ಭಾರತದಲ್ಲಿ ಕಡಿಮೆ ಬೆಲೆಗೆ ಲಾಂಚ್​ ಆಯ್ತು 55 ಇಂಚಿನ ಶಿಯೋಮಿ 4ಕೆ ಟಿವಿ

ಶಿಯೋಮಿ Mi QLED  ಸೀರಿಸ್​ನ 55 ಇಂಚಿನ 4ಕೆ ಟಿವಿಯು ಭಾರತೀಯ ಮಾರುಕಟ್ಟೆಯಲ್ಲಿ ₹ 54,999ಕ್ಕೆ ಲಭ್ಯವಿದೆ. ಆ್ಯಂಡ್ರಾಯ್ಡ್​ ಟಿವಿ ಇದಾಗಿರುವುದರಿಂದ ವೈಫೈ ಕೂಡ ಇದಕ್ಕೆ ಕನೆಕ್ಟ್​ ಮಾಡಬಹುದು.

ಭಾರತದಲ್ಲಿ ಕಡಿಮೆ ಬೆಲೆಗೆ ಲಾಂಚ್​ ಆಯ್ತು 55 ಇಂಚಿನ ಶಿಯೋಮಿ 4ಕೆ ಟಿವಿ
ಎಂಐ ಟಿವಿ
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 16, 2020 | 7:33 PM

ಚೀನಾ ಮೂಲದ ಶಿಯೋಮಿ ಸಂಸ್ಥೆ ಭಾರತದಲ್ಲಿ ಕಡಿಮೆ ಬೆಲೆಗೆ 55 ಇಂಚಿನ 4ಕೆ ಟಿವಿಯನ್ನು ಪರಿಚಯಿಸಿದೆ. ಅದ್ದೂರಿ ಕಾರ್ಯಕ್ರಮದಲ್ಲಿ ಲಾಂಚ್​ ಆದ ಈ ಟಿವಿ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿದೆ.

ಶಿಯೋಮಿ Mi QLED  ಸೀರಿಸ್​ನ 55 ಇಂಚಿನ 4ಕೆ ಟಿವಿಯು ಭಾರತೀಯ ಮಾರುಕಟ್ಟೆಯಲ್ಲಿ ₹ 54,999ಕ್ಕೆ ಲಭ್ಯವಿದೆ. ಆ್ಯಂಡ್ರಾಯ್ಡ್​ ಟಿವಿ ಇದಾಗಿರುವುದರಿಂದ ವೈಫೈ ಕೂಡ ಇದಕ್ಕೆ ಕನೆಕ್ಟ್​ ಮಾಡಬಹುದು. ಅಲ್ಲದೆ, ಆ್ಯಪ್​ಗಳನ್ನು ಕೂಡ ಇನ್​ಸ್ಟಾಲ್​ ಮಾಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ 4ಕೆ ರೆಸಲ್ಯೂಷನ್​ನಲ್ಲಿ ವಿಡಿಯೋ ನೋಡಬಹುದಾಗಿದೆ. ಶೇ 96 ಸ್ಕ್ರೀನ್​ ಅನ್ನು ಟಿವಿ ಹೊಂದಿದೆ.

ಎಂಐ.ಕಾಮ್​, ಫ್ಲಿಪ್​ಕಾರ್ಟ್​, ಎಂಐ ಹೋಮ್​ ಹಾಗೂ ಇತರ ಕಡೆಗಳಲ್ಲಿ ಈ ಟಿವಿ ಸಿಗಲಿದೆ. ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಎಂಐ ಮೊಬೈಲ್​ಗಳು ಅಧಿಪತ್ಯ ಸಾಧಿಸಿವೆ. ಅದೇ ರೀತಿ ಟಿವಿ ಕ್ಷೇತ್ರದಲ್ಲೂ ಶಿಯೋಮಿ ಕಾಲಿಟ್ಟಿದ್ದು, ಕಡಿಮೆ ಬೆಲೆಗೆ ಟಿವಿಗಳನ್ನು ನೀಡುತ್ತಿದೆ.

ಯಾವಾಗಿನಿಂದ ಲಭ್ಯ? ಈಗಾಗಲೇ Mi QLEDಗೆ ಪ್ರೀ ಬುಕ್ಕಿಂಗ್ ಆರಂಭವಾಗಿದೆ. ಡಿಸೆಂಬರ್ 21 ಮಧ್ಯಾಹ್ನ 12 ಗಂಟೆಗೆ ಟಿವಿ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಸದ್ಯ, ಕಪ್ಪು ಬಣ್ಣದಲ್ಲಿ ಮಾತ್ರ ಶಿಯೋಮಿ ಟಿವಿ ಗ್ರಾಹಕರಿಗೆ ಸಿಗಲಿದೆ.  ಫ್ಲಿಪ್​ಕಾರ್ಟ್​​ನಲ್ಲಿ  ಶಿಯೋಮಿ Mi QLED ಟಿವಿಗೆ ಆಫರ್​ ಸಿಗುವ ಸಾಧ್ಯತೆ ಇದೆ. ಎಸ್​ಬಿಐ ಕಾರ್ಡ್​ ಮೇಲೆ ಇದನ್ನು ಖರೀದಿಸಿದರೆ ನಿಮಗೆ ಶೇ 10 ಡಿಸ್ಕೌಂಟ್​ ಕೂಡ ಸಿಗಲಿದೆ.

ಭಾರೀ ಪೈಪೋಟಿ ಎಂಐ ಸಂಸ್ಥೆ ಭಾರತದಲ್ಲಿ ಕಳೆದ 2 ವರ್ಷಗಳಿಂದ ಬರೋಬ್ಬರಿ 50 ಲಕ್ಷ ಟಿವಿಗಳನ್ನು ಮಾರಾಟ ಮಾಡಿದೆಯಂತೆ. ಶಿಯೋಮಿ ಟಿವಿ ಭಾರತದ ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ನೀಡುತ್ತಿದೆ. ಈಗ ಪರಿಚಯಗೊಂಡಿರುವ ಹೊಸ ಟಿವಿ, ಎಲ್​ಜಿ, ಸ್ಯಾಮ್​​ಸಂಗ್​, ಒನ್​ಪ್ಲಸ್​ ಕಂಪೆನಿಗೆ ಸ್ಪರ್ಧೆ ಒಡ್ಡಲಿದೆ.

ಶಿಯೋಮಿ ಮೇಲೆ ಪೇಟೆಂಟ್ ಉಲ್ಲಂಘನೆ ಕೇಸ್: ₹ 1000 ಕೋಟಿ ಜಮಾ ಮಾಡಲು ಕೋರ್ಟ್ ಆದೇಶ

ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
Weekly Astrology: ಡಿಸೆಂಬರ್ 23 ರಿಂದ 29ರ ವರೆಗಿನ ರಾಶಿ ಭವಿಷ್ಯ
Weekly Astrology: ಡಿಸೆಂಬರ್ 23 ರಿಂದ 29ರ ವರೆಗಿನ ರಾಶಿ ಭವಿಷ್ಯ