಗ್‌ನಲ್ಲಿರುವ ತಮ್ಮ ಮನೆಯಿಂದ ಹೊರಬಂದಿಲ್ಲ ಮತ್ತು ಯಾವುದೇ ಜಾಗತಿಕ ನಾಯಕರನ್ನು ಭೇಟಿಯಾಗಲಿಲ್ಲ. ಹಾಗೇ, ಯಾವುದೇ ಪ್ರಮುಖ ಸಿಸಿಪಿ ನಾಯಕರನ್ನು ಕೂಡ ಭೇಟಿಯಾಗಿಲ್ಲ ಎನ್ನಲಾಗುತ್ತಿದೆ.
ಆದರೆ, ಕಳೆದ ಸೆಪ್ಟೆಂಬರ್ 14ರಂದು ನಿರಂಕುಶ ನಾಯಕ ಷೀ ಜಿನ್‌ಪಿಂಗ್ ಉಜ್ಬೇಕಿಸ್ತಾನ್‌ನ ಸಮರ್ಕಂಡ್‌ನಲ್ಲಿ ನಡೆಯುವ ಎಸ್ಸಿಓ (SCO) ಸಭೆಯಲ್ಲಿ ಪಾಲ್ಗೊಳ್ಳಲು ತನ್ನ ಮನೆಯಿಂದ ಹೊರಬಂದಿದ್ದರು. 2 ವರ್ಷಗಳ ನಂತರ ಕ್ಸಿ ಜಿನ್‌ಪಿಂಗ್ ವಿಶೇಷ ವಿಮಾನದ ಮೂಲಕ ಮಧ್ಯ ಏಷ್ಯಾಕ್ಕೆ ತೆರಳಿದ್ದರು. ಅಲ್ಲಿ ಶಾಂಘೈ ಸಹಕಾರ ಸಂಸ್ಥೆಯ (SCO) ಕೌನ್ಸಿಲ್ ಆಫ್ ಹೆಡ್ಸ್ ಆಫ್ ಸ್ಟೇಟ್‌ನ 22ನೇ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
SCOದ ಸ್ಥಾಪಕ ಸದಸ್ಯನಾಗಿದ್ದರೂ ಚೀನಾದ ಅಧ್ಯಕ್ಷ ಷೀ ಜಿನ್‌ಪಿಂಗ್ ಆ ಶೃಂಗಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿಲ್ಲ. ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಯಾವುದೇ ಸ್ಮರಣೀಯ ಭಾಷಣವನ್ನು ನೀಡಲಿಲ್ಲ. ತಮ್ಮ ಜೊತೆಗಿದ್ದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅಥವಾ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಯಾವುದೇ ಪ್ರಮುಖ ನಾಯಕರ ಜೊತೆ ಮಾತುಕತೆ ನಡೆಸಲಿಲ್ಲ. ಕ್ಸಿ ಜಿನ್‌ಪಿಂಗ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂಬ ಬಗ್ಗೆ ವದಂತಿಗಳು ಹರಿದಾಡುತ್ತಿವೆಯೇ ಹೊರತು ಅದಕ್ಕೆ ಯಾವುದೇ ಸಾಕ್ಷಿಗಳಾಗಲಿ, ಆ ಬಗ್ಗೆ ಅಧಿಕೃತ ಮಾಹಿತಿಯಾಗಲಿ ಇನ್ನೂ ಹೊರಬಿದ್ದಿಲ್ಲ.
Rumors are swirling across the internet of a military coup in China and that Xi Jinping is under arrest after CCP seniors removed him as head of the PLA. Is the massive cancellation of flights in China just a military exercise, or is there something more to it? ? pic.twitter.com/VDyQZacM2T
— Theresa Fallon (@TheresaAFallon) September 23, 2022
ಕೊವಿಡ್-19 ನೆಪವೊಡ್ಡಿ ಅವರು ಪುಟಿನ್ ಅವರೊಂದಿಗೆ ಅನೌಪಚಾರಿಕ ಭೋಜನವನ್ನು ಕೂಡ ಸ್ವೀಕರಿಸಲಿಲ್ಲ. SCO ಶೃಂಗಸಭೆಯ ಅಧಿಕೃತ ಮುಕ್ತಾಯಕ್ಕೂ ಮೊದಲೇ ಜಿನ್‌ಪಿಂಗ್ ಬೀಜಿಂಗ್‌ಗೆ ತೆರಳಿದ್ದರು. ಬಹುಶಃ ಯಾವುದೇ ಗಾಢ ಚಿಂತೆಯಲ್ಲಿದ್ದರು ಮತ್ತು ಗಾಬರಿಗೊಂಡಿದ್ದರು ಎಂದು ನಂತರ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಈಗ ಬೀಜಿಂಗ್‌ನಿಂದ ಹೊರಬರುವ ವರದಿಗಳ ಪ್ರಕಾರ, ಚೀನಾ ಅಧ್ಯಕ್ಷ ಜಿನ್‌ಪಿಂಗ್ ಅವರ ಮನೆಯಲ್ಲಿ ಏನು ನಡೆಯುತ್ತಿದೆ ಎಂದು ಜಾಗತಿಕ ಮಾಧ್ಯಮಗಳಿಗೆ ತಿಳಿದಿಲ್ಲ. ನ್ಯೂಸ್ ಹೈಲ್ಯಾಂಡ್ ವಿಷನ್ ಪ್ರಕಾರ, ಚೀನಾದ ಮಾಜಿ ಅಧ್ಯಕ್ಷ ಹು ಜಿಂಟಾವೊ ಮತ್ತು ಮಾಜಿ ಚೀನೀ ಪ್ರೀಮಿಯರ್ ವೆನ್ ಜಿಯಾಬಾವೊ ಅವರು ಸ್ಥಾಯಿ ಸಮಿತಿಯ ಮಾಜಿ ಸದಸ್ಯ ಸಾಂಗ್ ಪಿಂಗ್ ಅವರನ್ನು ಮನವೊಲಿಸಿ ಸೆಂಟ್ರಲ್ ಗಾರ್ಡ್ ಬ್ಯೂರೋ (CGB)ದ ನಿಯಂತ್ರಣವನ್ನು ಮರಳಿ ಪಡೆದಿದ್ದಾರೆ. ಈ ಸಿಜಿಬಿಯ ಉದ್ದೇಶವೇನೆಂದರೆ, ಪಾಲಿಟ್‌ಬ್ಯೂರೋ ಸ್ಥಾಯಿ ಸಮಿತಿಯ ಸದಸ್ಯರು ಮತ್ತು ಇತರ ಸಿಸಿಪಿ ನಾಯಕರಿಗೆ ನಿಕಟ ಸಿಬ್ಬಂದಿ ರಕ್ಷಣೆಯನ್ನು ಒದಗಿಸುವುದು. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ರಕ್ಷಣೆಯ ಜವಾಬ್ದಾರಿಯೂ ಈ ಸಮಿತಿಯ ಮೇಲಿದೆ.
Something is up in #China. The rumors remind us, once again, that the country is volatile and very few outsiders know what happens in senior #CCP circles. Stay tuned for announcements, news, info, rumors, tidbits, and gossip. https://t.co/T1osoQkXhq
— Gordon G. Chang (@GordonGChang) September 23, 2022
ಇದನ್ನೂ ಓದಿ: SCO Summit: ಚೀನಾ ರಷ್ಯಾದೊಂದಿಗೆ ಮಹಾನ್ ಶಕ್ತಿಯಾಗಿ ಕೆಲಸ ಮಾಡುತ್ತದೆ : ಕ್ಸಿ ಜಿನ್‌ಪಿಂಗ್
ಹೂ ಮತ್ತು ವೆನ್ ಅವರು CGBಯ ನಿಯಂತ್ರಣವನ್ನು ಮರಳಿ ಪಡೆದ ಕೂಡಲೆ ಜಿಯಾಂಗ್ ಝೆಂಗ್ ಮತ್ತು ಬೀಜಿಂಗ್‌ನಲ್ಲಿರುವ ಕೇಂದ್ರ ಸಮಿತಿಯ ಸದಸ್ಯರಿಗೆ ದೂರವಾಣಿ ಮೂಲಕ ಮಾಹಿತಿಯನ್ನು ರವಾನಿಸಲಾಯಿತು. ಮೂಲ ಸ್ಥಾಯಿ ಸಮಿತಿ ಸದಸ್ಯರು ಆ ಕ್ಷಣದಲ್ಲಿಯೇ ಜಿನ್‌ಪಿಂಗ್ ಅವರ ಮಿಲಿಟರಿ ಅಧಿಕಾರವನ್ನು ರದ್ದುಗೊಳಿಸಿದ್ದರು.
#PLA military vehicles heading to #Beijing on Sep 22. Starting from Huanlai County near Beijing & ending in Zhangjiakou City, Hebei Province, entire procession as long as 80 KM. Meanwhile, rumor has it that #XiJinping was under arrest after #CCP seniors removed him as head of PLA pic.twitter.com/hODcknQMhE
— Jennifer Zeng 曾錚 (@jenniferatntd) September 23, 2022
ಈ ವಿಷಯ ತಿಳಿದ ನಂತರ ಜಿನ್‌ಪಿಂಗ್ ಸೆಪ್ಟೆಂಬರ್ 16ರ ಸಂಜೆ ಬೀಜಿಂಗ್‌ಗೆ ಮರಳಿದ್ದಾರೆ. ಆದರೂ ಅವರನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಬಹುಶಃ ಇದೀಗ ಅವರನ್ನು ಅವರ ಮನೆಯಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದೆ ಎನ್ನಲಾಗಿದೆ. ಪ್ರಸ್ತುತ ಚೀನಾದ ಪರಿಸ್ಥಿತಿಯನ್ನು ಹೂ ಜಿಂಟಾವೊ ನಿಯಂತ್ರಿಸುತ್ತಿದ್ದಾರೆ. ಕಳೆದ 10 ದಿನಗಳಿಂದ ಸಂಪೂರ್ಣ ಗೌಪ್ಯವಾಗಿ ರಾಜಕೀಯ ಸಭೆಗಳು ನಡೆಯುತ್ತಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:21 pm, Sat, 24 September 22