AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bus accident Pakistan: ಶುಭ ಶುಕ್ರವಾರ ಯಾತ್ರಾತ್ರಿಗಳ ಕರೆದೊಯ್ಯುತ್ತಿದ್ದ ಬಸ್ ಪಲ್ಟಿ, 20ಕ್ಕೂ ಹೆಚ್ಚು ಮಂದಿ ಸಾವು

ಶುಭ ಶುಕ್ರವಾರದ ಈ ದುರ್ಘಟನೆಗೂ ಮುನ್ನ ಇತ್ತೀಚೆಗೆ ಎರಡು ಎಕ್ಸ್​ಪ್ರೆಸ್​ ಟ್ರೈನ್​ಗಳು ಅಪಘಾತಕ್ಕೆ ತುತ್ತಾಗಿದ್ದವು. ಅದರಲ್ಲಿ 63 ಮಂದಿ ಅಸುನೀಗಿದ್ದರು. ಕಳಪೆ ಗುಣಮಟ್ಟದ ರಸ್ತೆಗಳು, ಸಂಚಾರಿ ನಿಯಮಗಳನ್ನು ಪಾಲಿಸದಿರುವುದು ಮತ್ತು ವಾಹನಗಳನ್ನು ಸಕಾಲಕ್ಕೆ ದುರಸ್ತಿಗೊಳಿಸದಿರುವುದು ಪಾಕಿಸ್ತಾನದಲ್ಲಿ ಮಾರಕ ಅಪಘಾತಗಳಿಗೆ ಕಾರಣವಾಗಿದೆ ಎನ್ನಲಾಗಿದೆ.

Bus accident Pakistan: ಶುಭ ಶುಕ್ರವಾರ ಯಾತ್ರಾತ್ರಿಗಳ ಕರೆದೊಯ್ಯುತ್ತಿದ್ದ ಬಸ್ ಪಲ್ಟಿ, 20ಕ್ಕೂ ಹೆಚ್ಚು ಮಂದಿ ಸಾವು
Bus accident in Pakistan: ಶುಭ ಶುಕ್ರವಾರ ಪಾಕಿಸ್ತಾನದಲ್ಲಿ ಯಾತ್ರಾತ್ರಿಗಳ ಕರೆದೊಯ್ಯುತ್ತಿದ್ದ ಬಸ್ ಪಲ್ಟಿ, 20 ಕ್ಕೂ ಹೆಚ್ಚು ಮಂದಿ ಸಾವು
TV9 Web
| Updated By: ಸಾಧು ಶ್ರೀನಾಥ್​|

Updated on:Jun 11, 2021 | 4:16 PM

Share

ಪಾಕಿಸ್ತಾನದಲ್ಲಿ ಯಾತ್ರಾತ್ರಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿ ಹೊಡೆದು 20 ಕ್ಕೂ ಹೆಚ್ಚು ಮಂದಿ ಕೊನೆಯುಸಿರೆಳೆದಿದ್ದಾರೆ. 50 ಕ್ಕೂ ಹೆಚ್ಚು ಪ್ರವಾಸಿಗರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿಂಧ್ ಪ್ರಾಂತ್ಯದ ವಾಯವ್ಯ ಪ್ರದೇಶದ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕರಿಂದ ತುಂಬಿತುಳುಕುತ್ತಿತ್ತು. ಬಸ್​ ಮೇಲ್ಭಾಗದಲ್ಲೂ ಜನ ಹತ್ತಿ ಕುಳಿತಿದ್ದರು. ನತದೃಷ್ಟ ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದ ಎಲ್ಲರಿಗೂ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸೂಫಿ ಸಂತನ ಕ್ಷೇತ್ರ ದರ್ಶನ (Sufi saint shrine) ಮುಗಿಸಿಕೊಂಡು ಬಸ್​ ವಾಪಸಾಗುತ್ತಿತ್ತು. ಬಲೂಚಿಸ್ತಾನದ (Balochistan province) ಖಜ್ದರ್​ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್​ ಪಲ್ಟಿ ಹೊಡೆದಿದೆ. ಬಸ್​ ಅತಿ ವೇಗವಾಗಿ ಚಲಿಸುತ್ತಾ ಇದ್ದುದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಬಸ್​ ಚಾಲಕನ ಅಜಾಗರೂಕತೆ ಮಿತಿ ಮೀರಿತ್ತು. ಅನೇಕ ಬಾರಿ ಎಚ್ಚರಿಸಿದ್ದೆವು. ಆದರೂ ಆತ ಜೋರಾಗಿ ಸಂಗೀತ ಹಾಕಿಕೊಂಡು ಬಸ್​ ಚಲಾಯಿಸುತ್ತಿದ್ದ ಎಂದು ಬದುಕುಳಿದ ಪ್ರಯಾಣಿಕರೊಬ್ಬರು ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಗೆ ತಿಳಿಸಿದ್ದಾರೆ.

ಶುಭ ಶುಕ್ರವಾರದ ಈ ದುರ್ಘಟನೆಗೂ ಮುನ್ನ ಇತ್ತೀಚೆಗೆ ಎರಡು ಎಕ್ಸ್​ಪ್ರೆಸ್​ ಟ್ರೈನ್​ಗಳು ಅಪಘಾತಕ್ಕೆ ತುತ್ತಾಗಿದ್ದವು. ಅದರಲ್ಲಿ 63 ಮಂದಿ ಅಸುನೀಗಿದ್ದರು. ದುರಾದೃಷ್ಟಕರ ಘಟನೆಯಲ್ಲಿ ಮೊನ್ನೆ ಸೋಮವಾರ ಬೆಳಗ್ಗೆ ಪಾಕಿಸ್ತಾನದಲ್ಲಿ ಒಂದು ರೈಲು ಹಳಿ ತಪ್ಪಿ ಎದುರುಗಡೆಯಿಂದ ಬರುತ್ತಿದ್ದ ಎಕ್ಸ್​ಪ್ರೆಸ್ ಟ್ರೈನ್​ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 63 ಮಂದಿ ಮೃತಪಟ್ಟಿದ್ದರು. ಲಾಹೋರ್ ಕಡೆಗೆ ಹೊರಟಿದ್ದ ಸರ್​ ಸಯ್ಯದ್ ಎಕ್ಸ್​ಪ್ರೆಸ್ ಟ್ರೈನ್ (Sir Syed Express), ಮಿಲಾತ್​ ಎಕ್ಸ್​ಪ್ರೆಸ್ ಟ್ರೈನ್ ನಡುವೆ ಈ ಅಪಘಾತವಾಗಿತ್ತು. ಘೋಟ್ಕಿ (Ghotki) ಸಮೀಪ ರೇತಿ ಮತ್ತು ದಹಾರ್ಕಿ ರೈಲ್ವೆ ನಿಲ್ದಾಣಗಳ ಮಧ್ಯೆ ಈ ಅಪಘಾತವಾಗಿತ್ತು. ಮಿಲಾತ್​ ಎಕ್ಸ್​ಪ್ರೆಸ್ (Millat Express) ಟ್ರೈನ್ ಕರಾಚಿಯಿಂದ ಸರಗೋಢಾ ಕಡೆಗೆ ತೆರಳುತ್ತಿತ್ತು. ಇನ್ನೂ 50 ಮಂದಿಗೆ ಗಾಯಗಳಾಗಿವೆ.

ಕಳಪೆ ಗುಣಮಟ್ಟದ ರಸ್ತೆಗಳು, ಸಂಚಾರಿ ನಿಯಮಗಳನ್ನು ಪಾಲಿಸದಿರುವುದು ಮತ್ತು ವಾಹನಗಳನ್ನು ಸಕಾಲಕ್ಕೆ ದುರಸ್ತಿಗೊಳಿಸದಿರುವುದು ಪಾಕಿಸ್ತಾನದಲ್ಲಿ ಮಾರಕ ಅಪಘಾತಗಳಿಗೆ ಕಾರಣವಾಗಿದೆ ಎನ್ನಲಾಗಿದೆ.

(Bus accident at sindh province in Balochistan province 20 pilgrims returning from Sufi saint shrine died)

Pakistan train accident: ಪಾಕಿಸ್ತಾನದಲ್ಲಿ ರೈಲುಗಳ ಡಿಕ್ಕಿ, ದುರಾದೃಷ್ಟಕರ ಘಟನೆಯಲ್ಲಿ ಕನಿಷ್ಠ 30 ಮಂದಿ ಸಾವು- ಚಿತ್ರಗಳಿವೆ

Published On - 4:06 pm, Fri, 11 June 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ