ಭಾಷೆ ವಿಷಯ ಕೆಣಕಿ ಎಡವಟ್ಟು ಮಾಡಿಕೊಂಡ ಧ್ರುವಂತ್; ರಕ್ಷಿತಾ ಬೆಂಬಲಕ್ಕ ನಿಂತ ಮಂಗಳೂರು ಮಂದಿ
ರಕ್ಷಿತಾ ಶೆಟ್ಟಿ ಕನ್ನಡ ಮಾತನಾಡಲು ಕಷ್ಟಪಡುತ್ತಿರುವ ಬಗ್ಗೆ ದೊಡ್ಮನೆ ಧ್ರುವಂತ್ ಟೀಕಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಮುಂಬೈನಲ್ಲಿ ಬೆಳೆದ ಕಾರಣ ರಕ್ಷಿತಾಗೆ ಕನ್ನಡ ಕಷ್ಟವಾದರೂ, ಅವರ ಪ್ರಯತ್ನವನ್ನು ಮೆಚ್ಚದೆ ಧ್ರುವಂತ್ ಆಕ್ಷೇಪಿಸಿದ್ದಾರೆ. ಈ ವಿಚಾರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬಹುತೇಕರು ರಕ್ಷಿತಾ ಶೆಟ್ಟಿ ಅವರನ್ನು ಬೆಂಬಲಿಸಿದ್ದು, ಧ್ರುವಂತ್‌ಗೆ ಭಾರೀ ವಿರೋಧ ವ್ಯಕ್ತವಾಗಿದೆ.

ರಕ್ಷಿತಾ ಶೆಟ್ಟಿ ಅವರು ಉಡುಪಿಯವರು. ಆದರೆ, ಅವರು ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಹೀಗಾಗಿ, ಕನ್ನಡ ಮಾತನಾಡೋದು ಅವರಿಗೆ ಕೊಂಚ ಕಷ್ಟ ಆಗುತ್ತಿದೆ. ಆದರೂ ಕನ್ನಡ ಮಾತನಾಡುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ಹೆಚ್ಚು ಎಗ್ಸೈಟ್ ಆದಾಗ, ಟೆನ್ಷನ್ ಆದಾಗ ಅವರ ಬಾಯಲ್ಲಿ ಹೊರಬರಬೇಕಿದ್ದ ಶಬ್ದಗಳು ಕಳೆದು ಹೋಗುತ್ತವೆ. ಇದು ಅವರ ತಪ್ಪಲ್ಲ. ಆದರೆ, ಇದನ್ನು ದೊಡ್ಮನೆಯ ಧ್ರುವಂತ್ (Dhruvanth) ಟೀಕೆ ಮಾಡಿದ್ದಾರೆ. ಇದರಿಂದ ಅವರು ಟೀಕೆ ಎದುರಿಸಬೇಕಿದೆ.
ಧ್ರುವಂತ ಅವರು ಕಿರುತೆರೆಯಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಅವರು ನಟಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪವೂ ಇದೆ. ಇದೆಲ್ಲವನ್ನೂ ಮೆಟ್ಟಿ ನಿಂತ ಅವರು ಬಿಗ್ ಬಾಸ್ ಶೋಗೆ ಬಂದಿದ್ದಾರೆ. ಆರಂಭದಲ್ಲಿ ಎಲ್ಲವೂ ಸಹಜವಾಗಿಯೇ ಇತ್ತು. ಆದರೆ, ಇತ್ತೀಚೆಗೆ ಧ್ರುವಂತ್ ಬದಲಾಗಿದ್ದಾರೆ. ರಕ್ಷಿತಾ ಶೆಟ್ಟಿ ವಿರುದ್ಧ ಕೂಗಾಡುತ್ತಿದ್ದಾರೆ.
ರಕ್ಷಿತಾ ಶೆಟ್ಟಿ ಜೊತೆ ಚೆನ್ನಾಗಿಯೇ ಇದ್ದ ಅವರು, ನಂತರ ಬದಲಾದರು. ರಕ್ಷಿತಾ ವಿರುದ್ಧ ತಿರುಗಿ ಬಿದ್ದರು. ‘ನಾನು ಮಂಗಳೂರಿನವನು. ಆದರೆ, ಮಂಗಳೂರಿನಲ್ಲಿ ಯಾರೊಬ್ಬರೂ ರಕ್ಷಿತಾ ರೀತಿ ಮಾತನಾಡುವುದನ್ನು ನೋಡಿಲ್ಲ. ಅಶ್ವಿನಿ ವಿರುದ್ಧ ಮಾತನಾಡುವ ರಕ್ಷಿತಾ, ಸುದೀಪ್ ಎದುರು ಸೈಲೆಂಟ್ ಆಗಿ ಬಿಡುತ್ತಾರೆ’ ಎಂದು ಹೇಳಿದ್ದರು. ‘ಎಂತ ಗೊತ್ತುಂಟ ಗಯ್ಸ್’ ಎಂದು ರಕ್ಷಿತಾ ಹೇಳುವ ಮಾತಿನ ಬಗ್ಗೆಯೂ ಧ್ರುವಂತ್‌ಗೆ ಬೇಸರ ಇದೆ.
ಈ ಎಲ್ಲಾ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಬಹುತೇಕರು ರಕ್ಷಿತಾ ಶೆಟ್ಟಿ ಅವರನ್ನು ಬೆಂಬಲಿಸಿದ್ದಾರೆ. ಧ್ರುವಂತ್ ಅವರು ಆ ರೀತಿ ಮಾತನಾಡಬಾರದಿತ್ತು ಎಂದು ಅನೇಕರು ಹೇಳಿದ್ದಾರೆ. ಅನೇಕರು ರಕ್ಷಿತಾ ಶೆಟ್ಟಿ ಮಾಡಿದ್ದು ಸರಿ ಇದೆ ಎಂದಿದ್ದಾರೆ.
ಇದನ್ನೂ ಓದಿ: ‘ಎಂತ ಗೊತ್ತುಂಟ ಗಯ್ಸ್’ ಎಂದು ರಕ್ಷಿತಾನ ಟೀಕಿಸಿ ಟ್ರೋಲ್ ಆದ ಧ್ರುವಂತ್
ಧ್ರುವಂತ್ ಅವರು ಮಹಿಳಾ ಸ್ಪರ್ಧಿಗಳ ಬಗ್ಗೆಯೂ ಕೆಲವು ಆರೋಪ ಮಾಡಿದ್ದಾರೆ. ‘ನಾನು ಯಾವ ಮಹಿಳಾ ಸ್ಪರ್ಧಿಗಳನ್ನು ಮಾತನಾಡಿಸಿಕೊಂಡು ಹೋಗುತ್ತಿಲ್ಲ. ಅವರೇ ಬಂದರು ಮಾತನಾಡುತ್ತಿದ್ದಾರೆ’ ಎಂದು ಹೇಳುತ್ತಿದ್ದಾರೆ. ಇದು ಕೂಡ ಚರ್ಚೆಯ ವಿಷಯ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




