ದಡ್ಡತನದಿಂದ ಅಪರೂಪದ ಅವಕಾಶ ಕಳೆದುಕೊಂಡ ರಾಶಿಕಾ ಶೆಟ್ಟಿ
ರಾಶಿಕಾ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಅಹಂನಿಂದ ದೊಡ್ಡ ಅವಕಾಶ ಕಳೆದುಕೊಂಡಿದ್ದಾರೆ. ಟಾಸ್ಕ್ ಗೆದ್ದು ನಾಮಿನೇಷನ್ನಿಂದ ಬಚಾವ್ ಆಗುವ ಸುವರ್ಣಾವಕಾಶ ಸಿಕ್ಕಿತ್ತು. ಆದರೆ, ತಂಡದ ಸರ್ವಾನುಮತದ ನಿರ್ಧಾರಕ್ಕೆ ಒಪ್ಪದೆ, ಸ್ಪಂದನಾ ಅವರನ್ನು ನಾಮಿನೇಟ್ ಮಾಡಲು ಹಠ ಹಿಡಿದರು. ಇದರಿಂದ ಆ ಅವಕಾಶ ಕೈತಪ್ಪಿತು.

ಬಿಗ್ ಬಾಸ್ (Bigg Boss) ಮನೆಯಲ್ಲಿ ಅವಕಾಶದ ಬಾಗಿಲು ತೆರೆದಾಗ ಅದನ್ನು ಸ್ವೀಕರಿಸಬೇಕು. ಅದನ್ನು ಮುಚ್ಚಿಬಿಟ್ಟರೆ ಅದರಷ್ಟು ಮೂರ್ಖತನ ಮತ್ತೊಂದು ಇರೋದಿಲ್ಲ. ಈಗ ರಾಶಿಕಾ ಶೆಟ್ಟಿ ಅವರು ತಮ್ಮ ದಡ್ಡತನದಿಂದ ದೊಡ್ಡ ಅವಕಾಶ ಕಳೆದುಕೊಂಡಿದ್ದಾರೆ. ಈ ಬಗ್ಗೆ ಬಿಗ್ ಬಾಸ್ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು? ಆ ಬಗ್ಗೆ ಇಲ್ಲಿದೆ ವಿವರ.
ರಾಶಿಕಾ ಶೆಟ್ಟಿ ಅವರು ಈ ವಾರ ಉತ್ತಮವಾಗಿ ಆಟ ಆಡಿದರು. ಅವರ ತಂಡ ಗೆದ್ದಿತು. ಈ ವೇಳೆ ತಮ್ಮನ್ನು ತಾವು ನಾಮಿನೇಷನ್ನಿಂದ ಬಚಾವ್ ಮಾಡಿಕೊಳ್ಳುವ ಪ್ರಯತ್ನದಲ್ಲಿ ಇದ್ದರು. ಆದರೆ, ಇದಕ್ಕೆ ರಕ್ಷಿತಾ ಶೆಟ್ಟಿ ಅವಕಾಶ ಕೊಡಲಿಲ್ಲ. ಅವರು ಹಠ ಬಿದ್ದು, ಸುಧಿಯನ್ನು ಸೇವ್ ಮಾಡಬೇಕು ಎಂದರು. ಅವಕಾಶ ಹಾಳಾಗಬಾರದು ಎಂಬ ಕಾರಣಕ್ಕೆ ಎಲ್ಲರೂ ಒಪ್ಪಿಕೊಂಡರು.
ಆ ಬಳಿಕ ಮತ್ತೊಂದು ಟಾಸ್ಕ್ ಗೆದ್ದಾಗ ರಾಶಿಕಾ ಅವರನ್ನು ನಾಮಿನೇಷನ್ನಿಂದ ಬಚಾವ್ ಮಾಡಬೇಕು ಎಂದು ಎಲ್ಲರೂ ನಿರ್ಧಾರಕ್ಕೆ ಬಂದರು. ಈ ರೀತಿ ಸೇವ್ ಮಾಡಿದಾಗ ಎದುರಾಳಿ ತಂಡದಿಂದ ಒಬ್ಬರನ್ನು ನಾಮಿನೇಟ್ ಮಾಡಬೇಕಿತ್ತು. ಮುಂದೆ ಬರುವ ಆಟದ ದೃಷ್ಟಿಯಿಂದ ಅಭಿಯನ್ನು ನಾಮಿನೇಟ್ ಮಾಡಬೇಕು ಎಂಬುದು ತಂಡದ ನಿರ್ಧಾರ ಆಗಿತ್ತು. ಆದರೆ, ಇದಕ್ಕೆ ರಾಶಿಕಾ ಒಪ್ಪಿಗೆ ಸೂಚಿಸಲೇ ಇಲ್ಲ.
is there any1 more dumb in #BBK12 than #RashikaShetty? Cries over non-selection, quits to prove flagbearer, team wins w/o her. Teammates votes her. Next move: stupid. If elim, i doubt she’ll blame someone. 10/10 on dumbometer. Grok delete the post below pls🤦 https://t.co/zYFZZVXBps
— Prasad (@Prasad_C_) November 13, 2025
Rashika for the whole season – nana yaru save madhala, yake bigg boss yavaglu nange ighe agute. One final day when whole team agreed, she herself ruined her chance. The way rakshitha manipulated her is really superb#RashikaShetty #Gilli #BBK12
— Indian (@desikannadiga1) November 12, 2025
Rashika has to control her anger, she could have been saved today, what difference will it make to her if the choice is b/w abhi and spandana, it’s really a dumb play#rashikashetty#BBKSeason12 #bbk12
— Indian (@desikannadiga1) November 12, 2025
ರಾಶಿಕಾ ಥಿಯರಿಯೇ ಬೇರೆ ಇತ್ತು. ಸ್ಪಂದನಾ ನಾಮಿನೇಟ್ ಆಗಬೇಕು ಎಂದು ಅವರು ಹಠ ಹಿಡಿದರು. ಅವರನ್ನು ನಾಮಿನೇಟ್ ಮಾಡಿ ತಂಡಕ್ಕೆ ಸೇರಿಸಿಕೊಂಡರೆ ಟೀಂ ಬಲ ಕಡಿಮೆ ಆಗುತ್ತದೆ ಎಂಬುದು ಎಲ್ಲರ ಅಭಿಪ್ರಾಯ ಆಗಿತ್ತು. ಆದರೆ, ರಾಶಿಕಾ ಮಾತ್ರ ಹಠ ಬಿಡಲೇ ಇಲ್ಲ. ಕೊನೆಗೆ ಒಮ್ಮತದ ನಿರ್ಧಾರಕ್ಕೆ ಬರಲಾಗದೆ ಸಿಕ್ಕ ದೊಡ್ಡ ಅವಕಾಶವನ್ನು ಕೈಚೆಲ್ಲಿದರು.
ಇದನ್ನೂ ಓದಿ: ಗಿಲ್ಲಿ ಕೈಗೊಂಬೆಯಾದ್ರಾ ರಕ್ಷಿತಾ ಶೆಟ್ಟಿ? ವೀಕೆಂಡ್ನಲ್ಲಿ ಸುದೀಪ್ ಕ್ಲಾಸ್ ಫಿಕ್ಸ್?
ಈ ಬಗ್ಗೆ ಬಿಗ್ ಬಾಸ್ ಅನೌನ್ಸ್ ಮಾಡುವಾಗ ಬೇಸರ ಹೊರಹಾಕಿದರು. ‘ನೀವೆಷ್ಟು ದೊಡ್ಡ ಅವಕಾಶ ಕಳೆದುಕೊಂಡಿದ್ದೀರಿ ಎಂಬ ಪರಿಜ್ಞಾನ ನಿಮಗೆ ಇಲ್ಲ’ ಎಂದು ಬಿಗ್ ಬಾಸ್ ಹೇಳಿದರು. ಇಷ್ಟು ದಿನ ‘ನಾನು ಸೇವ್ ಆಗೋದಿಲ್ಲ, ನನಗೆ ಏಕೆ ಹೀಗಾಗುತ್ತದೆ’ ಎನ್ನುತ್ತಿದ್ದ ರಾಶಿಕಾ ಅವರು ಇಂದು ಈಗೋ ಹಾಗೂ ದಡ್ಡತನದ ಕಾರಣಕ್ಕೆ ಸಿಕ್ಕ ದೊಡ್ಡ ಅವಕಾಶ ಕೈಚೆಲ್ಲಿದಂತೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




