Samsung One UI Watch: ಗೂಗಲ್ ಆಧಾರಿತವಾದ ಸ್ಮಾರ್ಟ್ವಾಚ್ ಸಾಫ್ಟ್ವೇರ್ ಒನ್ UI ಸ್ಯಾಮ್ಸಂಗ್ನಿಂದ ಘೋಷಣೆ
ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸಂಗ್ನಿಂದ ಈಚೆಗೆ MWC2021 ವರ್ಚುವಲ್ ಆಗಿ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಮುಂದಿನ ಸ್ಮಾರ್ಟ್ವಾಚ್ ಒಎಸ್ ಅನಾವರಣಗೊಳಿಸಲಾಗಿದೆ. ಇದನ್ನು ಒನ್ ಯುಐ ವಾಚ್ ಎಂದು ಕರೆಯಲಾಗುವುದು ಮತ್ತು ಗೂಗಲ್ ವೇರ್ ಒಎಸ್ ಮೇಲೆ ಆಧಾರವಾಗಿದೆ.
ಸ್ಯಾಮ್ಸಂಗ್ನಿಂದ ಈಚೆಗೆ MWC2021 ವರ್ಚುವಲ್ ಆಗಿ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ದಕ್ಷಿಣ ಕೊರಿಯಾ ಮೂಲದ ಟೆಕ್ ಕಂಪೆನಿಯಿಂದ ಮುಂದಿನ ಸ್ಮಾರ್ಟ್ವಾಚ್ ಒಎಸ್ ಅನಾವರಣಗೊಳಿಸಲಾಗಿದೆ. ಇದನ್ನು ಒನ್ ಯುಐ ವಾಚ್ ಎಂದು ಕರೆಯಲಾಗುವುದು ಮತ್ತು ಗೂಗಲ್ ವೇರ್ ಒಎಸ್ ಮೇಲೆ ಆಧಾರವಾಗಿದೆ. ಕಂಪೆನಿಯು ಯಾವುದೇ ಹಾರ್ಡ್ವೇರ್ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ. ಬಳಕೆದಾರರ ಅನುಭವದ ಮಾಹಿತಿಯನ್ನು ನೀಡಿದೆ. ಒಂದು ಸಲ ಒನ್ UI ವಾಚ್ ಆಂಡ್ರಾಯಿಡ್ ಜತೆಗೆ ಇಂಟಿಗ್ರೇಷನ್ ಒದಗಿಸಿದ ಮೇಲೆ ಟಿಜಾನ್ ಒಎಸ್ ಬದಲಿಗೆ ವೇರ್ ಒಎಸ್ನ ಮೇಲೆ ಆಧಾರವಾಗಿರಲಿದೆ. ಸ್ಯಾಮ್ಸಂಗ್ನಿಂದ ಗೂಗಲ್ ಜತೆಗಿನ ಸಹಭಾಗಿತ್ವ ವಿಸ್ತರಣೆ ಆಗಿದೆ ಮತ್ತು ಭವಿಷ್ಯದಲ್ಲಿ ಗ್ಯಾಲಕ್ಸಿ ವಾಚ್ಗಳಿಗೆ ಇದರ ಅರ್ಥ ಏನಾಗಲಿದೆ. ಇಲ್ಲಿ ಗಮನಿಸಬೇಕಾದದ್ದು ಏನೆಂದರೆ, One UI ವಾಚ್ ಸ್ಯಾಮ್ಸಂಗ್ ಒನ್ UI ಸ್ಮಾರ್ಟ್ವಾಚ್ಗಳಲ್ಲಿ ಇರುವಂತೆಯೇ ಇರುತ್ತದೆ. ವೇರ್ ಒಎಸ್ ಮೇಲೆ ಇರುವ ಸ್ಕಿನ್ ಆಗಿದ್ದು, ಸ್ಯಾಮ್ಸಂಗ್ ಸ್ಮಾರ್ಟ್ವಾಚಸ್ಗೆ ಅಂತಲೇ ರೂಪಿಸಲಾಗಿದೆ.
One UI ವಾಚ್ನಲ್ಲಿ ಸಿಕ್ಕಾಪಟ್ಟೆ ಫೀಚರ್ಗಳಿದ್ದು, ಟಿಜಾನ್ನಲ್ಲಿನ ಪಟ್ಟಿಗಿಂತ ಹೆಚ್ಚು ಆ್ಯಪ್ಗಳಿವೆ. ಸ್ಟ್ರಾವಾ, ಅಡಿಡಾಸ್ ರನ್ನಿಂಗ್, ಕಾಮ್, ಸ್ಪೋಟಿಫೈಮ ಯೂಟ್ಯೂಬ್ ಮ್ಯೂಸಿಕ್ ಮತ್ತು ಗೂಗಲ್ ಮ್ಯಾಪ್ಸ್ನಂಥದ್ದು ಇದೆ. ಸ್ಯಾಮ್ಸಂಗ್ ಹೇಳಿರುವಂತೆ, ಹೊಸ ವಾಚ್ ಒಎಸ್ನಿಂದ ಭವಿಷ್ಯದ ಗ್ಯಾಲಕ್ಸಿ ವಾಚ್ ಮಾಡೆಲ್ಗಳಲ್ಲಿ ದೀರ್ಘಾವಧಿ ಬ್ಯಾಟರಿ ಅವಧಿ, ವೇಗದ ಪರ್ಫಾರ್ಮೆನ್ಸ್ ಮತ್ತು ಆ್ಯಪ್ಗಳ ಆಯ್ಕೆಯಲ್ಲಿ ಅಪಾರ ಅವಕಾಶಗಳು ದೊರೆಯಲಿವೆ.
ಡಿಸೈನರ್ಗಳಿಗೆ ಸ್ಯಾಮ್ಸಂಗ್ನಿಂದ ಸುಧಾರಿತ ವಾಚ್ ಫೇಸ್ ಡಿಸೈನ್ ತರಲಾಗಿದೆ. ಸ್ಮಾರ್ಟ್ಫೋನ್ನಲ್ಲಿ ಇರುವಂತೆ ಕಾಣುವ ಸಲುವಾಗಿ ಒನ್ UI ವಾಚ್ ಸೆಟ್ಟಿಂಗ್ ಮೆನು ರೀಡಿಸೈನ್ ಆಗಿದೆ. ಇದು ಕೂಡ ಆಪಲ್ ವಾಚ್ ಫೀಚರ್ ತರಲಿದ್ದು, ಹೊಂದಿಕೆ ಆಗುವಂಥ ಆ್ಯಪ್ ಫೋನ್ಗೆ ಡೌನ್ಲೋಡ್ ಆದ ಮೇಲೆ ಆಟೋಮೆಟಿಕ್ ಆಗಿ ವಾಚ್ಗೆ ಆಗುತ್ತದೆ.
ಇದನ್ನೂ ಓದಿ: Samsung Galaxy S21 Offer: ಸ್ಯಾಮ್ಸಂಗ್ನಿಂದ ಗ್ಯಾಲಕ್ಸಿ S21 ಸಿರೀಸ್ ಮೇಲೆ 10,000 ರೂಪಾಯಿ ಕ್ಯಾಶ್ಬ್ಯಾಕ್
(South Korean tech giant Samsung announced One UI watch OS. Here is the details)