EPF Interest Rate: ಇಪಿಎಫ್ ಚಂದಾದಾರರ ಖಾತೆಗೆ ಜುಲೈ ಕೊನೆ ಹೊತ್ತಿಗೆ ಬಡ್ಡಿ ಜಮೆ; ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೀಗೆ
2020- 21ನೇ ಸಾಲಿನ ಪಿಎಫ್ ಬಡ್ಡಿ ದರವಾದ ಶೇ 8.5ರಷ್ಟನ್ನು ಚಂದಾದಾರರ ಖಾತೆಗಳಿಗೆ ಜುಲೈ ತಿಂಗಳ ಕೊನೆ ಹೊತ್ತಿಗೆ ಇಪಿಎಫ್ಒದಿಂದ ಜಮೆ ಮಾಡುವ ಸಾಧ್ಯತೆ ಇದೆ.
2020-21ನೇ ಸಾಲಿನ ಹಣಕಾಸು ವರ್ಷದ ಕಾರ್ಮಿಕರ ಭವಿಷ್ಯ ನಿಧಿ (EPF) ಬಡ್ಡಿ ದರವನ್ನು ಜುಲೈ ತಿಂಗಳ ಕೊನೆ ಹೊತ್ತಿಗೆ ಖಾತೆದಾರರ ಖಾತೆಗಳಿಗೆ ಜಮೆ ಮಾಡುವ ಸಾಧ್ಯತೆ ಇದೆ. ಶೇ 8.5ರಷ್ಟು ಬಡ್ಡಿಯನ್ನು ಆರು ಕೋಟಿ ಚಂದಾದಾರರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ಇಪಿಎಫ್ಒದಿಂದ ಪ್ರಮುಖ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡದೆ ಶೇ 8.5 ಹಾಗೇ ಉಳಿಸಲಾಗಿತ್ತು. ಅಂದಹಾಗೆ ಈ ವರ್ಷದ ಹಣಕಾಸು ವರ್ಷದಲ್ಲಿ ಠೇವಣಿಗಿಂತ ಹೆಚ್ಚಾಗಿ ವಿಥ್ ಡ್ರಾ ಮಾಡಲಾಗಿದೆ. ಅಂದ ಹಾಗೆ ಪಿಎಫ್ ಚಂದಾದಾರರು ತಮ್ಮ ಖಾತೆಯ ಬಾಕಿಯನ್ನು ಪರಿಶೀಲನೆ ಮಾಡಲು ನಾಲ್ಕು ವಿಧಾನಗಳಿವೆ. ಅವುಗಳು ಈ ಕೆಳಕಂಡಂತಿವೆ:
1.ಎಸ್ಸೆಮ್ಮೆಸ್ ಮೆಸೇಜ್ನಲ್ಲಿ EPFOHO UAN ENG ಟೈಪ್ ಮಾಡಿ ಮತ್ತು 7738299899 ಈ ಸಂಖ್ಯೆಗೆ ಕಳುಹಿಸಿ. ಎಸ್ಸೆಮ್ಮೆಸ್ ತಲುಪಿದ ಮೇಲೆ ಇಪಿಎಫ್ಒದಿಂದ ಸಂದೇಶ ಕಳುಹಿಸಿದವರು ಪಿಎಫ್ ಬ್ಯಾಂಕ್ ಖಾತೆಯ ಮಾಹಿತಿ ಬರುತ್ತದೆ.
2. UMANG ಆ್ಯಪ್ ಯೂನಿಫೈಡ್ ಮೊಬೈಲ್ ಅಪ್ಲಿಕೇಷನ್ ಫಾರ್ ನ್ಯೂ ಏಜ್ ಗವರ್ನೆನ್ಸ್ (UMANG) ಆ್ಯಪ್ ತೆರೆದು, ಅದರಲ್ಲಿ ಇಪಿಎಫ್ಒ ಎಂಬುದರ ಮೇಲೆ ಕ್ಲಿಕ್ ಮಾಡಿ. ಆ ನಂತರ “Employee Centric Services” ಮೇಲೆ ಕ್ಲಿಕ್ ಮಾಡಿ. ಅದಾದ ಮೇಲೆ View Passbook ಆಯ್ಕೆ ಬರುತ್ತದೆ. ಯುಎಎಸ್ ಸಂಖ್ಯೆಯನ್ನು ನಮೂದಿಸಿದಲ್ಲಿ ಒನ್ ಟೈಮ್ ಪಾಸ್ವರ್ಡ್ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುತ್ತದೆ. ಅಂತಿಮವಾಗಿ ಇಪಿಎಫ್ ಬಾಕಿ ಪರಿಶೀಲನೆ ಮಾಡಬಹುದು.
3. ಮಿಸ್ಡ್ ಕಾಲ್ ಇದಕ್ಕಾಗಿ ಮೊದಲಿಗೆ ಯುಎಎನ್ ಸಂಖ್ಯೆ ಜತೆಗೆ ಕೆವೈಸಿ ಮಾಹಿತಿ ಅಪ್ಡೇಟ್ ಆಗಿರಬೇಕು. ಆ ನಂತರ 011-22901406 ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬೇಕು. ಆ ನಂತರ ಅಗತ್ಯ ಮಾಹಿತಿಯು ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುತ್ತದೆ.
4. ಆನ್ಲೈನ್ epfindia.gov.in ಈ ವೆಬ್ಸೈಟ್ಗೆ ತೆರಳಬೇಕು. ಅಲ್ಲಿ e- passbook ಕ್ಲಿಕ್ ಮಾಡಬೇಕು. ಯುಎಎನ್, ಪಾಸ್ವರ್ಡ್ ಮತ್ತು Captcha code ನಮೂದಿಸಬೇಕು. ಆ ನಂತರ ಹೊಸ ಪುಟಕ್ಕೆ ಹೋಗುತ್ತದೆ. ಅಲ್ಲಿ ಸದಸ್ಯ ಸಂಖ್ಯೆಯನ್ನು ನಮೂದಿಸಬೇಕು. submit ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಆ ನಂತರ ಪಿಎಫ್ ಬಾಕಿ ಸ್ಕ್ರೀನ್ ಮೇಲೆ ಕಾಣಿಸುತ್ತದೆ.
2020ರ ಮಾರ್ಚ್ ತಿಂಗಳಲ್ಲಿ 2019-20ನೇ ಸಾಲಿನ ಬಡ್ಡಿ ದರವನ್ನು ಶೇ 8.5ಕ್ಕೆ ಇಳಿಸಲಾಯಿತು. ಕೊರೊನಾ ಕಾರಣದಿಂದ ಆ ನಿರ್ಧಾರಕ್ಕೆ ಬರಲಾಯಿತು. ಅದಕ್ಕೂ ಮುಂಚೆ 2018-19ರಲ್ಲಿ ಶೇ 8.65 ಹಾಗೂ 2017-18ರಲ್ಲಿ ಶೇ 8.55ರಷ್ಟು ಬಡ್ಡಿ ದರ ಇತ್ತು.
ಇದನ್ನೂ ಓದಿ: EPF Online Transfer: ಇಪಿಎಫ್ ಖಾತೆಯ ಆನ್ಲೈನ್ ವರ್ಗಾವಣೆ ಹೇಗೆ? ಇಲ್ಲಿದೆ ವಿವರ
(EPF Interest Likely To Credit PF Subscribers Account By July End Know How To Check PF Balance)