Xiaomi Mi 11 Lite: Mi 11 ಲೈಟ್ ಮೊಬೈಲ್ ಫೋನ್ ಮಾರಾಟ ಭಾರತದಲ್ಲಿ ಇಂದಿನಿಂದ ಆರಂಭ; ಬೆಲೆ ಮತ್ತಿತರ ಮಾಹಿತಿ ಇಲ್ಲಿದೆ

ಶಿಯೋಮಿ ಕಂಪೆನಿಯ Mi 11 ಲೈಟ್ ಮೊಬೈಲ್ ಫೋನ್ ಮಾರಾಟ ಭಾರತದಲ್ಲಿ ಜೂನ್ 28, 2021ರಿಂದ ಆರಂಭವಾಗಿದೆ. ಮಧ್ಯಾಹ್ನ 12ರಿಂದ ಫ್ಲಿಪ್​ಕಾರ್ಟ್​ನಲ್ಲಿ ಈ ಸ್ಮಾರ್ಟ್​ಫೋನ್ ಖರೀದಿಗೆ ಲಭ್ಯವಾಗಿದೆ. ಅಷ್ಟೇ ಅಲ್ಲ, ಇತರ ರೀಟೇಲ್ ಚಾನೆಲ್​ಗಳ ಮೂಲಕವೂ ಖರೀದಿಸಬಹುದು.

Xiaomi Mi 11 Lite: Mi 11 ಲೈಟ್ ಮೊಬೈಲ್ ಫೋನ್ ಮಾರಾಟ ಭಾರತದಲ್ಲಿ ಇಂದಿನಿಂದ ಆರಂಭ; ಬೆಲೆ ಮತ್ತಿತರ ಮಾಹಿತಿ ಇಲ್ಲಿದೆ
ಎಂಐ 11 ಲೈಟ್ ಮೊಬೈಲ್ ಫೋನ್
Follow us
TV9 Web
| Updated By: Srinivas Mata

Updated on: Jun 28, 2021 | 1:23 PM

ಶಿಯೋಮಿ ಕಂಪೆನಿಯ Mi 11 ಲೈಟ್ ಮೊಬೈಲ್ ಫೋನ್ ಮಾರಾಟ ಭಾರತದಲ್ಲಿ ಇಂದಿನಿಂದ (ಜೂನ್ 28, 2021) ಆರಂಭವಾಗಿದೆ. ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್​ಕಾರ್ಟ್​ನಲ್ಲಿ ಈ ಸ್ಮಾರ್ಟ್​ಫೋನ್ ಖರೀದಿಗೆ ಲಭ್ಯವಾಗಿದೆ. ಇದರ ಜತೆಗೆ Mi.com, Mi ಹೋಮ್ ಸ್ಟೋರ್ಸ್ ಮತ್ತು ಇತರ ರೀಟೇಲ್ ಚಾನೆಲ್​ಗಳ ಮೂಲಕ ಖರೀದಿ ಮಾಡಬಹುದು. Mi 11 ಲೈಟ್ ಅನ್ನು ಕಳೆದ ವಾರ ಅನಾವರಣಗೊಳಿಸಲಾಯಿತು. Mi 11 ಫೋನ್​ನ ಕಡಿಮೆ ದರ್ಜೆಯ ಸ್ಮಾರ್ಟ್​ಫೋನ್ ಇದಾಗಿದೆ. ಈ ವರ್ಷದ ಅತ್ಯಂತ ಹಗುರ ಹಾಗೂ ತೆಳುವಾದ ಫೋನ್ Mi 11 ಲೈಟ್ ಎಂದು ಹೇಳಿಕೊಳ್ಳಲಾಗಿದೆ. 7mm ದಪ್ಪದ ಈ ಫೋನ್ ತೂಕವು 160 ಗ್ರಾಮ್​ಗಿಂತ ಕಡಿಮೆ ಇದೆ. 6GB RAM+ 128GB ಸಂಗ್ರಹ ಸಾಮರ್ಥ್ಯದ Mi 11 ಲೈಟ್​ ಫೋನ್​ನ ಬೆಲೆ ಭಾರತದಲ್ಲಿ ರೂ. 21,999 ಮೇಲ್ಪಟ್ಟು ಇದೆ.

ಅದೇ 8GB ಸಾಮರ್ಥ್ಯದ್ದು ರೂ. 23,999 ಇದೆ. ಜಾಜ್ ಬ್ಲ್ಯೂ, ಟಸ್ಕರಿ ಕೋರಲ್ ಮತ್ತು ವಿನೈಲ್ ಬ್ಲ್ಯಾಕ್ ಹೀಗೆ ಮೂರು ಬಣ್ಣಗಳ ಆಯ್ಕೆಯಲ್ಲಿ Mi 11 ಲೈಟ್ ಸ್ಮಾರ್ಟ್​ಫೋನ್ ಸಿಗುತ್ತದೆ. ಯಾರು ಎಚ್​ಡಿಎಫ್​ಸಿ ಬ್ಯಾಂಕ್​ ಕ್ರೆಡಿಟ್ ಕಾರ್ಡ್​ ಬಳಸಿ ಅಥವಾ ಸುಲಭ ಇಎಂಐ ಆಯ್ಕೆ ಮಾಡಿಕೊಳ್ಳುತ್ತಾರೋ ಅಂಥ ಗ್ರಾಹಕರಿಗೆ 1500 ರೂಪಾಯಿ ತನಕ ರಿಯಾಯಿತಿ ದೊರೆಯುತ್ತದೆ.

Mi 11 ಲೈಟ್ ಫೋನ್ 6.55 ಇಂಚಿನ ಫುಲ್- ಎಚ್​ಡಿ+ AMOLED ಡಿಸ್​ಪ್ಲೇ ಜತೆಗೆ 90Hz ರಿಫ್ರೆಷ್​ ದರದೊಂದಿಗೆ ಬರುತ್ತದೆ. ಈ ಫೋನ್​ನಲ್ಲಿ ಕ್ವಾಲ್​ಕಾಮ್ ಸ್ನ್ಯಾಪ್​ಡ್ರಾಗನ್ 732G ಚಿಪ್​ಸೆಟ್​ ಬಳಸಲಾಗಿದೆ. ಜತೆಗೆ 8GB RAM ಇದೆ. 4,250 mAh ಬ್ಯಾಟರಿ ಇದ್ದು, ಅದನ್ನು ಸಪೋರ್ಟ್​ 33W ಫಾಸ್ಟ್ ಚಾರ್ಜಿಂಗ್ ಒಳಗೊಂಡಿದೆ. ಈ ಸ್ಮಾರ್ಟ್​ಫೋನ್ ಹಿಂಭಾಗದಲ್ಲಿ ಮೂರು ಕ್ಯಾಮೆರಾವಿದ್ದು, 64 ಮೆಗಾಪಿಕ್ಸೆಲ್ ಪ್ರಾಥಮಿಕ ಶೂಟರ್, 8 ಮೆಗಾಪಿಕ್ಸೆಲ್​ನ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 5 ಮೆಗಾಪಿಕ್ಸೆಲ್​ನ ಮ್ಯಾಕ್ರೋ ಶೂಟರ್ ಇದೆ. ಅಂದಹಾಗೆ ಈ ಫೋನ್​ನಲ್ಲಿ 16 ಮೆಗಾಪಿಕ್ಸೆಲ್​ನ ಸೆಲ್ಫಿ ಕ್ಯಾಮೆರಾ ಇದ್ದು, ಕನೆಕ್ಟಿಟಿ ವಿಚಾರಕ್ಕೆ ಬಂದರೆ, 4G LTE, Wi-Fi, ಬ್ಲ್ಯೂಟೂಥ್, ಜಿಪಿಎಸ್​/ ಎ- ಜಿಪಿಎಸ್​ ಮತ್ತು ಯುಎಸ್​ಬಿ ಟೈಪ್​- ಸಿ ಪೋರ್ಟ್ ಹೊಂದಿದೆ.

ಇದನ್ನೂ ಓದಿ: Mi11 Ultra smartphone launch: ಆ್ಯಪಲ್, ಸ್ಯಾಮ್ಸಂಗ್​ಗೂ ಸಡ್ಡು ಹೊಡೆಯಲು ಬಂತು Mi11 ಅಲ್ಟ್ರಾ

ಇದನ್ನೂ ಓದಿ: Miನಿಂದ QLED TV 75 ದುಬಾರಿ ಟೀವಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 1,19,999 ನಿಗದಿ

(Xiaomi Mi 11 Lite smartphone sale started today in India. Price, features, specification and other details explained here)

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್