ಮಾಧ್ಯಮದವರು ಇಕ್ಕಟ್ಟಿನ ಪ್ರಶ್ನೆ ಕೇಳಿದಾಗ ಸಿಡುಕಿದ ಮಧು ಬಂಗಾರಪ್ಪ, ನಿಮಗ್ಯಾಕೆ ಅದೆಲ್ಲ ಎಂದರು!
ಮಧು ಬಂಗಾರಪ್ಪಗೆ ಸುರ್ಜೇವಾಲಾ ಹೇಳಿದ್ದಾದರೂ ಏನು ಅಂತ ಕೇಳಿದರೆ, ಬಾಯ್ಮುಚ್ಚಿಕೊಂಡು ಇರುವಂತೆ ಹೇಳಿದ್ದಾರೆ ಎಂದು ಸಚಿವ ಸಿಡುಕಿನಿಂದ ಉತ್ತರಿಸಿದರು. ಬಿಅರ್ ಪಾಟೀಲ್ ತಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಅಂತ ಹೇಳಿದ್ದಾರೆ, ಬಸವರಾಜ ರಾಯರೆಡ್ಡಿ ಅವರು ತಮ್ಮ ಹೇಳಿಕೆಗಳನ್ನು ತಿರುಚಿ ವರದಿ ಮಾಡಲಾಗುತ್ತಿದೆ ಎಂದಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು.
ಕೊಪ್ಪಳ, ಜುಲೈ 7: ಮಾಧ್ಯಮದವರು ಇಕ್ಕಟ್ಟಿನ ಪ್ರಶ್ನೆ ಕೇಳಿದಾಗ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಿಡುಕುವುದು ಮತ್ತು ರೇಗುವುದನ್ನು ಮಾಡುತ್ತಾರೆ. ಇಂದು ಕೊಪ್ಪಳದಲ್ಲಿ ಅವರಿಗೆ ಮಾಧ್ಯಮದವರು ಪೇಚಿಗೆ ಸಿಕ್ಕಿಸುವ ಪ್ರಶ್ನೆಗಳನ್ನು ಕೇಳಿದರು. ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಸಮಸ್ಯೆ ಇಲ್ಲ ಅಂತಾದರೆ, ಮುಖ್ಯಮಂತ್ರಿಯನ್ನು (chief minister) ಬದಲಾಯಿಸುವ ಸನ್ನಿವೇಶ ಇಲ್ಲವಾದರೆ ದೆಹಲಿಯಿಂದ ರಂದೀಪ್ ಸುರ್ಜೆವಾಲಾ ಅವರು ಯಾಕೆ ಬರುತ್ತಿದ್ದಾರೆ ಅಂತ ಕೇಳಿದಾಗ, ಮಧು ಬಂಗಾರಪ್ಪ ವಸ್ತುಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಬೇಕಿತ್ತು. ಅದರೆ ಅವರು ಹಾಗೆ ಮಾಡದೆ, ಅವರು ನಮ್ಮ ನಾಯಕರು ಬಂದು ಹೋಗುತ್ತಿರುತ್ತಾರೆ, ನಿಮಗ್ಯಾಕೆ ಅದೆಲ್ಲ? ಸಿಎಂ ಬದಲಾಯಿಸುವ ವಿಷಯವೇನಾದರೂ ನಿಮ್ಮ ಬಳಿ ಏನಾದರೂ ಹೇಳಿಕೊಂಡಿದ್ದಾರಾ ಅಂತ ಉದ್ವಿಗ್ನರಾಗಿ ಕೇಳಿದರು.
ಇದನ್ನೂ ಓದಿ: ಇದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಕುಮಾರಸ್ವಾಮಿ ನೇತೃತ್ವದ ಸರ್ಕಾರವಲ್ಲ: ಮಧು ಬಂಗಾರಪ್ಪ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

