OnePlus 9R Mobile Phone Review: ಹೇಗಿದೆ ಗೊತ್ತಾ ಒನ್​ಪ್ಲಸ್ 9R ಮೊಬೈಲ್​ಫೋನ್?

OnePlus 9R ಮೊಬೈಲ್ ಫೋನ್ ಹೇಗಿದೆ ಎಂಬ ವಿಶ್ಲೇಷಣೆ ನಿಮ್ಮ ಎದುರಿಗಿದೆ. ಒನ್​ಪ್ಲಸ್ 9ರ ಸರಣಿಯಲ್ಲಿ ಬಿಡುಗಡೆ ಆಗುತ್ತಿರುವ ಮೂರನೇ ಮೊಬೈಲ್ ಫೋನ್ ಇದು. ಬೆಲೆ, ಬಣ್ಣ, ವೈಶಿಷ್ಟ್ಯ ಮೊದಲಾದ ವಿವರಗಳನ್ನು ತಿಳಿಯಿರಿ.

OnePlus 9R Mobile Phone Review: ಹೇಗಿದೆ ಗೊತ್ತಾ ಒನ್​ಪ್ಲಸ್ 9R ಮೊಬೈಲ್​ಫೋನ್?
ಒನ್​ಪ್ಲಸ್ 9ರ ಸರಣಿ ಫೋನ್​ಗಳು
Follow us
Srinivas Mata
|

Updated on: Apr 09, 2021 | 2:06 PM

ಭಾರತದಲ್ಲಿ ಒನ್​ಪ್ಲಸ್ ಬ್ರ್ಯಾಂಡ್ ಫೋನ್​​ಗಳಿಗೆ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಇದೆ. ವರ್ಷಕ್ಕೆ ಒಂದು ಮಾಡೆಲ್ ಬಿಡುಗಡೆ ಮಾಡುವ ಒನ್​ಪ್ಲಸ್, ಈ ಬಾರಿ 9Rನೊಂದಿಗೆ ಬಂದಿದೆ. ಒನ್​​ಪ್ಲಸ್ 9ರ ಸರಣಿಯಲ್ಲಿ ಮೂರನೇ ಫೋನ್ ಇದು. ನಿಮಗೆ ಗೊತ್ತಿರಲಿ, ಒನ್​ಪ್ಲಸ್ 9R ಮೊಬೈಲ್​ಫೋನ್ ಬೆಲೆ ಈ ಹಿಂದಿನ ಎರಡು ಫೋನ್​ಗಳಿಗಿಂತ ಕಡಿಮೆ ಇದೆ. ಡಿಸೈನ್ ಮಾತ್ರ ಅದೇ ರೀತಿಯಲ್ಲಿದೆ. 8GB RAM ಹಾಗೂ 128 GB ಸಂಗ್ರಹ ಸಾಮರ್ಥ್ಯದ ಫೋನ್​ಗೆ ಆರಂಭಿಕ ಬೆಲೆ ರೂ. 39,999 ಹಾಗೂ 12GB RAM ಹಾಗೂ 256 GB ಸಂಗ್ರಹ ಸಾಮರ್ಥ್ಯದ ಫೋನ್​ಗೆ ರೂ. 43,999 ಇದೆ. ಸರೋವರ ನೀಲಿ ಬಣ್ಣದ ಈ ಫೋನ್, ನುಣುಪಾದ, ಗ್ಲಾಸಿ ಫಿನಿಷ್​ನೊಂದಿಗೆ ಬರುತ್ತದೆ. ಇದರ ಜತೆಗೆ ಮಿರರ್ ಬ್ಲ್ಯಾಕ್ ಬಣ್ಣದಲ್ಲಿ ಫ್ರಾಸ್ಟೆಡ್ ಟೆಕ್ಸ್​ಚರ್​ನೊಂದಿಗೆ ಬರುತ್ತದೆ.

ಮುಂಭಾಗ ಮತ್ತು ಹಿಂಭಾಗ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್​ನೊಂದಿಗೆ ಬರಲಿದ್ದು, ಪ್ರೀಮಿಯಂ ಫೋನ್ ಎಂಬ ಭಾವವನ್ನು ನೀಡುತ್ತದೆ. ಇನ್ನು ಕೈಯಲ್ಲಿ ಹಿಡಿಯಲು ಆರಾಮದಾಯಕವಾಗಿ ಇರುವಂತೆ ಈ ಫೋನ್ ಅನ್ನು ರೂಪಿಸಲಾಗಿದೆ. ಆದರೆ ಸ್ವಲ್ಪ ಮಟ್ಟಿಗೆ ಜಾರಿಕೆ ಇದೆ ಎಂದು ಕೆಲವು ಬಳಕೆದಾರರು ಹೇಳಿಕೊಂಡಿದ್ದಾರೆ. ಇನ್ನು ಈ ಫೋನ್​ನ ತೂಕ 189 ಗ್ರಾಮ್ ಇದೆ. 8 ಮಿಲಿಮೀಟರ್ ದಪ್ಪ ಇದೆ. ಆದರೆ ಐಪಿ ರೇಟಿಂಗ್ ನಿರೀಕ್ಷೆ ಮಾಡುವಂತಿಲ್ಲ. ದೊಡ್ಡ ಕ್ಯಾಮೆರಾವು ಫೋನ್ ಹಿಂಭಾಗದಲ್ಲಿ ಮೆಟಾಲಿಕ್ ಟೆಕ್ಸ್​ಚರ್ ಹೊಂದಿದೆ. 9Rನಲ್ಲಿ ಇರುವ ನಾಲ್ಕು ವಿಸಿಬಲ್ ಲೆನ್ಸ್​ಗಳು ಒನ್​ಪ್ಲಸ್ 9 ಪ್ರೋದಂತೆ ಹೆಚ್ಚಿನ ಪಕ್ಷ ಕಾಣಿಸುತ್ತದೆ. ಅಂದಹಾಗೆ ಈ ಫೋನ್​ನಲ್ಲಿ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಒಐಎಸ್ ಜತೆಗೆ ಬರುತ್ತದೆ. 16 ಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಸೆನ್ಸರ್ ಬರುತ್ತದೆ.

ಇನ್ನು ಸ್ಕ್ರೀನ್ ಅಡ್ಡಡ್ಡವಾಗಿ 6.55 ಇಂಚು ಇದ್ದು, ಪೂರ್ಣ ಎಚ್​ಡಿ+ ರೆಸಲ್ಯೂಷನ್ ಜತೆಗೆ 120Hzಗರಿಷ್ಠ ರೆಸಲ್ಯೂಷನ್ ಇದೆ. ಎಚ್​ಡಿಆರ್ ಬಗ್ಗೆ ಏನನ್ನೂ ತಿಳಿಸಿಲ್ಲ. ಫ್ರಂಟ್ ಕ್ಯಾಮೆರಾ 16 ಮೆಗಾಪಿಕ್ಸೆಲ್​ನೊಂದಿಗೆ ಬರುತ್ತದೆ. ಎಡಭಾಗಕ್ಕೆ ಮೇಲ್ಭಾಗದ ತುದಿಯಲ್ಲಿ ಕಾಣಸಿಗುತ್ತದೆ. ಇದರ ಜತೆಗೆ ಇನ್- ಡಿಸ್​ಪ್ಲೇ ಫಿಂಗರ್​ಪ್ರಿಂಟ್ ಸೆನ್ಸರ್ ಇದೆ. 9R ಫೋನ್​ನಲ್ಲಿ ಇರುವುದು ಕ್ವಾಲ್​ಕಾಮ್ ಸ್ನ್ಯಾಪ್​ಡ್ರ್ಯಾಗನ್ 870 SoC. ಈಗಿರುವ ಫೋನ್​ನ 888ಗೆ ಹೋಲಿಸಿದರೆ ವಿಪರೀತ ಹೈಯರ್ ಎಂಡ್. ಈಗಿನ ದಿನಮಾನದ ಗೇಮ್​ಗಳನ್ನು ಆಡಲು ಇದೇ ಬಹಳ ಹೆಚ್ಚಾಯಿತು. ಒನ್​ಪ್ಲಸ್ ಹೇಳಿರುವಂತೆ, ಇದರಲ್ಲಿ ವಿಸ್ತೃತವಾದ ಕೂಲಿಂಗ್ ಸಿಸ್ಟಮ್ ಜತೆಗೆ ಹಲವು ಟೆಂಪರೇಂಚರ್ ಸೆನ್ಸರ್ಸ್ ಬಳಸಲಾಗಿದೆ. ಗೇಮಿಂಗ್ ವೇಳೆಯಲ್ಲಿ ಫೋನ್ ಬಿಸಿ ಆಗುತ್ತದೆಯೇ ಎಂಬುದನ್ನು ನೋಡಬೇಕಿದೆ.

ಈ ಫೋನ್​ನಲ್ಲಿ 4500 mAh ಬ್ಯಾಟರಿ ಇದ್ದು, ಮೇಲ್ನೋಟಕ್ಕೆ ಈ ಫೋನ್​ಗೆ ಕಡಿಮೆ ಅನಿಸುತ್ತದೆ. ಇದು 65W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಅದಕ್ಕೆ ಹೊಂದುವ ಅಡಾಪ್ಟರ್ ಬಾಕ್ಸ್​ನಲ್ಲೇ ಇರುತ್ತದೆ. ಅಂದಹಾಗೆ ವಯರ್​ಲೆಸ್ ಚಾರ್ಜಿಂಗ್ ಇಲ್ಲ. ವೈಫೈ 6, ಬ್ಲ್ಯೂಟೂಥ್ 5.1, ಜತೆಗೆ ಆಪ್ಟ್X HD, NFC, ಹಲವು ನೇವಿಗೇಷನ್ ಸಿಸ್ಟಮ್​ಗಳು, ಹ್ಯಾಪ್ಟಿಕ್ ವೈಬ್ರೇಷನ್ ಮತ್ತು ಸ್ಟೀರಿಯೋ ಸ್ಪೀಕರ್​ಗಳನ್ನು ಹೊಂದಿದೆ. ಒನ್​ಪ್ಲಸ್​ನಿಂದ ಫಾಸ್ಟರ್ ಸ್ಟೋರೇಜ್​ಗೆ UFS 3.1 ಬಳಸಲಾಗಿದೆ. ಆದರೆ ವಿಸ್ತರಣೆಗೆ ಮೈಕ್ರೋಎಸ್​ಡಿ ಕಾರ್ಡ್ ಇಲ್ಲ. ಒನ್​ಪ್ಲಸ್​ನಿಂದ ಆಕ್ಸಿಜನ್ ಒಎಸ್ 11 ಅಭಿವೃದ್ಧಿ ಮುಂದುವರಿದಿದೆ. ಒನ್​ಪ್ಲಸ್ ಬ್ರ್ಯಾಂಡ್ ಮಾರಾಟಕ್ಕೆ ಅತಿ ಮುಖ್ಯವಾದ ಕಾರಣ ಇದು. ಇದರಲ್ಲಿ ಬಳಕೆದಾರರು ತಮಗೆ ಬೇಕಾದಂತೆ ಬದಲಾವಣೆ ಮಾಡಿಕೊಳ್ಳುವ ಹಲವು ಅವಕಾಶಗಳಿರುವುದು ಪ್ಲಸ್ ಪಾಯಿಂಟ್. ಅಂದಹಾಗೆ ಈ ಫೋನ್​ನ ರೆಸಲ್ಯೂಷನ್ 1080X2400 ಪಿಕ್ಸೆಲ್ಸ್ ಇದೆ.

ಇದನ್ನೂ ಓದಿ: ಭಾರತದಲ್ಲಿ ಕಡಿಮೆ ಬೆಲೆಗೆ ಲಾಂಚ್​ ಆಯ್ತು 55 ಇಂಚಿನ ಶಿಯೋಮಿ 4ಕೆ ಟಿವಿ

(OnePlus 9R mobile phone review, colour, specification, price and, other details here.)