ಅಶ್ವಿನಿ ಜೊತೆ ಸೇರಿ ಮತ್ತೆ ಮೊದಲಿನ ಫಾರ್ಮ್‌ಗೆ ಮರಳಿದ ಜಾನ್ವಿ; ಗಿಲ್ಲಿ ಛೀಮಾರಿ
Bigg Boss Kannada: ಅಶ್ವಿನಿ ಗೌಡ ಮತ್ತು ಜಾನ್ವಿ ಬಿಗ್ ಬಾಸ್ ಮನೆಯಲ್ಲಿ ಮೊದಲು ನಕಲಿ ಗೆಳೆತನ ಮುರಿದುಕೊಳ್ಳುವ ನಾಟಕವಾಡಿದ್ದರು. ಇದು ಅನಿರೀಕ್ಷಿತವಾಗಿ ನಿಜವಾಗಿ ಪರಿಣಮಿಸಿತು. ಈಗ ಇಬ್ಬರೂ ಮತ್ತೆ ಒಂದಾಗಿದ್ದು, ಜಾನ್ವಿ ಹಳೆಯ ಫಾರ್ಮ್‌ಗೆ ಮರಳಿದ್ದಾರೆ. ಜಾನ್ವಿಗೆ ಸುದೀಪ್ ವೀಕೆಂಡ್ ಕ್ಲಾಸ್ ಕಾಯುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿ ಅವರ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿತ್ತು. ಆದರೆ, ಕೆಲವೇ ವಾರಗಳಲ್ಲಿ ಇವರ ಗೆಳೆತನ ಬ್ರೇಕ್ ಆಯಿತು. ಇಬ್ಬರೂ ಕಿತ್ತಾಡಿಕೊಂಡರು. ಇತ್ತೀಚೆಗೆ ರಿವೀಲ್ ಆದ ಮಾಹಿತಿ ಪ್ರಕಾರ ಅಶ್ವಿನಿ ಹಾಗೂ ಜಾನ್ವಿ ಈ ಬಗ್ಗೆ ಮೊದಲೇ ಮಾತನಾಡಿಕೊಂಡಿದ್ದರಂತೆ. ‘ನಾವಿಬ್ಬರೂ ಬೇರೆ ಆದಂತೆ ನಟಿಸೋಣ’ ಎಂದು ಮೈಕ್ ಇಲ್ಲದೆ ಚರ್ಚಿಸಿದ್ದರು. ಈಗ ಜಾನ್ವಿ ಹಾಗೂ ಅಶ್ವಿನಿ ಮಧ್ಯೆ ಮತ್ತೆ ಗೆಳೆತನ ಮೂಡಿದೆ. ಇದರಿಂದ ಜಾನ್ವಿ ಅವರು ಮೊದಲಿನ ಫಾರ್ಮ್‌ಗೆ ಮರಳಿದ್ದಾರೆ.
ಮುರಿದಿತ್ತು ಗೆಳೆತನ
ಗೆಳೆತನ ಮುರಿದುಕೊಂಡಂತೆ ನಾಟಕ ಮಾಡೋದು ಅಶ್ವಿನಿ ಗೌಡ ಹಾಗೂ ಜಾನ್ವಿ ಅವರ ಪ್ಲ್ಯಾನ್ ಆಗಿತ್ತು. ದಿನ ಕಳೆದಂತೆ ಈ ವಿಚಾರ ಗಂಭೀರವಾಗುತ್ತಾ ಸಾಗಿತು. ಕೊನೆಗೆ ಯಾವ ಹಂತಕ್ಕೆ ಹೋಯಿತು ಎಂದರೆ ಇಬ್ಬರ ಗೆಳೆತನ ಹದಗೆಟ್ಟಿತ್ತು. ಹೀಗಿರುವಾಗಲೇ ಇಬ್ಬರ ಮಧ್ಯೆ ಮತ್ತೆ ಗೆಳೆತನದ ಚಿಗುರು ಒಡೆದಿದೆ. ಇಬ್ಬರೂ ಮಾತುಕತೆ ಆಡಿಕೊಂಡು ಸಂಬಂಧ ಸರಿ ಮಾಡಿಕೊಂಡಿದ್ದಾರೆ.
ಕಳ್ಳತನ
ಅಶ್ವಿನಿ ಗೌಡ ಹಾಗೂ ಜಾನ್ವಿ ಒಟ್ಟಾಗಿ ಸೇರಿಕೊಂಡು ಮಾಡಿದ ಕೆಲ ಕೆಟ್ಟ ಕೆಲಸಗಳಿಂದ ಇಬ್ಬರೂ ಹೊರ ಜಗತ್ತಿಗೆ ನೆಗೆಟಿವ್ ಆಗಿ ಕಾಣಿಸಿದರು. ಅಶ್ವಿನಿ ನೆರಳಿನಿಂದ ಹೊರ ಬರುತ್ತಿದ್ದಂತೆ ಜಾನ್ವಿ ಬದಲಾದರು. ಅವರಿಗೆ ಕೆಲ ವಾರ ಸುದೀಪ್ ಕ್ಲಾಸ್ ತಪ್ಪಿತು. ಆದರೆ, ಈಗ ಅಶ್ವಿನಿ ಜೊತೆ ಮತ್ತೆ ಸೇರುತ್ತಿದ್ದಂತೆ ಅವರು ಹಳೆಯ ಫಾರ್ಮ್‌ಗೆ ಮರಳಿದಂತೆ.
ಸುಧಿ ಮೊದಲಾದವರ ಜೊತೆ ಸೇರಿಕೊಂಡು ಜಾನ್ವಿ ಅವರು ಮನೆಯವರಿಗೆ ಇಟ್ಟ ಹಾಲನ್ನು ಕದ್ದಿದ್ದಾರೆ. ಮನೆಯವರಿಗೆ ಎಂದು ಮೀಸಲಿಟ್ಟಮೇಲೆ ಅದರಲ್ಲಿ ಎಲ್ಲರ ಪಾಲೂ ಇರುತ್ತದೆ. ಆದರೆ, ತಮಗಷ್ಟೇ ಸಿಗಬೇಕು ಎಂದು ಬಯಸೋದು ತಪ್ಪಾಗುತ್ತದೆ. ಈ ಕಾರಣಕ್ಕೆ ಸುದೀಪ್ ವೀಕೆಂಡ್ನಲ್ಲಿ ಜಾನ್ವಿಗೆ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಗಿಲ್ಲಿ ನಟನ ಛೀಮಾರಿ
ಗಿಲ್ಲಿ ನಟ ಅವರು ಜಾನ್ವಿಗೆ ಛೀಮಾರಿ ಹಾಕಿದ್ದಾರೆ. ‘ಇಷ್ಟೆಲ್ಲ ಆದ ಬಳಿಕವೂ ಮತ್ತೆ ಅಶ್ವಿನಿ ಅವರ ಜೊತೆಯೇ ಹೋಗುತ್ತಿದ್ದೀರಲ್ಲ. ನಾನಾಗಿದ್ದರೆ ಅವರ ಗೆಳೆತನ ಮುರಿದುಕೊಂಡು ಈಚೆ ಬರುತ್ತಿದ್ದೆ’ ಎಂದು ಗಿಲ್ಲಿ ಹೇಳಿದ್ದಾರೆ. ಇದಕ್ಕೆ ಜಾನ್ವಿ ಅವರು ನಕ್ಕಿದ್ದಾರೆ. ಈ ಮೂಲಕ ತಾವು ಬದಲಾಗೋದಿಲ್ಲ ಎಂದು ಸ್ಪಷ್ಟವಾಗಿ ಹೇಳಿದಂತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




