OnePlus Nord CE 5G: ಒನ್ಪ್ಲಸ್ Nord CE 5G ಭಾರತದಲ್ಲಿ ಬಿಡುಗಡೆ; ಬೆಲೆ, ಫೀಚರ್ ಮತ್ತಿತರ ವಿವರ ಇಲ್ಲಿದೆ
ಒನ್ಪ್ಲಸ್ನಿಂದ ನಾರ್ಡ್ ಸಿಇ 5G ಮೊಬೈಲ್ ಅನ್ನು ಗುರುವಾರ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನ್ನ ಬೆಲೆ, ವೈಶಿಷ್ಟ್ಯ, ಬಣ್ಣ ಮತ್ತಿತರ ಮಾಹಿತಿ ಇಲ್ಲಿದೆ.
ಒನ್ಪ್ಲಸ್ ಕಂಪೆನಿಯಿಂದ ಗುರುವಾರ ಲೈವ್ ಸ್ಟ್ರೀಮ್ನಲ್ಲಿ Nord CE 5G ಮೊಬೈಲ್ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಇದು ನಾರ್ಡ್ ಸರಣಿಯ ಹೊಸ ಮಾಡೆಲ್. ಕಳೆದ ವರ್ಷ ಜುಲೈನಲ್ಲಿ ಬಿಡುಗಡೆ ಮಾಡಿದ ಒರಿಜಿನಲ್ ಒನ್ಪ್ಲಸ್ ನಾರ್ಡ್ಗಿಂತ ಇದರಲ್ಲಿ ಕೆಲವು ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ. ಹೆಚ್ಚು ಜನರನ್ನು ತಲುಪಬೇಕು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ. ಈ ವರೆಗೆ, ಅಂದರೆ 2018ರ ಅಕ್ಟೋಬರ್ನಲ್ಲಿ ಒನ್ಪ್ಲಸ್ 6T ಬಿಡುಗಡೆಯಾದ ದಿನದಿಂದ ಈಗಿನ ಫೋನ್ ಅತ್ಯಂತ ತೆಳುವಾದದ್ದು ಎನಿಸಿಕೊಂಡಿದೆ. ಈ ಹೊಸ ಫೋನ್ ಬಗ್ಗೆ ಗ್ರಾಹಕರಲ್ಲಿ ಇರಬಹುದಾದ ಕುತೂಹಲಕ್ಕೆ ಉತ್ತರ ಇಲ್ಲಿದೆ.
ಬೆಲೆ ಮತ್ತಿತರ ವಿವರ ಒನ್ಪ್ಲಸ್ ನಾರ್ಡ್ ಸಿಇ 5G ಫೋನ್ ಭಾರತದಲ್ಲಿ ರೂ. 22,999ಕ್ಕೆ ಶುರುವಾಗುತ್ತಿದೆ. ಅದು 6GB+128GB ಸ್ಟೋರೇಜ್ (ಸಂಗ್ರಹ ಸಾಮರ್ಥ್ಯದ) ವೇರಿಯಂಟ್ಗೆ. ನಂತರದ್ದು 8GB+128GB ಸ್ಟೋರೇಜ್ (ಸಂಗ್ರಹ ಸಾಮರ್ಥ್ಯ). ಅದಕ್ಕೆ ರೂ. 24,999. ಟಾಪ್ ಎಂಡ್ ಫೋನ್ 12GB+256GB ಸ್ಟೋರೇಜ್ (ಸಂಗ್ರಹ ಸಾಮರ್ಥ್ಯ) ಬೆಲೆ ರೂ. 27,999.
ಯಾವ ಬಣ್ಣಗಳಲ್ಲಿ ದೊರೆಯುತ್ತದೆ? ಎಲ್ಲಿ ಖರೀದಿಸಬಹುದು? ಬ್ಲ್ಯೂ ವಾಯ್ಡ್ (ಮ್ಯಾಟ್), ಚಾರ್ಕೋಲ್ ಇಂಕ್ (ಗ್ಲಾಸಿ) ಮತ್ತು ಸಿಲ್ವರ್ ರೇ ಈ ಬಣ್ಣಗಳಲ್ಲಿ ಲಭ್ಯ. ಅಮೆಜಾನ್ ಮತ್ತು ಒನ್ಪ್ಲಸ್.ಇನ್ನಲ್ಲಿ ಜೂನ್ 16ನೇ ತಾರೀಕಿನಿಂದ ದೊರೆಯುತ್ತದೆ. ಪ್ರೀ ಬುಕ್ಕಿಂಗ್ ಜೂನ್ 11ರಿಂದ ಶುರುವಾಗುತ್ತದೆ.
ಬಿಡುಗಡೆ ಆಫರ್, ರಿಯಾಯಿತಿಗಳು ಇವೆಯಾ? – ಎಚ್ಡಿಎಫ್ಸಿ ಕ್ರೆಡಿಟ್ ಕಾರ್ಡ್ ಅಥವಾ ಇಎಂಐ ಮೂಲಕ ಖರೀದಿಸುವವರಿಗೆ 1,000 ರಿಯಾಯಿತಿ. – 999 ರೂಪಾಯಿ ಪ್ಲಾನ್ ಜತೆ ರೀಚಾರ್ಜ್ ಮಾಡಿಸುವ ಜಿಯೋ ಚಂದಾದಾರರಿಗೆ ರೂ. 6000 ಮೌಲ್ಯದ ಬೆನಿಫಿಟ್ – ಒನ್ಪ್ಲಸ್ Nord CE ಗ್ರಾಹಕರಾಗಿದ್ದು ಒನ್ಪ್ಲಸ್ ಬಡ್ಸ್ Z ಅಥವಾ ಒನ್ಪ್ಲಸ್ ಬ್ಯಾಂಡ್ ಅನ್ನು ಒನ್ಪ್ಲಸ್.ಇನ್ ವೆಬ್ಸೈಟ್ನಲ್ಲಿ ಖರೀರಿಸಿದಲ್ಲಿ 500 ರೂಪಾಯಿ ರಿಯಾಯಿತಿ ಪಕ್ಕಾ. – ನೋ ಕಾಸ್ಟ್ ಇಎಂಐನಲ್ಲೂ ಫೋನ್ ಲಭ್ಯ. – ಒನ್ಪ್ಲಸ್ ರೆಡ್ ಕೇಬಲ್ ಸದಸ್ಯರು ಅಮೆಜಾನ್ ಮೂಲಕ ಪ್ರೀಆರ್ಡರ್ ಮಾಡಿದಲ್ಲಿ ರೂ. 500 ಕ್ಯಾಶ್ ಬ್ಯಾಕ್
ಒನ್ಪ್ಲಸ್ ನಾರ್ಡ್ ಸಿಇ 5G ಸ್ಪೆಸಿಫಿಕೇಷನ್ ಮತ್ತು ವೈಶಿಷ್ಟ್ಯಗಳು * ಡ್ಯುಯಲ್ ಸಿಮ್ (ನ್ಯಾನೋ) * ಆಂಡ್ರಾಯಿಡ್ 11 ಜತೆಗೆ ಆಕ್ಸಿಜನ್ಒಎಸ್ 11 ಆಪರೇಟಿಂಗ್ ಸಿಸ್ಟಮ್ * 6.43 ಇಂಚಿನ ಫುಲ್ ಎಚ್ಡಿ+ (1080X2400 ಪಿಕ್ಸೆಲ್ಸ್) AMOLED ಡಿಸ್ಪ್ಲೇ ಜತೆಗೆ 20:9 ಆಸ್ಪೆಕ್ಟ್ ರೇಷಿಯೋ * 90Hz ರಿಫ್ರೆಷ್ ರೇಟ್ * ಆಕ್ಟಾಕೋರ್ ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 750G SoC ಪ್ರೊಸೆಸರ್ * ಅಡ್ರೆನೊ 619 ಜಿಪಿಯು ಮತ್ತು 6GB RAM * ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ 64MP, f/1.79 ಲೆನ್ಸ್, ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಷನ್ (EIS), 8MP ಸೆಕೆಂಡರಿ ಸೆನ್ಸರ್ f/2.25 ಅಲ್ಟ್ರಾ ವೈಡ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಸೆನ್ಸರ್ ಜತೆಗೆ f/2.4 ಲೆನ್ಸ್ * ಕನೆಕ್ಟಿವಿಟಿ: 5G, 4G LTE, Wi-Fi 802.11ac, Bluetooth v5.1, GPS/A-GPS/NaVIC, NFC, USB Type- C, 3.5mm ಹೆಡ್ಫೋನ್ ಜಾಕ್, ಪ್ರಾಕ್ಸಿಮಿಟಿ ಸೆನ್ಸರ್ * ಫಿಂಗರ್ಪ್ರಿಂಟ್ ಸೆನ್ಸರ್ ಜತೆಗೆ ಸೂಪರ್ ಲೀನಿಯರ್ ಸ್ಪೀಕರ್ ಜತೆಗೆ ನಾಯ್ಸ್ಕ್ಯಾನ್ಸಲೇಷನ್ ಸಪೋರ್ಟ್. * 4500 mAh ಬ್ಯಾಟರಿ ಬರುತ್ತದೆ. ವಾರ್ಪ್ ಚಾರ್ಜ್ 30T ಪ್ಲಸ್ ಟೆಕ್ನಾಲಜಿ.
ಇದನ್ನೂ ಓದಿ: OnePlus TV: ಒನ್ಪ್ಲಸ್ನಿಂದ ಸ್ಮಾರ್ಟ್ 4K ಟಿವಿ U1S ಬಿಡುಗಡೆ; ಬೆಲೆ, ವೈಶಿಷ್ಟ್ಯ ಮತ್ತಿತರ ಮಾಹಿತಿ ಇಲ್ಲಿದೆ
ಇದನ್ನೂ ಓದಿ: OnePlus 9, OnePlus 9R: ಭಾರತಕ್ಕೆ ಬಂತು ಒನ್ಪ್ಲಸ್ 9, ಒನ್ಪ್ಲಸ್ 9R; ಫೋನ್ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್
(OnePlus Nord CE 5G mobile phone launched in India on Thursday. Here is the phone features, price, colour, specification other details here)