How To: ಆನ್​ಲೈನ್​ ಕ್ಲಾಸ್, ವರ್ಕ್​ ಫ್ರಂ ಜಮಾನದಲ್ಲಿ ಮೊಬೈಲ್ ಡೇಟಾ ಉಳಿತಾಯಕ್ಕೆ 10 ಸೂತ್ರಗಳು

ಡೇಟಾ ಉಳಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ನಿಮ್ಮದೇ? ಹಾಗಿದ್ದರೆ ನೀವು ಈ ಲೇಖನ ಓದಬೇಕು. ಡೇಟಾ ಉಳಿತಾಯಕ್ಕೆ ನೆರವಾಗುವ, ನೀವು ಅತ್ಯಂತ ಸುಲಭವಾಗಿ ಬಳಸಬಹುದಾದ ಒಂದಿಷ್ಟು ಐಡಿಯಾಗಳು ಇಲ್ಲಿವೆ.

How To: ಆನ್​ಲೈನ್​ ಕ್ಲಾಸ್, ವರ್ಕ್​ ಫ್ರಂ ಜಮಾನದಲ್ಲಿ ಮೊಬೈಲ್ ಡೇಟಾ ಉಳಿತಾಯಕ್ಕೆ 10 ಸೂತ್ರಗಳು
ಪ್ರಾತಿನಿಧಿಕ ಚಿತ್ರ (Image Courtesy: Jim Makos/Flickr/cc 2.0)
Follow us
|

Updated on: Jul 06, 2021 | 6:57 PM

ನಿಮ್ಮ ಮೊಬೈಲ್​ ಫೋನ್ ಏಕೆ ಡೇಟಾ ಹೆಚ್ಚು ಬಳಸುತ್ತಿದೆ ಎಂದು ಎಂದಾದರೂ ಯೋಚಿಸಿದ್ದೀರಾ? ಪ್ರತಿದಿನದ ಡೇಟಾ ಲಿಮಿಟ್​ ಸದ್ದಿಲ್ಲದೆ ಖಾಲಿಯಾಗುತ್ತಿದೆ. ಏನು ಮಾಡುವುದು ಎಂಬ ಚಿಂತೆ ಕಾಡುತ್ತಿದ್ದೆಯೇ? ಮಕ್ಕಳ ಆನ್​ಲೈನ್ ಕ್ಲಾಸ್ ಮುಗಿದು, ನಿಮ್ಮ ಕೆಲಸಕ್ಕೂ ಬೇಕಿರುವಷ್ಟು ಡೇಟಾ ಉಳಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ನಿಮ್ಮದೇ? ಹಾಗಿದ್ದರೆ ನೀವು ಈ ಲೇಖನ ಓದಬೇಕು. ಡೇಟಾ ಉಳಿತಾಯಕ್ಕೆ ನೆರವಾಗುವ, ನೀವು ಅತ್ಯಂತ ಸುಲಭವಾಗಿ ಬಳಸಬಹುದಾದ ಒಂದಿಷ್ಟು ಐಡಿಯಾಗಳು ಇಲ್ಲಿವೆ.

1) ಡೇಟಾ ಹೆಚ್ಚಾಗಿ ಎಲ್ಲಿ ಬಳಕೆಯಾಗುತ್ತಿದೆ: ಮೊಬೈಲ್ ಸೆಟಿಂಗ್​ಗೆ ಹೋಗಿ, ಡೇಟಾ ಯೂಸೇಜ್ ಆಯ್ಕೆ ಮಾಡಿ, ಡೇಟಾ ಸೈಕಲ್ ಹೊಂದಿಸಿಕೊಳ್ಳಿ. ಯಾವ ಆ್ಯಪ್ ಹೆಚ್ಚು ಡೇಟಾ ಬಳಸಿಕೊಳ್ಳುತ್ತಿದೆ ಎಂಬುದನ್ನು ತಿಳಿದುಕೊಳ್ಳಿ. ಅಂಥ ಆ್ಯಪ್​ಗಳ ಸೆಟಿಂಗ್ಸ್​ ಸರಿಯಾಗಿ ಹೊಂದಿಸಿ, ಡೇಟಾ ಉಳಿತಾಯ ಮಾಡಿ.

2) ಸ್ಟ್ರೀಮಿಂಗ್ ಎಚ್ಚರ: ಯುಟ್ಯೂಬ್, ಅಮೆಜಾನ್, ಹಾಟ್​ಸ್ಟಾರ್, ನೆಟ್​ಫ್ಲಿಕ್ಸ್ ಸೇರಿದಂತೆ ಯಾವುದೇ ಸ್ಟೀಮಿಂಗ್​ ಪ್ಲಾಟ್​ಫಾರ್ಮ್​ಗಳ ಸೆಟಿಂಗ್ಸ್​ ನೀವು ನಿಮಗೆ ಬೇಕಾದಂತೆ ಹೊಂದಿಸಿಕೊಳ್ಳಬೇಕು.​ ಈ ಆ್ಯಪ್​ಗಳು ಅತ್ಯುತ್ತಮ ಗುಣಮಟ್ಟದ ವಿಡಿಯೊಗಳನ್ನು ಬಳಕೆದಾರರಿಗೆ ಕೊಡಬೇಕೆನ್ನುವ ಉತ್ಸಾಹದಲ್ಲಿ ಡಿಫಾಲ್ಟ್​ ಆಗಿ ಹೆಚ್ಚಿನ ಡೇಟಾ ನುಂಗುತ್ತವೆ. ಎಚ್​ಡಿ ಕ್ವಾಲಿಟಿ ಸ್ಟ್ರೀಮಿಂಗ್​ ಡಿಫಾಲ್ಟ್​ ಸೆಟ್ ಆಗಿದ್ದರೆ ಅಥವಾ ನಿಮ್ಮ ಮೊಬೈಲ್​ನಲ್ಲಿ ಆಟೊ ಸೆಟಿಂಗ್ ಇದ್ದರಂತೂ ಮುಗಿದೇ ಹೋಯಿತು. ನೆಟ್​ವರ್ಕ್​ ವೇಗ ಹೆಚ್ಚಾಗಿದ್ದಾಗ ಅತ್ಯುನ್ನತ ಗುಣಮಟ್ಟದ ಸ್ಟ್ರೀಮಿಂಗ್ ಚಾಲ್ತಿಯಲ್ಲಿರುತ್ತೆ. ಇಂಥ ಸಂದರ್ಭದಲ್ಲಿ ಒಂದು ಅಥವಾ ಎರಡು ಜಿಬಿ ಡೇಟಾ ಒಂದು ಸಿನಿಮಾ ನೋಡುವಷ್ಟರಲ್ಲಿ ಖರ್ಚಾಗಿ ಹೋಗಿರುತ್ತೆ. ಇದನ್ನು ನಿರ್ವಹಿಸಲು ಆಯಾ ಆ್ಯಪ್​ಗಳ ಸೆಟಿಂಗ್​ಗಳಲ್ಲಿ ಬದಲಾವಣೆ ಮಾಡಿಕೊಳ್ಳಿ. ಯುಟ್ಯೂಬ್​ನಲ್ಲಿ ಪ್ರತಿ ವಿಡಿಯೊಗೂ ಹೀಗೆ ಮಾಡಿಕೊಳ್ಳಬಹುದು. ಅಮೆಜಾನ್, ಹಾಟ್​ಸ್ಟಾರ್ ಮತ್ತು ನೆಟ್​ಫ್ಲಿಕ್​ನಲ್ಲಿ ಒಟ್ಟಾರೆ ಸೆಟಿಂಗ್ಸ್​ ಬದಲಿಸಿಕೊಳ್ಳಲು ಅವಕಾಶವಿದೆ.

3) ಹಾಟ್​ಸ್ಪಾಟ್ / ಡೌನ್​ಲೋಡ್​ ಜಾಣತನ: ಒಂದು ಮನೆಯಲ್ಲಿ ನಾಲ್ಕು ಜನರಿದ್ದರೆ ಈಗ ನಾಲ್ಕು ಮೊಬೈಲುಗಳಿರುತ್ತವೆ. ಕೆಲವರಿಗೆ ಹೆಚ್ಚು ಡೇಟಾ ಬಳಕೆ ಅಗತ್ಯವಿರುವುದಿಲ್ಲ. ಉದಾಹರಣೆಗೆ ನಿಮ್ಮ ಮನೆಯಲ್ಲಿ ಅಜ್ಜ ಅಜ್ಜಿ ಇರಬಹುದು. ಈಗ ವರ್ಷದ ಲೆಕ್ಕದಲ್ಲಿ ಪ್ರತಿದಿನ 2 ಜಿಬಿ ಡೇಟಾ ಬರುವಂತೆ ರಿಚಾರ್ಜ್ ಮಾಡಿಸಿಕೊಳ್ಳುವುದು ಟ್ರೆಂಡ್ ಆಗಿದೆ. ನಿಮ್ಮ ಮನೆಯಲ್ಲಿ ಇಂಥವರಿದ್ದಾಗ ಅವರ ಮೊಬೈಲ್​ಗಳಲ್ಲಿ ಹಾಟ್​ಸ್ಟಾಪ್ ಮೂಲಕ ನಿಮ್ಮ ಡಿವೈಸ್​ಗೆ ವಿಡಿಯೊ, ಸಿನಿಮಾ ಡೌನ್​ಲೋಡ್ ಮಾಡಿಕೊಳ್ಳಬಹುದು. ಮಕ್ಕಳ ಆನ್​ಲೈನ್ ಕ್ಲಾಸ್​ಗೂ ಇಂಥದ್ದೇ ತಂತ್ರ ಅನುಸರಿಸಬಹುದು. ವಿಡಿಯೊಗಳನ್ನು ಡೌನ್​ಲೋಡ್​ ಮಾಡುವಾಗ ಅದರಲ್ಲಿಯೂ ದಿ ಬೆಸ್ಟ್ ಎನ್ನುವ ಹಂತಕ್ಕಿಂತ ಮಧ್ಯಮ ಗುಣಮಟ್ಟದ ವಿಡಿಯೊಗಳನ್ನು ಡೌನ್​ಲೋಡ್ ಮಾಡಿಕೊಳ್ಳಲು ಗಮನ ಕೊಡಿ. ಡೇಟಾ ಉಳಿತಾಯದಲ್ಲಿ ಇದು ಮಹತ್ವದ ಪಾತ್ರ ನಿರ್ವಹಿಸುತ್ತದೆ.

3) ವಾಟ್ಸ್ಯಾಪ್​ ಆಟೊ ಡೌನ್​ಲೋಡ್​ ಡಿಸೇಬಲ್ ಮಾಡಿ: ಎಲ್ಲರ ಫೋನ್​ನಲ್ಲೂ ಈಗ ವಾಟ್ಸ್ಯಾಪ್​ ಇದ್ದೇ ಇರುತ್ತದೆ. ವಾಟ್ಸ್ಯಾಪ್​ನ ಡಿಫಾಲ್ಟ್​ ಸೆಟಿಂಗ್ ಉಳಿಸಿಕೊಳ್ಳುವ ಬದಲು, ನಿಮಗೆ ಬೇಕಾದಂತೆ ಸೆಟಿಂಗ್ಸ್​ ಬದಲಿಸಿಕೊಂಡರೆ ಸಾಕಷ್ಟು ಡೇಟಾ ಉಳಿಸಬಹುದು. ನಿಮ್ಮ ಮೊಬೈಲ್​ನ ವಾಟ್ಸ್ಯಾಪ್​ ಸೆಟಿಂಗ್​ನಲ್ಲಿ ಡೇಟಾ ಅಂಡ್ ಯೂಸೇಜ್​ಗೆ ಹೋಗಿ. ಅದರಲ್ಲಿ ಆಟೊ ಡೌನ್​ಲೋಡ್ ಓಪನ್ ಮಾಡಿ. ಅಲ್ಲಿ ಫೋಟೊ, ವಿಡಿಯೊ, ಆಡಿಯೊ ಮತ್ತು ಡಾಕ್ಯುಮೆಂಟ್​ಗಳು​ ಡಿಫಾಲ್ಟ್​ ಆಗಿ ಆಟೊ ಡೌನ್​ಲೋಡ್​ಗೆ ಆಯ್ಕೆಯನ್ನು ಎನೇಬಲ್ ಮಾಡಿಕೊಂಡಿರುತ್ತೆ. ಅವೆಲ್ಲವನ್ನೂ ಡಿಸೇಬಲ್ ಮಾಡಿಕೊಳ್ಳಿ. ನಿಮಗೆ ಬರುವ ನೂರಾರು ಮೆಸೇಜ್​ಗಳಲ್ಲಿ ನಿರ್ದಿಷ್ಟವಾಗಿ ಯಾವುದಾದರೂ ಇಮೇಜ್, ವಿಡಿಯೊ, ಆಡಿಯೊ, ಡಾಕ್ಯುಮೆಂಟ್ ಬೇಕಿದ್ದರೆ ಅಂಥವನ್ನು ಮಾತ್ರ ಡೌನ್​ಲೋಡ್ ಮಾಡಿಕೊಳ್ಳಿ. ವಾಟ್ಸಾಪ್ ಬ್ಯಾಕ್​ಅಪ್​ ವಿಚಾರದಲ್ಲಿಯೂ ಇಂಥದ್ದೇ ಜಾಣತನ ಬೇಕಿದೆ. ಕೆಲವರು ಡೈಲಿ ಬ್ಯಾಕ್​ಅಪ್ ಎನೇಬಲ್ ಮಾಡಿಕೊಂಡಿರುತ್ತಾರೆ. ಇದರ ಬದಲು ಓನ್ಲಿ ವೆನ್ ಐ ಟ್ಯಾಪ್ ಬ್ಯಾಕಪ್ ಆಯ್ಕೆ ಬಳಸಿಕೊಳ್ಳುವುದು ಒಳ್ಳೆಯದು.

4) ಪ್ಲೇಸ್ಟೋರ್ ನಿರ್ವಹಣೆ: ಈಚಿನ ದಿನಗಳಲ್ಲಿ ಗೂಗಲ್​ ಪ್ಲೇಸ್ಟೋರ್​ನಲ್ಲಿ ಆಟೊ ಅಪ್​ಡೇಟ್​ ಕೊಟ್ಟು ನೆಮ್ಮದಿಯಾಗಿದ್ದೇವೆ ಅಂದುಕೊಳ್ಳುವವರೇ ಹೆಚ್ಚು. ಆ್ಯಪ್​ಗಳ ಅಪ್​ಡೇಟ್ ಗಮನಿಸಬೇಕಿಲ್ಲ. ಅವು ತನ್ನಿಂತಾನೆ ಅಪ್​ಡೇಟ್ ಆಗುತ್ತಿರುತ್ತವೆ ಎಂದುಕೊಳ್ಳುತ್ತಾರೆ. ಹೊಸ ಅಪ್​ಡೇಟ್ ಬಂದಾಗ ಇಂಥ ಅಪ್​ಡೇಟ್​ಗಳು ತಾವಾಗಿಯೇ ಇನ್​ಸ್ಟಾಲ್ ಆಗುವುದು ನಿಜ. ಆದರೆ ಇಂಥ ಸಂದರ್ಭದಲ್ಲಿ ಸಾಕಷ್ಟು ಡೇಟಾ ಖಾಲಿಯಾಗುತ್ತದೆ. ಕೆಲ ಆ್ಯಪ್​ಗಳ ಅಪ್​ಡೇಟ್​ಗಳಂತೂ 100 ಎಂಬಿಗಟ್ಟಲೆ ಇರುತ್ತದೆ. ನಿಮಗೆ ಮೊಬೈಲ್ ಡೇಟಾ ಉಳಿಸಿಕೊಳ್ಳಬೇಕು ಎಂಬ ಆಸೆಯಿದ್ದರೆ ಆಟೊ ಅಪ್​ಡೇಟ್​ ಡಿಸೇಬಲ್ ಮಾಡಿಕೊಳ್ಳಿ. ನಿಮಗೆ ಬೇಕಿದ್ದಾಗ, ಬೇಕೆನಿಸಿದ ಆ್ಯಪ್​ಗಳನ್ನು ಅಪ್​ಡೇಟ್ ಮಾಡಿಕೊಳ್ಳಿ.

5) ಕ್ಲೌಡ್​ ನಿರ್ವಹಣೆ: ಗೂಗಲ್​ಡ್ರೈವ್, ಗೂಗಲ್ ಫೋಟೊಸ್, ಡ್ರಾಪ್​ಬಾಕ್ಸ್​ ಸೇರಿದಂತೆ ಹಲವು ಆ್ಯಪ್​ಗಳು ಮೊಬೈಲ್​ನಲ್ಲಿರುವ ಎಲ್ಲ ಇಮೇಜ್ ಅಥವಾ ಇತರ ಡೇಟಾಗಳನ್ನು ಸಿಂಕ್ ಮಾಡಿಕೊಳ್ಳುತ್ತಿರುತ್ತವೆ. ಇಂಥ ಆ್ಯಪ್​ಗಳ ಸೆಟಿಂಗ್​ ಪರಿಶೀಲಿಸಿ, ಆಟೊ ಸಿಂಕ್ ಡಿಸೇಬಲ್ ಮಾಡಿ. ನಿಮಗೆ ಬೇಕೆನಿಸಿದ ಡೇಟಾವನ್ನು ಮಾತ್ರ ಬೇಕೆನಿಸಿದಾಗ ಕ್ಲೌಡ್​ಗೆ ಸಿಂಕ್ ಮಾಡಿಕೊಳ್ಳಿ.

6) ಹಾಟ್​ಸ್ಪಾಟ್: ನಿಮ್ಮ ಮೊಬೈಲ್​ ಅನ್ನು ಹಾಟ್​ಸ್ಪಾಟ್ ರೀತಿಯಲ್ಲಿ ಬಳಸುವಾಗ ಅದಕ್ಕೆ ಸಂಪರ್ಕಗೊಳ್ಳುವ ಇತರ ಸಾಧನಗಳು ವೈಫೈ ಮೂಲಕ ಸಂಪರ್ಕಗೊಂಡಂತೆ ಡೇಟಾ ನುಂಗುತ್ತವೆ. ಏಕೆಂದರೆ ಆಗ ಆ ಡಿವೈಸ್​ಗಳಲ್ಲಿರುವ ಡೇಟಾ ಸೆಟಿಂಗ್​ ಸೆಲ್ಯುಲಾರ್​ಗೆ ಬದಲಾಗಿ ವೈಫೈ ಸೆಟಿಂಗ್ಸ್​ ಎನೇಬಲ್ ಮಾಡಿಕೊಂಡು ಅದೇ ರೀತಿಯಲ್ಲಿ ಡೇಟಾ ಬಳಸುತ್ತಿರುತ್ತವೆ. ಹೀಗಾಗಿ ನಿಮ್ಮ ಮೊಬೈಲ್​ ಹಾಟ್​ಸ್ಪಾಟ್​ಗೆ ಸಂಪರ್ಕ ಹೊಂದುವ ಸಾಧನಗಳ ವಿಚಾರದಲ್ಲಿಯೂ ಎಚ್ಚರವಿರಬೇಕು. ವೈಫೈ ಕನೆಕ್ಟ್ ಆದ ತಕ್ಷಣ ಈ ಸಾಧನಗಳಲ್ಲಿ ಆಟೊ ಡೌನ್​ಲೋಡ್ ಅಥವಾ ಆ್ಯಪ್​ ಅಪ್​ಡೇಟ್ ಶುರುವಾದರೆ ನಿಮ್ಮ ಬಳಕೆಗೆ ಡೇಟಾ ಉಳಿಯುವುದೇ ಇಲ್ಲ. ಇಂಥ ಸಾಧನೆಗಳಲ್ಲಿಯೂ ಆಟೊ ಅಪ್​ಡೇಟ್ ನಿಷ್ಕ್ರಿಯಗೊಳಿಸುವುದು ಅಗತ್ಯ.

7) ಡೇಟಾ ಸೇವರ್ ಎನೇಬಲ್ ಮಾಡಿ: ಬಹುತೇಕ ಆಂಡ್ರಾಯ್ಡ್​ ಫೋನ್​ಗಳಲ್ಲಿ ಡೇಟಾ ಸೇವರ್ ಆಯ್ಕೆ ಇರುತ್ತದೆ. ನೀವು ನಿಮ್ಮ ಮೊಬೈಲ್ ಬಳಕೆ ಮಾಡದಿದ್ದಾಗ ಅಂದ್ರೆ ಸ್ಲೀಪ್​ ಮೋಡ್​ನಲ್ಲಿದ್ದಾಗ ಬ್ಯಾಕ್​ಗ್ರೌಂಡ್​ನಲ್ಲಿ ಆ್ಯಪ್​ಗಳು ರಿಫ್ರೆಶ್​ ಆಗಿ ಡೇಟಾ ಖಾಲಿಯಾಗುವುದನ್ನು ಈ ಆಯ್ಕೆ ತಡೆಯುತ್ತದೆ.

8) ಆಟೊ ಸಿಂಕ್ ಡಿಸೇಬಲ್ ಮಾಡಿ: ಬಹುತೇಕ ಮೊಬೈಲ್ ಫೋನ್​​ಗಳಲ್ಲಿ ಆಟೊ ಸಿಂಕ್ ಎನೇಬಲ್ ಆಗಿರುತ್ತದೆ. ನಿಮಗೆ ಒಂದು ವೇಳೆ ಹಳೆಯ ಫೋನ್ ಬದಲಿಸಬೇಕಾದಾಗ ಅದರಲ್ಲಿರುವ ಡೇಟಾ ಮತ್ತು ಸೆಟಿಂಗ್​ ಹೊಸ ಫೋನ್​ಗೂ ತನ್ನಿಂತಾನೆ ಸಿಂಕ್ ಮಾಡಿಕೊಡುವ ಸೌಕರ್ಯವನ್ನು ಇದು ಕಲ್ಪಿಸುತ್ತದೆ. ಈ ಆಯ್ಕೆಯೂ ಸಾಕಷ್ಟು ಡೇಟಾ ನುಂಗುತ್ತದೆ. ನಿಮ್ಮ ಆಂಡ್ರಾಯ್ಡ್​ ಫೋನ್​ಗಳಲ್ಲಿ ಆಟೊ ಸಿಂಕ್ ಡಿಸೇಬಲ್ ಮಾಡಿಕೊಂಡಿರುವುದು ಜಾಣತನ. ನಿಮಗೆ ಬೇಕೆನಿಸಿದಾಗ ಇದನ್ನು ಏನೇಬಲ್ ಮಾಡಿಕೊಂಡು ಸಿಂಕ್ ಮಾಡಿಕೊಳ್ಳಬಹುದು.

9) ವಾರ್ನಿಂಗ್ ಲಿಮಿಟ್​ ಸೆಟ್ ಮಾಡಿ: ಮೊಬೈಲ್ ಡೇಟಾ ಒಂದು​ ನಿರ್ದಿಷ್ಟ ಮಟ್ಟಕ್ಕೆ ಮುಟ್ಟಿದಾಗ ನಿಮಗೆ ಎಚ್ಚರಿಕೆ ಸಂದೇಶ ಬರುವಂತೆ ವಾರ್ನಿಂಗ್ ಸೆಟ್ ಮಾಡಿಕೊಳ್ಳಿ. ಹೀಗೆ ಮಾಡಿಕೊಳ್ಳುವ ಮೂಲಕ ಮೊಬೈಲ್​ ಡೇಟಾ ಬಳಕೆ ಒಂದು ಹಂತ ದಾಟಿದ ನಂತರ ನಿಮಗೆ ಎಚ್ಚರಿಕೆಯ ಸಂದೇಶ ಬರುತ್ತದೆ. ಆಗ ನೀವು ಎಚ್ಚೆತ್ತುಕೊಂಡು ಡೇಟಾ ಬಳಕೆಯನ್ನು ತಗ್ಗಿಸಿಕೊಳ್ಳಬಹುದು.

10) ಹಾಟ್​ಸ್ಪಾಟ್​ಗಿಂತಲೂ ಟೆದರಿಂಗ್ ಒಳ್ಳೆಯದು: ವರ್ಕ್​ಫ್ರಂ ಹೋಮ್ ಅಥವಾ ಆನ್​ಲೈನ್ ಕ್ಲಾಸ್​ಗೆ ಕಂಪ್ಯೂಟರ್ ಅಥವಾ ಲ್ಯಾಪ್​ಟಾಪ್ ಬಳಸುವವರು ಮೊಬೈಲ್ ಹಾಟ್​ಸ್ಪಾಟ್ ಬಳಸುವುದು ವಾಡಿಕೆ. ಇಂಥ ಸಂದರ್ಭದಲ್ಲಿ ವೈಫೈ ಹಾಟ್​ಸ್ಪಾಟ್​ ಬಳಕೆಗಿಂತಲೂ ಯುಎಸ್​ಬಿ ಟೆದರಿಂಗ್ ಮೂಲಕ ಇಂಟರ್ನೆಟ್ ಸಂಪರ್ಕ ಮಾಡಿಕೊಳ್ಳುವುದು ಒಳ್ಳೆಯದು. ಹೀಗೆ ಮಾಡುವುದರಿಂದ ನಿಮ್ಮ ಮೊಬೈಲ್​ ಡೇಟಾ ಇತರ ಸಾಧನಗಳೊಂದಿಗೆ ಶೇರ್ ಆಗುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಮೇಲಿನ ಹತ್ತು ಅಂಶಗಳ ಜೊತೆಗೆ ಇನ್ನೆರೆಡು ವಿಷಯ ಗಮನಿಸಿ. ಅಗತ್ಯವಿದ್ದಾಗ ಮಾತ್ರ ಮೊಬೈಲ್ ಡೇಟಾ ಆನ್ / ಆಫ್ ಮಾಡಿಕೊಳ್ಳಿ. ಆಟೊ ಸಿಂಕ್ ಆನ್​ / ಆಫ್ ಮಾಡುವುದು ರೂಢಿಮಾಡಿಕೊಳ್ಳಿ. ಬ್ಯಾಕ್​ಗ್ರೌಂಡ್​ ಡೇಟಾ ಯೂಸೇಜ್ ರಿಸ್ಟ್ರಿಕ್ಟ್ ಮಾಡಿಕೊಳ್ಳಿ.

(How to save mobile data in this work from home and online classes are simple tricks while save data in your mobile phone)

ಇದನ್ನೂ ಓದಿ: YouTube: ಯುಟ್ಯೂಬ್​ ಚಾನೆಲ್ ಆರಂಭಿಸಿ ಹಣ ಸಂಪಾದಿಸುವುದು ಹೇಗೆ?

ಇದನ್ನೂ ಓದಿ: How to merge two UAN: ಪಿಎಫ್​ ಖಾತೆದಾರರು ಒಂದಕ್ಕಿಂತ ಹೆಚ್ಚು ಯುಎಎನ್​ ಹೊಂದಿದ್ದರೆ ನಿಯಮಬಾಹಿರ; ಇಂಥ ಸನ್ನಿವೇಶ ಏನು ಮಾಡಬೇಕು?

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ