YouTube: ಯುಟ್ಯೂಬ್​ ಚಾನೆಲ್ ಆರಂಭಿಸಿ ಹಣ ಸಂಪಾದಿಸುವುದು ಹೇಗೆ?

YouTube Channel: ನಿಮ್ಮದೇ ಸ್ವಂತ ಚಾನೆಲ್​ಗೆ ಕಂಟೆಂಟ್ ಹಾಕುವ ಮೂಲಕ ನ್ಯಾಯ ಸಮ್ಮತ ಮಾರ್ಗದಲ್ಲಿ ಸಾಕಷ್ಟು ಹಣವನ್ನೂ ಸಂಪಾದನೆ ಮಾಡಬಹುದು. ಇದು ಹೇಗೆ ಎಂಬ ನಿಮ್ಮ ಕುತೂಹಲಕ್ಕೆ ಈ ಲೇಖನದಲ್ಲಿರುವ 10 ಅಂಶಗಳಲ್ಲಿ ಉತ್ತರವಿದೆ.

YouTube: ಯುಟ್ಯೂಬ್​ ಚಾನೆಲ್ ಆರಂಭಿಸಿ ಹಣ ಸಂಪಾದಿಸುವುದು ಹೇಗೆ?
ಯುಟ್ಯೂಬ್​ನ ಮೂಲ ಅಂಶಗಳು
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: Digi Tech Desk

Updated on:Jul 07, 2021 | 10:16 AM

ಗೂಗಲ್​ ಬಿಟ್ಟರೆ ಜಗತ್ತು ಅತಿಹೆಚ್ಚು ಬಳಸುವ ಹುಡುಕುತಾಣ ಯುಟ್ಯೂಬ್. 4ಜಿ ತಂತ್ರಜ್ಞಾನ ಚಾಲ್ತಿಗೆ ಬಂದು, ಡೇಟಾ ದರಗಳು ಕಡಿಮೆಯಾದ ನಂತರ ಆಡುವ ಮಕ್ಕಳಿಂದ ಹಣ್ಣುಹಣ್ಣು ಮುದುಕರವರೆಗೆ ಎಲ್ಲರ ಕೈಲೂ ಮೊಬೈಲು, ಆ ಮೊಬೈಲ್​ಗಳಲ್ಲಿ ಯುಟ್ಯೂಬ್ ಆ್ಯಪ್ ಇರುವುದು ಸಾಮಾನ್ಯ ಸಂಗತಿ. ಎಲ್ಲರ ಕೈಗೂ ಕಂಟೆಂಟ್​ ಕ್ರಿಯೇಷನ್​ ಎಂಬ ಮಂತ್ರದಂಡ ಒದಗಿಸಿರುವ ಗೂಗಲ್ ಮಹಾತ್ಮ ಯುಟ್ಯೂಬ್​ ಮೂಲಕ ಹಣ ಸಂಪಾದನೆಗೂ ದಾರಿ ತೋರಿಸಿದೆ.

ಇಷ್ಟು ವರ್ಷಗಳಿಂದ ವಿಡಿಯೊಗಳನ್ನು ನೋಡುತ್ತಿರುವ ನಿಮಗೆ ಶೂಟಿಂಗ್, ಎಡಿಟಿಂಗ್​, ಬ್ಲಾಗ್​ ನಿರ್ವಹಣೆಯ ಕನಿಷ್ಠ ಜ್ಞಾನವಿದ್ದರೂ ನೀವೇ ಒಂದು ಯುಟ್ಯೂಬ್ ಚಾನೆಲ್ ಮಾಲೀಕರಾಗಬಹುದು. ನಿಮ್ಮದೇ ಸ್ವಂತ ಚಾನೆಲ್​ಗೆ ಕಂಟೆಂಟ್ ಹಾಕುವ ಮೂಲಕ ನ್ಯಾಯ ಸಮ್ಮತ ಮಾರ್ಗದಲ್ಲಿ ಸಾಕಷ್ಟು ಹಣವನ್ನೂ ಸಂಪಾದನೆ ಮಾಡಬಹುದು. ಇದು ಹೇಗೆ ಎಂಬ ನಿಮ್ಮ ಕುತೂಹಲಕ್ಕೆ ಈ ಲೇಖನದಲ್ಲಿರುವ 10 ಅಂಶಗಳಲ್ಲಿ ಉತ್ತರವಿದೆ.

1) ನಿಮ್ಮ ಸಾಮರ್ಥ್ಯ ಗುರುತಿಸಿಕೊಳ್ಳಿ: ನಿಮ್ಮ ನಿಜವಾದ ಸಾಮರ್ಥ್ಯ, ಪ್ರತಿಭೆಯ ಕ್ಷೇತ್ರವನ್ನು ಗುರುತಿಸಿಕೊಳ್ಳಿ. ಆ ಕ್ಷೇತ್ರಕ್ಕೆ ಸಂಬಂಧಿಸಿದ ಯುಟ್ಯೂಬ್ ಚಾನೆಲ್ ಶುರುಮಾಡಿ. ಆದರೆ ಕಂಟೆಂಟ್ ಮಿಕ್ಸ್​ ಮಾಡುವ ವಿಚಾರದಲ್ಲಿ ಜಾಗರೂಕರಾಗಿರಿ. ಅಡುಗೆ ರೆಸಿಪಿ ಹಾಕಲು ಮಾಡಿದ ಯುಟ್ಯೂಬ್​ ಚಾನೆಲ್​ನಲ್ಲಿ ಭರತನಾಟ್ಯದ ಪಾಠಗಳನ್ನು ಹಾಕುವುದು ಜಾಣತನವಲ್ಲ. ನಿಮಗೆ ಎರಡೂ ಕ್ಷೇತ್ರದ ಒಳನೋಟ ಇದ್ದರೆ ಎರಡು ಪ್ರತ್ಯೇಕ ಚಾನೆಲ್ ಆರಂಭಿಸಿ. ಒಂದು ಗೂಗಲ್ ಅಕೌಂಟ್​ನಿಂದ ಹಲವು ಯುಟ್ಯೂಬ್ ಚಾನೆಲ್ ಆರಂಭಿಸಲು ಅವಕಾಶವಿದೆ.

2) ಮಾಹಿತಿ ಅಥವಾ ಮನರಂಜನೆ: ಜನರು ಯುಟ್ಯೂಬ್ ನೋಡಲು ಬರುವುದು ಎರಡೇ ಕಾರಣಕ್ಕೆ. ಒಂದು ಮಾಹಿತಿ, ಮತ್ತೊಂದು ಮನರಂಜನೆ. ನಿಮಗೆ ಪತ್ರಕರ್ತರ ಒಳನೋಟ, ಸಾಮಾಜಿಕ ಕಾಳಜಿಯಿದ್ದರೆ ಮಾಹಿತಿ ಆಧರಿತ ಚಾನೆಲ್ ಆರಂಭಿಸಿ. ಸಂಗೀತ, ಅಭಿನಯದಲ್ಲಿ ಪರಿಶ್ರಮವಿದ್ದರೆ ಮನರಂಜನೆಯನ್ನು ಆಧಾರವಾಗಿಟ್ಟುಕೊಂಡ ಚಾನೆಲ್ ಮಾಡಿ.

3) ಪರಿಕರಗಳು ಬೇಕೇಬೇಕು: ಕೈಲೊಂದು ಮೊಬೈಲ್ ಇದೆ. ಶೂಟ್​ ಮಾಡಿ ಬಿಸಾಕ್ತೀನಿ. ಅದನ್ನೇ ಯುಟ್ಯೂಬ್​ಗೂ ಹಾಕ್ತೀನಿ ಅಂದ್ರೆ ಗಿಟ್ಟೋದಿಲ್ಲ ಸ್ವಾಮಿ. ಬೇಸಾಯ ಮಾಡೋರಿಗೆ ಗುದ್ದಲಿ, ಸನಿಕೆ, ಪಿಕಾಸಿಗಳು ಎಷ್ಟು ಮುಖ್ಯವೋ ಯುಟ್ಯೂಬ್ ಚಾನೆಲ್ ಮಾಲೀಕರಾಗ್ತೀವಿ ಅನ್ನೋರಿಗೆ ಮೈಕ್, ಲೈಟ್​, ಕ್ಯಾಮೆರಾ ಅಷ್ಟೇ ಮುಖ್ಯ. ತೀರಾ ದುಬಾರಿ ಮೊತ್ತದ್ದು ಅಲ್ಲವಾದರೂ ಒಂದು ಬೊಯಾ ಎಂ1 ಮೈಕು, 1920X1080 ರೆಸಲ್ಯೂಷನ್​ನಲ್ಲಿ ಶೂಟ್ ಮಾಡುವ ಕ್ಯಾಮೆರಾ (ಮೊಬೈಲ್​ ಆದ್ರೂ ಆದೀತು), ವಿಡಿಯೊ ಎಡಿಟಿಂಗ್​ಗೆ ಸಾಫ್ಟ್​ವೇರ್ (ಎಫ್​ಸಿಪಿ ಅಥವಾ ಪ್ರೀಮಿಯರ್​ನಂಥವೇ ಆಗಬೇಕು ಎಂದೇನಿಲ್ಲ. ಮೊವಾವಿ ಅಥವಾ ಫಿಲ್​ಮೋರಾ ಥರದ್ದಾದರೂ ನಡೆಯುತ್ತೆ), ಟ್ರೈಪಾಡ್, ಮೊಬೈಲ್ ಹೋಲ್ಡರ್, ಪ್ಯಾನಲ್ ಲೈಟ್​, ಒಂದು ಚಂದದ ಬ್ಯಾಕ್​ಡ್ರಾಪ್ (ಕರ್ಟನ್) ಬೇಕೇಬೇಕು.

ಇದನ್ನೂ ಓದಿ: How To | ಉಚಿತ ವೈದ್ಯಕೀಯ ಸೇವೆ ನೀಡುವ ಇ-ಸಂಜೀವನಿಗೆ ನೋಂದಣಿ ಹೇಗೆ?

ಪ್ರಾತಿನಿಧಿಕ ಚಿತ್ರ

4) ಚಾನೆಲ್ ಶುರು ಮಾಡಿಬಿಡಿ: ಯುಟ್ಯೂಬ್ ಚಾನೆಲ್ ಮಾಡೋಣ ಅಂತ ಐಡಿಯಾ ಬಂದ ತಕ್ಷಣ ಧೈರ್ಯವಾಗಿ ಮುನ್ನುಗ್ಗಿ. ಒಂದು ಚಾನೆಲ್ ಕ್ರಿಯೇಟ್ ಮಾಡಿಯೇಬಿಡಿ. ಆದರೆ ಇಂಥ ಚಾನೆಲ್ ಯಾವಾಗಲೂ ಬ್ಯುಸಿನೆಸ್ ಅಕೌಂಟ್​ನಿಂದ ಕ್ರಿಯೇಟ್ ಆಗೋದು ಬಹಳ ಮುಖ್ಯ. ಚಾನೆಲ್​ಗೆ ಹೆಸರೂ ಅಷ್ಟೇ, ಜನರಿಗೆ ಸುಲಭವಾಗಿ ನೆನಪಿಟ್ಟುಕೊಳ್ಳಲು ಆಗುವಂಥ ಮತ್ತು ನೀವು ಅರಿಸಿಕೊಂಡಿರುವ ವಿಷಯಕ್ಕೆ ಹೊಂದುವಂಥ ಹೆಸರುಗಳನ್ನೇ ಕೊಟ್ಟುಕೊಳ್ಳಿ. ಚಾನೆಲ್ ಶುರು ಮಾಡಿದವರು ಅದಕ್ಕೆ ಡಿಸೈನ್ ಮಾಡದಿದ್ರೆ ಹೇಗೆ? ಪ್ರೊಫೈಲ್ ಇಮೇಜ್, ಚಾನೆಲ್ ಆರ್ಟ್ ಹಾಕಿಕೊಳ್ಳಿ. ಇದಕ್ಕೆ ಬೇಕಿದ್ರೆ www.canva.com ಸಹಾಯ ತಗೊಳಿ. ನಿಮ್ಮ ಚಾನೆಲ್​ನ ಘನಂದಾರಿ ಉದ್ದೇಶಗಳನ್ನೂ, ನೀವು ಎಂತೆಂಥ ವಿಡಿಯೊಗಳನ್ನು ಇದರಲ್ಲಿ ಹಾಕ್ತೀರಿ ಅನ್ನೋದರ ವಿವರಗಳನ್ನು ಚಾನೆಲ್ ಡಿಸ್​ಕ್ರಿಪ್ಷನ್​ನಲ್ಲಿ ಮರೆಯದೇ ಹಾಕಿ. ಯುಟ್ಯೂಬ್​ನಲ್ಲಿ ನಿಮ್ಮ ಚಾನೆಲ್​ನ ವಿಡಿಯೊಗಳು ಮೇಲೆದ್ದು ಬರಲು ಒಳ್ಳೇ ಡಿಸ್​ಕ್ರಿಪ್ಷನ್​ ಬಹಳ ಮುಖ್ಯ. ಸಾಧ್ಯವಾದರೆ ಕನ್ನಡದ ಜೊತೆಗೆ ನಾಜೂಕಾಗಿ ಇಂಗ್ಲಿಷ್ ಬಳಕೆಯೂ ಇರಲಿ.

5) ​ಎಂಥ ಕಂಟೆಂಟ್ ಓಡುತ್ತೆ: ಫಿಲಂ ತೆಗೆಯೋರ ಹತ್ತಿರ ಹೋಗಿ ಎಂಥ ಫಿಲಂ ಹಿಟ್ ಆಗುತ್ತೆ ಅಂತ ಕೇಳಿದರೆ ಏನು ಉತ್ತರ ಸಿಗಬಹುದೋ ಈ ಪ್ರಶ್ನೆಗೂ ಅದೇ ಉತ್ತರ. ಎಲ್ಲರೂ ಫಿಲಂ ತೆಗೆಯುವಾಗ ಹಿಟ್ ಆಗುತ್ತೆ ಅನ್ನೋ ಆಸೆ ಇಟ್ಕೊಂಡಿರ್ತಾರೆ. ಆದರೆ ಆಮೇಲೆ ಗಲ್ಲಾಪೆಟ್ಟಿಗೆಯ ಹಣೆಬರಹವನ್ನು ಪ್ರೇಕ್ಷಕರ ನಿರ್ಧರಿಸುತ್ತಾರೆ. ಯುಟ್ಯೂಬ್ ವಿಡಿಯೊಗಳ ವಿಚಾರದಲ್ಲಿಯೂ ಅಷ್ಟೇ. ಹಾಗಂತ ಸಿಕ್ಕಸಿಕ್ಕದ್ದು ಹಾಕಬೇಡಿ. ನಿಮ್ಮದು ಇನ್​ಫರ್ಮೇಶನ್​ ಆಧರಿತ ಚಾನೆಲ್ ಆದರೆ ಪ್ರಸ್ತುತ, ಅಚ್ಚರಿ, ಮಾಹಿತಿಪ್ರದ ಎಂಬ ಮೂರು ಅಂಶಗಳತ್ತ ಹೆಚ್ಚು ಗಮನಕೊಡಿ. ಮನರಂಜನೆ ಆಧರಿತ ಚಾನೆಲ್ ಆಗಿದ್ದರೆ ನಾನು ಆರಿಸಿಕೊಂಡಿರುವ ವಿಷಯ ಹೊಸತೇ? ಇತರರಿಗಿಂತ ನಾನೆಷ್ಟು ಭಿನ್ನವಾಗಿ ಮಾಹಿತಿಯನ್ನು ವಿಡಿಯೊದಲ್ಲಿ ಕೊಡಬಲ್ಲೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಿ. tubebuddy, answerthepublic ಥರದ ವೆಬ್​ಟೂಲ್​ಗಳ ಸಹಾಯ ಪಡೆದುಕೊಳ್ಳುವುದು ಅವಮಾನವಲ್ಲ.

6) ಸ್ಕ್ರಿಪ್ಟ್​ ಬಗ್ಗೆ ತಿಳ್ಕೊಳಿ: ಯಾವುದೇ ಫಿಲಂ ಮೊದಲು ಚಿಗುರೊಡೆದು ಬೆಳೆದುಕೊಳ್ಳುವುದು ಚಿತ್ರಕತೆ ಬರೆಯುವವನ ಕಲ್ಪನೆಯಲ್ಲಿ. ಆಮೇಲೆ ಶೂಟಿಂಗ್, ಎಡಿಟಿಂಗ್, ಪ್ರಮೋಷನ್ ಇತ್ಯಾದಿ ಇತ್ಯಾದಿ. ನಿಮ್ಮ ಯುಟ್ಯೂಬ್ ಚಾನೆಲ್ ವಿಚಾರದಲ್ಲಿಯೂ ಅಷ್ಟೇ. ನಿಮ್ಮದು ಒನ್​ಮೆನ್ ಆರ್ಮಿ ಆಗಿದ್ದರೂ ವಿಡಿಯೊ ಶೂಟಿಂಗ್​ಗೆ ಮೊದಲು ಒಂದು ಸ್ಕ್ರಿಪ್ಟ್​ ಮಾಡಿಕೊಳ್ಳುವುದು ಯಾವಾಗಲೂ ಒಳ್ಳೆಯದು. ಇದರಿಂದ ಸಾಕಷ್ಟು ಸಮಯ ಮತ್ತು ಶ್ರಮ ಉಳಿತಾಯವಾಗುತ್ತೆ. ಒಂದು ವೇಳೆ ಅಚಾನಕ್ ವಿಡಿಯೊ ಶೂಟ್ ಮಾಡಬೇಕಾದ ಸಂದರ್ಭ ಬಂದರೂ, ಶೂಟ್ ಮಾಡಿದ ಮೇಲೆ ಎಡಿಟ್ ಮಾಡುವ ಮೊದಲು ಸ್ಕ್ರಿಪ್ಟ್ ಮಾಡಿಕೊಳ್ಳಿ. ಇದರಿಂದ ಸಾಕಷ್ಟು ಲಾಭಗಳಿವೆ.

7) ಎಡಿಟ್ ಮಾಡುವಾಗ ಗಮನಿಸಿ: ವಿಷಯಕ್ಕೆ ತಕ್ಕಂತೆ ಎಡಿಟಿಂಗ್​ ಇರಬೇಕು. ಇಲ್ಲದಿದ್ದರೆ ಅಭಾಸಗಳಾಗುತ್ತವೆ. ಗೊತ್ತಿದೆ ಅಂತ ಸಾಫ್ಟ್​ವೇರ್​ನಲ್ಲಿರುವ​ ಇರೋಬರೋ ಆಪ್ಷನ್​ಗಳನ್ನೆಲ್ಲಾ ವಿಡಿಯೊದಲ್ಲಿ ತುರುಕಬೇಡಿ. ವಿಡಿಯೊಗಳು ಸಹಜವಾಗಿದ್ದಷ್ಟು ಜನರಿಗೆ ಇಷ್ಟವಾಗುವ ಸಾಧ್ಯತೆ ಹೆಚ್ಚು. ಗ್ರಾಫಿಕ್ಸ್​, ಸ್ಪೆಷಲ್ ಎಫೆಕ್ಟ್​ಗಳ ಬಳಕೆ ಎಂದಿಗೂ ಹದ ಮೀರಬಾರದು. ಪ್ರತಿ ಚಿತ್ರ, ವಿಡಿಯೊ ಕ್ಲಿಪ್ ಜೋಡಿಸುವಾಗ ಟ್ರಾನ್ಸಿಷನ್ ಮರೆಯದೇ ಕೊಡಿ. ಆಡಿಯೊ ಕ್ಲಿಪ್​ಗಳಿದ್ದರೆ ಫೇಡ್ ಇನ್​ / ಔಟ್​ ಬಳಕೆ ಬಗ್ಗೆ ಗಮನ ಇರಲಿ.

8) ಅಪ್​ಲೋಡ್ ಮಾಡಿ ಸ್ವಾಮಿ: ಸ್ಕ್ರಿಪ್ಟ್, ಶೂಟ್, ಎಡಿಟ್ ನಂತರ ನಿಮ್ಮ ವಿಡಿಯೊ ರೆಡಿಯಾಯ್ತು ಅಂದ್ಕೊಳಿ. ಇನ್ನೇಕೆ ತಡ, ಯುಟ್ಯೂಬ್​ಗೆ ಅಪ್​ಲೋಡ್​ ಮಾಡಿ ಬ್ರದರ್. ಹೆಡಿಂಗ್​ (ಟೈಟಲ್) ಜಾಗದಲ್ಲಿ 100 ಅಕ್ಷರಗಳ ಬಳಕೆಗೆ ಅವಕಾಶವಿದೆ. ಅಷ್ಟರಲ್ಲಿ ನೀವು ಹೇಳಬೇಕಾದ್ದನ್ನು ಕನ್ನಡ ಮತ್ತು ಇಂಗ್ಲಿಷ್​ನಲ್ಲಿ ಹೇಳಲು ಸಾಧ್ಯವೇ ಪ್ರಯತ್ನಿಸಿ. ಡಿಸ್ಕ್ರಿಪ್ಷನ್ ಜಾಗದಲ್ಲಿ ವಿಡಿಯೊ ಬಗ್ಗೆ ಪೂರಕ ವಿವರಣೆ ಕೊಡಿ. ಹಾಗಂತ ಸ್ಕ್ರಿಪ್ಟ್​ ಅನ್ನು ಇಡಿಯಾಗಿ ಹಾಕಬೇಡಿ. ಈ ಜಾಗದಲ್ಲಿ ನಿಮ್ಮ ಇತರ ಸಾಮಾಜಿಕ ಜಾಲತಾಣಗಳ ವಿವರಗಳನ್ನೂ ಕೊಡಬಹುದು. ಕೀವರ್ಡ್​ ಕೊಡುವ ಬಾಕ್ಸ್​ನಲ್ಲಿ ಸೂಕ್ತ ಪದಗಳನ್ನು ತುಂಬಿ. ಕೆಲವರು ಇಷ್ಟೆಲ್ಲಾ ಮಾಡಿ ವಿಡಿಯೊ ಭಾಷೆ ಮತ್ತು ಸ್ಥಳವನ್ನು ಬಿಟ್ಟುಬಿಡುತ್ತಾರೆ. ನೀವು ಹಾಗೆ ಮಾಡಬೇಡಿ. ವಿಡಿಯೊದಲ್ಲಿ ಬಳಕೆಯಾಗಿರುವ ಭಾಷೆ ಮತ್ತು ಅದರ ಕ್ಯಾಟಗರಿ ಸೆಲೆಕ್ಟ್ ಮಾಡಿ. ಸೂಕ್ತ ಪ್ಲೇಲಿಸ್ಟ್​ಗೆ ಟಿಕ್ ಮಾಡಿದ ನಂತರ ಪಬ್ಲಿಷ್ ಮಾಡಿ. ಇನ್ನೊಂದು ವಿಷಯ, ವಿಡಿಯೊ ಅಪ್​ಲೋಡ್ ಮಾಡುವ ಮೊದಲು ಚಂದದ ಥಂಬ್​ ಇಮೇಜ್ ರೆಡಿ ಮಾಡಿಕೊಳ್ಳಿ. ಯುಟ್ಯೂಬ್ ಸಲಹೆಯ ಇಮೇಜ್​ಗಳಿಗಿಂತ ನೀವೇ ರೂಪಿಸಿಕೊಂಡ ಥಂಬ್ ಇಮೇಜ್ ಬಳಸುವುದು ಒಳ್ಳೆಯದು.

ಇದನ್ನೂ ಓದಿ: How to | ಇನ್​​ಸ್ಟಾ​ಗ್ರಾಮ್ ಖಾತೆ ಹ್ಯಾಕ್ ಆಗದಂತೆ ಕಾಪಾಡುವುದು ಹೇಗೆ?

Youtube-Earning

ಪ್ರಾತಿನಿಧಿಕ ಚಿತ್ರ

9) ದುಡ್ಡು ಮಾಡೋದು ಹೇಗೆ: ವಿಡಿಯೊ ಮಾಡೋದು, ಅದನ್ನು ಯುಟ್ಯೂಬ್​ಗೆ ಹಾಕೋದು ಗೊತ್ತಾಯ್ತು. ಅದರಲ್ಲಿ ದುಡ್ಡು ಹೇಗೆ ಬರುತ್ತೆ ಅನ್ನೋ ಪ್ರಶ್ನೆಗೆ ಈವರೆಗೆ ಉತ್ತರ ಸಿಗಲಿಲ್ಲ ಅಲ್ವಾ? ನೀವೊಂದು ಯುಟ್ಯೂಬ್ ಚಾನೆಲ್ ಶುರು ಮಾಡಿದರೆ ನಿಮ್ಮ ಚಾನೆಲ್​ಗೆ 1000 ಸಬ್​ಸ್ಕ್ರೈಬರ್ಸ್​ ಆಗಬೇಕು, 4000 ಗಂಟೆ ವಾಚ್​ಟೈಮ್ ಬರಬೇಕು ಬರಬೇಕು ಅನ್ನೋದು ನಿಮ್ಮ ಮೊದಲ ಟಾರ್ಗೆಟ್. ಇದು ಸಾಧ್ಯವಾದ ನಂತರ ನೀವು ಮಾನಿಟೈಸೇಶನ್​ಗಾಗಿ, ಅಂದ್ರೆ ಜಾಹೀರಾತು ಸ್ವೀಕರಿಸಲು ಸಿದ್ಧ ಅಂತ ಗೂಗಲ್​ಗೆ ಒಂದು ಅರ್ಜಿ ಕಳಿಸಬೇಕು. ನಿಮ್ಮ ಚಾನೆಲ್​ನ ಕಂಟೆಂಟ್ ಪರಿಶೀಲಿಸುವ ಗೂಗಲ್ ಅನುಮತಿ ನೀಡುವ ಬಗ್ಗೆ ನಿರ್ಧಾರ ತಗೊಳ್ಳುತ್ತೆ. ಮಾನಿಟೈಸೇಶನ್​ಗೆ ಅಪ್ರೂ ಆದರೆ ನಿಮ್ಮ ವಿಡಿಯೊಗಳಿಗೆ ಜಾಹೀರಾತು ಪ್ಲೇ ಮಾಡಲು ಗೂಗಲ್ ಮುಂದಾಗುತ್ತೆ. ಅದಕ್ಕೆ ತಕ್ಕಂತೆ ಹಣವೂ ಬರುತ್ತೆ. ಹೆಚ್ಚು ವಿಡಿಯೊ, ಹೆಚ್ಚು ವ್ಯೂಸ್, ಹೆಚ್ಚು ಆದಾಯ. ಇದಿಷ್ಟೇ ಯುಟ್ಯೂಬ್​ನಲ್ಲಿ ಕೆಲಸಕ್ಕೆ ಬರುವ ಮೂರು ವಿಷಯಗಳು. ಆದಾಯ ಹಂಚಿಕೆಯ ಸೂತ್ರದಡಿ ಯುಟ್ಯೂಬ್ ನಿಮ್ಮ ವಿಡಿಯೊದಲ್ಲಿ ಪ್ಲೇ ಆಗುವ ಜಾಹೀರಾತಿಗೆ ಹಣ ಕೊಡುತ್ತದೆ.

10) ಆದಾಯಕ್ಕೆ ಪರ್ಯಾಯ ಮಾರ್ಗಗಳು: ಯುಟ್ಯೂಬ್​ನಲ್ಲಿ ಜಾಹೀರಾತಿನ ಜೊತೆಗೆ ಬ್ರಾಂಡ್ ಪ್ರಾಯೋಜಕತ್ವ, ಫ್ಯಾನ್​ ಫಂಡಿಂಗ್, ಪೂರಕ ಉತ್ಪನ್ನಗಳ ಮಾರಾಟದ ಮೂಲಕವೂ ಆದಾಯ ಗಳಿಸಬಹುದು. ಒಂದು ಸಲ ನಿಮ್ಮ ಚಾನೆಲ್ 1000 / 4000 ಎಂಬ ಮ್ಯಾಜಿಕ್ ನಂಬರ್ ದಾಟಿದರೆ ಆದಾಯ ಗಳಿಕೆಯ ಇಂಥ ಹತ್ತಾರು ದಾರಿಗಳು ತನ್ನಿಂತಾನೆ ತೆರೆದುಕೊಳ್ಳುತ್ತವೆ.

ಇಷ್ಟೆಲ್ಲಾ ಹೇಳಿದ ಮೇಲೆ ಕಾಪಿರೈಟ್​ ಬಗ್ಗೆಯೂ ಎರಡು ಮಾತು ಹೇಳಬೇಕು. ಕಾಪಿರೈಟ್, ಕಮ್ಯುನಿಟಿ ಗೈಡ್​ಲೈನ್ಸ್​ ಸೇರಿದಂತೆ ಕೆಲ ನಿಯಮಗಳ ಬಗ್ಗೆ ಯುಟ್ಯೂಬ್​ ಬಿಗಿ ಧೋರಣೆ ಹೊಂದಿದೆ. ಹಲವು ಬಾರಿ ಕಾಪಿರೈಟ್ ಉಲ್ಲಂಘನೆಯಾದರೆ ನಿಮ್ಮ ಚಾನೆಲ್​ ಅಮಾನತ್ತಾಗುತ್ತದೆ. ಶಿಕ್ಷೆಯ ರೂಪದಲ್ಲಿ ಯುಟ್ಯೂಬ್ ಜಾರಿಗೊಳಿಸುವ ಈ ಕ್ರಮ ಹಲವು ಹಂತಗಳಲ್ಲಿ ಜಾರಿಯಾಗುತ್ತೆ.

ಇದನ್ನೂ ಓದಿ: Social Media Day 2021: ಸಾಮಾಜಿಕ ಮಾಧ್ಯಮ ದಿನದ ಇತಿಹಾಸದ ಜತೆಗೆ ಪ್ರಾಮುಖ್ಯತೆಯನ್ನು ತಿಳಿಯಿರಿ

ಇದನ್ನೂ ಓದಿ: How to book gas cylinder: ವಾಟ್ಸಾಪ್ ಮೂಲಕ ಇಂಡೇನ್, ಎಚ್​ಪಿ, ಭಾರತ್ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಹೇಗೆ?

Published On - 8:41 am, Tue, 6 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ