Vijay Mallya: ವಿಜಯ್ ಮಲ್ಯ ದಿವಾಳಿ ಎಂದ ಬ್ರಿಟನ್ ಕೋರ್ಟ್
ವಿಜಯ್ ಮಲ್ಯ ವಿರುದ್ಧ ಇಂಗ್ಲೆಂಡ್ ಹೈಕೋರ್ಟ್ ದಿವಾಳಿತನದ ಆದೇಶ ಹೊರಡಿಸಿದೆ.
ಉದ್ಯಮಿ ವಿಜಯ್ ಮಲ್ಯ ವಿರುದ್ಧ ಬ್ರಿಟನ್ ಹೈಕೋರ್ಟ್ ದಿವಾಳಿತನದ ಆದೇಶ ಹೊರಡಿಸಿದ್ದು, ಭಾರತೀಯ ಸ್ಟೇಟ್ ಬ್ಯಾಂಕ್ ತನಗೆ ವಿಜಯ್ ಮಲ್ಯ ಅವರಿಂದ ಬರಬೇಕಿರುವ ಬಾಕಿ ಮೊತ್ತವನ್ನು ಹಿಂಪಡೆಯಲು ವಿಶ್ವದ ವಿವಿದೆಡೆ ಇರುವ ವಿಜಯ ಮಲ್ಯ ಹೊಂದಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡಿದೆ.
ವಿಜಯ್ ಮಲ್ಯ ಅವರು ಬ್ಯಾಂಕ್ಗಳಿಗೆ ಪಾವತಿಸಬೇಕಿರುವ ಬಾಕಿ ಮೊತ್ತವನ್ನು ನಿಗದಿತ ಅವಧಿಯೊಳಗೆ ನೀಡಲು ಶಕ್ತರಾಗಿರುವಂತೆ ತೋರುವುದಿಲ್ಲ ಎಂದು ಬ್ರಿಟನ್ನ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಜತೆಗೆ ವಿಜಯ್ ಮಲ್ಯ ಈ ಆದೇಶವನ್ನು ಪ್ರಶ್ನಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸಹ ಕೋರ್ಟ್ ಪುರಸ್ಕರಿಸಿಲ್ಲ.
UK High Court issues bankruptcy order against Vijay Mallya, allowing Indian banks to pursue his assets worldwide pic.twitter.com/GuWuodrQe8
— ANI (@ANI) July 26, 2021
ಬ್ರಿಟನ್ ಕೋರ್ಟ್ನ ಈ ಆದೇಶದ ಪ್ರಕಾರ ಮುಂದಿನ ದಿನಗಳಲ್ಲಿ ಉದ್ಯಮಿ ವಿಜಯ್ ಮಲ್ಯ ಅವರಿಂದ ಬಾಕಿ ಹಣ ಹಿಂಪಡೆಯಲು ಬ್ಯಾಂಕ್ಗಳಿಗೆ ಸಹಾಯವಾಗಲಿದೆ ಎಂದು ಹೇಳಲಾಗಿದೆ. ಉದ್ಯಮಿ ವಿಜಯ್ ಮಲ್ಯ ಸಾಲ ಹಿಂಪಡೆಯುವ ಪ್ರಕರಣವನ್ನು ಒಂದು ತಾರ್ಕಿಕ ಅಂತ್ಯ ಕಾಣುವಂತೆ ಮಾಡಬೇಕು ಎಂದು ಬ್ಯಾಂಕ್ಗಳ ಒಕ್ಕೂಟ ಕೋರ್ಟ್ಗೆ ಮನವಿ ಸಲ್ಲಿಸಿತ್ತು. 9 ವಿವಿಧ ಬ್ಯಾಂಕ್ಗಳಿಗೆ 9 ಸಾವಿರ ಕೋಟಿ ಸಾಲವನ್ನು ಮರು ಪಾವತಿಸಿದೇ ಉದ್ಯಮಿ ವಿಜಯ್ ಮಲ್ಯ ವಿದೇಶಕ್ಕೆ ಪರಾರಿಯಾಗಿದ್ದರು.
ಇದನ್ನೂ ಓದಿ:
How To: ಉಳಿತಾಯಕ್ಕೆ ಅತ್ಯುತ್ತಮ ಮಾರ್ಗ, ಮ್ಯೂಚುವಲ್ ಫಂಡ್ ಹೂಡಿಕೆಗೆ ಇಲ್ಲಿದೆ ಐದು ಸರಳ ಟಿಪ್ಸ್
ನಾ ಕಂಡ ಯಡಿಯೂರಪ್ಪ: ವರದಿಗಾರ ರಾಮ್ ಮೈಸೂರು ವಿಶೇಷ ಬರಹ
(UK court declares fugitive businessman vijay mallya bankrupt)
Published On - 10:55 pm, Mon, 26 July 21