AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

OnePlus Nord 2: ಒನ್​ಪ್ಲಸ್ ನಾರ್ಡ್ 2 ಜುಲೈನಲ್ಲಿ ಬಿಡುಗಡೆ? 25 ಸಾವಿರದಿಂದ 30 ಸಾವಿರ ರೂಪಾಯಿ ಮಧ್ಯೆ ದರ ನಿರೀಕ್ಷೆ

ಒನ್​ಪ್ಲಸ್ ನಾರ್ಡ್ 2 ಜುಲೈನಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದ್ದು, ದರ 25ರಿಂದ 30 ಸಾವಿರ ರೂಪಾಯಿ ಮಧ್ಯೆ ಇರಬಹುದು. ಮೂಲ ಒನ್​ಪ್ಲಸ್ ನಾರ್ಡ್ ಬದಲಿಯಾಗಿ ನಾರ್ಡ್ 2 ಭಾರತದಲ್ಲಿ ಅನಾವರಣಗೊಳ್ಳುವ ನಿರೀಕ್ಷೆ ಇದೆ.

OnePlus Nord 2: ಒನ್​ಪ್ಲಸ್ ನಾರ್ಡ್ 2 ಜುಲೈನಲ್ಲಿ ಬಿಡುಗಡೆ? 25 ಸಾವಿರದಿಂದ 30 ಸಾವಿರ ರೂಪಾಯಿ ಮಧ್ಯೆ ದರ ನಿರೀಕ್ಷೆ
ಒನ್​ಪ್ಲಸ್​ ನಾರ್ಡ್​ 2 (ಸಾಂದರ್ಭಿಕ ಚಿತ್ರ)
TV9 Web
| Updated By: Srinivas Mata|

Updated on:Jun 29, 2021 | 12:57 PM

Share

ಒನ್​ಪ್ಲಸ್ ನಾರ್ಡ್ 2 ಜುಲೈನಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ಈ ಮೊಬೈಲ್​ಫೋನ್​ ಬಗ್ಗೆ ಬಹಳ ನಿರೀಕ್ಷೆ ಇದ್ದು, ಫೀಚರ್, ಸ್ಪೆಸಿಫಿಕೇಷನ್ ಮತ್ತಿತರ ವಿವರಗಳು ಹರಿದಾಡುತ್ತಿವೆ. ಮೊಬೈಲ್​ಫೋನ್ ಕುರಿತು ಇಲ್ಲಿಯ ತನಕ ಗೊತ್ತಿರುವುದನ್ನು ಈ ಲೇಖನದಲ್ಲಿ ತಿಳಿಸಲಾಗುವುದು. ಈವರೆಗೆ ಒನ್​ಪ್ಲಸ್ ಮೊಬೈಲ್​ಫೋನ್​ಗಳು ಕ್ವಾಲ್​ಕಾಮ್ ಪ್ರೊಸೆಸರ್​ಗಳೊಂದಿಗೆ ಬಿಡುಗಡೆ ಆಗಿವೆ. ನಾರ್ಡ್ 2ನಲ್ಲಿ ಈ ಪರಿಪಾಠ ಬದಲಾವಣೆ ಆಗಲಿದೆ ಎನ್ನಲಾಗುತ್ತಿದೆ. ಮಾರ್ಚ್​ ತಿಂಗಳಿಂದಲೂ ಆಗುತ್ತಿರುವ ವರದಿಯಂತೆ, ಒನ್​ಪ್ಲಸ್ ನಾರ್ಡ್ 2ನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 1200 ಚಿಪ್​ಸೆಟ್​ ಹೊಂದಿರಲಿದೆ. ಇದು 5G ಚಿಪ್​ಸೆಟ್ 6nm ಪ್ರೊಸೆಸ್​ ಮೇಲೆ ಆಧಾರವಾಗಿದೆ ಹಾಗೂ ಕ್ಲಾಕ್ ವೇಗ 3GHz ತನಕ ನೀಡುತ್ತದೆ ಅಂತಲೇ ಮಾಹಿತಿ ಇದೆ. ಒನ್​ಪ್ಲಸ್ ನಾರ್ಡ್ ಸಿಇ 5G ಮೊಬೈಲ್​ ಫೋನ್ ಪರಿಚಿತ ಅಲರ್ಟ್ ಸ್ಲೈಡರ್ ಇಲ್ಲದೆ ಬಿಡುಗಡೆ ಆಗಿತ್ತು. ಆದ್ದರಿಂದ ಒನ್​ಪ್ಲಸ್​ನಿಂದ ನಾರ್ಡ್ ಲೈನ್​ಅಪ್​ನಲ್ಲಿ ಈ ಸ್ಲೈಡರ್​ ತೆಗೆಯಬಹುದು ಎಂದುಕೊಳ್ಳುತ್ತಿದ್ದಾರೆ ಅಭಿಮಾನಿಗಳು. ಆದರೂ ಮೂಲಗಳು ನೀಡುವ ಮಾಹಿತಿಯಂತೆ, ನಾರ್ಡ್ 2ನಲ್ಲಿ ಅಲರ್ಟ್​ ಸ್ಲೈಡರ್ ಫ್ರೇಮ್​ನ ಬಲಭಾಗಕ್ಕೆ ಇರಲಿದೆ.

ಒನ್​ಪ್ಲಸ್​ ನಾರ್ಡ್ 2 ಡಿಸೈನ್ ಒನ್​ಪ್ಲಸ್ 9 ಅನ್ನೇ ಹೋಲುತ್ತದೆ. ಚೌಕನಾದ ಹಿಂಬದಿಯ ಕ್ಯಾಮೆರಾ ಮಾಡ್ಯುಲ್ ಹಾಗೂ ತುದಿಯಲ್ಲಿನ ಹೋಲ್- ಪಂಚ್ ಸೆಲ್ಫಿ ಕ್ಯಾಮೆರಾ ಇವೆಲ್ಲವೂ ಒನ್​ಪ್ಲಸ್ 9 ಅನ್ನು ಹೋಲುತ್ತವೆ. ಒನ್​ಪ್ಲಸ್​ 9ನಂತೆಯೇ ನಾರ್ಡ್​ 2 ಕೂಡ ಕೈಗೆಟುಕುವ ಫೋನ್ ಎಂಬ ಭಾವನೆ ಬರಲಿ ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದಂತಿದೆ ಎಂಬುದನ್ನು ಸೂಚಿಸುತ್ತಿವೆ ಸೋರಿಕೆ ಆಗಿರುವ ಮಾಹಿತಿ. ಮೂಲಗಳು ತಿಳಿಸುವಂತೆ, ನಾರ್ಡ್​ 2ನ ಹಿಂಬದಿಯಲ್ಲಿ ಮೂರು ಕ್ಯಾಮೆರಾ ಇರಲಿದೆ. ಪ್ರಾಥಮಿಕ ಸೆನ್ಸರ್ 50 ಮೆಗಾಪಿಕ್ಸೆಲ್, 8 ಎಂಪಿ ವೈಡ್ ಆ್ಯಂಗಲ್ ಲೆನ್ಸ್, 2 ಎಂಪಿ ಸೆನ್ಸರ್ -ಇದು ಮ್ಯಾಕ್ರೋ ಅಥವಾ ಡೆಪ್ತ್ ಇರಬಹುದು. ಎರಡು ಸೆಲ್ಫಿ ಕ್ಯಾಮೆರಾ ಬದಲಿಗೆ ಒಂದೇ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರಲಿದೆ. ಮೂಲ ನಾರ್ಡ್​ನಲ್ಲಿ ಹೀಗೇ ಇತ್ತು.

ಮೂಲ ಒನ್​ಪ್ಲಸ್ ನಾರ್ಡ್ ಬದಲಿಯಾಗಿ ನಾರ್ಡ್ 2 ಭಾರತದಲ್ಲಿ ಅನಾವರಣಗೊಳ್ಳುವ ನಿರೀಕ್ಷೆ ಇದೆ. ಸ್ಪೆಸಿಫಿಕೇಷನ್ಸ್​ಗಳನ್ನು ಗಮನಿಸುತ್ತಿದ್ದರೆ ಈಚೆಗಿನ ನಾರ್ಡ್ ಸಿಇ 5G ಮೊಬೈಲ್​ಫೋನ್​ಗಿಂತಲೂ ಉತ್ತಮವಾಗಿರುತ್ತದೆ ಎನಿಸುತ್ತದೆ. ಆದ್ದರಿಂದ ಭಾರತದಲ್ಲಿ ಒನ್​ಪ್ಲಸ್​ ನಾರ್ಡ್​ 2 ದರ 25ರಿಂದ 30 ಸಾವಿರ ರೂಪಾಯಿ ಮಧ್ಯೆ ಇರಬಹುದು. ಇನ್ನು ಬಿಡುಗಡೆಯ ದಿನಾಂಕದ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಜುಲೈ ಮಧ್ಯಭಾಗದಲ್ಲಿ ಬಿಡುಗಡೆ ಆಗಬಹುದು.

ಇದನ್ನೂ ಓದಿ: OnePlus Nord CE 5G: ಒನ್​ಪ್ಲಸ್ Nord CE 5G ಭಾರತದಲ್ಲಿ ಬಿಡುಗಡೆ; ಬೆಲೆ, ಫೀಚರ್ ಮತ್ತಿತರ ವಿವರ ಇಲ್ಲಿದೆ

(OnePlus Nord 2 India release date, specification, features and other details expectation here)

Published On - 12:56 pm, Tue, 29 June 21

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ