Sign In

By signing in or creating an account, you agree with Associated Broadcasting Company's Terms & Conditions and Privacy Policy.

Pakistan train accident: ಪಾಕಿಸ್ತಾನದಲ್ಲಿ ರೈಲುಗಳ ಡಿಕ್ಕಿ, ದುರಾದೃಷ್ಟಕರ ಘಟನೆಯಲ್ಲಿ ಕನಿಷ್ಠ 30 ಮಂದಿ ಸಾವು- ಚಿತ್ರಗಳಿವೆ

ಸರ್​ ಸಯ್ಯದ್ ಎಕ್ಸ್​ಪ್ರೆಸ್ ಟ್ರೈನ್ (Sir Syed Express), ಮಿಲಾತ್​ ಎಕ್ಸ್​ಪ್ರೆಸ್ ಟ್ರೈನ್ ನಡುವೆ ಅಪಘಾತವಾಗಿದೆ. ಮಿಲಾತ್​ ಎಕ್ಸ್​ಪ್ರೆಸ್ ಟ್ರೈನಿನ 13 ಬೋಗಿಗಳು ಹಳಿ ತಪ್ಪಿದ್ದು, 8 ಬೋಗಿಗಳು ನಜ್ಜುಗುಜ್ಜಾಗಿವೆ. ಅಪಘಾತಕ್ಕೆ ತುತ್ತಾದ ಟ್ರೈನ್​ಗಳ ಅವಶೇಷಗಳಲ್ಲಿ ಹತ್ತಾರು ಮಂದಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯ ಕಷ್ಟಸಾಧ್ಯವಾಗಿದೆ ಎಂದು ಸ್ಥಳಕ್ಕೆ ದೌಡಾಯಿಸಿದ ಉನ್ನತಾಧಿಕಾರಿಗಳು ಹೇಳಿದ್ದಾರೆ.

Pakistan train accident: ಪಾಕಿಸ್ತಾನದಲ್ಲಿ ರೈಲುಗಳ ಡಿಕ್ಕಿ,  ದುರಾದೃಷ್ಟಕರ ಘಟನೆಯಲ್ಲಿ ಕನಿಷ್ಠ 30 ಮಂದಿ ಸಾವು- ಚಿತ್ರಗಳಿವೆ
Pakistan train accident: ಪಾಕಿಸ್ತಾನದಲ್ಲಿ ರೈಲುಗಳ ಡಿಕ್ಕಿ, ದುರಾದೃಷ್ಟಕರ ಘಟನೆಯಲ್ಲಿ ಕನಿಷ್ಠ 30 ಮಂದಿ ಸಾವು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 07, 2021 | 10:14 AM

ಲಾಹೋರ್: ದುರಾದೃಷ್ಟಕರ ಘಟನೆಯಲ್ಲಿ ಇಂದು ಬೆಳಗ್ಗೆ ಪಾಕಿಸ್ತಾನದಲ್ಲಿ ರೈಲು ಹಳಿ ತಪ್ಪಿ ಎದುರುಗಡೆಯಿಂದ ಬರುತ್ತಿದ್ದ ಎಕ್ಸ್​ಪ್ರೆಸ್ ಟ್ರೈನ್​ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ. ಲಾಹೋರ್ ಕಡೆಗೆ ಹೊರಟಿದ್ದ ಸರ್​ ಸಯ್ಯದ್ ಎಕ್ಸ್​ಪ್ರೆಸ್ ಟ್ರೈನ್ (Sir Syed Express), ಮಿಲಾತ್​ ಎಕ್ಸ್​ಪ್ರೆಸ್ ಟ್ರೈನ್ ನಡುವೆ ಈ ಅಪಘಾತವಾಗಿದೆ. ಘೋಟ್ಕಿ (Ghotki) ಸಮೀಪ ರೇತಿ ಮತ್ತು ದಹಾರ್ಕಿ ರೈಲ್ವೆ ನಿಲ್ದಾಣಗಳ ಮಧ್ಯೆ ಈ ಅಪಘಾತ ಸಂಭವಿಸಿದೆ. ಮಿಲಾತ್​ ಎಕ್ಸ್​ಪ್ರೆಸ್ (Millat Express) ಟ್ರೈನ್ ಕರಾಚಿಯಿಂದ ಸರಗೋಢಾ ಕಡೆಗೆ ತೆರಳುತ್ತಿತ್ತು. ಇನ್ನೂ 50 ಮಂದಿಗೆ ಗಾಯಗಳಾಗಿವೆ.

ಮಿಲಾತ್​ ಎಕ್ಸ್​ಪ್ರೆಸ್ ಟ್ರೈನಿನ 13 ಬೋಗಿಗಳು ಹಳಿ ತಪ್ಪಿದ್ದು, 8 ಬೋಗಿಗಳು ನಜ್ಜುಗುಜ್ಜಾಗಿವೆ. ಅಪಘಾತಕ್ಕೆ ತುತ್ತಾದ ಟ್ರೈನ್​ಗಳ ಅವಶೇಷಗಳಲ್ಲಿ ಹತ್ತಾರು ಮಂದಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯ ಕಷ್ಟಸಾಧ್ಯವಾಗಿದೆ ಎಂದು ಸ್ಥಳಕ್ಕೆ ದೌಡಾಯಿಸಿದ ಉನ್ನತಾಧಿಕಾರಿಗಳು ಹೇಳಿದ್ದಾರೆ. ಪಾಕಿಸ್ತಾನ್​ ರೇಂಜರ್ಸ್​ ಸಿಂಧ್​ಗೆ ಸೇರಿದ ಭದ್ರತಾ ಪಡೆಗಳು (Pakistan Rangers Sindh) ಸ್ಥಳಕ್ಕೆ ತೆರಳಿದ್ದು, ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.

Pakistan train accident derailed Millat Express train collide with Sir Syed Express at Ghotki near Lahore in Pakistan 30 passengers killed 2

ಪಾಕಿಸ್ತಾನದಲ್ಲಿ ರೈಲುಗಳ ಡಿಕ್ಕಿ,ಅಪಘಾತಕ್ಕೆ ತುತ್ತಾದ ಟ್ರೈನ್​ಗಳ ಅವಶೇಷಗಳಲ್ಲಿ ಹತ್ತಾರು ಮಂದಿ ಸಿಲುಕಿಕೊಂಡಿದ್ದಾರೆ

(Pakistan train accident: derailed Millat Express train collide with Sir Syed Express at Ghotki near Lahore in Pakistan 30 passengers killed)

Published On - 9:16 am, Mon, 7 June 21