ಯುವತಿ ಸಾವಿಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಕಾರಣವಾಯ್ತು?; ಪ್ರೇಯಸಿಯನ್ನೇ ಕೊಂದ ಪ್ರಿಯಕರ

ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ಒಂದರ ಬಗ್ಗೆ ಅವರಿಬ್ಬರಿಗೆ ಉಂಟಾದ ಭಿನ್ನಮತ, ವಾದವೇ ಈ ದುರ್ಘಟನೆ ಸಂಭವಿಸಲು ಕಾರಣ ಆಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ಸಾವಿಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಕಾರಣವಾಯ್ತು?; ಪ್ರೇಯಸಿಯನ್ನೇ ಕೊಂದ ಪ್ರಿಯಕರ
ಪ್ರಾತಿನಿಧಿಕ ಚಿತ್ರ

ತಿರುವನಂತಪುರ: ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ಒಂದರ ಕುರಿತಾಗಿ ನಡೆದ ಕಲಹದಿಂದ, ತನ್ನ ಪ್ರೇಯಸಿಯನ್ನೇ ಸುಟ್ಟು ಕೊಂದ ಹೀನಾಯ ಘಟನೆ ಇಲ್ಲಿ ನಡೆದಿದೆ. ಲಿವ್ ಇನ್ ಪಾರ್ಟ್​ನರ್​ಶಿಪ್​ನಲ್ಲಿ ಇದ್ದ ಜೋಡಿಯ ನಡುವೆ ಸೋಷಿಯಲ್ ಮೀಡಿಯಾ ಪೋಸ್ಟ್ ಕುರಿತಾಗಿ ಜಗಳ ನಡೆದಿದೆ ಎಂದು ಹೇಳಲಾಗಿತ್ತು. ಆ ಕಾರಣದಿಂದ ಯುವಕ ತನ್ನ ಪ್ರೇಯಸಿ, 28 ವರ್ಷದ ಅಥಿರಳಿಗೆ ಬೆಂಕಿ ಇಟ್ಟಿದ್ದಾನೆ. ಸುಟ್ಟ ಗಾಯಗಳಿಂದಾಗಿ ಆಕೆಯನ್ನು ಬಳಿಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ತಿರುವನಂತಪುರಂನ ವೈದ್ಯಕೀಯ ಕಾಲೇಜಿನಲ್ಲಿ ಆಕೆ ಸಾವನ್ನಪ್ಪಿದ್ದಾಳೆ.

ಆಕೆಯ ಲಿವ್ ಇನ್ ಪಾರ್ಟ್​ನರ್ ಶಾನವಾಜ್ (30) ಕೂಡ ಘಟನೆಯಲ್ಲಿ ಗಂಭೀರ ಗಾಯಗೊಂಡ ಪರಿಣಾಮ ಈಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತಿರುವನಂತಪುರಂನಿಂದ ಸುಮಾರು ಒಂದು ಘಂಟೆ ಅವಧಿಯ ದೂರದಲ್ಲಿರುವ ಕೊಲ್ಲಂನ ಅಂಚಲ್ ಎಂಬಲ್ಲಿ ದುರ್ಘಟನೆ ಸಂಭವಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ಒಂದರ ಬಗ್ಗೆ ಅವರಿಬ್ಬರಿಗೆ ಉಂಟಾದ ಭಿನ್ನಮತ, ವಾದವೇ ಈ ದುರ್ಘಟನೆ ಸಂಭವಿಸಲು ಕಾರಣ ಆಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಅಥಿರ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವಿಡಿಯೋ ಬಗ್ಗೆ ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿತ್ತು. ಅಥಿರ ತಾಯಿಯ ಹೇಳಿಕೆಯಂತೆ, ಶಾನವಾಜ್ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಲೈಟರ್ ಮೂಲಕ ಬೆಂಕಿ ಉರಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಜೋಡಿಗೆ ಮೂರು ತಿಂಗಳ ಮಗು ಕೂಡ ಇದೆ ಎಂದು ಅಂಚಲ್ ಠಾಣೆಯ ಪೊಲೀಸ್ ಅಧಿಕಾರಿ ಸೈಜು ನಾಥ್ ಹೇಳಿದ್ದಾರೆ.

ಅಥಿರಳ ಕೂಗು ಕೇಳಿ ನೆರೆಮನೆಯವರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ, ಆಂಬುಲೆನ್ಸ್ ಕರೆಸಿ ತಿರುವನಂತಪುರಂನ ವೈದ್ಯಕೀಯ ಕಾಲೇಜಿಗೆ ಮಂಗಳವಾರ ರಾತ್ರಿ ಕರೆದೊಯ್ಯಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಥಿರ, ಇಂದು (ಜೂನ್ 11) ಮೃತಪಟ್ಟಿದ್ದಾಳೆ. ಅಥಿರ ತಾಯಿಯ ದೂರಿನಂತೆ ಶಾನವಾಜ್ ವಿರುದ್ಧ ಕೊಲೆ ಆರೋಪದ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ; ಮಹಿಳೆ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ತಂದೆ, ಅಪ್ರಾಪ್ತ ಮಗ ಅರೆಸ್ಟ್

Bus accident Pakistan: ಶುಭ ಶುಕ್ರವಾರ ಯಾತ್ರಾತ್ರಿಗಳ ಕರೆದೊಯ್ಯುತ್ತಿದ್ದ ಬಸ್ ಪಲ್ಟಿ, 20ಕ್ಕೂ ಹೆಚ್ಚು ಮಂದಿ ಸಾವು