OnePlus TV: ಒನ್ಪ್ಲಸ್ನಿಂದ ಸ್ಮಾರ್ಟ್ 4K ಟಿವಿ U1S ಬಿಡುಗಡೆ; ಬೆಲೆ, ವೈಶಿಷ್ಟ್ಯ ಮತ್ತಿತರ ಮಾಹಿತಿ ಇಲ್ಲಿದೆ
ಒನ್ಪ್ಲಸ್ನಿಂದ ಹೊಸ ಸ್ಮಾರ್ಟ್ ಟೀವಿ ಬಿಡುಗಡೆ ಮಾಡಲಾಗಿದ್ದು, ಒನ್ಪ್ಲಸ್ ಟಿವಿ U1S ಎಂದು ಇದಕ್ಕೆ ಹೆಸರಿಡಲಾಗಿದೆ. 50 ಇಂಚಿನ ಟೀವಿಯ ಬೆಲೆ ರೂ. 39,999, ಇನ್ನು 55 ಇಂಚಿನ ಟೀವಿ ರೂ. 47,999 ಹಾಗೂ 65 ಇಂಚಿನದ್ದಕ್ಕೆ 62,999 ರೂಪಾಯಿ ಆಗುತ್ತದೆ.

ಒನ್ಪ್ಲಸ್ನಿಂದ ಹೊಸ ಸ್ಮಾರ್ಟ್ ಟೀವಿ ಬಿಡುಗಡೆ ಮಾಡಲಾಗಿದ್ದು, ಒನ್ಪ್ಲಸ್ ಟಿವಿ U1S ಎಂದು ಇದಕ್ಕೆ ಹೆಸರಿಡಲಾಗಿದೆ. ಹೊಸ 4K ಸ್ಮಾರ್ಟ್ ಟೀವಿ ಸಿರೀಸ್ ಅನ್ನು ಮೂರು ಅಳತೆಯಲ್ಲಿ, 50 ಇಂಚು, 55 ಇಂಚು ಹಾಗೂ 65 ಇಂಚುಗಳಲ್ಲಿ ಲಭ್ಯವಿದೆ. ಒನ್ಪ್ಲಸ್ U1S 50 ಇಂಚಿನ ಟೀವಿಯ ಬೆಲೆ ರೂ. 39,999, ಇನ್ನು 55 ಇಂಚಿನ ಟೀವಿ ರೂ. 47,999 ಹಾಗೂ 65 ಇಂಚಿನದ್ದಕ್ಕೆ 62,999 ರೂಪಾಯಿ ಆಗುತ್ತದೆ. ಅಮೆಜಾನ್ ಪ್ರೈಮ್, ಫ್ಲಿಪ್ಕಾರ್ಟ್ ಪ್ಲಸ್ ಮತ್ತು ಆರ್ಸಿಸಿ ಸದಸ್ಯರು ಈ ಹೊಸ ಟೀವಿಯನ್ನು ಜೂನ್ 10, 2021ರ ರಾತ್ರಿ 9 ಗಂಟೆಯಿಂದ ಖರೀದಿ ಮಾಡಬಹುದು.
ಒನ್ಪ್ಲಸ್ ಟಿವಿಗೆ ವಾಯ್ಸ್-ಕಂಟ್ರೋಲ್ ಆಯ್ಕೆ ಬರುತ್ತದೆ. ಧ್ವನಿ ಕಮ್ಯಾಂಡ್ ಮೂಲಕವೇ ಬಳಕೆದಾರರು ಟಿವಿಯ ಇಂಟರ್ಫೇಸ್ ನೇವಿಗೇಟ್ ಮಾಡಬಹುದು. ವೇರಬಲ್ ಸಾಧನಗಳಿಂದಲೂ ಟೀವಿಯನ್ನು ನಿಯಂತ್ರಿಸಬಹುದು. 4K ಡಿಸ್ಪ್ಲೇ ಪ್ಯಾನೆಲ್ಗೆ ಗಾಮಾ ಎಂಜಿನ್ ಆಪ್ಟಿಮೈಸೇಷನ್ ಬರುತ್ತದೆ. ಆ ಮೂಲಕ ಕಡಿಮೆ ರೆಸಲ್ಯೂಷನ್ನಲ್ಲೂ ಉತ್ತಮ ವಿಶ್ಯುಯಲ್ಸ್ ಬರುತ್ತದೆ. ಈ ಟೀವಿಯಲ್ಲಿ ಕ್ಯಾಮೆರಾ ಬರಲಿದ್ದು, ವಿಡಿಯೋ ಕಾಲ್ ಮಾಡಬಹುದು.
ಈ ಟೀವಿಯಲ್ಲಿ 30W ಸ್ಪೀಕರ್ಗಳು ಬರುತ್ತವೆ. ಕಂಪೆನಿಯು ಡೈನಾ ಆಡಿಯೋ ಕ್ಯಾಲಿಬರೇಟೆಡ್ ಸ್ಪೀಕರ್ಗಳೊಂದಿಗೆ ಬಂದಿದೆ. ಇದರ ಜತೆಗೆ ಡಾಲ್ಬಿ ಅಟ್ಮೋಸ್ ಸರೌಂಡ್ ಸೌಂಡ್ ಅನುಭವ ಕೊಡುತ್ತದೆ. ಟಿವಿಯು HDR10+ ಸರ್ಟಿಫೈಡ್ ಆಗಿದೆ. ಇನ್ನು ಸ್ಪೀಕ್ ನೌ ಎಂಬ ವೈಶಿಷ್ಟ್ಯ ಈ ಟೀವಿಯಲ್ಲಿ ಇದ್ದು, ಇದರ ಮೂಲಕ ಗೂಗಲ್ ವಾಯ್ಸ್ ಅಸಿಸ್ಟೆಂಟ್ಗೆ ಯಾವುದೇ ಬಟನ್ ಒತ್ತದೆ ಸಂಪರ್ಕ ಪಡೆಯಬಹುದು. ಇನ್ನು ಕಿಡ್ಸ್ ಮೋಡ್ (ಮಕ್ಕಳಿಗಾಗಿ ಇರುವಂಥದ್ದು) ಎಂಬುದಿದ್ದು, ಕೆಲವು ವೀಕ್ಷಣೆ ಸೆಷನ್ಗಳಿಗೆ ಸಮಯದ ಮಿತಿಯನ್ನು ನಿಗದಿ ಮಾಡುತ್ತದೆ. ಬಳಕೆದಾರರು ಸಮಯ ಮತ್ತು ಡೇಟಾ ಮಿತಿಯನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ನಿಗದಿ ಮಾಡಬಹುದು.
ಇದನ್ನೂ ಓದಿ: OnePlus 9, OnePlus 9R: ಭಾರತಕ್ಕೆ ಬಂತು ಒನ್ಪ್ಲಸ್ 9, ಒನ್ಪ್ಲಸ್ 9R; ಫೋನ್ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್
(OnePlus 4K TV U1S launch in India on June 10, 2021. Here is the price and other details)