OnePlus 9, OnePlus 9R: ಭಾರತಕ್ಕೆ ಬಂತು ಒನ್​ಪ್ಲಸ್ 9, ಒನ್​ಪ್ಲಸ್ 9R; ಫೋನ್ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್

ಒನ್​ಪ್ಲಸ್​ನಿಂದ ಭಾರತದಲ್ಲಿ ಒನ್​ಪ್ಲಸ್ 9R ಮತ್ತು ಒನ್​ಪ್ಲಸ್ 9 ಮೊಬೈಲ್ ಫೋನ್ ಮಾರಾಟ ಆರಂಭಿಸಲಾಗಿದೆ. ಈ ಸ್ಮಾರ್ಟ್​ಫೋನ್ ಎಲ್ಲಿ ಖರೀದಿಸಬಹುದು, ಆಫರ್ ಮತ್ತಿತರ ವಿವರಗಳು ನಿಮ್ಮೆದುರು ಇದೆ.

OnePlus 9, OnePlus 9R: ಭಾರತಕ್ಕೆ ಬಂತು ಒನ್​ಪ್ಲಸ್ 9, ಒನ್​ಪ್ಲಸ್ 9R; ಫೋನ್ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್
ಒನ್​ಪ್ಲಸ್ ಮೊಬೈಲ್​ಫೋನ್
Follow us
Srinivas Mata
| Updated By: Digi Tech Desk

Updated on:Apr 15, 2021 | 1:07 PM

ಒನ್​ಪ್ಲಸ್​ನಿಂದ ಭಾರತದಲ್ಲಿ ಒನ್​ಪ್ಲಸ್ 9R ಮತ್ತು ಒನ್​ಪ್ಲಸ್ 9 ಮೊಬೈಲ್ ಫೋನ್ ಮಾರಾಟ ಆರಂಭಿಸಲಾಗಿದೆ. ಈ ಸ್ಮಾರ್ಟ್​ಫೋನ್ ಆರಂಭಿಕ ಬೆಲೆ ರೂ. 39,999ರೊಂದಿಗೆ ದೊರೆಯುತ್ತಿದೆ. ಹಲವು ಆನ್​ಲೈನ್ ಚಾನೆಲ್​ಗಳ ಮೂಲಕವೂ ಫೋನ್ ಖರೀದಿಸಬಹುದಾಗಿದೆ. ಒನ್​ಪ್ಲಸ್ ಕಂಪೆನಿಯ ಕೈಗೆಟುಕುವ ಬೆಲೆಯ ಒನ್​ಪ್ಲಸ್ 9R ಜತೆಗೆ ಒನ್​ಪ್ಲಸ್ 9, ಒನ್​ಪ್ಲಸ್ 9 ಪ್ರೋ ಮತ್ತು ಒನ್​ಪ್ಲಸ್​ನ ಮೊದಲ ವಾಚ್ ಕೂಡ ಕಳೆದ ತಿಂಗಳು ಬಿಡುಗಡೆ ಆಗಿದೆ. ಒನ್​ಪ್ಲಸ್ 9ರ ಸರಣಿಯ ಅತಿ ಮುಖ್ಯ ಸಂಗತಿ ಏನೆಂದರೆ, ಹ್ಯಾಸೆಲ್​ಬ್ಲಾಡ್ ಕ್ಯಾಮೆರಾ. ಇದರ ಜತೆಗೆ ಗೇಮಿಂಗ್ ಸಾಮರ್ಥ್ಯ ತುಂಬಾ ಚೆನ್ನಾಗಿದೆ. ಶಕ್ತಿಶಾಲಿ ಕ್ವಾಲ್​ಕಾಮ್ ಪ್ರೊಸೆಸರ್ ಮತ್ತು ದೊಡ್ಡ ಪ್ರಮಾಣದ ಬ್ಯಾಟರಿ ಬ್ಯಾಕ್​ಅಪ್ ಒದಗಿಸುತ್ತದೆ. ಒಂದು ವೇಳೆ ಒನ್​ಪ್ಲಸ್ ಸ್ಮಾರ್ಟ್​ಫೋನ್​ಗಳನ್ನು ಖರೀದಿಸಲು ಬಯಸಿದಲ್ಲಿ ಇಲ್ಲಿದೆ ಸಂಪೂರ್ಣ ಮಾಹಿತಿ.

ಒನ್​ಪ್ಲಸ್ 9 ಮತ್ತು ಒನ್​ಪ್ಲಸ್ 9R ಲಭ್ಯತೆ ಒನ್​ಪ್ಲಸ್ 9 ಮತ್ತು ಒನ್​ಪ್ಲಸ್ 9R ಈಗ ಭಾರತದಲ್ಲಿ ಅಮೆಜಾನ್ ಹಾಗೂ ಒನ್​ಪ್ಲಸ್ ವೆಬ್​ಸೈಟ್​ನಲ್ಲಿ ಲಭ್ಯವಿವೆ. ಆದರೆ ಸದ್ಯಕ್ಕೆ ಪ್ರೈಮ್ ಸದಸ್ಯರಿಗೆ ಹಾಗೂ ರೆಡ್ ಕೇಬಲ್ ಸದಸ್ಯರಿಗೆ ಮಾತ್ರ ಮಾರಾಟ ಸೀಮಿತ ಆಗಿದೆ. ಈ ಸರಣಿಯಲ್ಲಿ ಒನ್​ಪ್ಲಸ್ 9R ಕೈಗೆಟುಕುವ ಬೆಲೆಯಲ್ಲಿ ಲಭ್ಯ ಇರುವ ಫೋನ್. 8GB RAM, 128 GB ಆಂತರಿಕ ಸಂಗ್ರಹ ಸಾಮರ್ಥ್ಯಕ್ಕೆ ರೂ. 39,999 ಇದೆ. ಅದರ ಮುಂದಿನ ವರ್ಷನ್ 12GB RAM, 256 GB ಆಂತರಿಕ ಸಂಗ್ರಹ ಸಾಮರ್ಥ್ಯದ ಬೆಲೆ ರೂ. 43,999 ಇದೆ. ಒನ್​ಪ್ಲಸ್ 9R ಮೊಬೈಲ್ ಫೋನ್ ಕಾರ್ಬನ್ ಕಪ್ಪು ಮತ್ತು ಲೇಕ್ ಬ್ಲ್ಯೂ ಬಣ್ಣಗಳಲ್ಲಿ ಲಭ್ಯವಿವೆ.

ಇನ್ನು ಒನ್​ಪ್ಲಸ್ 9 ಮಧ್ಯಮ ರೇಂಜಿನ ವಿಚಾರಕ್ಕೆ ಬಂದರೆ, 8GB RAM, 128 GB ಆಂತರಿಕ ಸಂಗ್ರಹ ಸಾಮರ್ಥ್ಯ ಇರುವ ಫೋನ್​ನ ಆರಂಭಿಕ ಬೆಲೆ ರೂ. 49,999 ಇದೆ. 8GB RAM, 128 GB ಆಂತರಿಕ ಸಂಗ್ರಹ ಸಾಮರ್ಥ್ಯದ ಬೆಲೆ ರೂ. 54,999 ಇದೆ. ಈ ಮಾಡೆಲ್ ಅಸ್ಟ್ರಾಲ್ ಕಪ್ಪು, ಆರ್ಕ್​ಟಿಕ್ ಸ್ಕೈ, ವಿಂಟರ್ ಮಿಸ್ಟ್ ಬಣ್ಣಗಳಲ್ಲಿ ಸಿಗುತ್ತದೆ.

ಒನ್​ಪ್ಲಸ್ 9 ಮತ್ತು ಒನ್​ಪ್ಲಸ್ 9R ಬಿಡುಗಡೆ ಆಫರ್​ಗಳು ಒನ್​ಪ್ಲಸ್ 9 ಮತ್ತು ಒನ್​ಪ್ಲಸ್ 9R ಮೊಬೈಲ್ ಖರೀದಿಗೆ ಗ್ರಾಹಕರಿಗೆ ಹಲವು ಆಫರ್​ಗಳಿವೆ. ಉದಾಹರಣೆಗೆ, ಅಮೆಜಾನ್​ನಲ್ಲಿ ಆಯ್ದ ಕಾರ್ಡ್​ದಾರರಿಗೆ ನೋ-ಕಾಸ್ಟ್ ಇಎಂಐ ಆಯ್ಕೆಗಳಿವೆ. ಇದರ ಜತೆಗೆ ಹಳೇ ಫೋನ್​ನ ವಿನಿಮಯ ಆಫರ್ ರೂ. 13,750ರ ತನಕ ಸಿಗುತ್ತದೆ. ಎಸ್​ಬಿಐ ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಒನ್​ಪ್ಲಸ್ 9R ಫೋನ್​ಗೆ ಬ್ಯಾಂಕ್ ಆಫರ್ ಫ್ಲ್ಯಾಟ್ ರೂ. 2000 ತಕ್ಷಣದ ರಿಯಾಯಿತಿ ಸಿಗುತ್ತದೆ. ಇದೇ ರಿಯಾಯಿತಿ ಒನ್​ಪ್ಲಸ್ 9 ಮೊಬೈಲ್ ಫೋನ್ ಖರೀದಿಗೆ ರೂ. 3000 ದೊರೆಯುತ್ತದೆ. ಅಮೆಜಾನ್ ಪೇ ಲೇಟರ್​ಗೆ ಮೊದಲ ಸಲ ಸೈನ್ ಅಪ್ ಮಾಡಿ, ಅದರ ಮೂಲಕ ಪಾವತಿಸಿದಲ್ಲಿ ಗ್ರಾಹಕರಿಗೆ ರೂ. 100 ವಾಪಸ್ ದೊರೆಯುತ್ತದೆ. ಒನ್​ಪ್ಲಸ್ ವೆಬ್​ಸೈಟ್ ಪ್ರಕಾರ, ಅಮೆರಿಕನ್ ಎಕ್ಸ್​ಪ್ರೆಸ್ ಕಾರ್ಡ್​ಗಳು ಬಳಸಿ ಸ್ಮಾರ್ಟ್​ಫೋನ್ ಖರೀದಿಸಿದರೆ ಶೇ 10ರ ತನಕ ಕ್ಯಾಶ್​ಬ್ಯಾಕ್ ದೊರೆಯುತ್ತದೆ.

ಒನ್​ಪ್ಲಸ್ 9R ವೈಶಿಷ್ಟ್ಯಗಳು: ಡಿಸ್​ಪ್ಲೇ: ಒನ್​ಪ್ಲಸ್ 9R ಫೋನ್ 6.5 ಇಂಚಿನ ಫುಲ್ ಎಚ್​ಡಿ+ OLED ಡಿಸ್​ಪ್ಲೇ ಜತೆಗೆ 120 Hz ರಿಫ್ರೆಷ್ ದರ ಮತ್ತು 1080X2400 ಪಿಕ್ಸೆಲ್ಸ್ ರೆಸಲ್ಯೂಷನ್ ಹೊಂದಿದೆ.

ಪ್ರೊಸೆಸರ್: ಈ ಸಾಧನದಲ್ಲಿ ಕ್ವಾಲ್​ಕಾಮ್ ಸ್ನ್ಯಾಪ್ ಡ್ರ್ಯಾಗನ್ 870 SoC ಇದೆ. ಈ ಹಿಂದಿನ ಸ್ನ್ಯಾಪ್​ಡ್ರ್ಯಾಗನ್ 888ಗೆ ಹೋಲಿಸಿದರೆ ಇದರಲ್ಲಿ ಬಳಕೆ ಮಾಡಿರುವುದು ಕಡಿಮೆ.

ಸಾಫ್ಟ್​ವೇರ್: ಒನ್​ಪ್ಲಸ್ 9R ಆಂಡ್ರಾಯಿಡ್ 11 ಜತೆಗೆ ಆಕ್ಸಿಜನ್ ಒಎಸ್​11ರಲ್ಲಿ ಕಾರ್ಯ ನಿರ್ವಹಿಸುತ್ತದೆ.

ಸಂಗ್ರಹ ಸಾಮರ್ಥ್ಯ: ಈ ಸ್ಮಾರ್ಟ್​ಫೋನ್​ನಲ್ಲಿ 8GB ಅಥವಾ 12GB RAM ಮತ್ತು 128GB ಮತ್ತು 256GB UFS 3.1ಸಂಗ್ರಹ ಸಾಮರ್ಥ್ಯ ಹೊಂದಿದೆ.

ಹಿಂಬದಿ ಕ್ಯಾಮೆರಾ: ಒನ್​ಪ್ಲಸ್ 9R ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾದೊಂದಿಗೆ ಬರುತ್ತದೆ. 48 ಮೆಗಾಪಿಕ್ಸೆಲ್ (f/1.75) ಸೋನಿ IMX586 ಪ್ರಾಥಮಿಕ ಲೆನ್ಸ್, 16 ಮೆಗಾಪಿಕ್ಸೆಲ್ ಸೋನಿ IMX481 ಅಲ್ಟ್ರಾವೈಡ್ ಲೆನ್ಸ್, 2 ಮೆಗಾಪಿಕ್ಸೆಲ್​ನ ಮೊನೊಕ್ರೋಮ್ ಲೆನ್ಸ್, 5 ಮೆಗಾಪಿಕ್ಸೆಲ್​ನ ಮೈಕ್ರೋ ಸೆನ್ಸರ್ ಹೊಂದಿದೆ.

ಮುಂಭಾಗದ ಕ್ಯಾಮೆರಾ: ಮುಂಭಾಗದಲ್ಲಿ ಒನ್​ಪ್ಲಸ್ 9Rನಲ್ಲಿ 16 ಮೆಗಾಪಿಕ್ಸೆಲ್​ನ ಸೋನಿ IMX471 ಸೆಲ್ಫಿ ಶೂಟರ್ ಇದೆ.

ಕನೆಕ್ಟಿವಿಟಿ: ವೈಫೈ, ಜಿಪಿಎಸ್ ಮತ್ತು ಯುಎಸ್​ಬಿ ಟೈಪ್- ಸಿ 3.1 ಆಯ್ಕೆ ಇದೆ.

ಸೆನ್ಸರ್ಸ್: ಆಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಕಾಂಪಾಸ್/ ಮ್ಯಾಗ್ನೆಟೋಮೀಟರ್, ಗೈರೋಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸರ್, ಇನ್-ಡಿಸ್​ಪ್ಲೇ ಫಿಂಗರ್​ಪ್ರಿಂಟ್ ಸೆನ್ಸರ್ ಇದೆ.

ಬ್ಯಾಟರಿ: 4500 mAh ಬ್ಯಾಟರಿ ಹೊಂದಿದ್ದು, ಇದು ವಾರ್ಪ್ 65T ಮತ್ತು ವಾರ್ಪ್ ಚಾರ್ಜ್ 50 ವೈಯರ್​ಲೆಸ್ ಫಾಸ್ಟ್ ಚಾರ್ಜಿಂಗ್ ಹೊಂದಿದೆ.

OnePlus 9 Series phone

ಒನ್​ಪ್ಲಸ್ ಫೋನ್

ಒನ್​ಪ್ಲಸ್ 9 ವೈಶಿಷ್ಟ್ಯಗಳು: ಡಿಸ್​ಪ್ಲೇ: ಒನ್​ಪ್ಲಸ್ 9 ಫೋನ್ 6.55 ಇಂಚಿನ AMOLED ಡಿಸ್​ಪ್ಲೇ ಜತೆಗೆ 120 Hz ರಿಫ್ರೆಷ್ ದರ ಮತ್ತು 2400X1800 ಪಿಕ್ಸೆಲ್ಸ್ ರೆಸಲ್ಯೂಷನ್ ಹೊಂದಿದೆ. ಗರಿಷ್ಠ ಬ್ರೈಟ್​ನೆಸ್ 1100 ನಿಟ್ಸ್ ಹೊಂದಿದೆ.

ಪ್ರೊಸೆಸರ್: ಈ ಸಾಧನದಲ್ಲಿ ಕ್ವಾಲ್​ಕಾಮ್ ಸ್ನ್ಯಾಪ್ ಡ್ರ್ಯಾಗನ್ 880 SoC ಇದೆ. ಇದು ಆಕ್ಟಾಕೋರ್ (ಎಂಟು ಹೃದಯದ) ಚಿಪ್​ಸೆಟ್. 2.8 GHz ಸಾಮರ್ಥ್ಯದೊಂದಿಗೆ ಆಡ್ರೆನೊ 660 ಜಿಪಿಯು ಹೊಂದಿದೆ.

ಸಾಫ್ಟ್​ವೇರ್: ಆಂಡ್ರಾಯಿಡ್ 11 ಜತೆಗೆ ಆಕ್ಸಿಜನ್ ಒಎಸ್​11ರಲ್ಲಿ ಕಾರ್ಯ ನಿರ್ವಹಿಸುತ್ತದೆ.

ಆಂತರಿಕ ಸಂಗ್ರಹ ಸಾಮರ್ಥ್ಯ: ಈ ಸ್ಮಾರ್ಟ್​ಫೋನ್​ನಲ್ಲಿ 128GB ಮತ್ತು 256GB UFS 3.1ಸಂಗ್ರಹ ಸಾಮರ್ಥ್ಯ ಹೊಂದಿದೆ.

RAM: ಒನ್​ಪ್ಲಸ್ 9 ಎರಡು RAM ವೇರಿಯೆಂಟ್​ನಲ್ಲಿ ಬರುತ್ತದೆ: 8GB ಮತ್ತು 12GB. ಒನ್​ಪ್ಲಸ್​ನಿಂದ DDR5ಮೆಮೊರಿ ಬಳಸಲಾಗಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯ ಇರುವುದರಲ್ಲೇ ಅತ್ಯುತ್ತಮವಾದದ್ದು ಇದು.

ಹಿಂಬದಿ ಕ್ಯಾಮೆರಾ: ಒನ್​ಪ್ಲಸ್ 9 ಹಿಂಭಾಗದಲ್ಲಿ 48 ಮೆಗಾಪಿಕ್ಸೆಲ್ ಸೋನಿ IMX689 ಪ್ರಾಥಮಿಕ ಲೆನ್ಸ್, 50 ಮೆಗಾಪಿಕ್ಸೆಲ್ ಸೋನಿ IMX766 ಅಲ್ಟ್ರಾವೈಡ್ ಫ್ರೀ ಫಾರ್ಮ್ ಲೆನ್ಸ್, 2 ಮೆಗಾಪಿಕ್ಸೆಲ್​ನ ಮೊನೊಕ್ರೋಮ್ ಸೆನ್ಸರ್ ಇದೆ. ಈ ಫೋನ್ 8K 30fps ತನಕ ಮತ್ತು ಸ್ಲೋ ಮೋಷನ್​ನಲ್ಲಿ 720p ತನಕ 480fps ಮತ್ತು 1080p 240 fpsನಲ್ಲಿ ವಿಡಿಯೋ ಚಿತ್ರೀಕರಣ ಮಾಡಬಲ್ಲದು. ಮುಂಭಾಗದ ಕ್ಯಾಮೆರಾ: ಮುಂಭಾಗದಲ್ಲಿ ಒನ್​ಪ್ಲಸ್ 9Rನಲ್ಲಿ 16 ಮೆಗಾಪಿಕ್ಸೆಲ್​ನ ಸೋನಿ IMX471 ಸೆಲ್ಫಿ ಶೂಟರ್ ಇದೆ.

ಬ್ಯಾಟರಿ: 4500 mAh ಬ್ಯಾಟರಿ ಹೊಂದಿದ್ದು, ಇದು 65W ವೈರ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಇದು ಸಂಪೂರ್ಣ ಚಾರ್ಜ್ ಆಗುವುದಕ್ಕೆ 30 ನಿಮಿಷಕ್ಕಿಂತ ಕಡಿಮೆ ಸಮಯ ಸಾಕು ಎನ್ನುತ್ತದೆ ಒನ್​ಪ್ಲಸ್.

ಇದನ್ನೂ ಓದಿ: Redmi Note 10 ಸೀರಿಸ್​ ಮೊಬೈಲ್​ಗೆ 103 MP ಕ್ಯಾಮೆರಾ! ಕೈಗೆಟುಕುವ ದರ

ಇದನ್ನೂ ಓದಿ: OnePlus 9R Mobile Phone Review: ಹೇಗಿದೆ ಗೊತ್ತಾ ಒನ್​ಪ್ಲಸ್ 9R ಮೊಬೈಲ್​ಫೋನ್?

(OnePlus launched the 9 and 9R model in India. Phone availability, offers and other details are here.)

Published On - 12:52 pm, Thu, 15 April 21

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು