ಅಷ್ಟೆಲ್ಲ ಬೆಂಬಲ ನೀಡಿದ ರಘುವನ್ನೇ ನಾಮಿನೇಟ್ ಮಾಡಿದ ರಕ್ಷಿತಾ ಶೆಟ್ಟಿ
ರಕ್ಷಿತಾ ಶೆಟ್ಟಿ ಜೊತೆ ಸ್ನೇಹ ಮಾಡಿದವರೆಲ್ಲ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಾರೆ ಎಂಬ ಮಾತಿದೆ. ಮಲ್ಲಮ್ಮ, ಚಂದ್ರಪ್ರಭ ಈಗಾಗಲೇ ಔಟ್ ಆಗಿದ್ದಾರೆ. ಮುಂದಿನ ಸರದಿಯಲ್ಲಿ ರಘು ಇದ್ದಾರಾ ಎಂಬ ಪ್ರಶ್ನೆ ಮೂಡಿದೆ. ರಘು ಜೊತೆ ಕ್ಲೋಸ್ ಆಗಿದ್ದ ರಕ್ಷಿತಾ ಶೆಟ್ಟಿ ಅವರೇ ಈಗ ರಘು ಹೆಸರನ್ನು ನಾಮಿನೇಟ್ ಮಾಡಿ ಶಾಕ್ ನೀಡಿದ್ದಾರೆ.

ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳನ್ನು ನೋಡಿ ಇನ್ನುಳಿದವರಿಗೆ ವಿಚಿತ್ರ ಎನಿಸುತ್ತಿದೆ. ಮೊದಲ ದಿನದಿಂದಲೇ ಕೆಲವರ ವಿರೋಧವನ್ನು ರಕ್ಷಿತಾ ಶೆಟ್ಟಿ ಅವರು ಕಟ್ಟಿಕೊಂಡಿದ್ದಾರೆ. ಆದರೆ ರಘು ಅವರು ರಕ್ಷಿತಾಗೆ ಸಾಕಷ್ಟು ಬೆಂಬಲ ನೀಡಿದ್ದರು. ಹಾಗಿದ್ದರೂ ಕೂಡ ನಾಮಿನೇಟ್ ಮಾಡುವಾಗ ರಘು ಹೆಸರನ್ನೇ ರಕ್ಷಿತಾ ಶೆಟ್ಟಿ ತೆಗೆದುಕೊಂಡಿದ್ದಾರೆ! ಇದರಿಂದ ಎಲ್ಲರಿಗೂ ಅಚ್ಚರಿ ಆಗಿದೆ. ಒಂದು ವೇಳೆ ರಘು ಅವರು ಈ ವಾರ ಎಲಿಮಿನೇಟ್ ಆದರೆ ಅದಕ್ಕೆ ರಕ್ಷಿತಾ ಶೆಟ್ಟಿ (Rakshita Shetty) ಅವರೇ ನೇರ ಹೊಣೆ ಆಗಲಿದ್ದಾರೆ.
ಬಿಗ್ ಬಾಸ್ ಆಟದಲ್ಲಿ ರಕ್ಷಿತಾ ಶೆಟ್ಟಿ ಅವರಿಗೆ ಸಖತ್ ಆತ್ಮವಿಶ್ವಾಸ ಇದೆ. ಅಶ್ವಿನಿ ಗೌಡ, ಜಾಹ್ನವಿ, ಕಾಕ್ರೋಚ್ ಸುಧಿ, ರಾಶಿಕಾ ಶೆಟ್ಟಿ ಅಂಥವರ ಬಾಯಿಯನ್ನೇ ರಕ್ಷಿತಾ ಮುಚ್ಚಿಸಿದ್ದಾರೆ. ನವೆಂಬರ್ 12ರ ಸಂಚಿಕೆಯಲ್ಲಿ ಕೂಡ ಅದೇ ರೀತಿ ಆಗಿದೆ. ಒಬ್ಬರನ್ನು ನಾಮಿನೇಟ್ ಮಾಡಬೇಕು ಎಂಬ ಸಂದರ್ಭ ಬಂದಾಗ ಬಹುತೇಕರು ಅಭಿಷೇಕ್ ಹೆಸರು ಸೂಚಿಸಿದರು. ಆದರೆ ರಕ್ಷಿತಾ ಶೆಟ್ಟಿ ಒಬ್ಬರೇ ರಘು ಹೆಸರು ಸೂಚಿಸಿದ್ದೂ ಅಲ್ಲದೇ, ಆ ನಿರ್ಧಾರವೇ ಅಂತಿಮವಾಗುವಂತೆ ಪಟ್ಟುಹಿಡಿದರು.
ಒಂದು ವೇಳೆ ರಘು ಸ್ಥಾನದಲ್ಲಿ ಬೇರೆ ಯಾರೇ ಇದ್ದಿದ್ದರೂ ಕೂಡ ಸಿಕ್ಕಾಪಟ್ಟೆ ಕೋಪ ಅಥವಾ ಬೇಸರ ಮಾಡಿಕೊಳ್ಳುವ ಸಾಧ್ಯತೆ ಇತ್ತು. ಆದರೆ ರಘು ಅವರು ತುಂಬ ಸಮಾಧಾನದಿಂದ ಈ ಪರಿಸ್ಥಿತಿಯನ್ನು ಸ್ವೀಕರಿಸಿದರು. ‘ನೀವು ಚಿಂತೆ ಮಾಡಬೇಡಿ. ಜನರು ನಿಮ್ಮನ್ನು ಸೇವ್ ಮಾಡುತ್ತಾರೆ’ ಎಂದು ರಕ್ಷಿತಾ ಶೆಟ್ಟಿ ಅವರು ರಘುಗೆ ಧೈರ್ಯ ತುಂಬಿದ್ದಾರೆ. ಏನಾಗುತ್ತದೆ ಎಂಬುದನ್ನು ತಿಳಿಯುವ ಕೌತುಕ ಜಾಸ್ತಿ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಜೊತೆ ಯಾರೆಲ್ಲ ಕ್ಲೋಸ್ ಆಗುತ್ತಾರೋ ಅವರೇ ಎಲಿಮಿನೇಟ್ ಆಗುತ್ತಾರೆ ಎಂಬ ಮಾತು ಚಾಲ್ತಿಯಲ್ಲಿದೆ. ಅದಕ್ಕೆ ಪೂರಕ ಎಂಬಂತೆ ಮೊದಲು ಮಲ್ಲಮ್ಮ ಔಟ್ ಆದರು. ಬಳಿಕ ರಕ್ಷಿತಾ ಶೆಟ್ಟಿ ಜೊತೆ ಆಪ್ತತೆ ಹೊಂದಿದ್ದ ಚಂದ್ರಪ್ರಭ ಅವರು ಎಲಿಮಿನೇಟ್ ಆದರು. ಒಂದು ವೇಳೆ ರಘು ಕೂಡ ಎಲಿಮಿನೇಟ್ ಆದರೆ ಇನ್ಮುಂದೆ ರಕ್ಷಿತಾ ಶೆಟ್ಟಿ ಜೊತೆ ಸ್ನೇಹ ಬೆಳೆಸಲು ಇನ್ನುಳಿದವರು ಹೆದರಬೇಕಾಗುತ್ತದೆ.
ಇದನ್ನೂ ಓದಿ: ನಾಮಿನೇಷನ್ನಿಂದ ಬಚಾವ್ ಆಗಲು ರಕ್ಷಿತಾ ಜೊತೆ ಜಗಳಕ್ಕೆ ಇಳಿದ ರಾಶಿಕಾ
ಅಶ್ವಿನಿ ಗೌಡ, ಜಾಹ್ನವಿ, ಕಾಕ್ರೋಚ್ ಸುಧಿ, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ, ಧ್ರುವಂತ್ ಅವರು ಮಂಗಳವಾರ ನಾಮಿನೇಟ್ ಆಗಿದ್ದರು. ಅವರ ಪೈಕಿ ಟಾಸ್ಕ್ ಗೆದ್ದ ನಂತರ ಸುಧಿ ಸೇಫ್ ಆದರು. ಅವರ ಜಾಗಕ್ಕೆ ರಘು ಬಂದು ನಾಮಿನೇಟ್ ಸದಸ್ಯರ ತಂಡ ಸೇರಿಕೊಂಡರು. ರಿಷಾ ಅವರು ನೇರವಾಗಿ ಸುದೀಪ್ ಅವರಿಂದ ನಾಮಿನೇಟ್ ಆಗಿದ್ದಾರೆ. ಅವರಿಗೆ ಟಾಸ್ಕ್ ಮೂಲಕ ಸೇಫ್ ಆಗುವ ಅವಕಾಶ ಸಿಕ್ಕಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




