ಏಕಾಏಕಿ ಟಿಬೆಟ್​ಗೆ ಭೇಟಿ ನೀಡಿದ ಚೀನಾ ಅಧ್ಯಕ್ಷ; ಷಿ ಜಿನ್​ಪಿಂಗ್​​ರ ಈ 3 ದಿನಗಳ ಪ್ರವಾಸದಿಂದ ಭಾರತಕ್ಕೆ ಅಪಾಯ ಎಂದ ಅಮೆರಿಕ ಸಂಸದ

ಕಳೆದ ವಾರ ಚೀನಾದ ಸರ್ವಾಧಿಕಾರಿ ಕ್ಸಿ ಜಿನ್​ಪಿಂಗ್ ಭಾರತದ ಗಡಿ ಸಮೀಪ ಇರುವ ಟಿಬೆಟ್​ಗೆ ಭೇಟಿ ಕೊಟ್ಟಿದ್ದರು. ನನಗೆ ಗೊತ್ತಿರುವ ಪ್ರಕಾರ ಕಳೆದ 30ವರ್ಷಗಳಲ್ಲಿ ಚೀನಾದ ಅಧ್ಯಕ್ಷರಾದವರು ಟಿಬೆಟ್​ಗೆ ಭೇಟಿ ಕೊಟ್ಟಿದ್ದು ಎಂದು ಅಮೆರಿಕ ಸಂಸದ ಹೇಳಿದ್ದಾರೆ.

ಏಕಾಏಕಿ ಟಿಬೆಟ್​ಗೆ ಭೇಟಿ ನೀಡಿದ ಚೀನಾ ಅಧ್ಯಕ್ಷ; ಷಿ ಜಿನ್​ಪಿಂಗ್​​ರ ಈ 3 ದಿನಗಳ ಪ್ರವಾಸದಿಂದ ಭಾರತಕ್ಕೆ ಅಪಾಯ ಎಂದ ಅಮೆರಿಕ ಸಂಸದ
ಚೀನಾ ಅಧ್ಯಕ್ಷ ಕ್ಸಿ ಜಿನ್​​ಪಿಂಗ್​
Follow us
TV9 Web
| Updated By: Lakshmi Hegde

Updated on:Jul 27, 2021 | 2:43 PM

ವಾಷಿಂಗ್ಟನ್​: ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ (Xi Jinping)​ ಅವರ ಕಳೆದ ವಾರದ ಟಿಬೆಟ್​ ಭೇಟಿ ಭಾರತಕ್ಕೆ ಅಪಾಯ ತಂದೊಡ್ಡಬಹುದು ಎಂದು ಅಮೆರಿಕ (America)ದ ಜನಪ್ರತಿನಿಧಿಯೊಬ್ಬರು ಹೇಳಿದ್ದಾರೆ. ಅಲ್ಲದೆ, ಅಮೆರಿಕ ಅಧ್ಯಕ್ಷ ಜೋ ಬೈಡನ್ (Jeo Biden)​ ಚೀನಾದ ಮುನ್ನುಗ್ಗುವಿಕೆಯನ್ನು ತಡೆಗಟ್ಟಲು ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಚೀನಾ ಅಧ್ಯಕ್ಷ ಕಳೆದ ಬುಧವಾರದಿಂದ ಮೂರು ದಿನ ಟಿಬೆಟ್​ನ ನ್ಯಿಂಗ್​ಚೀ ಪ್ರವಾಸ ಕೈಗೊಂಡಿದ್ದರು. ಈ ಪ್ರದೇಶ ಅರುಣಾಚಲ ಪ್ರದೇಶದಿಂದ ತುಂಬ ಸನಿಹದಲ್ಲಿದೆ. ಚೀನಾ ಅಧ್ಯಕ್ಷ (Chinese President)ರು ಪ್ರವಾಸದ ಬಗ್ಗೆ ಮುಂಚಿತವಾಗಿ ಯಾವುದೇ ಘೋಷಣೆ ಮಾಡದೆ ಇರುವುದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇನ್ನು ಚೀನಾ ಕಮ್ಯೂನಿಸ್ಟ್​ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕ್ಸಿ ಜಿನ್​ಪಿಂಗ್​, ಟಿಬೆಟ್​​ನ ಮಿಲಿಟರಿ ಕಮಾಂಡ್​ ಅಧಿಕಾರಿಗಳನ್ನು ಭೇಟಿಯಾಗಿ, ಪ್ರಾದೇಶಿಕವಾಗಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅಮೆರಿಕ ರಿಪಬ್ಲಿಕನ್​ ಪಕ್ಷದ ಸಂಸದ ಡೆವಿನ್ ನುನ್ಸ್​, ಕಳೆದ ವಾರ ಚೀನಾದ ಸರ್ವಾಧಿಕಾರಿ ಷಿ ಜಿನ್​ಪಿಂಗ್ ಭಾರತದ ಗಡಿ ಸಮೀಪ ಇರುವ ಟಿಬೆಟ್​ಗೆ ಭೇಟಿ ಕೊಟ್ಟಿದ್ದರು. ನನಗೆ ಗೊತ್ತಿರುವ ಪ್ರಕಾರ ಕಳೆದ 30ವರ್ಷಗಳಲ್ಲಿ ಚೀನಾದ ಅಧ್ಯಕ್ಷರಾದವರು ಟಿಬೆಟ್​ಗೆ ಭೇಟಿ ಕೊಟ್ಟಿದ್ದು ಇದೇ ಮೊದಲು. ಖಂಡಿತ ಅವರ ಭೇಟಿ ಭಾರತಕ್ಕೆ ಅಪಾಯದ ಬೆದರಿಕೆಯಾಗಲಿದೆ. ಇನ್ನು ಈ ಪ್ರದೇಶದಲ್ಲಿ ಬ್ರಹ್ಮಪುತ್ರಾ ನದಿಗೆ (ಈ ನದಿಗೆ ಟಿಬೆಟಿಯನ್ ಭಾಷೆಯಲ್ಲಿ ಯಾರ್ಲುಂಗ್ ತ್ಸಾಂಗ್ಪೋ ಎಂದು ಕರೆಯುತ್ತಾರೆ) ಅಣೆಕಟ್ಟು ಕಟ್ಟುವ ದೊಡ್ಡ ಯೋಜನೆಯನ್ನು ಚೀನಾ ಹಾಕಿಕೊಂಡಿದ್ದು, ಇದರಿಂದ ಭಾರತಕ್ಕೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಷಿ ಜಿನ್​ಪಿಂಗ್ ​ ಅವರು ನ್ಯಿಂಗ್​ ಚೀಗೆ ಭೇಟಿ ನೀಡಿದ್ದಾಗ, ಬ್ರಹ್ಮಪುತ್ರಾ ನದಿಯ ಜಲಾನಯನ ಪ್ರದೇಶದಲ್ಲಿನ ಪರಿಸರ ಸಂರಕ್ಷಣೆಯನ್ನು ಪರಿಶೀಲಿಸುವ ಸಲುವಾಗಿ ನ್ಯಾಂಗ್​ ನದಿಯ ಸೇತುವೆ ಬಳಿಯೂ ತೆರಳಿದ್ದರು. ಟಿಬೆಟ್​​ ಬಳಿ ಬ್ರಹ್ಮಪುತ್ರಾ ನದಿಗೆ, 14ನೇ ಪಂಚವಾರ್ಷಿಕ ಯೋಜನೆಯಡಿ ದೊಡ್ಡದಾದ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಈ ವರ್ಷ ಅನುಮೋದನೆ ನೀಡಿದ್ದು, ಇದರಿಂದ ಭಾರತ ಮತ್ತು ಬಾಂಗ್ಲಾದೇಶಗಳಿಗೆ ಸಹಜವಾಗಿಯೇ ಕಳವಳ ಉಂಟಾಗಿದೆ. ಅದರಲ್ಲೂ ಕಳೆದ ವಾರ ಷಿ ಜಿನ್​ಪಿಂಗ್​ ಟಿಬೆಟ್​ಗೆ ಭೇಟಿ ಕೊಟ್ಟಿದ್ದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದರ ಬಗ್ಗೆ ನುನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದು, ಚೀನಾದ ಸರಹದ್ದು ದಾಟುವಿಕೆಯ ಪ್ರವೃತ್ತಿ ಹೆಚ್ಚುತ್ತಿದೆ. ಅದನ್ನು ನಿಯಂತ್ರಿಸಬೇಕು. ಆದರೆ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಕೂಡ ಗಮನ ಹರಿಸುತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ವೇಟ್​ಲಿಫ್ಟಿಂಗ್​ ಮಾಡಿದ ಪುಟ್ಟ ಬಾಲಕಿ! ಮೀರಾಬಾಯಿ ಚಾನು ಅವರ ಪ್ರತಿಕ್ರಿಯೆ ಏನಿತ್ತು ನೋಡಿ

Chinese President Xi Jinping Tibet Visit is threat to India Says US Lawmaker

Published On - 12:40 pm, Tue, 27 July 21

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?