Mi 11 Ultra: ಶಿಯೋಮಿ ಕಂಪೆನಿಯ ದುಬಾರಿ ಫೋನ್ Mi 11 ಅಲ್ಟ್ರಾ ಮಾರಾಟ ಭಾರತದಲ್ಲಿ ಇಂದಿನಿಂದಲೇ ಶುರು

ಜುಲೈ 7ನೇ ತಾರೀಕಿನ ಮಧ್ಯಾಹ್ನ 12 ಗಂಟೆಯಿಂದ ಭಾರತದಲ್ಲಿ Mi 11 ಅಲ್ಟ್ರಾ ಫೋನ್​ನ ಮಾರಾಟ ಆರಂಭವಾಗುತ್ತದೆ ಎಂದು ಶಿಯೋಮಿ ಘೋಷಣೆ ಮಾಡಿದೆ. ಯಾರು ಮುಂಚಿತವಾಗಿಯೇ ನೋಂದಣಿ ಮಾಡಿಕೊಂಡಿರುತ್ತಾರೋ ಅಂಥವರು mi.comನಲ್ಲಿ F ಕೋಡ್ ನಮೂದಿಸಬೇಕು.

Mi 11 Ultra: ಶಿಯೋಮಿ ಕಂಪೆನಿಯ ದುಬಾರಿ ಫೋನ್ Mi 11 ಅಲ್ಟ್ರಾ ಮಾರಾಟ ಭಾರತದಲ್ಲಿ ಇಂದಿನಿಂದಲೇ ಶುರು
Mi 11 ಅಲ್ಟ್ರಾ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Srinivas Mata

Updated on: Jul 07, 2021 | 11:35 AM

Mi 11 ಅಲ್ಟ್ರಾ ಮೊಬೈಲ್​ಫೋನ್ ಮಾರಾಟ ಮೊದಲ ಬಾರಿಗೆ ಭಾರತದಲ್ಲಿ ಇಂದಿನಿಂದ (ಜುಲೈ 7, 2021) ಆರಂಭವಾಗಲಿದೆ. ಅಂದ ಹಾಗೆ ಈ ಫೋನ್ ಮೂಲಕ ಶಿಯೋಮಿ ಕಂಪೆನಿಯಿಂದ ಒನ್​ಪ್ಲಸ್​ 9ಪ್ರೊ ಹಾಗೂ ವಿವೋ ಎಕ್ಸ್​60 ಪ್ರೊ+ಗೆ ಸ್ಪರ್ಧೆ ನೀಡಲಾಗುವುದು. Mi 11 ಅಲ್ಟ್ರಾ ಫೋನ್​ ಅನ್ನು ಭಾರತದಲ್ಲಿ ಅನಾವರಣಗೊಳಿಸಿದ್ದು ಏಪ್ರಿಲ್ 23ನೇ ತಾರೀಕು, ಜುಲೈ 7ನೇ ತಾರೀಕಿನ ಮೊದಲ ಮಾರಾಟಕ್ಕೆ ಭಾರತದಲ್ಲಿ ಸೀಮಿತ ಸಂಖ್ಯೆಯಲ್ಲಿ ಮಾತ್ರ ಲಭ್ಯವಿರಲಿದೆ ಎಂದು ಕಂಪೆನಿ ತಿಳಿಸಿತ್ತು. ಜುಲೈ 7ನೇ ತಾರೀಕಿನ ಮಧ್ಯಾಹ್ನ 12 ಗಂಟೆಯಿಂದ ಭಾರತದಲ್ಲಿ Mi 11 ಅಲ್ಟ್ರಾ ಫೋನ್​ನ ಮಾರಾಟ ಆರಂಭವಾಗುತ್ತದೆ ಎಂದು ಶಿಯೋಮಿ ಘೋಷಣೆ ಮಾಡಿದೆ. ಯಾರು ಮುಂಚಿತವಾಗಿಯೇ ನೋಂದಣಿ ಮಾಡಿಕೊಂಡಿರುತ್ತಾರೋ ಅಂಥವರು mi.comನಲ್ಲಿ F ಕೋಡ್ ನಮೂದಿಸಬೇಕು ಅಥವಾ ಖರೀದಿ ಸಂಪೂರ್ಣಗೊಳಿಸಲು Mi ಹೋಮ್​ ಸ್ಟೋರ್​ಗಳಿಗೆ ಭೇಟಿ ನೀಡಿದರಾಯಿತು. ನೆನಪಿರಬೇಕಾದ ಸಂಗತಿ ಏನೆಂದರೆ, Mi 11 ಅಲ್ಟ್ರಾ ಮೊಬೈಲ್ ಫೋನ್ ಸೀಮಿತ ಸಂಖ್ಯೆಯಲ್ಲಿ ಮಾತ್ರ ಲಭ್ಯ ಇದೆ.

ಶಿಯೋಮಿಯಿಂದ Mi 11 ಅಲ್ಟ್ರಾ ಒಂದೇ ಸ್ಟೋರೇಜ್ ವೇರಿಯೆಂಟ್​ನೊಂದಿಗೆ ಅನಾವರಣಗೊಳಿಸಿದೆ. 12GB+ 256Gb ಸಾಮರ್ಥ್ಯದ ಫೋನ್​ಗೆ ಭಾರತದಲ್ಲಿ ರೂ. 69,999 ಇದೆ. ಯಾರು ತಮ್ಮ ಎಸ್​ಬಿಐ ಕಾರ್ಡ್ಸ್ ಬಳಸಿ ಖರೀದಿ ಮಾಡುತ್ತಾರೋ ಅಂಥವರಿಗೆ ರೂ. 5000 ರಿಯಾಯಿತಿ ಸಿಗುತ್ತದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್​21 ಪ್ಲಸ್, ವಿವೋ ಎಕ್ಸ್​60 ಪ್ರೊ+ ಮತ್ತು ಒನ್​ಪ್ಲಸ್​ 9 ಪ್ರೊ ಜತೆಗೆ ಸ್ಪರ್ಧಿಸಲಿದೆ. ಇನ್ನು ಐಒಎಸ್ ಆಪರೇಟಿಂಗ್ ಸಿಸ್ಟಮ್​ನಲ್ಲಿ ಐಫೋನ್ 12 ಮಿನಿ ಹಾಗೂ ಐಫೋನ್ 12 ಜತೆ ಸ್ಪರ್ಧೆ ಮಾಡಲಿದೆ.

Mi 11 ಅಲ್ಟ್ರಾ ವೈಶಿಷ್ಟ್ಯ ಇರುವುದು ಅದರ ಕ್ಯಾಮೆರಾ ಸಿಸ್ಟಮ್​ನಲ್ಲಿ. ಇದು 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ GN21/1.12-ಇಂಚಿನ ಸೆನ್ಸರ್ ಹೊಂದಿದೆ, ಇದರೊಂದಿಗೆ 48 MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 5 MP ಆಪ್ಟಿಕಲ್ ಜೂಮ್ ಹೊಂದಿರುವ 48 MP ಟೆಲಿಫೋಟೋ ಸೆನ್ಸರ್ ಇದೆ. ಈ ಫೋನ್ ಹಿಂಭಾಗದಲ್ಲಿ ಕ್ಯಾಮೆರಾ ಮಾಡ್ಯೂಲ್ ಪಕ್ಕದಲ್ಲಿ 1.1 ಇಂಚಿನ ಸೆಕೆಂಡರಿ ಡಿಸ್​ಪ್ಲೇ ಸಹ ಹೊಂದಿದೆ.

ಮುಂಭಾಗದಲ್ಲಿ 120 Hz ರಿಫ್ರೆಶ್ ದರದೊಂದಿಗೆ 6.8-ಇಂಚಿನ WQHD+ ಸೂಪರ್ ಅಮೋಲೆಡ್ ಡಿಸ್​ಪ್ಲೇ ಇದೆ. ಕರ್ವ್ ಡಿಸ್​ಪ್ಲೇ 1700 ನಿಟ್ಸ್ ಗರಿಷ್ಠ ಬ್ರೈಟ್​ನೆಸ್ ಅನ್ನು ಸಪೋರ್ಟ್ ಮಾಡುತ್ತದೆ, ಇದು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 21 ಅಲ್ಟ್ರಾ ಡಿಸ್​ಪ್ಲೇಯಲ್ಲಿನ 1500 ನಿಟ್‌ಗಳಿಗಿಂತ ಹೆಚ್ಚಾಗಿದೆ. ಈ ಫೋನ್ 12 ಜಿಬಿ RAM ಮತ್ತು 256 ಜಿಬಿ ಸಂಗ್ರಹದೊಂದಿಗೆ, ಸ್ನಾಪ್​ಡ್ರ್ಯಾಗನ್ 888 SoC ಅನ್ನು ಪಡೆಯುತ್ತದೆ. ಇದು 67W ಫಾಸ್ಟ್ ಚಾರ್ಜಿಂಗ್ ಸಪೋರ್ಟ್​ನೊಂದಿಗೆ 5000 mAh ಬ್ಯಾಟರಿಯೊಂದಿಗೆ ಕಾರ್ಯ ನಿರ್ವಹಿಸುತ್ತದೆ.

ಇದನ್ನೂ ಓದಿ: Xiaomi Mi 11 Lite: Mi 11 ಲೈಟ್ ಮೊಬೈಲ್ ಫೋನ್ ಮಾರಾಟ ಭಾರತದಲ್ಲಿ ಇಂದಿನಿಂದ ಆರಂಭ; ಬೆಲೆ ಮತ್ತಿತರ ಮಾಹಿತಿ ಇಲ್ಲಿದೆ

( Xiaomi’s Mi 11 ultra mobile phone go for sale from today (July 7th 2021) in India. Here is the details)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್