AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jio-Airtel ಗೆ ಬಿಗ್ ಶಾಕ್: BSNL ನಿಂದ ಗ್ರಾಹಕರಿಗೆ ಬಂಪರ್ ಪ್ಲಾನ್ ಬಿಡುಗಡೆ

ಬಿಎಸ್​ಎನ್​ಎಲ್​ ಈ ಪ್ಲಾನ್ ಬಿಡುಗಡೆ ಮಾಡಿದ ಬೆನ್ನಲ್ಲೆ ಇತ್ತ ಖಾಸಗಿ ಟೆಲಿಕಾಂಗಳು ಕೂಡ ಹೊಸ ಹೊಸ ಯೋಜನೆಗಳನ್ನು 30 ದಿನಗಳು ಮತ್ತು 60 ದಿನಗಳ ಮಾನ್ಯತೆಯೊಂದಿಗೆ ಬಿಡುಗಡೆ ಮಾಡಿ ಪರೀಕ್ಷಿಸಿಲು ಮುಂದಾಗಿದೆ.

Jio-Airtel ಗೆ ಬಿಗ್ ಶಾಕ್: BSNL ನಿಂದ ಗ್ರಾಹಕರಿಗೆ ಬಂಪರ್ ಪ್ಲಾನ್ ಬಿಡುಗಡೆ
BSNL 485 ರೂ. ಪ್ಲ್ಯಾನ್: ಬಿಎಸ್​ಎನ್​ಎಲ್ ಪರಿಚಯಿಸಿರುವ 485 ರೂ.ಗಳ ಈ ಪ್ಲ್ಯಾನ್​ನ ವಾಲಿಡಿಟಿ 90 ದಿನಗಳು. ಈ ರಿಚಾರ್ಜ್​ ಪ್ಲ್ಯಾನ್​ ಮೂಲಕ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯ ದೊರೆಯಲಿದೆ. ಜೊತೆಗೆ ಪ್ರತಿದಿನ 1.5GB ಉಚಿತ ಡೇಟಾ ಹಾಗೂ 100 SMS ಸಿಗಲಿದೆ.
TV9 Web
| Edited By: |

Updated on:Jul 12, 2021 | 5:47 PM

Share

ಟೆಲಿಕಾಂ ಕ್ಷೇತ್ರದಲ್ಲಿ ದರ ಸಮರ ಮುಂದುವರೆಯುತ್ತಲೇ ಇದೆ. ಒಂದು ಕಡೆ ಏರ್ಟೆಲ್ ಸಂಸ್ಥೆ ನಂಬರ್ ಒನ್ ಸ್ಥಾನದಲ್ಲಿರುವ ಜಿಯೋ ಮೇಲೆ ಕಣ್ಣಿಟ್ಟದ್ದರೆ, ಇತ್ತ ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್ ಹೊಸ ಹೊಸ ಆಫರ್​ಗಳನ್ನ ಪರಿಚಯಿಸಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಸದ್ಯ ಬಿಎಸ್​ಎನ್​ಎಲ್ ಮತ್ತೊಂದು ಹೊಸ ಪ್ಲಾನ್ ಬಿಡುಗಡೆ ಮಾಡಿದ್ದು ಅನಿಯಮಿತ ಕರೆ, ಅನಿಯಮಿತ ಡೇಟಾ ಸೇರಿದಂತೆ ಭರ್ಜರಿ ಆಫರ್​ಗಳಿಂದ ಕೂಡಿದೆ.

ಬಿಎಸ್‌ಎನ್‌ಎಲ್‌ ಪರಿಚಯಿಸಿರುವ ಹೊಸ ಪ್ರಿಪೇಯ್ಡ್ ಪ್ಲಾನ್​ನ ಬೆಲೆ 398 ರೂ. ಆಗಿದೆ. ಇದು 30 ದಿನಗಳ ಮಾನ್ಯತೆ ಪಡೆದಿದ್ದು, ಅನ್‌ಲಿಮಿಟೆಡ್‌ ಡೇಟಾ ಪ್ರಯೋಜನ, ಅನಿಯಮಿತ ಕರೆಯ ಆಫರ್ ನೀಡುವ ಮೂಲಕ ಇತರೆ ಕಂಪೆನಿಗಳಿಗೆ ಶಾಕ್ ನೀಡಿದೆ.

ಇನ್ನೂ ಮುಂಬೈ ಮತ್ತು ದೆಹಲಿಯ ಎಂಟಿಎನ್ಎಲ್ ಪ್ರದೇಶಗಳು ಸೇರಿದಂತೆ ದಿನಕ್ಕೆ 100 ಎಸ್‌ಎಂಎಸ್‌ನೊಂದಿಗೆ ದೆಹಲಿ ಮತ್ತು ಮುಂಬೈನ ಎಂಟಿಎನ್‌ಎಲ್ ನೆಟ್‌ವರ್ಕ್‌ನಲ್ಲಿ ಅನಿಯಮಿತ ದೇಶೀಯ ಧ್ವನಿ ಕರೆಗಳು ಮತ್ತು ರಾಷ್ಟ್ರೀಯ ರೋಮಿಂಗ್ ಜೊತೆಗೆ ಯಾವುದೇ ವೇಗದ ನಿರ್ಬಂಧವಿಲ್ಲದೆ ಅನಿಯಮಿತ ಡೇಟಾವನ್ನು ಈ ಪ್ಲಾನ್​ನಲ್ಲಿ ಪಡೆಯಬಹುದು.

ಬಿಎಸ್​ಎನ್​ಎಲ್​ ಈ ಪ್ಲಾನ್ ಬಿಡುಗಡೆ ಮಾಡಿದ ಬೆನ್ನಲ್ಲೆ ಇತ್ತ ಖಾಸಗಿ ಟೆಲಿಕಾಂಗಳು ಕೂಡ ಹೊಸ ಹೊಸ ಯೋಜನೆಗಳನ್ನು 30 ದಿನಗಳು ಮತ್ತು 60 ದಿನಗಳ ಮಾನ್ಯತೆಯೊಂದಿಗೆ ಬಿಡುಗಡೆ ಮಾಡಿ ಪರೀಕ್ಷಿಸಿಲು ಮುಂದಾಗಿದೆ.

ಇತ್ತೀಚಿಗಷ್ಟೆ ರಿಲಯನ್ಸ್‌ ಜಿಯೋ ವಿಶೇಷವಾಗಿ ಐದು ದೈನಂದಿನ ಡೇಟಾ ಮಿತಿ ಯೋಜನೆಗಳನ್ನು ಬಿಡುಗಡೆ ಮಾಡಿತ್ತು. ಅವುಗಳಲ್ಲಿ ಒಂದು 247 ರೂ. ಬೆಲೆಯ ಪ್ಲಾನ್ ಆಗಿದೆ. ಇದು 30 ದಿನಗಳ ವ್ಯಾಲಿಡಿಟಿ ಹೊಂದಿದ್ದು, 25GB ಡೇಟಾ ಪ್ರಯೋಜನ ಪಡೆಯಬಹುದು. ಜೊತೆಗೆ ಅನಿಯಮಿತ ಕರೆಗಳು ಮತ್ತು ಜಿಯೋ ಅಪ್ಲಿಕೇಶನ್‌ಗಳೊಂದಿಗೆ ಬರುತ್ತದೆ.

ಇನ್ನೂ ಏರ್ಟೆಲ್​ನ 299 ರೂ.ಗಳ ಪ್ರಿಪೇಯ್ಡ್ ಯೋಜನೆಯ ಪ್ರಯೋಜನಗಳನ್ನು 30 ದಿನಗಳಿಗೆ ಹೆಚ್ಚಿಸಲಾಗಿದೆ. 30 ದಿನಗಳವರೆಗೆ ಅನಿಯಮಿತ ಕರೆಗಳೊಂದಿಗೆ 30GB ಡೇಟಾವನ್ನು ಮತ್ತು ದಿನಕ್ಕೆ 100 ಉಚಿತ ಎಸ್‌ಎಂಎಸ್ ನೀಡುತ್ತದೆ. ಈ ಯೋಜನೆಯ ಹೆಚ್ಚುವರಿ ಪ್ರಯೋಜನಗಳಲ್ಲಿ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ, ಉಚಿತ ಹಲೋ ಟ್ಯೂನ್‌ಗಳು, ವಿಂಕ್ ಮ್ಯೂಸಿಕ್ ಚಂದಾದಾರಿಕೆ ಸಿಗುತ್ತದೆ.

Mi Anniversary Sale 2021: ಅತಿ ಕಡಿಮೆಗೆ ಸಿಗುತ್ತಿದೆ ದುಬಾರಿ ಬೆಲೆಯ ರೆಡ್ಮಿ, ಎಂಐ ಸ್ಮಾರ್ಟ್​ಫೋನ್​

ರಿಲೀಸ್​ಗೂ ಮುನ್ನ ರೋಚಕತೆ ಸೃಷ್ಟಿಸಿದ Nokia C30 ಸ್ಮಾರ್ಟ್​ಫೋನ್: ಪ್ರಮುಖ ಮಾಹಿತಿ ಸೋರಿಕೆ

(BSNL introduced best prepaid plan Rs 398 gives unlimited data and calls)

Published On - 5:31 pm, Mon, 12 July 21

Follow Us
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್
ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!