How To: ಪಾಡ್​ಕಾಸ್ಟ್ ಚಾನೆಲ್ ಆರಂಭಿಸುವುದು ಹೇಗೆ? ಅದರಿಂದ ಹಣ ಗಳಿಸಲು ಇರುವ ಅವಕಾಶಗಳೇನು?

ದಿನದಿಂದ ದಿನಕ್ಕೆ ಪಾಡ್​ಕಾಸ್ಟ್​ ಬಗ್ಗೆ ಹೆಚ್ಚು ಜನರು ಒಲವು ತೋರಿಸುತ್ತಿದ್ದಾರೆ. ಡಿಜಿಟಲ್​ ಸಂತೆಯಲ್ಲಿ ಧ್ಯಾನಕ್ಕೆ ಕುಳಿತವರಂತೆ ಒಂದಿಷ್ಟು ಜನರು ಶ್ರದ್ಧೆಯಿಂದ ಪಾಡ್​ಕಾಸ್ಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ.

How To: ಪಾಡ್​ಕಾಸ್ಟ್ ಚಾನೆಲ್ ಆರಂಭಿಸುವುದು ಹೇಗೆ? ಅದರಿಂದ ಹಣ ಗಳಿಸಲು ಇರುವ ಅವಕಾಶಗಳೇನು?
ಪಾಡ್​ಕಾಸ್ಟ್​
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Jul 12, 2021 | 10:19 PM

ಹೇಳಿಕೇಳಿ ಇದು ಡಿಜಿಟಲ್ ಜಮಾನ. ಡಿಜಿಟಲ್ ಮಾಧ್ಯಮಗಳನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ ಡಿಜಿಟಲ್ ಜಗತ್ತು ಹಲವು ಹಂತಗಳಲ್ಲಿ ವಿಕಾಸವಾಗಿರುವುದು ಗಮನಕ್ಕೆ ಬರುತ್ತದೆ. ಒಂದು ಕಾಲದಲ್ಲಿ ಬ್ಲಾಗ್​ ಜನಪ್ರಿಯವಾಗಿತ್ತು. ಈಗ ಸೋಷಿಯಲ್ ಮೀಡಿಯಾಗಳು ಎಲ್ಲಕ್ಕೂ ಪರ್ಯಾಯ ಎನಿಸಿಕೊಂಡಿದೆ. ಇದರ ನಡುನಡುವೆ ಪ್ರವರ್ಧಮಾನಕ್ಕೆ ಬರುತ್ತಿರುವ ಕ್ಷೇತ್ರ ಪಾಡ್​ಕಾಸ್ಟಿಂಗ್.​ ದಿನದಿಂದ ದಿನಕ್ಕೆ ಪಾಡ್​ಕಾಸ್ಟ್​ ಬಗ್ಗೆ ಹೆಚ್ಚು ಜನರು ಒಲವು ತೋರಿಸುತ್ತಿದ್ದಾರೆ. ಡಿಜಿಟಲ್​ ಸಂತೆಯಲ್ಲಿ ಧ್ಯಾನಕ್ಕೆ ಕುಳಿತವರಂತೆ ಒಂದಿಷ್ಟು ಜನರು ಶ್ರದ್ಧೆಯಿಂದ ಪಾಡ್​ಕಾಸ್ಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರ ದೊಡ್ಡಮಟ್ಟದಲ್ಲಿ ಬೆಳೆಯಲಿದೆ ಎಂಬ ವಿಶ್ಲೇಷಣೆಗಳು ಡಿಜಿಟಲ್ ಮಾಧ್ಯಮ ಜಗತ್ತಿನಲ್ಲಿ ಚಾಲ್ತಿಯಲ್ಲಿವೆ.

ನಿಮ್ಮ ಆಲೋಚನೆಗಳನ್ನು ಜಗತ್ತಿನ ಎದುರು ತೆರೆದಿಡಲು ಮಾತು ನಿಮ್ಮ ಸಾಧನವಾಗಿದ್ದರೆ ಖಂಡಿತ ನೀವೂ ಪಾಡ್​ಕಾಸ್ಟ್​ ಶುರು ಮಾಡಬಹುದು. ಇದು ಸುಲಭ, ಅಷ್ಟೇ ಅಲ್ಲ, ಒಂದು ಹಂತದವರೆಗೆ ಉಚಿತವೂ ಹೌದು.

ಪಾಡ್​ಕಾಸ್ಟ್​ ಎಂದರೇನು? ಮೊಬೈಲ್, ಟ್ಯಾಬ್, ಕಂಪ್ಯೂಟರ್ ಸೇರಿದಂತೆ ಡಿಜಿಟಲ್​ ಸಾಧನಗಳಲ್ಲಿ ಕೇಳುವಂತೆ, ಡೌನ್​ಲೋಡ್ ಮಾಡಿಕೊಳ್ಳುವಂತೆ ಲಭ್ಯವಿರುವ ಆಡಿಯೊ ಫೈಲ್​ಗೆ ಪಾಡ್​ಕಾಸ್ಟ್​ ಎನ್ನುತ್ತಾರೆ. ಇಂಥ ಆಡಿಯೊ ಫೈಲ್​ಗಳನ್ನು ಚಂದಾದಾರಿಗೆ ತಲುಪಿಸುವ ವೇದಿಕೆಗಳನ್ನು ಪಾಡ್​ಕಾಸ್ಟ್​ ಚಾನೆಲ್​ಗಳು ಮತ್ತು ಇಂಥ ಆಡಿಯೊ ಫೈಲ್​ಗಳನ್ನು ಇರಿಸಿಕೊಳ್ಳುವ ಸರ್ವರ್​ ಸೌಲಭ್ಯ ಒದಗಿಸುವ ವೇದಿಕೆಗಳನ್ನು ಪಾಡ್​ಕಾಸ್ಟ್​ ಹೋಸ್ಟಿಂಗ್​ ಸೇವೆ ಎನ್ನುತ್ತಾರೆ.

ಪಾಡ್​ಕಾಸ್ಟ್​ ಮಾಡಲು ಏನೆಲ್ಲಾ ಬೇಕು? ಇದು ಸಂಪೂರ್ಣ ಧ್ವನಿ ಆಧರಿತ ಸೇವೆ. ಒಂದು ರೀತಿ ರೇಡಿಯೊ ಇದ್ದಂತೆ. ಒಂದೊಳ್ಳೆ ವಿಷಯ ಆರಿಸಿಕೊಂಡು, ನೀವು ಮಾತನಾಡಿ ಆಡಿಯೊ ರೆಕಾರ್ಡ್​ ಮಾಡಬೇಕು. ಆಮೇಲೆ ಅದನ್ನು ತಕ್ಕಮಟ್ಟಿಗೆ ಎಡಿಟ್ ಮಾಡಿ, ಪಾಡ್​ಕಾಸ್ಟ್​ ಹೋಸ್ಟಿಂಗ್​ ಸೇವೆ ಒದಗಿಸುವ ಸರ್ವರ್​ಗಳಿಗೆ ಅಪ್​ಲೋಡ್ ಮಾಡಬೇಕು. ಅಲ್ಲಿಂದ ವಿವಿಧ ಪಾಡ್​ಕಾಸ್ಟ್​ ವೇದಿಕೆಗಳಲ್ಲಿ ಕಾಣಿಸುವಂತೆ ಮಾಡುವ ಮೂಲಕ ಕೇಳುಗರಿಗೆ ತಲುಪಿಸಬೇಕು.

ಆಡಿಯೊ ರೆಕಾರ್ಡಿಂಗ್​ ಮಾಡುವುದು ಹೇಗೆ? ಪಾಡ್​ಕಾಸ್ಟಿಂಗ್ ಆರಂಭಿಸಲು ಆಡಿಯೊ ರೆಕಾರ್ಡ್​ ಮಾಡುವುದು ಮೊದಲ ಹಂತ. ಇದಕ್ಕೆ ಹೆಚ್ಚೇನು ಖರ್ಚು ಬರುವುದಿಲ್ಲ. ನಿಮ್ಮ ಮೊಬೈಲ್ ಬಳಸಿಯೂ ಆಡಿಯೊ ರೆಕಾರ್ಡ್ ಮಾಡಬಹುದು. ಉತ್ತಮ ಗುಣಮಟ್ಟದ ರೆಕಾರ್ಡಿಂಗ್​ಗಾಗಿ ಯೂನಿಡೈರೆಕ್ಷನಲ್ ಮೈಕ್ ಬಳಸುವುದು ಒಳ್ಳೆಯ ಕ್ರಮ. ಇಂಥ ಮೈಕ್​ಗಳನ್ನು ಕಂಪ್ಯೂಟರ್​ ಅಥವಾ ಲ್ಯಾಪ್​ಟಾಪ್​ಗೆ ಕನೆಕ್ಟ್ ಮಾಡಿ ಅಡಾಸಿಟಿಯಂಥ ಸಾಫ್ಟ್​ವೇರ್​ಗಳ ಮೂಲಕ ನೇರವಾಗಿ ರೆಕಾರ್ಡ್​ ಮಾಡಬಹುದು. ಅಡಾಸಿಟಿ ಉಚಿತ ಸಾಫ್ಟ್​ವೇರ್ ಆಗಿದ್ದು, ಸಾಕಷ್ಟು ಎಡಿಟ್​ ಆಯ್ಕೆಗಳನ್ನೂ ನೀಡುತ್ತದೆ. ಮೊಬೈಲ್​ಗಳಲ್ಲಿ ರೆಕಾರ್ಡ್​ ಮಾಡುವವರು ಓಪನ್ ಕ್ಯಾಮೆರಾ ಆ್ಯಪ್ ಬಳಸುವುದು ಒಳಿತು.

ಇದನ್ನೂ ಓದಿ: YouTube: ಯುಟ್ಯೂಬ್​ ಚಾನೆಲ್ ಆರಂಭಿಸಿ ಹಣ ಸಂಪಾದಿಸುವುದು ಹೇಗೆ?

Podcast

ಪಾಡ್​ಕಾಸ್ಟ್​​

ಕವರ್​ ಆರ್ಟ್​ ಎಂದರೇನು? ಪಾಡ್​ಕಾಸ್ಟ್​ ರೆಕಾರ್ಡ್ ಆಗಿ, ಎಡಿಟ್ ಆದ ಮೇಲೆ ಅದನ್ನು ಪಾಡ್​ಕಾಸ್ಟ್​ ವೇದಿಕೆಗಳಿಗೆ ಅಪ್​ಲೋಡ್ ಮಾಡುವಾಗ ಆಡಿಯೊದ ಆಶಯ ಬಿಂಬಿಸುವ ಕವರ್​ ಆರ್ಟ್​ ಬೇಕಾಗುತ್ತದೆ. ಉತ್ತಮ ಕವರ್​ ಆರ್ಟ್​ಗಳು ಶ್ರೋತೃಗಳ ಗಮನ ಸೆಳೆಯಲು ನೆರವಾಗುತ್ತವೆ. www.canva.com ಮೂಲಕ ನೀವು ಕವರ್​ ಆರ್ಟ್​ಗಳನ್ನು ಸುಲಭವಾಗಿ ವಿನ್ಯಾಸ ಮಾಡಬಹುದು.

ಒಂದು ಪಾಡ್​ಕಾಸ್ಟ್​ನಲ್ಲಿ ಏನೆಲ್ಲಾ ಇರುತ್ತದೆ? ಸಾಮಾನ್ಯವಾಗಿ ಒಂದು ಪಾಡ್​ಕಾಸ್ಟ್​ನಲ್ಲಿ ಅದರ ಶೀರ್ಷಿಕೆ (ಟೀಸರ್), ಇಂಟ್ರೊ ಮ್ಯೂಸಿಕ್, ಸ್ವಾಗತ ಸಂಕೇತ, ಜಾಹೀರಾತು, ಸುದೀರ್ಘ ಮಾತು ಅಥವಾ ಸಂಭಾಷಣೆ, ಪ್ರತಿಕ್ರಿಯೆಗೆ ಆಹ್ವಾನ, ಔಟ್ರೊ ಸಂಗೀತ ಇರುತ್ತದೆ. ಸಾಮಾನ್ಯವಾಗಿ ಇದೇ ಅನುಕ್ರಮದಲ್ಲಿ ಪಾಡ್​ಕಾಸ್ಟ್​ಗಳನ್ನು ರೂಪಿಸಲಾಗುತ್ತದೆ.

ಹಿನ್ನೆಲೆ ಸಂಗೀತಕ್ಕೆ ಏನು ಮಾಡಲಿ? ಯುಟ್ಯೂಬ್ ಮ್ಯೂಸಿಕ್ ಅಥವಾ ಬೆನ್​ಸೌಂಡ್​ ವೆಬ್​ಸೈಟ್​ನಲ್ಲಿ ಲಭ್ಯವಿರುವ ಉಚಿತ ಮ್ಯೂಸಿಕ್ ನಿಮಗೆ ಪಾಡ್​ಕಾಸ್ಟ್​ ಆರಂಭಿಸಲು ಧಾರಾಳ ಸಾಕಾಗುತ್ತದೆ.

ಪಾಡ್​ಕಾಸ್ಟ್​ ಫೈಲ್ ಸಿದ್ಧವಾಯಿತು, ಮುಂದೇನು? ನಿಮ್ಮ ಪಾಡ್​ಕಾಸ್ಟ್​ ಫೈಲ್ ಸಿದ್ಧವಾಗಿದ್ದರೆ ಅದನ್ನು ಸೌಂಡ್​ಕ್ಲೌಡ್ ಅಥವಾ ಆ್ಯಂಕರ್ ಎಫ್​ಎಂ ಥರದ ಯಾವುದೇ ಹೋಸ್ಟಿಂಗ್​ ಸರ್ವೀಸ್​ಗೆ ಅಪ್​ಲೋಡ್​ ಮಾಡಿ. ಅಲ್ಲಿಂದ ಸುಲಭವಾಗಿ ಸ್ಪಾಟಿಫೈ, ಆ್ಯಪಲ್ ಪಾಡ್​ಕಾಸ್ಟ್ ಅಥವಾ ಗೂಗಲ್​ ಪಾಡ್​ಕಾಸ್ಟ್​ನಂಥ ಚಾನೆಲ್​ಗಳ ಮೂಲಕ ಕೇಳುಗರಿಗೆ ತಲುಪಿಸಿ.

ಪಾಡ್​ಕಾಸ್ಟ್​ ಮೂಲಕ ಹಣ ಸಂಪಾದಿಸಲು ಸಾಧ್ಯವೇ? ನೀವು ಅತ್ಯುತ್ತಮ ಕಂಟೆಂಟ್​ ಕೊಟ್ಟು ಸಾವಿರಾರು ಕೇಳುಗರನ್ನು ಸಂಪಾದಿಸಿಕೊಂಡಿರೆ ಪಾಡ್​ಕಾಸ್ಟ್​ ಹಣ ಸಂಪಾದನೆಗೂ ದಾರಿ ಮಾಡಿಕೊಡುತ್ತದೆ. ಜಾಹೀರಾತು, ಪ್ರಾಯೋಜಕತ್ವ, ದೇಣಿಗೆ, ಸಹಯೋಗದ ಮಾರ್ಕೆಟಿಂಗ್, ಆಡಿಯೊ ಪುಸ್ತಕಗಳ ಮಾರಾಟ, ಕ್ರೌಡ್​ ಫಂಡಿಂಗ್ ಮತ್ತು ಸಮಾವೇಶಗಳು ಪಾಡ್​ಕಾಸ್ಟ್​ ಮಾಡುವವರಿಗೆ ಹಣಗಳಿಸುವ ಮೂಲಗಳಾಗಬಲ್ಲವು.

(How To Create and Earn from Podcast)

ಇದನ್ನೂ ಓದಿ: How To: ಗೂಗಲ್ ಫೋಟೋಸ್ ಸ್ಟೋರೇಜ್ ಸಮಸ್ಯೆಯೇ? ಸ್ಪೇಸ್ ಪಡೆಯಲು ಹೀಗೆ ಮಾಡಿ

ಇದನ್ನೂ ಓದಿ: How To: ಆನ್​ಲೈನ್​ ಕ್ಲಾಸ್, ವರ್ಕ್​ ಫ್ರಂ ಜಮಾನದಲ್ಲಿ ಮೊಬೈಲ್ ಡೇಟಾ ಉಳಿತಾಯಕ್ಕೆ 10 ಸೂತ್ರಗಳು

Published On - 10:18 pm, Mon, 12 July 21

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ