How To: ಉಳಿತಾಯಕ್ಕೆ ಅತ್ಯುತ್ತಮ ಮಾರ್ಗ, ಮ್ಯೂಚುವಲ್​ ಫಂಡ್ ಹೂಡಿಕೆಗೆ ಇಲ್ಲಿದೆ ಐದು ಸರಳ ಟಿಪ್ಸ್​

ಕೈಲಿ ಸ್ವಲ್ಪ ಗಂಟು ಇದೆ, ಎಲ್ಲಿ ಹೂಡಿಕೆ ಮಾಡಿದ್ರೆ ಒಳ್ಳೇದು? ನನಗೆ ಜೀವನದಲ್ಲಿ ದೊಡ್ಡ ಗುರಿಗಳಿವೆ. ಪ್ರತಿತಿಂಗಳು ಇಷ್ಟಿಷ್ಟೇ ಅಂತ ಹೂಡಿಕೆ ಮಾಡೋ ಆಸೆಯಿದೆ. ಯಾವುದು ಸರಿಯಾದ ಮಾರ್ಗ?

How To: ಉಳಿತಾಯಕ್ಕೆ ಅತ್ಯುತ್ತಮ ಮಾರ್ಗ, ಮ್ಯೂಚುವಲ್​ ಫಂಡ್ ಹೂಡಿಕೆಗೆ ಇಲ್ಲಿದೆ ಐದು ಸರಳ ಟಿಪ್ಸ್​
ಸಾಂದರ್ಭಿಕ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Jul 26, 2021 | 10:28 PM

ಕೈಲಿ ಸ್ವಲ್ಪ ಗಂಟು ಇದೆ, ಎಲ್ಲಿ ಹೂಡಿಕೆ ಮಾಡಿದ್ರೆ ಒಳ್ಳೇದು? ನನಗೆ ಜೀವನದಲ್ಲಿ ದೊಡ್ಡ ಗುರಿಗಳಿವೆ. ಪ್ರತಿತಿಂಗಳು ಇಷ್ಟಿಷ್ಟೇ ಅಂತ ಹೂಡಿಕೆ ಮಾಡೋ ಆಸೆಯಿದೆ. ಯಾವುದು ಸರಿಯಾದ ಮಾರ್ಗ? ನನಗೆ ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಆಸಕ್ತಿಯಿದೆ. ಆದರೆ ಅದನ್ನು ನಿರ್ವಹಿಸುವಷ್ಟು ಸಮಯವಾಗಲೀ, ಜ್ಞಾನವಾಗಲಿ ಇಲ್ಲ. ನನಗಿರುವ ಅತ್ಯುತ್ತಮ ಆಯ್ಕೆ ಯಾವುದು?

ಇಂಥ ಪ್ರಶ್ನೆಗಳು ನಿಮ್ಮಲ್ಲೂ ಇರಬಹುದು. ಈ ಎಲ್ಲ ಪ್ರಶ್ನೆಗಳೂ ಇರುವ ಒಂದೇ ಉತ್ತರ ಮ್ಯೂಚುವಲ್ ಫಂಡ್. ವಿಶ್ವಾಸದ ಬುನಾದಿಯ ಮೇಲೆ, ಕಾನೂನು-ನಿಬಂಧನೆಗಳ ತಳಹದಿಯ ಮೇಲೆ ನಡೆಯುವ ವಹಿವಾಟು ಅದು. ಅಲ್ಪಾವಧಿ, ಮಧ್ಯಮಾವಧಿ ಅಥವಾ ದೀರ್ಘಾವಧಿ.. ಹೀಗೆ ನಿಮ್ಮ ಹೂಡಿಕೆಯ ಅವಧಿ ಎಷ್ಟೇ ಆಗಿದ್ದರೂ ಮ್ಯೂಚುವಲ್ ಫಂಡ್​ನಲ್ಲಿ ಉತ್ತರವಿದೆ. ಈಕ್ವಿಟಿ ಅಥವಾ ಡೆಟ್.. ನಿಮ್ಮ ಹೂಡಿಕೆ ಆಸಕ್ತಿ ಯಾವುದೇ ಆಗಿದ್ದರೂ ಮ್ಯೂಚುವಲ್ ಫಂಡ್​ನಲ್ಲಿ ಆಯ್ಕೆಗಳಿವೆ.

ನೀವು ಮ್ಯೂಚುವಲ್​ ಫಂಡ್​ಗಳಲ್ಲಿ ತೊಡಗಿಸುವ ಹಣವನ್ನು ಎಲ್ಲಿ ಹೂಡಬೇಕು, ಹೇಗೆ ಉತ್ತಮ ರಿಟರ್ನ್ಸ್ ಸಿಗುವಂತೆ ಮಾಡಬೇಕು ಎಂಬ ಬಗ್ಗೆ ಆಲೋಚಿಸುವುದಕ್ಕೆ ಅಂತಲೇ ಫಂಡ್ ಮ್ಯಾನೇಜರ್​ಗಳು ಇರುತ್ತಾರೆ. ತುಂಬ ಒಳ್ಳೆ ರಿಟರ್ನ್ಸ್ ಸಿಗುವಂತೆ ಮಾಡಬಲ್ಲ ಹೆಸರಾಂತ ಫಂಡ್​ ಮ್ಯಾನೇಜರ್​ಗಳು ಅಂತ ಮಾರುಕಟ್ಟೆಯಲ್ಲಿ ಈಗಾಗಲೇ ಚಲಾವಣೆಯಲ್ಲಿ ಇರುವವರು ಸಹ ಹಲವರಿದ್ದಾರೆ. ಅವರು ನಿಮ್ಮ ಹಣವನ್ನು ಸರಿಯಾದ ಕಡೆಗೆ ಹಾಕುವುದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಶುಲ್ಕವನ್ನು ಸಹ ಪಡೆದುಕೊಳ್ಳುತ್ತಾರೆ.

ನೀವು ಜಾಹೀರಾತು ನೋಡಿರಬಹುದು, ಹಿರಿಯ ಹೂಡಿಕೆದಾರರು ಅಥವಾ ವೈಯಕ್ತಿಕ ಹಣಕಾಸು ಸಲಹೆಗಾರರ ಮಾತಿನಲ್ಲಿ ಮ್ಯೂಚುವಲ್ ಫಂಡ್ ಹೆಸರು ಕೇಳಿರಬಹುದು. ಹೂಡಿಕೆಗೆ ಆಸಕ್ತಿಯಿದ್ದರೂ ಹೇಗೆ ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಸಿಗದಿರಬಹುದು. ಮ್ಯೂಚುವಲ್ ಫಂಡ್​ ಕುರಿತ ನಿಮ್ಮ ಮನದ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

1) ಎಷ್ಟು ಕಾಸಿದ್ದರೆ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಬಹುದು? ಮ್ಯೂಚುವಲ್​ ಫಂಡ್​ಗಳಲ್ಲಿ ಹೂಡಿಕೆ ಮಾಡಲು ಲಕ್ಷಾಂತರ ರೂಪಾಯಿ ಹಣ ಬೇಕು ಎಂದೇನಿಲ್ಲ. ತಿಂಗಳಿಗೆ ಕನಿಷ್ಠ ₹ 500 ರೂಪಾಯಿಯಿಂದ ಎಸ್​ಐಪಿ (Systematic Investment Plan – SIP) ಮಾರ್ಗದಲ್ಲಿ ನೀವು ಹೂಡಿಕೆ ಆರಂಭಿಸಬಹುದು. ಹೆಚ್ಚು ಹಣ ಇದ್ದವರಿಗೆ ಒಮ್ಮೆಲೆ ಹೂಡಿಕೆ ಮಾಡಲು ಲಂಪ್​ಸಮ್​ (Lumpsum) ಹೂಡಿಕೆಯ ಮಾರ್ಗವಿದೆ.

2) ಮ್ಯೂಚುವಲ್ ಫಂಡ್ ಹೇಗೆ ಕೆಲಸ ಮಾಡುತ್ತೆ? ಮ್ಯೂಚುವಲ್ ಫಂಡ್​ ನಿಧಿಯನ್ನು ಅಸೆಟ್ ಮ್ಯಾನೇಜ್​ಮೆಂಟ್​ ಕಂಪನಿ (Asset Management Company – AMC) ನಿರ್ವಹಿಸುತ್ತದೆ. ವೈಯಕ್ತಿಕ ಅಥವಾ ಸಾಂಸ್ಥಿಕ ಹೂಡಿಕೆದಾರರಿಂದ ಸಂಗ್ರಹಿಸುವ ನಿಧಿಯನ್ನು ಈ ಕಂಪನಿ ಒಟ್ಟುಗೂಡಿಸಿ ಮೊದಲೇ ಘೋಷಿಸಿರುವ ರೀತಿಯಲ್ಲಿ ಹೂಡಿಕೆ ಮಾಡುತ್ತದೆ. ಈ ನಿಧಿಗಳನ್ನು ನಿರ್ವಹಿಸುವವರನ್ನು ಫಂಡ್​ ಮ್ಯಾನೇಜರ್​ಗಳು ಎನ್ನುತ್ತಾರೆ. ಫಂಡ್​ ಮ್ಯಾನೇಜರ್​ಗಳ ನಿಧಿ ನಿರ್ವಹಣಾ ಪ್ರತಿಭೆ, ಮಾರುಕಟ್ಟೆ ಸನ್ನಿವೇಶ ನಿಮ್ಮ ಹೂಡಿಕೆಯನ್ನು ಬೆಳೆಸುತ್ತದೆ.

3) ಮ್ಯೂಚುವಲ್ ಫಂಡ್ ಅಂದ್ರೆ ಷೇರುಪೇಟೆ ಹೂಡಿಕೆ ಅಲ್ಲವೇ? ಇದು ಭಾಗಶಃ ಸತ್ಯ. ಮ್ಯೂಚುವಲ್​ ಫಂಡ್​ ಮುಖ್ಯವಾಗಿ ಎರಡು ರೀತಿಯಿದೆ. ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಫಂಡ್​ಗಳು ಇರುವಂತೆಯೇ ಸಾಲಪತ್ರಗಳ (ಡೆಟ್) ಮೇಲೆ ಹೂಡಿಕೆ ಮಾಡುವ ಫಂಡ್​ಗಳೂ ಇವೆ. ಇವು ಬಹುತೇಕ ಬ್ಯಾಂಕ್​ ಎಫ್​ಡಿಗಳ ಮಾದರಿಯಲ್ಲಿ ಕೆಲಸ ಮಾಡುತ್ತವೆ. ಇದರ ಜೊತೆಗೆ ಚಿನ್ನದ ಮೇಲೆ ಹೂಡಿಕೆ ಮಾಡುವ ಗೋಲ್ಡ್ ಫಂಡ್​ಗಳೂ ಇವೆ.

4) ಮ್ಯೂಚುವಲ್​ ಫಂಡ್​ಗಳಲ್ಲಿ ಹೂಡಿಕೆ ಮಾಡುವ ಆಸಕ್ತಿ ನನಗಿದೆ. ಹಣಕಾಸು ತಜ್ಞರ ಸಲಹೆ ಪಡೆದುಕೊಳ್ಳಬೇಕೆ? ನಿಮ್ಮ ಆದಾಯವೆಷ್ಟು? ಎಷ್ಟು ಹಣ ಉಳಿಸಲು ಸಾಧ್ಯ? ಉಳಿತಾಯದ ಅವಧಿಯೆಷ್ಟು? ಆಪದ್ಧನ ಇದೆಯೇ? ಯಾವಾಗ ಎಷ್ಟು ಮೊತ್ತ ಸಿಗುವಂತೆ ಯೋಜನೆ ಮಾಡಿಕೊಳ್ಳಬೇಕು? ಈ ಎಲ್ಲ ಪ್ರಶ್ನೆಗಳಿಗೂ ನಿಖರ ಉತ್ತರ ಕಂಡುಕೊಳ್ಳುವ ನಿಮಗಿದ್ದರೆ ಮ್ಯೂಚುವಲ್ ಇನ್​ಸೈಟ್​ನಂಥ ನಿಯತಕಾಲಿಕೆಗಳ ಸಹಾಯದಿಂದ ನೀವೇ ನಿಮ್ಮ ಹೂಡಿಕೆಯ ಪ್ಲಾನ್ ಮಾಡಿಕೊಳ್ಳಬಹುದು. ಆದರೆ ಆರಂಭದಲ್ಲಿ ಒಬ್ಬ ವೃತ್ತಿಪರ ಹಣಕಾಸು ಸಲಹೆಗಾರರ ನೆರವು ಪಡೆದುಕೊಳ್ಳುವುದು ಒಳ್ಳೆಯದು. ಅವರು ನಿಮ್ಮ ಆದಾಯ ಗಳಿಕೆ ಸಾಧ್ಯತೆಯ ಜೊತೆಗೆ ತೆರಿಗೆ ವಿಚಾರ, ಸಂಭಾವ್ಯ ಖರ್ಚುಗಳು ಮತ್ತು ಉಳಿತಾಯದ ಅವಕಾಶಗಳನ್ನು ಮನದಟ್ಟು ಮಾಡಿಸುತ್ತಾರೆ. ಅಷ್ಟೇ ಅಲ್ಲ, ನಿಮ್ಮ ರಿಸ್ಕ್​ ಸಾಮರ್ಥ್ಯಕ್ಕೆ ತಕ್ಕಂತೆ ಹೂಡಿಕೆಗಾಗಿ ಫಂಡ್​ಗಳನ್ನು ಶಿಫಾರಸು ಮಾಡುತ್ತಾರೆ.

5) ನನಗೆ ಮ್ಯೂಚುವಲ್​ ಫಂಡ್ ಹೂಡಿಕೆಯಲ್ಲಿ ಆಸಕ್ತಿಯಿದೆ. ನಾನೇನು ಮಾಡಬೇಕು? ಈ ಲೇಖನದ ಮೊದಲ ನಾಲ್ಕು ಅಂಶಗಳನ್ನು ಓದಿದ್ದೀರಿ ಎಂದರೆ ನಿಮಗೆ ಆಸಕ್ತಿಯಿದೆ ಎಂದೇ ಅರ್ಥ. ನಿಮ್ಮ ಬ್ಯಾಂಕ್ ಖಾತೆಗೆ ಆನ್​ಲೈನ್​ ಬ್ಯಾಂಕಿಂಗ್ ಸೇವೆ ಪಡೆದುಕೊಳ್ಳಿ. ಯಾವ ಎಎಂಸಿಯಲ್ಲಿ ಹೂಡಿಕೆ ಆರಂಭಿಸಬೇಕೆಂದು ನಿರ್ಧರಿಸಿ. ಐಸಿಐಸಿಐ, ಎಚ್​ಡಿಎಫ್​ಸಿ, ಎಸ್​ಬಿಐ, ಆ್ಯಕ್ಸಿಸ್​, ಕೆನರಾ, ಕೋಟಕ್ ಸೇರಿದಂತೆ ಹಲವು ಎಎಂಸಿಗಳು ಆನ್​ಲೈನ್​ ಸೇವೆ ಒದಗಿಸುತ್ತವೆ. ನಿಮ್ಮ ಪ್ಯಾನ್​ ಕಾರ್ಡ್​ ನಂಬರ್​ ಆಧಾರದ ಮೇಲೆ ಫೋಲಿಯೊ (ಮ್ಯೂಚುವಲ್ ಫಂಡ್ ಖಾತೆ) ತೆರೆದು ಹೂಡಿಕೆ ಆರಂಭಿಸಬಹುದು.

ಎಚ್ಚರಿಕೆಯಿರಲಿ.. ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದರೆ ಸಂತೋಷ. ಸಾಕಷ್ಟು ಎಚ್ಚರಿಕೆಗಳೊಂದಿಗೆ ಬರುವ ಹೂಡಿಕೆಯ ಆಯ್ಕೆಯಿದು. ಹೂಡಿಕೆ ಎನ್ನುವುದು ವೈಯಕ್ತಿಕ ನಿರ್ಧಾರ ಎಂಬ ಮಾತನ್ನು ಎಂದಿಗೂ ಮರೆಯದಿರಿ. ಕನಿಷ್ಠ ಪಕ್ಷ ವರ್ಷಕ್ಕೊಮ್ಮೆ ನಿಮ್ಮ ಹೂಡಿಕೆಯ ಉದ್ದೇಶ, ರಿಟರ್ನ್ಸ್​​ ಮೌಲ್ಯಮಾಪನ ಮಾಡಿಕೊಳ್ಳಿ.

ಸಾಲಪತ್ರಗಳ ನಿಧಿಯಲ್ಲಿ (ಡೆಟ್ ಫಂಡ್) ಎಸ್​ಐಪಿ ಮಾರ್ಗದಲ್ಲಿ ಹೂಡಿಕೆ ಆರಂಭಿಸಿ, ಕ್ರಮೇಣ ಬ್ಯಾಲೆನ್ಸ್​ಡ್ ಫಂಡ್​ಗಳನ್ನು ರೂಢಿಸಿಕೊಳ್ಳಿ. ನಂತರ ಈಕ್ವಿಟಿ ಜಗತ್ತಿಗೆ ಪ್ರವೇಶ ಪಡೆಯಿರಿ. ಹೂಡಿಕೆ ಜಗತ್ತಿನಲ್ಲಿ ಕೊಹ್ಲಿಯಂತೆ ಅಬ್ಬರ ಆಟಕ್ಕಿಂತ ರಾಹುಲ್ ದ್ರಾವಿಡ್ ಥರ ವಿಕೆಟ್ ರಕ್ಷಿಸಿಕೊಳ್ಳುವುದು ಬಹಳ ಮುಖ್ಯ.

(How to Invest in Mutual Fund personal finance investment)

ಇದನ್ನೂ ಓದಿ: How To: ಪಾಡ್​ಕಾಸ್ಟ್ ಚಾನೆಲ್ ಆರಂಭಿಸುವುದು ಹೇಗೆ? ಅದರಿಂದ ಹಣ ಗಳಿಸಲು ಇರುವ ಅವಕಾಶಗಳೇನು?

ಇದನ್ನೂ ಓದಿ: YouTube: ಯುಟ್ಯೂಬ್​ ಚಾನೆಲ್ ಆರಂಭಿಸಿ ಹಣ ಸಂಪಾದಿಸುವುದು ಹೇಗೆ?

Published On - 10:24 pm, Mon, 26 July 21

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್