ಪರ್ಫಾರ್ಮೆನ್ಸ್ ನಿಮ್ಮಷ್ಟೇ ಕ್ಯೂಟ್ ಆಗಿತ್ತು ಎಂದು ಡಿಕೆಡಿ ವೇದಿಕೆ ಮೇಲೆ ಭವ್ಯಾನ ಹೊಗಳಿದ ರಚಿತಾ ರಾಮ್
ಶಿವರಾಜ್ಕುಮಾರ್ ಅವರು ಭವ್ಯಾ ಗೌಡ ಅವರನ್ನು ಹೊಗಳಿದ್ದಾರೆ. ಅದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಎಂಬುದು ವಿಶೇಷ. ಹಾಗಾದರೆ ಭವ್ಯಾ ಗೌಡ ಅವರು ಏನು ಡ್ಯಾನ್ಸ್ ಮಾಡಿದರು. ಅವರ ಬಗ್ಗೆ ಶಿವರಾಜ್ಕುಮಾರ್ ಹೇಳಿದ ಮಾತು ಏನು ಎಂಬುದನ್ನು ಇಲ್ಲಿ ತಿಳಿಯೋಣ.

ಭವ್ಯಾ ಗೌಡ (Bhavya Gowda) ಅವರು ಕಿರುತೆರೆಯಲ್ಲಿ ನಟಿಸಿ ಫೇಮಸ್ ಆದವರು. ಅವರು ಕೆಲವು ಧಾರಾವಾಹಿ ಮಾಡಿದ್ದಾರೆ. ಬಿಗ್ ಬಾಸ್ನಲ್ಲಿ ಸ್ಪರ್ಧೆ ಕೂಡ ಮಾಡಿದ್ದಾರೆ. ಈಗ ಅವರು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 5’ರಲ್ಲಿ ಸ್ಪರ್ಧಿ ಆಗಿದ್ದಾರೆ. ‘ಸಾಲುತ್ತಿಲ್ಲವೇ..’ ಹಾಡಿಗೆ ಅವರು ಡ್ಯಾನ್ಸ್ ಮಾಡಿದ್ದಾರೆ. ಅವರಿಗೆ ಕ್ಯಾಪ್ ಸಿಕ್ಕಿದೆ. ಅವರು ಸ್ಪರ್ಧಿಯಾಗಿ ಆಯ್ಕೆ ಆಗಿದ್ದಾರೆ. ಈ ವೀಕೆಂಡ್ನಲ್ಲಿ ಸಂಪೂರ್ಣ ಎಪಿಸೋಡ್ ಪ್ರಸಾರ ಕಾಣಲಿದೆ.
ಡ್ಯಾನ್ಸ್ ಮಾಡಿದ ಬಳಿಕ ಮಾತನಾಡಿದ ಭವ್ಯಾ ಗೌಡ ಅವರು, ‘ನನಗೆ ಡ್ಯಾನ್ಸ್ ಕಲಿಯಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತು. ಡ್ಯಾನ್ಸ್ ಕಲಿತೆ. ವೇದಿಕೆ ಮೇಲೆ ಸ್ವಲ್ಪ ನರ್ವಸ್ ಆದೆ. ಶಿವಣ್ಣನ ನೋಡದಾಗ ಒಂದು ಮೋಟಿವೇಷನ್ ಸಿಗುತ್ತದೆ. ಯಾರು ಏನೇ ಹೇಳಿದರೂ ನಮ್ಮ ಕೆಲಸ ನಿಭಾಯಿಸಿಕೊಂಡು ಹೋಗಬೇಕು ಎಂಬುದು ಅವರಿಂದ ಕಲಿತೆ’ ಎಂದು ಹೇಳಿದರು. ಭವ್ಯಾ ಗೌಡ ಅವರ ಡ್ಯಾನ್ಸ್ ನೋಡಿ ಖುಷಿಯಾದ ಶಿವಣ್ಣ ಅವರು ಟೋಪಿ ತೊಡಿಸಿದರು. ಪರ್ಫಾರ್ಮೆನ್ಸ್ ನಿಮ್ಮಷ್ಟೇ ಕ್ಯೂಟ್ ಆಗಿದೆ ಎಂದರು ರಚಿತಾ. ‘ಡಿಕೆಡಿ’ಯಲ್ಲಿ ಈ ಬಾರಿ ಸೆಲೆಬ್ರಿಟಿಗಳೇ ಇರುತ್ತಾರೆ ಎಂದು ಹೇಳಲಾಗುತ್ತಾ ಇದೆ.
View this post on Instagram
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 5’ ಈ ಶನಿವಾರ ಹಾಗೂ ಭಾನುವಾರದಿಂದ ಆರಂಭ ಆಗಲಿದೆ. ಇಷ್ಟು ದಿನಗಳ ಕಾಲ ಬೇರೆ ಬೇರೆ ಶೋಗಳು ಪ್ರಸಾರ ಕಾಣುತ್ತಿದ್ದವು. ಈಗ ಡಿಕೆಡಿ ಮೂಲಕ ಜೀ ಕನ್ನಡ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದೆ. ಈ ಬಾರಿ ಕೇವಲ ಸೆಲೆಬ್ರಿಟಿಗಳು ಮಾತ್ರ ಇರುತ್ತಾರಾ ಅಥವಾ ಜನಸಾಮಾನ್ಯರಿಗೂ ಅವಕಾಶ ಇದೆಯೇ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಕೂಡ ನಡೆಯುತ್ತಿವೆ.
ಇದನ್ನೂ ಓದಿ: ಒಂದೇ ದಿನ ಎರಡು ದೊಡ್ಡ ಸುದ್ದಿ ಕೊಟ್ಟ ಭವ್ಯಾ ಗೌಡ; ಕಾರು ಖರೀದಿ, ಉದ್ಯಮ ಶುರು
ಭವ್ಯಾ ಗೌಡ ಅವರು ಜೀ ಕನ್ನಡದ ‘ಕರ್ಣ’ ಧಾರಾವಾಹಿಯಲ್ಲಿ ನಿಧಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ನಿಧಿ ಹಾಗೂ ಕರ್ಣ ಮಧ್ಯೆ ಪ್ರೀತಿ ಮೂಡಿ ಅದು ಛಿದ್ರವಾಗಿದೆ ಎಂಬುದು ಬೇಸರದ ವಿಚಾರ. ಮುಂದೆ ಧಾರಾವಾಹಿಯಲ್ಲಿ ಏನಾಗುತ್ತದೆ ಎಂಬುದು ಸದ್ಯದ ಕುತೂಹಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:37 am, Wed, 12 November 25



