Mukul Roy ಬಿಜೆಪಿಯಿಂದ ಟಿಎಂಸಿಗೆ ಮರಳಲಿದ್ದಾರೆಯೇ ಮುಕುಲ್ ರಾಯ್; ಸುಳಿವು ನೀಡಿದ ಟಿಎಂಸಿ ಸಂಸದ
West Bengal Politics: ಮುಕುಲ್ ರಾಯ್ ಈ ವಿಚಾರದ ಬಗ್ಗೆ ಏನೂ ಮಾತನಾಡದೆ ಕುತೂಹಲ ಹುಟ್ಟಿಸುವಂತೆ ಮಾಡಿದರೆ ಇತ್ತ ಬಿಜೆಪಿ ಮತ್ತು ಟಿಎಂಸಿ ಮೌನವಹಿಸಿವೆ. ಅಂದ ಹಾಗೆ ಬುಧವಾರ ಸಂಜೆ ಟಿಎಂಸಿ ಸಂಸದ ಸೌಗತ ರಾಯ್ ಅವರು ಸುಳಿವೊಂದನ್ನು ನೀಡಿದ್ದಾರೆ.
ದೆಹಲಿ: ಬಿಜೆಪಿಯಿಂದ ಮುಕುಲ್ ರಾಯ್ ಮತ್ತೆ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮರಳಲಿದ್ದಾರೆಯೇ ಎಂಬುದು ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಈಗ ದೊಡ್ಡ ಪ್ರಶ್ನೆಯಾಗಿದೆ. ಕೊಲ್ಕತ್ತಾದಲ್ಲಿ ನಡೆದ ಬಿಜೆಪಿ ಸಭೆಗೆ ಗೈರು ಹಾಜರಾಗಿರುವುದು ಕೂಡಾ ಮುಕುಲ್ ವಾಪಸ್ ಟಿಎಂಸಿಗೆ ಬರಲಿದ್ದಾರೆ ಎಂಬ ಊಹೆಗೆ ಪುಷ್ಠಿ ನೀಡುತ್ತಿದೆ. ಮುಕುಲ್ ರಾಯ್ ಈ ವಿಚಾರದ ಬಗ್ಗೆ ಏನೂ ಮಾತನಾಡದೆ ಕುತೂಹಲ ಹುಟ್ಟಿಸುವಂತೆ ಮಾಡಿದರೆ ಇತ್ತ ಬಿಜೆಪಿ ಮತ್ತು ಟಿಎಂಸಿ ಮೌನವಹಿಸಿವೆ. ಅಂದ ಹಾಗೆ ಬುಧವಾರ ಸಂಜೆ ಟಿಎಂಸಿ ಸಂಸದ ಸೌಗತ ರಾಯ್ ಅವರು ಸುಳಿವೊಂದನ್ನು ನೀಡಿದ್ದಾರೆ.
“ಅನೇಕ ಜನರು ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಮರಳಿ ಬರಲು ಬಯಸುತ್ತಾರೆ. ಅಗತ್ಯವಿರುವ ಸಮಯದಲ್ಲಿ ಅವರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಸೌಗತ ರಾಯ್ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. “ಅಂತಿಮ ನಿರ್ಧಾರವನ್ನು ಮಮತಾ ದೀದಿ ತೆಗೆದುಕೊಳ್ಳುತ್ತಾರೆ. ಆದರೆ ಒಂದು ಪಕ್ಷವನ್ನು ತೊರೆದು ಇನ್ನೊಂದು ಪಕ್ಷಕ್ಕೆ ಸೇರಿರುವರನ್ನು ಸಾಫ್ಟ್‌ಲೈನರ್‌ಗಳು ಮತ್ತು ಹಾರ್ಡ್‌ಲೈನರ್‌ಗಳು ಎಂದು ಎರಡು ಭಾಗಗಳಾಗಿ ವಿಂಗಡಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ರಾಯ್.
ಸಾಫ್ಟ್‌ಲೈನರ್‌ಗಳು ಪಕ್ಷವನ್ನು ತೊರೆದವರು ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಅವಮಾನಿಸದವರು. ಹಾರ್ಡ್‌ಲೈನರ್‌ಗಳು ಮಮತಾ ಅವರನ್ನು ಸಾರ್ವಜನಿಕವಾಗಿ ಅವಮಾನಿಸಿದರು ಎಂದು ಎಂದು ರಾಯ್ ವಿವರಿಸಿದರು|
ಪಕ್ಷಾಂತರದ ನಂತರ ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿ ವಿರುದ್ಧ ಕೆಟ್ಟದಾಗಿ ಮಾತನಾಡಿದರೆ , ಮುಕುಲ್ ರಾಯ್ ಅವರು ಮುಖ್ಯಮಂತ್ರಿಯನ್ನು ಬಹಿರಂಗವಾಗಿ ನಿಂದಿಸಲಿಲ್ಲ ಎಂದು ರಾಯ್ ಹೇಳಿದ್ದಾರೆ. ರಾಯ್ ಅವರ ಈ ಹೇಳಿಕೆಯು ಮುಕುಲ್ ರಾಯ್ ಮತ್ತೆ ವಾಪಸ್ ಟಿಎಂಸಿಗೆ ಬರಲಿದ್ದಾರೆ ಎಂಬ ಸೂಚನೆಗೆ ಮತ್ತಷ್ಟು ಬಲ ನೀಡಿದೆ.
ಮಮತಾ ಬ್ಯಾನರ್ಜಿಯವರ ಆಪ್ತ ಸಹಾಯಕರಾಗಿದ್ದ ರಾಯ್ ಅವರು 2017 ರಲ್ಲಿ ಬಿಜೆಪಿ ಪಕ್ಷಕ್ಕೆ ಹಾರಿದ ಮೊದಲ ದೊಡ್ಡ ನಾಯಕರಾಗಿದ್ದರು. ಮುಂದಿನ ವರ್ಷಗಳಲ್ಲಿ, ತೃಣಮೂಲ ಶಾಸಕರು ಮತ್ತು ನಾಯಕರ ಗುಂಪನ್ನು ನಿಷ್ಠೆಯನ್ನು ಬದಲಾಯಿಸಲು ಮನವೊಲಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಈಗ ತೃಣಮೂಲ ಕಾಂಗ್ರೆಸ್ ಮೂಲಗಳ ಪ್ರಕಾರ ಈ ನಾಯಕರಲ್ಲಿ ಅನೇಕರು ಸುಮಾರು 35 ಮಂದಿ ಟಿಎಂಸಿಗೆ ಮರಳಲು ಆಶಿಸುತ್ತಿದ್ದಾರೆ.
ಮಮತಾ ಬ್ಯಾನರ್ಜಿಯ ಸೋದರಳಿಯ ಮತ್ತು ಅವರ ಪಕ್ಷದ ಪ್ರಮುಖ ಮುಖಂಡ ಅಭಿಷೇಕ್ ಬ್ಯಾನರ್ಜಿ ರಾಯ್ ಅವರ ಪತ್ನಿ ದಾಖಲಾಗಿದ್ದ ಆಸ್ಪತ್ರೆಯಲ್ಲಿ ರಾಯ್ ಅವರನ್ನು ಭೇಟಿ ಮಾಡಿದಾಗಿನಿಂದ ಮುಕುಲ್ ರಾಯ್ ವಾಪಸ್ ಬರುವ ಬಗ್ಗೆ ಊಹಾಪೋಹಗಳು ಪ್ರಾರಂಭವಾದವು. ಮರುದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ರಾಯ್ ಅವರಿಗೆ ಕರೆ ಮಾಡಿ ಅವರೊಂದಿಗೆ ಸಂಭಾಷಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ರಾಯ್ ಅವರ ಹೆಂಡತಿ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸಿ ಮೋದಿ ಈ ಕರೆ ಮಾಡಿದ್ದರು ಎಂದು ಬಿಜೆಪಿ ನಾಯಕರು ಸಮರ್ಥಿಸಿಕೊಂಡರೆ, ತೃಣಮೂಲ ಕಾಂಗ್ರೆಸ್‌ನಲ್ಲಿ ಅನೇಕರು ತಮ್ಮ ತಂಡವನ್ನು ಒಟ್ಟಿಗೆ ಇರಿಸಿಕೊಳ್ಳುವ ಬಗ್ಗೆ ಬಿಜೆಪಿಗೆ ಆತಂಕವುಂಟಾಗಿದೆ ಎಂದು ಹೇಳಿದ್ದಾರೆ.
ತಡವಾಗಿ, ಬಿಜೆಪಿಯ ಅನೇಕ ಹಿರಿಯ ನಾಯಕರನ್ನು ನವದೆಹಲಿಗೆ ಕರೆಸಿಕೊಳ್ಳಲಾಗಿದೆ. ಈ ಪಟ್ಟಿಯಲ್ಲಿ ಬಂಗಾಳದ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿಯೂ ಸೇರಿದ್ದಾರೆ. ಮಂಗಳವಾರ ಸುವೇಂದು ಅಧಿಕಾರಿಯು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾದರು. ಅದರ ನಂತರ ಪ್ರಧಾನಿ ಮೋದಿ ಅವರೊಂದಿಗೆ ಸಭೆ ನಡೆಸಲಾಯಿತು. ಪ್ರತಿ ಸಭೆಯ ನಂತರ ಸುವೇಂದುಅಧಿಕಾರಿಯು ಬಂಗಾಳದಲ್ಲಿ ನಡೆದ ಮತದಾನದ ನಂತರದ ಹಿಂಸಾಚಾರಕ್ಕೆ ಸಂಬಂಧಿಸಿದ ಮಾತುಕತೆ ಅದಾಗಿತ್ತು ಎಂದು ಹೇಳಿದ್ದಾರೆ.
ಬಿಜೆಪಿಯ ಅವಲೋಕ ಸಭೆಯಲ್ಲಿ ರಾಯ್ ಅವರ ಅನುಪಸ್ಥಿತಿಯು ಅವರ ಮತ್ತು ಸುವೇಂದು ಅಧಿಕಾರಿಯ ನಡುವಿನ ಬಿರುಕಿನ ಊಹಾಪೋಹಗಳಿಗೆ ಕಾರಣವಾಗಿದೆ. ಸುವೇಂದು ಅಧಿಕಾರಿ ಮಾತ್ರವೇ ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆಯಿದೆ ಎಂಬುದು ಈಗ ಹೆಚ್ಚು ಸ್ಪಷ್ಟವಾಗಿದೆ.
ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧದ ಚುನಾವಣಾ ಗೆಲುವು ಸುವೇಂದು ಅಧಿಕಾರಿಗೆ ಪಕ್ಷದಲ್ಲಿ ಪ್ರಾಮುಖ್ಯತೆಯನ್ನು ತಂದುಕೊಟ್ಟಿದೆ. ಪ್ರತಿಪಕ್ಷದ ನಾಯಕನ ಸ್ಥಾನವೂ ಸುವೇಂದು ಅವರಿಗೆ ಲಭಿಸಿದ್ದು ಚಂಡಮಾರುತದ ನಂತರ ಪ್ರಧಾನಮಂತ್ರಿಯ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲು ಅವರನ್ನು ಆಯ್ಕೆ ಮಾಡಲಾಯಿತು.
ಇದನ್ನೂ ಓದಿ: West bengal: ಟಿಎಂಸಿ ವಿರುದ್ಧ ಟೀಕಾ ಪ್ರಹಾರದ ನಡುವೆಯೇ ಪಶ್ಚಿಮ ಬಂಗಾಳದ ಬಿಜೆಪಿಯಲ್ಲಿ ಭಿನ್ನಮತ?
(On BJP’s Mukul Roy return to the TMC Hint From Trinamool MP Saugata Roy )
Published On - 12:27 pm, Thu, 10 June 21