Mi Anniversary Sale 2021: ಅತಿ ಕಡಿಮೆಗೆ ಸಿಗುತ್ತಿದೆ ದುಬಾರಿ ಬೆಲೆಯ ರೆಡ್ಮಿ, ಎಂಐ ಸ್ಮಾರ್ಟ್​ಫೋನ್​

ಶವೋಮಿ ಬ್ರ್ಯಾಂಡ್ ಇಷ್ಟ ಪಡುವವರಿಗೆ ಇದು ಉಪಕಾರಿಯಾಗಿದೆ. ಇಂದು ಜುಲೈ 12 ರಿಂದ ಎಂಐ ವಾರ್ಷಿಕೋತ್ಸವ ಸೇಲ್ ಆರಂಭವಾಗಿದ್ದು ಜುಲೈ 16 ವರೆಗೆ ನಡೆಯಲಿದೆ.

Mi Anniversary Sale 2021: ಅತಿ ಕಡಿಮೆಗೆ ಸಿಗುತ್ತಿದೆ ದುಬಾರಿ ಬೆಲೆಯ ರೆಡ್ಮಿ, ಎಂಐ ಸ್ಮಾರ್ಟ್​ಫೋನ್​
Mi Anniversary Sale
Follow us
TV9 Web
| Updated By: Vinay Bhat

Updated on:Jul 12, 2021 | 4:54 PM

ಚೀನಾದ ಮೊಬೈಲ್ ತಯಾರಿಕ ಸಂಸ್ಥೆ ಶವೋಮಿ(Xiaomi) ಭರ್ಜರಿ ಕೊಡುಗೆಯನ್ನು ನಿಡಿದೆ. ಭಾರತದಲ್ಲಿ ತನ್ನ ಏಳನೇ ವಾರ್ಷಿಕೋತ್ಸವವನ್ನು ಆಯೋಜಿಸಿರುವ ಶವೋಮಿ ತನ್ನ ಗ್ರಾಹಕರಿಗಾಗಿ ಅತ್ಯುತ್ತಮ ಆಫರ್ ಒಂದನ್ನು ಬಿಡುಗಡೆ ಮಾಡಿದ್ದು, ಅತಿ ಕಡಿಮೆ ಬೆಲೆಗೆ ಶವೋಮಿ ಪ್ರೊಡಕ್ಟ್​ಗಳನ್ನು ಖರೀದಿ ಮಾಡಬಹುದಾಗಿದೆ. ರೆಡ್ಮಿ ನೋಟ್ 10ಎಸ್, ಎಂಐ 10ಟಿ ಪ್ರೋ, ಎಂಐ 11ಎಕ್ಸ್ ಪ್ರೋ, ರೆಡ್‍ಮಿ ನೋಟ್ 10 ಪ್ರೋ ಮ್ಯಾಕ್ಸ್ ಸೇರಿದಂತೆ ಅನೇಕ ಸ್ಮಾರ್ಟ್​ಫೋನ್​ಗಳ (Smartphone) ಮೇಲೆ ಬಂಪರ್ ರಿಯಾಯಿತಿ ನೀಡಿದೆ.

ಶವೋಮಿ ಬ್ರ್ಯಾಂಡ್ ಇಷ್ಟ ಪಡುವವರಿಗೆ ಇದು ಉಪಕಾರಿಯಾಗಿದೆ. ಇಂದು ಜುಲೈ 12 ರಿಂದ ಎಂಐ ವಾರ್ಷಿಕೋತ್ಸವ ಸೇಲ್ ಆರಂಭವಾಗಿದ್ದು ಜುಲೈ 16 ವರೆಗೆ ನಡೆಯಲಿದೆ. ಹಾಗಾದ್ರೆ ಆಫರ್​ನಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಸ್ಮಾರ್ಟ್​ಫೋನ್​ಗಳು ಯಾವುದು ಎಂಬುದನ್ನು ನೋಡುವುದಾದರೆ…

ಎಂಐ 11ಎಕ್ಸ್ ಪ್ರೊ: MI 11ಎಕ್ಸ್ ಪ್ರೊ ಸ್ಮಾರ್ಟ್​ಫೋನ್ 5ಜಿ ಬೆಂಬಲ ಪಡೆದುಕೊಂಡಿದ್ದು, ಆಫರ್​ನಲ್ಲಿ 8,000 ರೂ.ಗಳ ರಿಯಾಯಿತಿಗೆ ಲಭ್ಯವಿದೆ. 8GB + 128GB ರೂಪಾಂತರವು 39,999 ರೂ.ಗೆ ಖರೀದಿಸಬಹುದು. 8GB + 256GB ರೂಪಾಂತರವು 41,999 ರೂ.ಗೆ ಸಿಗಲಿದೆ. ಇದು ಕ್ವಾಲ್ಕಾಮ್ ಸ್ನ್ಯಾಪ್‌ಡ್ರ್ಯಾಗನ್‌ 888 5ಜಿ ಆನ್‌ಬೋರ್ಡ್‌ ಹೊಂದಿದೆ. 6.67-ಇಂಚಿನ ಎಫ್‍ಎಚ್‍ಡಿ+ ಡಿಸ್​ಪ್ಲೇ ಯನ್ನು ಹೊಂದಿದೆ ಮತ್ತು 4520mAh ಬ್ಯಾಟರಿ ಸಾಮರ್ಥ್ಯ ನೀಡಲಾಗಿದೆ.

ಎಂಐ 11ಎಕ್ಸ್: ಎಂಐ 11ಎಕ್ಸ್ 5ಜಿ ಬೆಂಬಲ ಹೊಂದಿರುವ ಸ್ಮಾರ್ಟ್ ಫೋನ್ ಆಗಿದ್ದು, ಇದರ ಬೆಲೆ 33,999 ರೂ.. 6GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯ ಹೊಂದಿರುವ ಈ ಫೋನ್ ಸದ್ಯ ಆಫರ್​ನಲ್ಲಿ ಕೇವಲ 29,999 ರೂ. ಗೆ ಲಭ್ಯವಾಗುತ್ತಿದೆ. ಇದು ಕ್ವಾಲ್ಕಾಮ್ ಸ್ನ್ಯಾಪ್‌ಡ್ರ್ಯಾಗನ್‌ 870 5ಜಿ ಎಸ್‍ಒಸಿ ಯಿಂದ ನಿಯಂತ್ರಿಸಲ್ಪಡುತ್ತದೆ. 120 ಹೆಚ್‍ಜೆಡ್ ರಿಫ್ರೆಶ್ ದರದ 6.67 ಇಂಚಿನ ಎಫ್‍ಎಚ್‍ಡಿ+ AMOLED ಡಿಸ್​ಪ್ಲೇ, 4520mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಇದರಲ್ಲಿರುವ ಟ್ರಿಪಲ್ ರೇರ್ ಕ್ಯಾಮರಾ ಸೆಟಪ್ ಹೊಂದಿದೆ.

ಎಂಐ 10T Pro: ಎಂಐ 10T ಪ್ರೋ ಕೂಡ 5ಜಿ ಬೆಂಬಲ ಪಡೆದುಕೊಂಡಿರುವ ಸ್ಮಾರ್ಟ್​ಫೋನ್ ಆಗಿದೆ. ಈ ಮೊಬೈಲ್ ಅನ್ನು 36,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದರ ಮೂಲಬೆಲೆ 47,999 ರೂ. ಬರೋಬ್ಬರಿ 11,000 ರೂ. ರಿಯಾಯಿತಿ ನೀಡಲಾಗಿದೆ. ಇದು 108 ಮೆಗಾಫಿಕ್ಸೆಲ್ ಹೊಂದಿರುವ ಮುಖ್ಯ ಸಂವೇದಕವನ್ನು ಹೊಂದಿರುವ ಟ್ರಿಪಲ್ ರೇರ್ ಕ್ಯಾಮೆರಾ ಸೆಟಪ್ ನಿಂದ ಕೂಡಿದೆ. 6.67 – ಇಂಚಿನ ಎಫ್‍ಹೆಚ್‍ಡಿ+ ಡಿಸ್​ಪ್ಲೇ, 5000mAh ಬ್ಯಾಟರಿ ಮತ್ತು ಕ್ವಾಲ್ಕಾಮ್ ಸ್ನ್ಯಾಪ್‍ಡ್ರ್ಯಾಗನ್‌ 865 ಆಕ್ಟಾ ಕೋರ್ ಪ್ರೊಸೆಸರ್ ನಿಂದ ಕಾರ್ಯನಿರ್ವಹಿಸುತ್ತದೆ.

ಎಂಐ 10T 5ಜಿ: ಎಂಐ 10T 5ಜಿ ಸ್ಮಾರ್ಟ್​ಫೋನ್​ನ ಮೇಲೆ 7,000 ರೂ. ಗಳ ರಿಯಾಯಿತಿ ನೀಡಲಾಗಿದೆ. ಈ ಮೊಬೈಲ್‍ನ ಮೂಲ ಬೆಲೆ 39,999 ರೂ. ಇದೀಗ ಇದನ್ನು 32,999 ರೂ. ಗೆ ಖರೀದಿಸಬಹುದು. 5000mAh ಬ್ಯಾಟರಿ ಸಾಮರ್ಥ್ಯ, 64 ಮೆಗಾಫಿಕ್ಸೆಲ್ ಟ್ರಿಪಲ್ ರೇರ್ ಕ್ಯಾಮೆರಾ, ಎಫ್‍ಹೆಚ್‍ಡಿ+ ಎಲ್‍ಸಿಡಿ ಡಿಸ್​ಪ್ಲೇ, ಕ್ವಾಲ್ಕಾಮ್ ಸ್ನ್ಯಾಪ್‍ಡ್ರ್ಯಾಗನ್‌ 865 ಆಕ್ಟಾ ಕೋರ್ ಪ್ರೊಸೆಸರ್ ನಿಂದ ಕೂಡಿದೆ.

ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್: ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ 3,000 ರೂ. ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ. 6GB RAM 128GB ಸ್ಟೋರೆಜ್ ಸಾಮರ್ಥ್ಯವಿರುವ ಮಾದರಿಗೆ 19,999 ರೂ. ಮತ್ತು 8GB RAM ರೂಪಾಂತರ ಮೊಬೈಲ್ ಅನ್ನು 21,999 ರೂ. ಗಳಿಗೆ ಖರೀದಿಸಬಹುದು. ಕ್ವಾಲ್ಕಾಮ್ ಸ್ನ್ಯಾಪ್‌ಡ್ರ್ಯಾಗನ್‌ 732ಎಸ್‍ಒಸಿ, 108 ಮೆಗಾಫಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 5020mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ಹೊಂದಿದೆ.

ರಿಲೀಸ್​ಗೂ ಮುನ್ನ ರೋಚಕತೆ ಸೃಷ್ಟಿಸಿದ Nokia C30 ಸ್ಮಾರ್ಟ್​ಫೋನ್: ಪ್ರಮುಖ ಮಾಹಿತಿ ಸೋರಿಕೆ

Flipkart ನಿಂದ ಬಂಪರ್ ಆಫರ್: ಅತಿ ಕಡಿಮೆ ಬೆಲೆಗೆ ಇಂದೇ ಖರೀದಿಸಿ ಸ್ಮಾರ್ಟ್​ಟಿವಿ: ನಾಳೆ ಕೊನೇ ದಿನ

Published On - 4:47 pm, Mon, 12 July 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ