AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Battlegrounds Mobile India: ಗೂಗಲ್ ಪ್ಲೇ ಸ್ಟೋರ್​ನಲ್ಲಿ 1 ಕೋಟಿ ದಾಟಿದ ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್ ಡೌನ್​ಲೋಡ್​

ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್​ ಇಂಡಿಯಾ ಭಾರತದಲ್ಲಿ ಗೂಗಲ್​ ಪ್ಲೇಸ್ಟೋರ್​ನಲ್ಲಿ 1 ಕೋಟಿ ಡೌನ್​ಲೋಡ್​ ಮೀರಿದೆ. ಈ ಗೇಮ್ ಜುಲೈ 2 ರಂದು, ಕೆಲವೇ ದಿನಗಳ ಹಿಂದೆ ಅಧಿಕೃತವಾಗಿ ಪ್ರಾರಂಭವಾಯಿತು.

Battlegrounds Mobile India: ಗೂಗಲ್ ಪ್ಲೇ ಸ್ಟೋರ್​ನಲ್ಲಿ 1 ಕೋಟಿ ದಾಟಿದ ಬ್ಯಾಟಲ್​ಗ್ರೌಂಡ್ಸ್  ಮೊಬೈಲ್ ಇಂಡಿಯಾ ಗೇಮ್ ಡೌನ್​ಲೋಡ್​
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Jul 05, 2021 | 8:00 PM

Share

ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾ ಗೇಮ್ ಗೂಗಲ್ ಪ್ಲೇ ಸ್ಟೋರ್​ನಲ್ಲಿ 1 ಕೋಟಿ ಡೌನ್‌ಲೋಡ್‌ಗಳನ್ನು ಮೀರಿದೆ. ಈ ಗೇಮ್ ಜುಲೈ 2 ರಂದು, ಕೆಲವೇ ದಿನಗಳ ಹಿಂದೆ ಅಧಿಕೃತವಾಗಿ ಪ್ರಾರಂಭವಾಯಿತು. ಮತ್ತು ಜೂನ್ 17 ರಿಂದ ಎಲ್ಲ ಆರಂಭಿಕ ಆಕ್ಸೆಸ್ ಆವೃತ್ತಿಯಾಗಿ ಲಭ್ಯವಿದೆ. ಬ್ಯಾಟಲ್​ಗ್ರೌಂಡ್ಸ್ ಇಂಡಿಯಾ ಮೊಬೈಲ್ ಆವೃತ್ತಿಯನ್ನು ಅಭಿವೃದ್ಧಿ ಪಡಿಸಿರುವುದು ಕ್ರಾಫ್ಟನ್. ಇದೀಗ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (ಬಿಜಿಎಂಐ) ಸ್ಥಿರ ಆವೃತ್ತಿಯು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಉಚಿತವಾಗಿದ್ದು, ಈ ಗೇಮ್ ಸದ್ಯಕ್ಕೆ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಆದರೂ ಐಒಎಸ್ ಆವೃತ್ತಿಯಲ್ಲಿ ದೊರಕಿಸಲು ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ಹೊರಬರಲಿದೆ. 10 ಮಿಲಿಯನ್ (1 ಕೋಟಿ) ಡೌನ್‌ಲೋಡ್‌ಗಳ ಮೈಲುಗಲ್ಲನ್ನು ಆಚರಿಸಲು, ಕ್ರಾಫ್ಟನ್ ‘ಕಾನ್‌ಸ್ಟೆಬಲ್ ಸೆಟ್’ ಎಂಬ ಆಟದಲ್ಲಿನ ಉಡುಪನ್ನು ಬಿಡುಗಡೆ ಮಾಡಿದ್ದು, ಇದನ್ನು ಆಟಗಾರರ ಇನ್ವೆಂಟರಿಗೆ ಶಾಶ್ವತವಾಗಿ ಸೇರಿಸಲಾಗುತ್ತದೆ.

ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾವನ್ನು PUBGಗೆ ಹೋಲಿಸಿದರೆ ಕೆಲವು ಸೂಕ್ಷ್ಮ ವ್ಯತ್ಯಾಸಗಳನ್ನು ಹೊಂದಿದೆ. ಲ್ಯಾಂಡಿಂಗ್ ಹಿಟ್‌ಗಳಲ್ಲಿ ಇನ್ನು ಮುಂದೆ ಕೆಂಪು ಗುರತುಗಳನ್ನು ಪಡೆಯುವುದಿಲ್ಲ ಮತ್ತು ನೀವೇ ಹಾನಿಗೊಳಗಾಗುತ್ತೀರಿ. ಇದಕ್ಕಾಗಿ ನೀವು ಹಸಿರು ಮತ್ತು ಹಳದಿ ಬಣ್ಣಗಳ ನಡುವೆ ಆರಿಸಬೇಕಾಗುತ್ತದೆ. ಹೆಚ್ಚುವರಿಯಾಗಿ, ಮೊದಲ-ಸಲ ಈ ಆಟವನ್ನು ಆಡುವವರು ಮೊದಲಿನಿಂದಲೂ ಆಟದ ಉಡುಪು ಆಯ್ಕೆಗಳನ್ನು ಹೊಂದಿದ್ದಾರೆ.

ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾವನ್ನು PUBGಗೆ ಹೋಲಿಸಿದಾಗ ಹಿಂಸಾಚಾರವನ್ನು ಕಡಿಮೆ ಮಾಡಿದಂತೆ ಇದೆ. ಈಗ ನೀವು ಶತ್ರುವನ್ನು ಕೊಂದಾಗಲೆಲ್ಲಾ ಗೇಮ್​ನಲ್ಲಿ ‘ಕೊಲ್ಲಲಾಗಿದೆ’ ಎಂಬುದರ ಬದಲಿಗೆ ‘ಮುಗಿಸಿದೆ’ ಎಂದು ಸೂಚಿಸುತ್ತದೆ. ಅದೇ ರೀತಿ ತಂಡದ ಆಟಗಾರರಿಗೆ ಇತರ ಆಟಗಾರರನ್ನು ‘ಮುಗಿಸುವ’ ರೀತಿಯ ಸಂದೇಶಗಳನ್ನು ಪಡೆಯುತ್ತೀರಿ.

ಐಒಎಸ್ ಬಳಕೆದಾರರಿಗಾಗಿ ಆ್ಯಪ್ ಸ್ಟೋರ್‌ನಲ್ಲಿ ಬ್ಯಾಟಲ್​ಗ್ರೌಂಡ್ಸ್​ ಇಂಡಿಯಾ ಇನ್ನೂ ಲಭ್ಯವಾಗಿಲ್ಲ ಎಂಬುದನ್ನು ಗಮನಿಸಬೇಕು. ಆದಾಗ್ಯೂ, ಇನ್ನೇನು ಕೆಲವೇ ಸಮಯದಲ್ಲಿ ಗೇಮ್ ದೊರೆಯಲಿದೆ. ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸ್ವಲ್ಪ ಸಮಯ ಕಾಯಬೇಕಾಗುತ್ತದೆ.

ಇದನ್ನೂ ಓದಿ: Battlegrounds Mobile India: ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಭಾರತದಲ್ಲಿ ಅಧಿಕೃತ ಅನಾವರಣ

(Battlegrounds mobile India game download more than 1 crore time in Google play stores)