Cowin: ಕೊವಿನ್ ಪೋರ್ಟಲ್ ಬಳಕೆದಾರರನ್ನು ಬ್ಲಾಕ್ ಮಾಡುತ್ತಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ

Co-Win Portal: ಕಳೆದ ಮೇ 1ರಂದು ಕೊರೊನಾ ವಿರುದ್ಧದ ಲಸಿಕೆಯು 18 ವರ್ಷ ವಯಸ್ಸು ಮೇಲ್ಪಟ್ಟ ಎಲ್ಲರಿಗೂ ತೆರೆದಿತ್ತು. ಅದರಿಂದಾಗಿ ಕೊವಿನ್ ಮೇಲೆ ಅಧಿಕ ಒತ್ತಡ ಉಂಟಾಗಿತ್ತು.

Cowin: ಕೊವಿನ್ ಪೋರ್ಟಲ್ ಬಳಕೆದಾರರನ್ನು ಬ್ಲಾಕ್ ಮಾಡುತ್ತಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ
ಕೊವಿನ್ ಪೋರ್ಟಲ್ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: ganapathi bhat

Updated on: Jun 11, 2021 | 4:20 PM

ಕೊವಿನ್ ಎಂಬುದು ಕೊವಿಡ್-19 ಲಸಿಕೆ ಪಡೆಯಲು ಸ್ಲಾಟ್ ನೋಂದಾವಣೆ ಮಾಡಿಕೊಳ್ಳಲು ಬಳಸುವ ಸರ್ಕಾರದ ಅಧಿಕೃತ ವೆಬ್​ಸೈಟ್ ಆಗಿದೆ. ಇದೀಗ ಈ ವೆಬ್​ಸೈಟ್ ದಿನಕ್ಕೆ 50 ಕ್ಕೂ ಅಧಿಕ ಒಟಿಪಿ ಜನರೇಟ್ ಮಾಡುತ್ತಿರುವ ಬಳಕೆದಾರರನ್ನು ಬ್ಲಾಕ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಹಲವು ಮಂದಿ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸ್ಕ್ರೀನ್​ಶಾಟ್ ಹಂಚಿಕೊಂಡಿದ್ದಾರೆ.

ಜೂನ್ 21ರಿಂದ ಲಸಿಕೆಗೆ ಆನ್​ಸೈಟ್ ರಿಜಿಸ್ಟ್ರೇಷನ್ ಆರಂಭವಾಗಲಿದೆ. ಅದರಿಂದ ಕೊವಿನ್ ಪೋರ್ಟಲ್​ಗೆ ಒತ್ತಡ ಉಂಟಾಗಬಹುದು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕೊರೊನಾ ವಿರುದ್ಧದ ಲಸಿಕೆಗೆ ಕೊವಿನ್ ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಳ್ಳುವವರು ತಿಳಿದಿರಬೇಕಾದ ಒಂದಷ್ಟು ವಿಚಾರಗಳು ಇಲ್ಲಿದೆ.

  • ಕೊವಿನ್ ಬಳಕೆದಾರರನ್ನು ಬ್ಲಾಕ್ ಮಾಡುತ್ತಿದೆ ಎಂಬ ವಿಚಾರದಲ್ಲಿ ನೀವು ಈ ಅಂಶಗಳನ್ನು ತಿಳಿದಿರಬೇಕು
  • ಹಲವು ಮಾಧ್ಯಮಗಳ ವರದಿಯ ಪ್ರಕಾರ, ಕೊವಿನ್ ವೆಬ್​ಸೈಟ್ ಅಸಮರ್ಪಕವಾಗಿ ಪೋರ್ಟಲ್ ಬಳಕೆ ಮಾಡುವವರನ್ನು ಬ್ಲಾಕ್ ಮಾಡುತ್ತಿದೆ
  • ಲಸಿಕೆಯ ಸ್ಲಾಟ್​ಗಾಗಿ 1,000ಕ್ಕೂ ಅಧಿಕ ಹುಡುಕಾಟ ನಡೆಸುವ, ಒಂದೇ ಸಮಯಕ್ಕೆ ಮತ್ತೆ ಮತ್ತೆ ಹುಡುಕಾಟ ನಡೆಸುವವರನ್ನು ಬ್ಲಾಕ್ ಮಾಡುತ್ತಿದೆ
  • ಒಂದು ದಿನದಲ್ಲಿ, ಅಂದರೆ 24 ಗಂಟೆಯ ಅವಧಿಯಲ್ಲಿ 50ಕ್ಕಿಂತ ಹೆಚ್ಚು ಒಟಿಪಿ ಜನರೇಟ್ ಮಾಡುತ್ತಿರುವ ಬಳಕೆದಾರರನ್ನು ಕೊವಿನ್ ಪೋರ್ಟಲ್ ಬ್ಲಾಕ್ ಮಾಡುತ್ತಿದೆ
  • 15 ನಿಮಿಷದ ಅವಧಿಯ ಒಳಗಾಗಿ 20ಕ್ಕೂ ಹೆಚ್ಚು ಹುಡುಕಾಟ (ಸರ್ಚ್ ರಿಕ್ವೆಸ್ಟ್) ಕೊಡುತ್ತಿರುವ ಬಳಕೆದಾರರನ್ನು ಪೋರ್ಟಲ್ ಬ್ಲಾಕ್ ಮಾಡುತ್ತಿದೆ. ಅಥವಾ ಕೊವಿನ್​ನಿಂದ ಲಾಗ್​ಔಟ್ ಮಾಡುತ್ತಿದೆ
  • ಮುಂದಿನ 24 ಗಂಟೆಗಳ ವರೆಗೆ ಬ್ಲಾಕಿಂಗ್ ಚಾಲ್ತಿಯಲ್ಲಿ ಇರುತ್ತದೆ
  • ಕಳೆದ ಮೇ 1ರಂದು ಕೊರೊನಾ ವಿರುದ್ಧದ ಲಸಿಕೆಯು 18 ವರ್ಷ ವಯಸ್ಸು ಮೇಲ್ಪಟ್ಟ ಎಲ್ಲರಿಗೂ ತೆರೆದಿತ್ತು. ಅದರಿಂದಾಗಿ ಕೊವಿನ್ ಮೇಲೆ ಅಧಿಕ ಒತ್ತಡ ಉಂಟಾಗಿತ್ತು
  • ಕೊವಿನ್ ಪೋರ್ಟಲ್​ನ ಅಪ್ಡೇಟ್ ಆಗಿರುವ ಸೇವೆಯ ಪ್ರಕಾರ, ಅಪಾಯಿಂಟ್​ಮೆಂಟ್ ಪಡೆಯಲು ಬಳಸುವ ಯಾವುದೇ ಆಟೊಮ್ಯಾಟಿಕ್ ಸಾಫ್ಟ್​ವೇರ್ ಒಪ್ಪಿತವಲ್ಲ
  • ಮೂರು ಸೆಕೆಂಡ್​ಗಳ ಒಳಗೆ, ಒಂದಕ್ಕೂ ಹೆಚ್ಚು ಬಾರಿ ಪುಟವನ್ನು ರಿಫ್ರೆಶ್ ಕೊಡುವುದು ಕೂಡ ಒಪ್ಪಿತವಲ್ಲ
  • ದಿನವೊಂದಕ್ಕೆ 1000ಕ್ಕೂ ಅಧಿಕ ಸರ್ಚ್ ರಿಕ್ವೆಸ್ಟ್ ಕೊಡುವುದು (ಒಬ್ಬರ ಹೆಸರಿಗೆ ಅಥವಾ ಗುಂಪಿಗೆ) ಮಾಡತಕ್ಕದ್ದಲ್ಲ

ಇದನ್ನೂ ಓದಿ: Corona Vaccine: ಕೊರೊನಾ ಲಸಿಕೆ ಪಡೆಯುವ ಮೊದಲು ಮತ್ತು ನಂತರ ಪಾಲಿಸಬೇಕಾದ ಅಂಶಗಳೇನು? ಇಲ್ಲಿದೆ ವಿವರ

ಕೊರೊನಾ ಲಸಿಕೆ ಎರಡನೇ ಡೋಸ್​ ಪಡೆಯುವವರ ಗಮನಕ್ಕೆ: ನಿಮಗೆ ನಿಗದಿಪಡಿಸಿರುವ ದಿನಾಂಕವನ್ನು ಹೆಚ್ಚು ಮುಂದೂಡಬೇಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್