Sign In

By signing in or creating an account, you agree with Associated Broadcasting Company's Terms & Conditions and Privacy Policy.

How To | ಉಚಿತ ವೈದ್ಯಕೀಯ ಸೇವೆ ನೀಡುವ ಇ-ಸಂಜೀವನಿಗೆ ನೋಂದಣಿ ಹೇಗೆ?

ಈ ಸೌಲಭ್ಯದಲ್ಲಿ ತಜ್ಞ ವೈದ್ಯರಿಗಾಗಿ ಕಾಯುವ ಸರಾಸರಿ ಅವಧಿ ಕೇವಲ 9.18 ನಿಮಿಷವಿದೆ. ಸರಾಸರಿ ಸಮಾಲೋಚನೆಯ ಅವಧಿ, ಅಂದರೆ ರೋಗಿಯು ವೈದ್ಯರೊಂದಿಗೆ ಮಾತನಾಡಿರುವ ಅವಧಿ 2.40 ನಿಮಿಷವಿದೆ. ಈ ಎರಡು ಅಂಶಗಳನ್ನು ಗಮನಿಸಿದರೂ ಈ ಯೋಜನೆಗೆ ಜನರ ಒಲವು ವ್ಯಕ್ತವಾಗಿರುವುದು ಗೊತ್ತಾಗುತ್ತದೆ.

How To | ಉಚಿತ ವೈದ್ಯಕೀಯ ಸೇವೆ ನೀಡುವ ಇ-ಸಂಜೀವನಿಗೆ ನೋಂದಣಿ ಹೇಗೆ?
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: Praveen Sahu

Updated on:Mar 25, 2021 | 6:30 PM

ಇ-ಆಡಳಿತ ಜಾರಿಯಾದ ನಂತರವೇ ದೇಶದಲ್ಲಿ ನಿಜವಾದ ಪ್ರಜಾಪ್ರಭುತ್ವ ಬಂದಿದ್ದು ಎಂದು ಬಹಳಷ್ಟು ಜನರು ನಂಬಿದ್ದಾರೆ. ಇಂಥ ನಂಬಿಕೆಗೆ ಪುಷ್ಟಿಕೊಡುವ ಮಹತ್ವದ ಬೆಳವಣಿಗೆಗೆ ಈಗ ದೇಶ ಮತ್ತೊಮ್ಮೆ ಸಾಕ್ಷಿಯಾಗಿದೆ. ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಕೇಂದ್ರ ಸರ್ಕಾರ ಜಾರಿ ಮಾಡಿರುವ ಉಚಿತ ಟೆಲಿಮೆಡಿಸಿನ್ ಸಮಾಲೋಚನೆ ಸೇವೆ ಇ-ಸಂಜೀವನಿ ಒಪಿಡಿ (eSanjeevaniOPD) ಯೋಜನೆಯಡಿ ಕರ್ನಾಟಕದಲ್ಲಿ ಕಳೆದ 15 ತಿಂಗಳಲ್ಲಿ ಬರೋಬ್ಬರಿ 6 ಲಕ್ಷ ಮಂದಿ, ಭಾರತ ದೇಶದಲ್ಲಿ ಒಟ್ಟು 30 ಲಕ್ಷ ಮಂದಿ ವೈದ್ಯಕೀಯ ಸಮಾಲೋಚನೆ ಪಡೆದುಕೊಂಡಿದ್ದಾರೆ.

ಒಟ್ಟಾರೆ ಪ್ರಕ್ರಿಯೆಯನ್ನು ಅತ್ಯಂತ ವೃತ್ತಿಪರವಾಗಿ ರೂಪಿಸಲಾಗಿದೆ. ಇದು ಈ ಯೋಜನೆಯಲ್ಲಿ ಗಮನ ಸೆಳೆಯುವ ಪ್ರಮುಖ ಅಂಶ. ಸರ್ಕಾರಿ ಸೌಲಭ್ಯಗಳೆಂದರೆ ಮೂಗುಮುರಿಯುವವರು ತಮ್ಮ ಅಭಿಪ್ರಾಯ ಬದಲಿಸಿಕೊಳ್ಳುವುದು ಒಳಿತು. ಈ ಸೌಲಭ್ಯದಲ್ಲಿ ತಜ್ಞ ವೈದ್ಯರಿಗಾಗಿ ಕಾಯುವ ಸರಾಸರಿ ಅವಧಿ ಕೇವಲ 9.18 ನಿಮಿಷವಿದೆ. ಸರಾಸರಿ ಸಮಾಲೋಚನೆಯ ಅವಧಿ, ಅಂದರೆ ರೋಗಿಯು ವೈದ್ಯರೊಂದಿಗೆ ಮಾತನಾಡಿರುವ ಅವಧಿ 2.40 ನಿಮಿಷವಿದೆ. ಈ ಎರಡು ಅಂಶಗಳನ್ನು ಗಮನಿಸಿದರೂ ಈ ಯೋಜನೆಗೆ ಜನರ ಒಲವು ವ್ಯಕ್ತವಾಗಿರುವುದು ಗೊತ್ತಾಗುತ್ತದೆ.

ನೋಂದಣಿ ಹೇಗೆ? 1) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ವಹಿಸುವ ಇ-ಸಂಜೀವನಿ ವೆಬ್​ಸೈಟ್​ಗೆ https://esanjeevaniopd.in/Home ಭೇಟಿ ನೀಡಿ ಅಥವಾ ಗೂಗಲ್ ಪ್ಲೇಸ್ಟೋರ್ ಮೂಲಕ eSanjeevani ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳಿ. 2) ನಿಮ್ಮ ಮೊಬೈಲ್ ಸಂಖ್ಯೆ ಕೊಟ್ಟರೆ, ಒಟಿಪಿ ಬರುತ್ತದೆ. ಅದರ ಮೂಲಕ ನೋಂದಣಿ ಮಾಡಿಕೊಳ್ಳಿ. 3) ನಿಮಗೆ ತಜ್ಞವೈದ್ಯರೊಂದಿಗೆ ಸಮಾಲೋಚನೆಯ ಅಗತ್ಯವಿದೆಯೇ ಅಥವಾ ಸಾಮಾನ್ಯ ವೈದ್ಯರೊಂದಿಗೆ ಸಮಾಲೋಚನೆಯ ಅಗತ್ಯವಿದೆಯೇ ಆಯ್ಕೆ ಮಾಡಿಕೊಳ್ಳಿ. 4) ಇಸಿಜಿ, ರಕ್ತಪರೀಕ್ಷೆ ಸೇರಿದಂತೆ ಪೂರಕ ವೈದ್ಯಕೀಯ ಪ್ರಯೋಗಾಲಯದ ದಾಖಲೆಗಳಿದ್ದರೆ ನೀವು ಅದನ್ನೂ ಅಪ್​ಲೋಡ್ ಮಾಡಬಹುದು. 5) ನಿಮಗೆ ಟೋಕನ್ ನಂಬರ್ ಸಿಗುತ್ತದೆ. ಅದನ್ನು ಬಳಸಿ ಲಾಗಿನ್ ಆದರೆ, ವೈದ್ಯರು ನಿಮ್ಮ ಸಮಸ್ಯೆ ಆಲಿಸಿ, ಔಷಧಿಗಳನ್ನು ಶಿಫಾರಸು ಮಾಡುತ್ತಾರೆ. 6) ವೈದ್ಯರು ನಿಮಗೆ ಶಿಫಾರಸು ಮಾಡಿದ ಔಷಧ ಸಲಹಾ ಚೀಟಿಯನ್ನು (ಪ್ರಿಸ್ಕ್ರಿಪ್ಷನ್) ಡೌನ್​ಲೋಡ್ ಸಹ ಮಾಡಿಕೊಳ್ಳಬಹುದು. 7) ಆನ್​ಲೈನ್ ಒಪಿಡಿಯ ಈ ಸೌಲಭ್ಯವು ಸಂಪೂರ್ಣ ಉಚಿತ. ವೈದ್ಯರು ಕನ್ನಡದಲ್ಲಿಯೇ ಮಾತನಾಡುತ್ತಾರೆ, ಚಾಟ್ ಮತ್ತು ವಿಡಿಯೊ ಸಮಾಲೋಚನೆ ಸೌಲಭ್ಯವೂ ಇದೆ. 8) ಕರ್ನಾಟಕದಲ್ಲಿ ಜನರಲ್ ಒಪಿಡಿ ಮತ್ತು ಸ್ಪೆಷಲಿಸ್ಟ್ ವಿಭಾಗವು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ (ಮಧ್ಯಾಹ್ನ 1ರಿಂದ 1.45 ಊಟದ ಬಿಡುವು) ಈ ಕಾರ್ಯನಿರ್ವಹಿಸುತ್ತದೆ. ಭಾನುವಾರ ಬೆಳಿಗ್ಗೆ 8ರಿಂದ ರಾತ್ರಿ 8ವರೆಗೆ ಇ-ಸಂಜೀವನಿ ಸೌಲಭ್ಯ ಲಭ್ಯವಿದೆ. 9) ಪ್ರತಿದಿನ ಮುಂಜಾನೆ 7.45ರಿಂದ ರೋಗಿಗಳು ನೋಂದಣಿ ಮಾಡಿಕೊಳ್ಳಬಹುದು. 10) ಚರ್ಮರೋಗ (ಡರ್ಮಟಾಲಜಿ), ಶ್ವಾಸಕೋಶದ ಸಮಸ್ಯೆಗಳು (ಪಲ್​ಮೊನೊಲೊಜಿಸ್ಟ್), ಮೂತ್ರರೋಗ (ಯುರಾಲಜಿ), ಮನೋವೈದ್ಯರು (ಸೈಕಿಯಾಟ್ರಿಸ್ಟ್), ಜನರಲ್ ಮೆಡಿಸಿನ್, ನೇತ್ರತಜ್ಞರು (ಆಪ್ತಮಾಲಜಿ), ಮೂಳೆತಜ್ಞರು (ಆರ್ತೊಪೆಡಿಕ್ಸ್), ಕಿವಿ ಮೂರು ಮತ್ತು ಗಂಟಲು (ಇಎನ್​ಟಿ), ಸ್ತ್ರೀರೋಗ ತಜ್ಞರು (ಗೈನಕಾಲಜಿ) ಮತ್ತು ಶಿಶುರೋಗತಜ್ಞರ (ಪೀಡಿಯಾಟ್ರಿಸ್ಟ್) ಸೇವೆ ಈ ಯೋಜನೆಯಡಿ ಲಭ್ಯವಿದೆ.

E-Sanjeevani

ಇ-ಸಂಜೀವನಿ ಆ್ಯಪ್​ನಲ್ಲಿ ವೈದ್ಯರ ಸಲಹಾ ಚೀಟಿ

2500 ಕೇಂದ್ರಗಳು ಕರ್ನಾಟಕದಲ್ಲಿ ಯೋಜನೆಯ ಸುಸೂತ್ರ ಕಾರ್ಯನಿರ್ವಹಣೆಗಾಗಿ 38 ವಿಶೇಷ ಹಬ್ ಕೇಂದ್ರಗಳು ಮತ್ತು 2500 ಸಮಾಲೋಚನಾ ಕೇಂದ್ರಗಳನ್ನು ಗುರುತಿಸಲಾಗಿದೆ. 2020-21ರ ಬಜೆಟ್​ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಟೆಲಿಮೆಡಿಸಿನ್ ಸೌಲಭ್ಯ ಉನ್ನತೀಕರಣಕ್ಕಾಗಿ ₹ 19 ಕೋಟಿ ಮೀಸಲಿಡಲಾಗಿತ್ತು. ಕೋವಿಡ್-19 ಕಾರಣದಿಂದ ಈ ಹಣ ಹಾಗೆಯೇ ಉಳಿದಿದೆ. ಈ ವರ್ಷ ಇದೇ ಅನುದಾನವನ್ನು ಮುಂದುವರಿಸಲು ವಿನಂತಿಸಲಾಗಿದೆ. ಈ ಹಣದಿಂದ ಅವಶ್ಯಕ ಉಪಕರಣಗಳು, ಕಂಪ್ಯೂಟರ್​, ವೆಬ್​ಕ್ಯಾಮ್, ಹೆಡ್​ಫೋನ್ ಒದಗಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಉನ್ನತ ಮೂಲಗಳು ಹೇಳಿವೆ.

ಸರ್ಕಾರಿ ಸೇವೆ ಎಂದು ನಿರ್ಲಕ್ಷಿಸಬೇಡಿ ‘ನಾವು ಬಹಳಷ್ಟು ಬಾರಿ ಸರ್ಕಾರಿ ಸೇವೆಗಳನ್ನು ನಿರ್ಲಕ್ಷಿಸುತ್ತೇವೆ. eSanjeevani ಮೊಬೈಲ್ ಅಪ್ಲಿಕೇಶನ್ ಇದ್ದರೆ ನಮ್ಮ ಮನೆಯಿಂದಲೇ ಆರೋಗ್ಯ ಸಲಹೆ ಪಡೆಯಬಹುದು’ ಎನ್ನುತ್ತಾರೆ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ತುಮಕೂರಿನ ಟಿ.ಸಿ.ನಾಗೇಂದ್ರ.

eSanjeevani ಮೂಲಕ ಆಸ್ಪತ್ರೆಯ ವೈದ್ಯರು ಮತ್ತು ಮನೆಯಲ್ಲಿನ ರೋಗಿಯ ನಡುವೆ ಸುರಕ್ಷಿತ ಮತ್ತು ರಚನಾತ್ಮಕ ವಿಡಿಯೊ ಆಧಾರಿತ ಕ್ಲಿನಿಕಲ್ ಸಮಾಲೋಚನೆಗಳು ನಡೆದು ವೈದ್ಯರು ಸೂಕ್ತ ಔಷದಗಳನ್ನು ತಿಳಿಸುತ್ತಾರೆ. ಬಹುತೇಕ ಸಮಸ್ಯೆಗಳಿಗೆ ಸಲಹೆಗಳಿವೆ. ಸಮಾಲೋಚನೆಗೆ ಮುನ್ನ ನಮ್ಮ ವೈದ್ಯಕೀಯ ವರದಿಗಳನ್ನೂ ಅಪ್ಲೋಡ್ ಮಾಡಬಹುದು. ನಗರ ಪ್ರದೇಶಗಳಲ್ಲಿ ಸಮಾಲೋಚನೆಗೆ ಕನಿಷ್ಠ 200 ರೂಪಾಯಿಗಳಿಂದ 500 ರೂಪಾಯಿಗಳವರೆಗೆ ಕೊಡುವುದಲ್ಲದೆ ಗಂಟೆಗಟ್ಟಲೆ ಕಾಯಬೇಕು. ಈ ವ್ಯವಸ್ಥೆ ನಾಗರಿಕರಿಗೆ ಒಂದು ವರವಲ್ಲವೇ? ನಾನು ಇದನ್ನು ಪ್ರಯೋಗಿಸಿದೆ, ಒಳ್ಳೆಯ ಪ್ರತಿಕ್ರಿಯೆ ದೊರೆಯಿತು ಎಂದು ಅವರು ತಮ್ಮ ಅನುಭವ ಹಂಚಿಕೊಂಡರು.

ಇದನ್ನೂ ಓದಿ: ಕೋಲಾರದಲ್ಲೊಂದು ಜೀವ ಸಂಜೀವಿನಿ.. ಹಲವು ಕಾಯಿಲೆಗಳಿಗೆ ಔಷಧಿಗಳೇ ಇಲ್ಲದೆ ಕೇವಲ ಆಹಾರ ಪದ್ಧತಿಯಿಂದಲೆ ವಾಸಿ

ಇದನ್ನೂ ಓದಿ: ದೇಶದಲ್ಲಿ ಮೊದಲ ಬಾರಿಗೆ ಪಶು ಸಂಜೀವಿನಿ ಕಾರ್ಯಕ್ರಮವನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ: ಸಚಿವ ಪ್ರಭು ಚೌಹಾಣ್

Published On - 10:24 pm, Sun, 21 March 21

4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ನಿರ್ಜನ ಪ್ರದೇಶದಲ್ಲಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದ ಆರೋಪಿ
ನಿರ್ಜನ ಪ್ರದೇಶದಲ್ಲಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದ ಆರೋಪಿ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್
ಫಿಲ್ ಸಾಲ್ಟ್​ನ ಔಟ್ ಮಾಡಿದ ಬೌಲರ್​ನ ಅಭಿನಂದಿಸಿದ ವಿರಾಟ್ ಕೊಹ್ಲಿ
ಫಿಲ್ ಸಾಲ್ಟ್​ನ ಔಟ್ ಮಾಡಿದ ಬೌಲರ್​ನ ಅಭಿನಂದಿಸಿದ ವಿರಾಟ್ ಕೊಹ್ಲಿ
ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಪತ್ನಿ
ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಪತ್ನಿ
ಮಚ್ಚುಹಿಡಿದಿದ್ದ ಶ್ರೀನಿವಾಸ ಪೂಜಾರಿಯನ್ನು ಕೂಡಲೇ ವಶಕ್ಕೆ ಪಡೆದ ಪೊಲೀಸ್
ಮಚ್ಚುಹಿಡಿದಿದ್ದ ಶ್ರೀನಿವಾಸ ಪೂಜಾರಿಯನ್ನು ಕೂಡಲೇ ವಶಕ್ಕೆ ಪಡೆದ ಪೊಲೀಸ್
‘ಬ್ಯಾಂಕ್ ಜನಾರ್ಧನ್ ಭೇಟಿ ಮಾಡಲು ಇತ್ತೀಚೆಗೆ ಆಗಲೇ ಇಲ್ಲ’; ಸುಧಾರಾಣಿ
‘ಬ್ಯಾಂಕ್ ಜನಾರ್ಧನ್ ಭೇಟಿ ಮಾಡಲು ಇತ್ತೀಚೆಗೆ ಆಗಲೇ ಇಲ್ಲ’; ಸುಧಾರಾಣಿ