ರೀತಾ ಬಹುಗುಣ ಜೋಷಿ ಸಚಿನ್ ತೆಂಡೂಲ್ಕರ್ ಜತೆ ಮಾತನಾಡಿರಬಹುದು, ನನ್ನಲ್ಲಿ ಅಲ್ಲ : ಪಕ್ಷಾಂತರ ವದಂತಿ ತಳ್ಳಿದ ಸಚಿನ್ ಪೈಲಟ್

Sachin Pilot: ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿನ್ ಪೈಲಟ್, ರೀತಾ ಬಹುಗುಣ ಜೋಷಿ ಅವರು ಸಚಿನ್ ಜತೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ. ಅವರು ಬಹುಷಃ ಸಚಿನ್ ತೆಂಡೂಲ್ಕರ್ ಜತೆ ಮಾತನಾಡಿರಬೇಕು. ಆಕೆಗೆ ನನ್ನ ಜತೆ ಮಾತನಾಡಲು ಧೈರ್ಯವಿಲ್ಲ ಎಂದಿದ್ದಾರೆ.

ರೀತಾ ಬಹುಗುಣ ಜೋಷಿ ಸಚಿನ್ ತೆಂಡೂಲ್ಕರ್ ಜತೆ ಮಾತನಾಡಿರಬಹುದು, ನನ್ನಲ್ಲಿ ಅಲ್ಲ : ಪಕ್ಷಾಂತರ ವದಂತಿ ತಳ್ಳಿದ ಸಚಿನ್ ಪೈಲಟ್
ಸಚಿನ್ ಪೈಲಟ್

ಜೈಪುರ್: ಜಿತಿನ್ ಪ್ರಸಾದ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಕೂಡಾ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಹರಡಿದೆ. ಏತನ್ಮಧ್ಯೆ 25 ವರ್ಷ ಕಾಂಗ್ರೆಸ್ ಪಕ್ಷದಲ್ಲಿದ್ದು ಆಮೇಲೆ ಬಿಜೆಪಿ ಸೇರಿದ್ದ ರೀತಾ ಬಹುಗುಣ ಜೋಷಿ ನಾನು ಸಚಿನ್ ಪೈಲಟ್ ಜತೆ ಮಾತನಾಡಿದ್ದೇನೆ. ಅವರು ಶೀಘ್ರದಲ್ಲಿಯೇ ಬಿಜೆಪಿ ಸೇರಲಿದ್ದಾರೆ. ಸಚಿನ್ ಪೈಲಟ್ ಕಾಂಗ್ರೆಸ್ ಪಕ್ಷದಲ್ಲಿ ಹಿತವಾಗಿಲ್ಲ ಎಂದಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿನ್ ಪೈಲಟ್, ರೀತಾ ಬಹುಗುಣ ಜೋಷಿ ಅವರು ಸಚಿನ್ ಜತೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ. ಅವರು ಬಹುಷಃ ಸಚಿನ್ ತೆಂಡೂಲ್ಕರ್ ಜತೆ ಮಾತನಾಡಿರಬೇಕು. ಆಕೆಗೆ ನನ್ನ ಜತೆ ಮಾತನಾಡಲು ಧೈರ್ಯವಿಲ್ಲ ಎಂದಿದ್ದಾರೆ.

ಜಿತಿನ್ ಪ್ರಸಾದ ಅವರು ಬುಧವಾರ ಕಾಂಗ್ರೆಸ್ ತೊರೆದಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಲು ಅಥವಾ ಜನರಿಗೆ ಸಹಾಯ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬಿಜೆಪಿಯು ಇಂದು ದೇಶದ “ಏಕೈಕ ರಾಷ್ಟ್ರೀಯ ಪಕ್ಷ” ಎಂದು ಬಣ್ಣಿಸಿದ್ದರು.

ಕಳೆದ ವರ್ಷ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧದ ದಂಗೆಯನ್ನು ಕೊನೆಗೊಳಿಸಲು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮನವೊಲಿಸಿದ ನಂತರ ಶ ಪೈಲಟ್ ಅವರ ನಿರ್ಗಮನದ ಬಗ್ಗೆ ಊಹಾಪೋಹಗಳು ಮುಂದುವರೆದಿದೆ.

ಮಾಜಿ ಉಪಮುಖ್ಯಮಂತ್ರಿ ರಾಜಸ್ಥಾನ ಸರ್ಕಾರ ಮತ್ತು ಪಕ್ಷದ ಸಂಘಟನೆಯಲ್ಲಿ ಹೆಚ್ಚಿನ ಪಾಲನ್ನು ಬಯಸುತ್ತಾರೆ. ಆದರೆ ಅಶೋಕ್ ಗೆಹ್ಲೋಟ್ ಇದುವರೆಗೆ ಇಂತಹ ಕ್ರಮಗಳನ್ನು ವಿರೋಧಿಸಿದ್ದಾರೆ. ಪೈಲಟ್‌ಗೆ ಹತ್ತಿರವಿರುವ ಶಾಸಕರು ಕ್ಯಾಬಿನೆಟ್ ವಿಸ್ತರಣೆ ಮತ್ತು ನೇಮಕಾತಿಗಳ ವಿಳಂಬವನ್ನು ಪ್ರಶ್ನಿಸಿದ್ದರು.   ಪೈಲಟ್ ಇತ್ತೀಚೆಗೆ ತನ್ನ ಬೇಡಿಕೆಗಳನ್ನು ಪರಿಶೀಲಿಸುವ ಭರವಸೆಯನ್ನು ಪಕ್ಷಕ್ಕೆ ನೆನಪಿಸಿದರು. ಅವರ ದಂಗೆಯನ್ನು ಕೊನೆಗೊಳಿಸಲು ಮನವೊಲಿಸುವಾಗ, ನಾಯಕತ್ವವು ರಾಜಸ್ಥಾನದಲ್ಲಿ ತಿದ್ದುಪಡಿಯನ್ನು ಸೂಚಿಸಲು ಒಂದು ಸಮಿತಿಯನ್ನು ರಚಿಸಿತ್ತು.


“ಈಗ 10 ತಿಂಗಳುಗಳು ಕಳೆದಿವೆ. ಸಮಿತಿಯಿಂದ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ನನಗೆ ಭರವಸೆ ನೀಡಲಾಗಿತ್ತು. ಆದರೆ ಈಗ ಅರ್ಧದಷ್ಟು ಅವಧಿ ಮುಗಿದಿದೆ, ಮತ್ತು ಆ ಸಮಸ್ಯೆಗಳನ್ನು ಬಗೆಹರಿಸಲಾಗಿಲ್ಲ. ಪಕ್ಷದ ಅನೇಕರು ನಮಗೆ ಜನಾದೇಶವನ್ನು ಪಡೆದುಕೊಳ್ಳಲು ಕೆಲಸ ಮಾಡಿದ ಮತ್ತು ಎಲ್ಲವನ್ನು ನೀಡಿದ ಕಾರ್ಯಕರ್ತರ ಬಗ್ಗೆ ಕೇಳದೇ ಇರುವುದು ದುರದೃಷ್ಟಕರ ಎಂದು ಪೈಲಟ್ ಸೋಮವಾರ ಹಿಂದೂಸ್ತಾನ್ ಟೈಮ್ಸ್ ಜತೆ ಮಾತನಾಡಿದಾಗ ಹೇಳಿದ್ದರು.

ಎರಡು ದಿನಗಳ ನಂತರ ಜಿತಿನ್ ಪ್ರಸಾದ ಅವರು ಪಕ್ಷತೊರೆದ ನಂತರ ಪ್ರತಿಕ್ರಿಯಿಸಿದ ಕಾಂಗ್ರೆಸ್ “ಒಂದು ಮಹತ್ವದ ಸಮಯವಿದೆ, ಸಚಿನ್ ಪೈಲಟ್ ತಾಳ್ಮೆಯಿಂದಿರಬೇಕು ಎಂದಿತ್ತು. ಪೈಲಟ್ ಅವರ ಬೇಡಿಕೆಗಳನ್ನು ನಿಭಾಯಿಸಲು ನೇಮಕಗೊಂಡ ಮೂವರು ಸದಸ್ಯರ ಸಮಿತಿಯು ಕಳೆದ ಆಗಸ್ಟ್‌ನಿಂದ ಬೇಡಿಕೆ ಈಡೇರಿಲ್ಲ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ:  ಸಚಿನ್ ಪೈಲಟ್ ದೆಹಲಿಗೆ ಬರುವ ಸಾಧ್ಯತೆ ; ಜಿತಿನ್ ಪ್ರಸಾದ ನಿರ್ಗಮನ ನಂತರ ಊಹಾಪೋಹಗಳ ಬಗ್ಗೆ ಕಾಂಗ್ರೆಸ್​ಗೆ ಹೊಸ ತಲೆನೋವು