Mukul Roy ಪಶ್ಚಿಮ ಬಂಗಾಳದ ಅನುಭವಿ ರಾಜಕಾರಣಿ ಮುಕುಲ್ ರಾಯ್ ಇಂದು ಟಿಎಂಸಿಗೆ ವಾಪಸ್ ಬರುವ ಸಾಧ್ಯತೆ?

West Bengal Politics: ತೃಣಮೂಲ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರಿದವರಲ್ಲಿ ಮೊದಲಿಗರಾಗಿರುವ ಬಂಗಾಳದ ರಾಜಕಾರಣಿ ಮುಕುಲ್ ರಾಯ್ ಅವರು ಶೀಘ್ರದಲ್ಲೇ ತೃಣಮೂಲ ಕಾಂಗ್ರೆಸ್ ಗೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ

Mukul Roy ಪಶ್ಚಿಮ ಬಂಗಾಳದ ಅನುಭವಿ ರಾಜಕಾರಣಿ ಮುಕುಲ್ ರಾಯ್ ಇಂದು ಟಿಎಂಸಿಗೆ ವಾಪಸ್ ಬರುವ ಸಾಧ್ಯತೆ?
ಮುಕುಲ್ ರಾಯ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 11, 2021 | 1:58 PM

ಕೊಲ್ಕತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರಿದವರಲ್ಲಿ ಮೊದಲಿಗರಾಗಿರುವ ಬಂಗಾಳದ ರಾಜಕಾರಣಿ ಮುಕುಲ್ ರಾಯ್ ಅವರು ಶೀಘ್ರದಲ್ಲೇ ತೃಣಮೂಲ ಕಾಂಗ್ರೆಸ್​ಗೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಮುಕುಲ್ ರಾಯ್ ಅವರ ‘ಘರ್ ವಾಪ್ಸಿ’ ಅಥವಾ ಮರಳುವಿಕೆಯು ಬಂಗಾಳ ರಾಜಕೀಯ ವಲಯದಲ್ಲಿ ವಾರಗಳೀಂದೀಚೆಗೆ ಚರ್ಚಾ ವಿಷಯ ಆಗಿದೆ. ಬಿಜೆಪಿಯನ್ನು ಸೋಲಿಸಿ ಬಹುಮತದೊಂದಿಗೆ ಮಮತಾ ಬ್ಯಾನರ್ಜಿ ಅಧಿಕಾರಕ್ಕೇರಿದಂದಿನಿಂದ ಮುಕುಲ್ ರಾಯ್ ಮತ್ತೆ ಟಿಎಂಸಿಗೆ ಮರಳಲಿದ್ದಾರೆ ಎಂಬ ಊಹಾಪೋಹಗಳು ಕೇಳಿ ಬಂದಿದ್ದವು.

ಮಮತಾ ಬ್ಯಾನರ್ಜಿಯ ಸೋದರಳಿಯ ಮತ್ತು ಅವರ ಪಕ್ಷದ ಪ್ರಮುಖ ಮುಖಂಡ ಅಭಿಷೇಕ್ ಬ್ಯಾನರ್ಜಿ ರಾಯ್ ಅವರ ಪತ್ನಿ ದಾಖಲಾಗಿದ್ದ ಆಸ್ಪತ್ರೆಯಲ್ಲಿ ರಾಯ್ ಅವರನ್ನು ಭೇಟಿ ಮಾಡಿದಾಗಿನಿಂದ ಮುಕುಲ್ ರಾಯ್ ವಾಪಸ್ ಬರುವ ಬಗ್ಗೆ ಊಹಾಪೋಹಗಳು ಪ್ರಾರಂಭವಾದವು. ಮರುದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ರಾಯ್ ಅವರಿಗೆ ಕರೆ ಮಾಡಿ ಅವರೊಂದಿಗೆ ಸಂಭಾಷಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ರಾಯ್ ಅವರ ಹೆಂಡತಿ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸಿ ಮೋದಿ ಈ ಕರೆ ಮಾಡಿದ್ದರು ಎಂದು ಬಿಜೆಪಿ ನಾಯಕರು ಸಮರ್ಥಿಸಿಕೊಂಡರೆ, ತೃಣಮೂಲ ಕಾಂಗ್ರೆಸ್‌ನಲ್ಲಿ ಅನೇಕರು ತಮ್ಮ ತಂಡವನ್ನು ಒಟ್ಟಿಗೆ ಇರಿಸಿಕೊಳ್ಳುವ ಬಗ್ಗೆ ಬಿಜೆಪಿಗೆ ಆತಂಕವುಂಟಾಗಿದೆ ಎಂದು ಹೇಳಿದ್ದಾರೆ.

ರಾಯ್ ಅವರ ಮೌನ ಮತ್ತು ಕೋಲ್ಕತ್ತಾದ ಪ್ರಮುಖ ಬಿಜೆಪಿ ಸಭೆಗೆ ಅವರು ಗೈರುಹಾಜರಿ ಟಿಎಂಸಿಗೆ ಮರಳುತ್ತಾರೆ ಎಂಬ ಊಹಾಪೋಹಗಳಿಗೆ ಪುಷ್ಠಿನೀಡಿದೆ.

ಬುಧವಾರ ಮುಕುಲ್ ರಾಯ್ ಟಿಎಂಸಿಗೆ ವಾಪಸ್ ಆಗುವ ಬಗ್ಗೆ ಸುಳಿವು ನೀಡಿದ ಟಿಎಂಸಿ ಸೌಗತ ರಾಯ್, ಅನೇಕ ಜನರು ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಮರಳಿ ಬರಲು ಬಯಸುತ್ತಾರೆ. ಅಗತ್ಯವಿರುವ ಸಮಯದಲ್ಲಿ ಅವರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ. “ಅಂತಿಮ ನಿರ್ಧಾರವನ್ನು ಮಮತಾ ದೀದಿ ತೆಗೆದುಕೊಳ್ಳುತ್ತಾರೆ.

ಆದರೆ ಒಂದು ಪಕ್ಷವನ್ನು ತೊರೆದು ಇನ್ನೊಂದು ಪಕ್ಷಕ್ಕೆ ಸೇರಿರುವರನ್ನು ಸಾಫ್ಟ್‌ಲೈನರ್‌ಗಳು ಮತ್ತು ಹಾರ್ಡ್‌ಲೈನರ್‌ಗಳು ಎಂದು ಎರಡು ಭಾಗಗಳಾಗಿ ವಿಂಗಡಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ರಾಯ್.

ಸಾಫ್ಟ್‌ಲೈನರ್‌ಗಳು ಪಕ್ಷವನ್ನು ತೊರೆದವರು ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಅವಮಾನಿಸದವರು. ಹಾರ್ಡ್‌ಲೈನರ್‌ಗಳು ಮಮತಾ ಅವರನ್ನು ಸಾರ್ವಜನಿಕವಾಗಿ ಅವಮಾನಿಸಿದರು ಎಂದು ಎಂದು ರಾಯ್ ವಿವರಿಸಿದರು.

ಪಕ್ಷಾಂತರದ ನಂತರ ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿ ವಿರುದ್ಧ ಕೆಟ್ಟದಾಗಿ ಮಾತನಾಡಿದರೆ , ಮುಕುಲ್ ರಾಯ್ ಅವರು ಮುಖ್ಯಮಂತ್ರಿಯನ್ನು ಬಹಿರಂಗವಾಗಿ ನಿಂದಿಸಲಿಲ್ಲ ಎಂದು ರಾಯ್ ಹೇಳಿದ್ದಾರೆ.

ಮಮತಾ ಬ್ಯಾನರ್ಜಿಯವರ ಆಪ್ತ ಸಹಾಯಕರಾಗಿದ್ದ ರಾಯ್ ಅವರು 2017 ರಲ್ಲಿ ಬಿಜೆಪಿ ಪಕ್ಷಕ್ಕೆ ಹಾರಿದ ಮೊದಲ ದೊಡ್ಡ ನಾಯಕರಾಗಿದ್ದರು. ಮುಂದಿನ ವರ್ಷಗಳಲ್ಲಿ, ತೃಣಮೂಲ ಶಾಸಕರು ಮತ್ತು ನಾಯಕರ ಗುಂಪನ್ನು ನಿಷ್ಠೆಯನ್ನು ಬದಲಾಯಿಸಲು ಮನವೊಲಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಈಗ ತೃಣಮೂಲ ಕಾಂಗ್ರೆಸ್ ಮೂಲಗಳ ಪ್ರಕಾರ ಈ ನಾಯಕರಲ್ಲಿ ಅನೇಕರು ಸುಮಾರು 35 ಮಂದಿ ಟಿಎಂಸಿಗೆ ಮರಳಲು ಆಶಿಸುತ್ತಿದ್ದಾರೆ.

ಇದನ್ನೂ ಓದಿ:  Mukul Roy ಬಿಜೆಪಿಯಿಂದ ಟಿಎಂಸಿಗೆ ಮರಳಲಿದ್ದಾರೆಯೇ ಮುಕುಲ್ ರಾಯ್; ಸುಳಿವು ನೀಡಿದ ಟಿಎಂಸಿ ಸಂಸದ

(West Bengal politician Mukul Roy set to return to the Trinamool Congress shortly says sources)

Published On - 1:55 pm, Fri, 11 June 21

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು