Mukul Roy ಮಮತಾ ಬ್ಯಾನರ್ಜಿ ಭೇಟಿ ನಂತರ ಟಿಎಂಸಿಗೆ ಮರುಸೇರ್ಪಡೆಯಾದ ಮುಕುಲ್​ ರಾಯ್​

West Bengal: ಮುಕುಲ್ ರಾಯ್ ಅವರ ‘ಘರ್ ವಾಪ್ಸಿ’ ಅಥವಾ ಮರಳುವಿಕೆಯು ಬಂಗಾಳ ರಾಜಕೀಯ ವಲಯದಲ್ಲಿ ವಾರಗಳೀಂದೀಚೆಗೆ ಚರ್ಚಾ ವಿಷಯ ಆಗಿತ್ತು.

Mukul Roy ಮಮತಾ ಬ್ಯಾನರ್ಜಿ ಭೇಟಿ ನಂತರ ಟಿಎಂಸಿಗೆ ಮರುಸೇರ್ಪಡೆಯಾದ ಮುಕುಲ್​ ರಾಯ್​
ಮುಕುಲ್ ರಾಯ್

ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರಿದವರಲ್ಲಿ ಮೊದಲಿಗರಾಗಿರುವ ಬಂಗಾಳದ ರಾಜಕಾರಣಿ ಮುಕುಲ್ ರಾಯ್ ಅವರು ಮತ್ತೆ  ತೃಣಮೂಲ ಕಾಂಗ್ರೆಸ್​ಗೆ ಮರಳಿದ್ದಾರೆ .  ಪಶ್ಚಿಮ ಬಂಗಾಳದ ಕೋಲ್ಕತ್ತಾದ ಟಿಎಂಸಿ ಭವನದಲ್ಲಿ ರಾಯ್ ಅವರು ಟಿಎಂಸಿಗೆ  ಸೇರ್ಪಡೆ ಆಗಿದ್ದಾರೆ.   ಇದಕ್ಕಿಂತ ಮುನ್ನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿ  ಜತೆ  ರಾಯ್ ಮಾತುಕತೆ ನಡೆಸಿದ್ದಾರೆ.  ಈಹೊತ್ತಲ್ಲಿ ಪಾರ್ಥ ಚಟರ್ಜಿ  ಕೂಡಾ ಭಾಗಿಯಾಗಿದ್ದರು. ಮುಕುಲ್ ರಾಯ್ ಅವರ ‘ಘರ್ ವಾಪ್ಸಿ’ ಅಥವಾ ಮರಳುವಿಕೆಯು ಬಂಗಾಳ ರಾಜಕೀಯ ವಲಯದಲ್ಲಿ ವಾರಗಳೀಂದೀಚೆಗೆ ಚರ್ಚಾ ವಿಷಯ ಆಗಿತ್ತು. ಬಿಜೆಪಿಯನ್ನು ಸೋಲಿಸಿ ಬಹುಮತದೊಂದಿಗೆ ಮಮತಾ ಬ್ಯಾನರ್ಜಿ ಅಧಿಕಾರಕ್ಕೇರಿದಂದಿನಿಂದ ಮುಕುಲ್ ರಾಯ್ ಮತ್ತೆ ಟಿಎಂಸಿಗೆ ಮರಳಲಿದ್ದಾರೆ ಎಂಬ ಊಹಾಪೋಹಗಳು ಕೇಳಿ ಬಂದಿದ್ದವು.

ಕೊಲ್ಕತ್ತಾದಲ್ಲಿ ಪಶ್ಚಿಮ  ಬಂಗಾಳ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ  ಬಿಜೆಪಿ ಉಪಾಧ್ಯಕ್ಷರಾಗಿದ್ದ  ಮುಕುಲ್  ರಾಯ್ ಮತ್ತು ಅವರ  ಪುತ್ರ ಶುಭ್ರಂಶು  ರಾಯ್ ಟಿಎಂಸಿಗೆ  ಮರುಸೇರ್ಪಡೆ ಆಗಿದ್ದಾರೆ.


ಬಂಗಾಳದ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್​ನಿಂದ ಬಿಜೆಪಿಗೆ ಹಾರಿದ್ದ ರಾಯ್ ಅವರು ಇಂದು ತಮ್ಮ ಮಾಜಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಗ ಶುಭ್ರಂಶು ಅವರೊಂದಿಗೆ ಔಪಚಾರಿಕವಾಗಿ ಟಿಎಂಸಿಗೆ  ಮರುಸೇರ್ಪಡೆ ಆಗಿದ್ದಾರೆ ತೃಣಮೂಲ ಭವನಕ್ಕೆ ಕಾಲಿಡುತ್ತಿದ್ದಾಗ, ಮುಕುಲ್ ರಾಯ್ ಅವರು 2017 ರಲ್ಲಿ ಬಿಜೆಪಿಗೆ ಸೇರಿದಾಗ  ತಾವು  ತೊರೆದ ಕಟ್ಟಡದಲ್ಲಿನ ತಮ್ಮ ಹಳೆಯ ಕೋಣೆಗೆ ಹೋದರು ಎಂದು ವರದಿಯಾಗಿದೆ.

ಬಿಜೆಪಿ   ಪಕ್ಷದಲ್ಲಿ ಉಸಿರುಗಟ್ಟಿಸುವಂತಿದೆ ಎಂದು ಮುಕುಲ್ ರಾಯ್ ನಿಕಟವರ್ತಿಗಳಿಗೆ ತಿಳಿಸಿದ್ದರು ಎಂದು ಮೂಲಗಳು ತಿಳಿಸಿವೆ. ಬಂಗಾಳ ಚುನಾವಣೆಯಲ್ಲಿ ಬಿಜೆಪಿಯ ಸೋಲಿನಿಂದ ಅವರ ಹತಾಶೆ ಮತ್ತಷ್ಟು ಹೆಚ್ಚಾಗಿತ್ತು

ಬಿಜೆಪಿಯ ರಾಜಕೀಯ ಸಂಸ್ಕೃತಿ ಮತ್ತು ನೀತಿಗಳು ಬಂಗಾಳಕ್ಕೆ ಅನ್ಯವಾಗಿದೆ ಮತ್ತು ಭವಿಷ್ಯದಲ್ಲಿ “ಹೊರಗಿನವನಾಗಿ” ಉಳಿಯುವಂತೆ ಮಾಡುತ್ತದೆ ಎಂಬ ಅಭಿಪ್ರಾಯವನ್ನು ರಾಯ್ ಹೊಂದಿದ್ದರು ಎಂದು ಅವರ ನಿಕಟವರ್ತಿಗಳು ಹೇಳಿದ್ದಾರೆ.

ಮಮತಾ ಬ್ಯಾನರ್ಜಿಯ ಸೋದರಳಿಯ ಮತ್ತು ಅವರ ಪಕ್ಷದ ಪ್ರಮುಖ ಮುಖಂಡ ಅಭಿಷೇಕ್ ಬ್ಯಾನರ್ಜಿ ರಾಯ್ ಅವರ ಪತ್ನಿ ದಾಖಲಾಗಿದ್ದ ಆಸ್ಪತ್ರೆಯಲ್ಲಿ ರಾಯ್ ಅವರನ್ನು ಭೇಟಿ ಮಾಡಿದಾಗಿನಿಂದ ಮುಕುಲ್ ರಾಯ್ ವಾಪಸ್ ಬರುವ ಬಗ್ಗೆ ಊಹಾಪೋಹಗಳು ಪ್ರಾರಂಭವಾದವು. ಮರುದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ರಾಯ್ ಅವರಿಗೆ ಕರೆ ಮಾಡಿ ಅವರೊಂದಿಗೆ ಸಂಭಾಷಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ರಾಯ್ ಅವರ ಹೆಂಡತಿ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸಿ ಮೋದಿ ಈ ಕರೆ ಮಾಡಿದ್ದರು ಎಂದು ಬಿಜೆಪಿ ನಾಯಕರು ಸಮರ್ಥಿಸಿಕೊಂಡರೆ, ತೃಣಮೂಲ ಕಾಂಗ್ರೆಸ್‌ನಲ್ಲಿ ಅನೇಕರು ತಮ್ಮ ತಂಡವನ್ನು ಒಟ್ಟಿಗೆ ಇರಿಸಿಕೊಳ್ಳುವ ಬಗ್ಗೆ ಬಿಜೆಪಿಗೆ ಆತಂಕವುಂಟಾಗಿದೆ ಎಂದು ಹೇಳಿದ್ದಾರೆ.

ರಾಯ್ ಅವರ ಮೌನ ಮತ್ತು ಕೋಲ್ಕತ್ತಾದ ಪ್ರಮುಖ ಬಿಜೆಪಿ ಸಭೆಗೆ ಅವರು ಗೈರುಹಾಜರಿ ಟಿಎಂಸಿಗೆ ಮರಳುತ್ತಾರೆ ಎಂಬ ಊಹಾಪೋಹಗಳಿಗೆ ಪುಷ್ಠಿ ನೀಡಿತ್ತು.

ಬುಧವಾರ ಮುಕುಲ್ ರಾಯ್ ಟಿಎಂಸಿಗೆ ವಾಪಸ್ ಆಗುವ ಬಗ್ಗೆ ಸುಳಿವು ನೀಡಿದ ಟಿಎಂಸಿ ಸೌಗತ ರಾಯ್, ಅನೇಕ ಜನರು ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಮರಳಿ ಬರಲು ಬಯಸುತ್ತಾರೆ. ಅಗತ್ಯವಿರುವ ಸಮಯದಲ್ಲಿ ಅವರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ. “ಅಂತಿಮ ನಿರ್ಧಾರವನ್ನು ಮಮತಾ ದೀದಿ ತೆಗೆದುಕೊಳ್ಳುತ್ತಾರೆ ಎಂದಿದ್ದರು.

ಇದನ್ನೂ ಓದಿ:  Mukul Roy ಪಶ್ಚಿಮ ಬಂಗಾಳದ ಅನುಭವಿ ರಾಜಕಾರಣಿ ಮುಕುಲ್ ರಾಯ್ ಇಂದು ಟಿಎಂಸಿಗೆ ವಾಪಸ್ ಬರುವ ಸಾಧ್ಯತೆ?

(Mukul Roy who joined the BJP with much fanfare now returns to TMC along with his son Subhrangshu Roy)

Read Full Article

Click on your DTH Provider to Add TV9 Kannada