WhatsAppನಲ್ಲಿ ನೀವು ಆನ್​ಲೈನ್ ಇದ್ದರೂ ಆಫ್​ಲೈನ್ ತೋರಿಸುವಂತೆ ಮಾಡೋದು ಹೇಗೆ?

ವಾಟ್ಸ್ಆ್ಯಪ್ ಅನ್ನು ನೀವು ಆನ್​ಲೈನ್ ಇದ್ದರೂ ಆಫ್​ಲೈನ್ ಇರುವಂತೆ ಮಾಡಲು ಜಿಬಿ ವಾಟ್ಸ್ಆ್ಯಪ್ (GBWhatsApp) ಎಂಬ ಥರ್ಡ್ ಪಾರ್ಟಿ ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಿಕೊಳ್ಳಬೇಕು.

WhatsAppನಲ್ಲಿ ನೀವು ಆನ್​ಲೈನ್ ಇದ್ದರೂ ಆಫ್​ಲೈನ್ ತೋರಿಸುವಂತೆ ಮಾಡೋದು ಹೇಗೆ?
WhatsApp
Follow us
TV9 Web
| Updated By: Vinay Bhat

Updated on:Jul 13, 2021 | 10:32 AM

ಫೇಸ್​ಬುಕ್ (Facebook) ಒಡೆತನದ ವಾಟ್ಸ್​ಆ್ಯಪ್ ಮೆಸೇಜಿಂಗ್ ಅಪ್ಲಿಕೇಶನ್ ಇಂದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ವಿಶ್ವದಲ್ಲಿ 200 ಕೋಟಿಗೂ ಅಧಿಕ ಮಂದಿ ಉಪಯೋಗಿಸುತ್ತಿದ್ದಾರೆ. ಅನೇಕ ಮಂದಿಗೆ ತಿಳಿದಿರದ ಅದೆಷ್ಟೊ ಟ್ರಿಕ್​ಗಳು ವಾಟ್ಸ್​ಆ್ಯಪ್​ನಲ್ಲಿ (WhatsApp) ಒಳಗೊಂಡಿದೆ. ಅದು ಡಿಲೀಟ್ ಆದ ಮೆಸೇಜ್ ಅನ್ನು ನೋಡುವುದು ಇರಬಹುದು ಅಥವಾ ನಮ್ಮ ಡಿಪಿಯನ್ನು ಯಾರೆಲ್ಲ ನೋಡಿದ್ದಾರೆಂದು ತಿಳಿಯುವುದು ಇರಬಹುದು.

ಅಂತೆಯೆ ವಾಟ್ಸ್​ಆ್ಯಪ್​ನಲ್ಲಿ ನೀವು ಆನ್​ಲೈನ್​ನಲ್ಲಿ ಇದ್ದರೂ ಆಫ್​ಲೈನ್ ಕಾಣಿಸುವಂತೆ ಮಾಡಬಹುದು. ಇದಕ್ಕೂ ಅನೇಕ ಟ್ರಿಕ್​ಗಳಿವೆ. ಇದಕ್ಕಾಗಿ ನೀವು ಥರ್ಡ್​ ಪಾರ್ಟಿ ಆ್ಯಪ್ ಮೊರೆ ಹೋಗಬೇಕು. ಆದರೆ, ಯಾವುದೇ ಥರ್ಡ್ ಪಾರ್ಟಿ ಆ್ಯಪ್ ಅನ್ನು ಡೌನ್​ಲೋಡ್ ಮಾಡುವ ಮೊದಲು ಎಚ್ಚರಿಕೆ ವಹಿಸಬೇಕು.

ಈ ಥರ್ಡ್ ಪಾರ್ಟಿ ಆ್ಯಪ್ ಅಷ್ಟೊಂದು ಸುರಕ್ಷಿತವಾಗಿದ್ದಲ್ಲ. ಯಾಕೆಂದರೆ ಇದು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿರುವ ಡೇಟಾವನ್ನು ವಶಕ್ಕೆ ಪಡೆಯಬಹುದು. ಹೀಗಾಗಿ ಯಾವುದೇ ಥರ್ಡ್ ಪಾರ್ಟಿ ಆ್ಯಪ್ ಡೌನ್​ಲೋಡ್ ಮಾಡುವ ಮುನ್ನ ನಂಬಿಕೆಗೆ ಅರ್ಹವಾದ ಆ್ಯಪ್ ಸ್ಟೋರ್​ಗಳನ್ನ ಆಯ್ಕೆ ಮಾಡಿಕೊಳ್ಳಿ.

ವಾಟ್ಸ್ಆ್ಯಪ್ ಅನ್ನು ನೀವು ಆನ್​ಲೈನ್ ಇದ್ದರೂ ಆಫ್​ಲೈನ್ ಇರುವಂತೆ ಮಾಡಲು ಜಿಬಿ ವಾಟ್ಸ್ಆ್ಯಪ್ (GBWhatsApp) ಎಂಬ ಥರ್ಡ್ ಪಾರ್ಟಿ ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಿಕೊಳ್ಳಬೇಕು. ಆದರೆ, ಇದು ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯವಿಲ್ಲ. ಬದಲಾಗಿ ಕ್ರೋಮ್ ಅಥವಾ ಇತರೆ ಬ್ರೌಸರ್ ಮೂಲಕ ಡೌನ್​ಲೋಡ್ ಮಾಡಬೇಕು. ಇತ್ತೀಚೆಗಷ್ಟೆ ಜಿಬಿ ವಾಟ್ಸ್ಆ್ಯಪ್ ತನ್ನ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು ಅನೇಕರು ಬಳಸುತ್ತಿದ್ದಾರೆ.

ಜಿಬಿ ವಾಟ್ಸ್ಆ್ಯಪ್ ಅನ್ನು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಡೌನ್​ಲೋಡ್ ಆದ ಬಳಿಕ ಅದನ್ನು ಇನ್​ಸ್ಟಾಲ್ ಮಾಡಿಕೊಳ್ಳಿ. ಇದು ನೋಡಲು ಥೇಟ್ ವಾಟ್ಸ್ಆ್ಯಪ್ ಮಾದರಿಯಲ್ಲೇ ಇರುತ್ತದೆ. ಇನ್​ಸ್ಟಾಲ್ ಆದ ನಂತರ ಓಪನ್ ಮಾಡಿ ಬಲ ಬದಿಯ ಮೇಲಿರುವ ಮೂರು ಡಾಟ್​ಗಳ ಮೇಲೆ ಕ್ಲಿಕ್ ಮಾಡಿ.

ನಂತರ ಅಲ್ಲಿ ಪ್ರೈವಸಿ ಸೆಟ್ಟಿಂಗ್ಸ್ ಎಂಬ ಆಯ್ಕೆ ಇರುತ್ತದೆ. ಇದರ ಮೇಲೆ ಕ್ಲಿಕ್ ಮಾಡಿದಾದ ಇಲ್ಲಿ ಅನೇಕ ಆಯ್ಕೆಗಳಿದ್ದು, ಕೆಳಗಡೆ ಬಂದರೆ Hide Online Status ಎಂದು ಬರೆದಿರುವುದು ಕಾಣಿಸುತ್ತದೆ. ಇದನ್ನು ಆ್ಯಕ್ಟೀವ್ ಮಾಡಿದರೆ ನೀವು ವಾಟ್ಸ್ಆ್ಯಪ್​ನಲ್ಲಿ ಆನ್​ಲೈನ್ ಇದ್ದರೂ ಆಫ್​ಲೈನ್ ತೋರಿಸುತ್ತದೆ.

Jio-Airtel ಗೆ ಬಿಗ್ ಶಾಕ್: BSNL ನಿಂದ ಗ್ರಾಹಕರಿಗೆ ಬಂಪರ್ ಪ್ಲಾನ್ ಬಿಡುಗಡೆ

Mi Anniversary Sale 2021: ಅತಿ ಕಡಿಮೆಗೆ ಸಿಗುತ್ತಿದೆ ದುಬಾರಿ ಬೆಲೆಯ ರೆಡ್ಮಿ, ಎಂಐ ಸ್ಮಾರ್ಟ್​ಫೋನ್​

(Whatsapp Tricks How to Show Offline in WhatsApp When I Am in Online here is the Tips)

Published On - 6:46 pm, Mon, 12 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ