NPA: ನಾನ್ ಪರ್ಫಾರ್ಮಿಂಗ್ ಅಸೆಟ್ಸ್ ಮಾರ್ಚ್ 31, 2021ರ ಕೊನೆಗೆ 8.34 ಲಕ್ಷ ಕೋಟಿ ರೂಪಾಯಿಗೆ ಇಳಿಕೆ

ಮಾರ್ಚ್ 31, 2021ಕ್ಕೆ ಕೊನೆಗೆ ಬ್ಯಾಂಕ್​ಗಳ ಬ್ಯಾಡ್​ ಲೋನ್ 61.

NPA: ನಾನ್ ಪರ್ಫಾರ್ಮಿಂಗ್ ಅಸೆಟ್ಸ್ ಮಾರ್ಚ್ 31, 2021ರ ಕೊನೆಗೆ 8.34 ಲಕ್ಷ ಕೋಟಿ ರೂಪಾಯಿಗೆ ಇಳಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jul 26, 2021 | 6:22 PM

ಬ್ಯಾಂಕ್​ಗಳ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ (NPA- ಅನುತ್ಪಾದಕ ಆಸ್ತಿ) ಅಥವಾ ಬ್ಯಾಡ್ ಲೋನ್​ಗಳು 2021 ಮಾರ್ಚ್ 31ಕ್ಕೆ 61,180 ಕೋಟಿ ರೂಪಾಯಿ ಇಳಿಕೆಯಾಗಿ, 8.34 ಲಕ್ಷ ಕೋಟಿ ರೂಪಾಯಿ ಮುಟ್ಟಿದೆ. ಸರ್ಕಾರವು ವಿವಿಧ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಭಗವತ್ ಕೆ. ಕರಡ್ ಸೋಮವಾರ ಹೇಳಿದ್ದಾರೆ. ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್​ಗಳ (SCB) ಎನ್​ಪಿಎ ಪ್ರಮಾಣವು 2020ರ ಮಾರ್ಚ್ ಕೊನೆ ಹೊತ್ತಿಗೆ 8.96 ಲಕ್ಷ ಕೋಟಿ ರೂಪಾಯಿ ಇತ್ತು. “ಒತ್ತಡದ ಆಸ್ತಿಗಳನ್ನು ಎನ್​ಪಿಎಗಳಾಗಿ ಪಾರದರ್ಶಕತೆಯಿಂದ ಗುರುತಿಸಿದ ಪರಿಣಾಮವಾಗಿ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್​ಗಳ ಸಗಟು ಎನ್​ಪಿಎ ಮಾರ್ಚ್​ 31, 2015ರಲ್ಲಿ 3,23,464 ಕೋಟಿ ರೂಪಾಯಿ ಇದ್ದದ್ದು 2018ರ ಮಾರ್ಚ್​ನಲ್ಲಿ 10,36,187 ಕೋಟಿ ರೂಪಾಯಿ ತಲುಪಿತ್ತು. ಸರ್ಕಾರದ ಗುರುತಿಸುವಿಕೆ, ತೀರುವಳಿ, ಮರು ಬಂಡವಾಳ ಹಾಗೂ ಸುಧಾರಣೆ ಪರಿಣಾಮವಾಗಿ 2019ರ ಮಾರ್ಚ್​ ಕೊನೆ ಹೊತ್ತಿಗೆ 9,33,779 ಕೋಟಿ ರೂ. ಆಗಿತ್ತು. 2020ರ ಮಾರ್ಚ್​ಗೆ 8,96,082 ಕೋಟಿ ರೂ. ಹಾಗೂ ಮಾರ್ಚ್ 31, 2021ಕ್ಕೆ (ಪ್ರಾವಿಷನಲ್ ಮಾಹಿತಿ) 8,34,902 ಕೋಟಿ ರೂ. ಆಗಿದೆ,” ಎಂದು ಅವರು ಹೇಳಿದ್ದಾರೆ.

ಲೋಕಸಭೆಗೆ ಲಿಖಿತ ಉತ್ತರ ನೀಡಿದ ಅವರು, ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾ ಘೋಷಣೆ ಮಾಡಿದ ಕೊವಿಡ್- 19 ರೆಗ್ಯುಲೇಟರಿ ಪ್ಯಾಕೇಜ್​ನಿಂದಾಗಿ ಹಣಕಾಸು ಸಂಸ್ಥೆಗಳು 6 ತಿಂಗಳ ಕಾಲ ಇಎಂಐ ಪಾವತಿಯಿಂದ ವಿನಾಯಿತಿ ನೀಡಿದವು. 2020ರ ಮಾರ್ಚ್​ 1ರಿಂದ ಆಗಸ್ಟ್ 31ರ ತನಕ ಇದು ಜಾರಿಯಲ್ಲಿತ್ತು. ಎಲ್ಲ ಟರ್ಮ್ ಲೋನ್​ಗಳಿಗೂ ಮತ್ತು ವರ್ಕಿಂಗ್​ ಕ್ಯಾಪಿಟಲ್​ಗಾಗಿ ಬಡ್ಡಿ ವಸೂಲಾತಿಯ ಮೇಲೂ ಅನ್ವಯ ಆಗುವಂತೆ ಅನುಕೂಲ ಮಾಡಿಕೊಡಲಾಯಿತು ಎಂದಿದ್ದಾರೆ. ಅಂದ ಹಾಗೆ ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದ ಅವರು, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳ ಎನ್​ಪಿಎ ಮಾರ್ಚ್​ 31, 2018ಕ್ಕೆ 8,95,601 ಕೋಟಿ ರೂಪಾಯಿಗೆ ತಲುಪಿ, ಗರಿಷ್ಠ ಮಟ್ಟ ಮುಟ್ಟಿದವು ಎಂದಿದ್ದಾರೆ.

2015-16ರಲ್ಲಿ 1,37,151 ಕೋಟಿ ರೂಪಾಯಿ, 2016-17ರಲ್ಲಿ 1,58,994 ಕೋಟಿ ರೂಪಾಯಿ, 2017-18ರಲ್ಲಿ 1,55,603 ಕೋಟಿ ರೂಪಾಯಿ, 2018-19ರಲ್ಲಿ 1,49,819 ಕೋಟಿ ರೂಪಾಯಿ ಹಾಗೂ 2019-20ರಲ್ಲಿ 1,74,640 ಕೋಟಿ ರೂಪಾಯಿಯನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳು ಆಪರೇಟಿಂಗ್ ಪ್ರಾಫಿಟ್ (ಕಾರ್ಯನಿರ್ವಹಣೆ ಲಾಭ) ಪಡೆದಿವೆ. ಇದೇ ವೇಳೆ ಎನ್​ಪಿಎ ನಿಯಂತ್ರಣ ಹಾಗೂ ವಸೂಲಿಗೆ ಬೇಕಾದ ಸಮಗ್ರ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ. ಆದ್ದರಿಂದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳು 5,01,479 ಕೋಟಿ ರೂಪಾಯಿಗಳನ್ನು ಕಳೆದ ಆರು ಹಣಕಾಸು ವರ್ಷದಲ್ಲಿ ವಸೂಲಿ ಮಾಡಲು ಸಾಧ್ಯವಾಯಿತು ಎನ್ನಲಾಗಿದೆ.

ಸಗಟು ಸಾಲ ಮತ್ತು ಮುಂಗಡಗಳು ಅಂತ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್​ಗಳಿಗೆ ಮಾರ್ಚ್​ 31, 2020ರಲ್ಲಿ ಇದ್ದದ್ದು 109.19 ಲಕ್ಷ ಕೋಟಿ ರೂಪಾಯಿಯಿಂದ 2021ರ ಮಾರ್ಚ್ 31ರ ಹೊತ್ತಿಗೆ 113.99 ಲಕ್ಷ ಕೋಟಿ ರೂಪಾಯಿ ಆಯಿತು ಎಂದು ಹೇಳಿದ್ದಾರೆ. ಇನ್ನೂ ಮುಂದುವರಿದು ಹೇಳಿದಂತೆ, ಆರ್​ಬಿಐ ದತ್ತಾಂಶದ ಪ್ರಕಾರ, ಎಂಎಸ್​ಎಂಇ, ಹೌಸಿಂಗ್ ಮತ್ತು ವಾಹನಗಳು ವರ್ಷದಿಂದ ವರ್ಷಕ್ಕೆ ಶೇ 12.3, ಶೇ 8.5, ಶೇ 9.1 ಮತ್ತು ಶೇ 9.5 ಕ್ರಮವಾಗಿ ಏರಿಕೆ ಆಗಿವೆ.

ಇದನ್ನೂ ಓದಿ: Bad loans: 2021-22ರ ಹಣಕಾಸು ವರ್ಷದಲ್ಲಿ ಶೇ 13ರಿಂದ 15ಕ್ಕೆ ಏರಬಹುದು ಬ್ಯಾಡ್​ ಲೋನ್ ಅಂತಿದ್ದಾರೆ ವಿಶ್ಲೇಷಕರು

(NPA For March 31st 2021 Reduced More Than Rs 61100 Crores According To RBI Data )

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?