ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಸೋಮವಾರ 12 ಜೀವಗಳನ್ನು ಬಲಿ ಪಡೆದ ಕೆಂಪು ಕೋಟೆ ಸ್ಫೋಟವನ್ನು "ಭಯೋತ್ಪಾದನಾ ಘಟನೆ" ಎಂದು ಬಣ್ಣಿಸಿದೆ ಮತ್ತು ದಾಳಿಯಲ್ಲಿ ಜೀವಹಾನಿಗೆ ತೀವ್ರ ದುಃಖ ವ್ಯಕ್ತಪಡಿಸಿದೆ. ಸಚಿವ ಸಂಪುಟ ಸಭೆಯ ಮುಕ್ತಾಯದ ನಂತರ, ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್, ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ನೀತಿಗೆ ಸಂಪುಟ ಬದ್ಧವಾಗಿದೆ ಎಂದು ಹೇಳಿದರು.
ನವದೆಹಲಿ, ನವೆಂಬರ್ 12: ಪ್ರಧಾನಿ ಮೋದಿ (PM Modi) ಅಧ್ಯಕ್ಷತೆಯಲ್ಲಿ ಇಂದು ದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ದೆಹಲಿ ಸ್ಫೋಟವನ್ನು (Delhi Car Blast) ತೀವ್ರವಾಗಿ ಖಂಡಿಸಿದೆ. ಭಾರತದಲ್ಲಿ ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯಿದೆ ಎಂದು ಮೋದಿ ಸರ್ಕಾರ ಪುನರುಚ್ಚರಿಸಿದೆ. ಸಚಿವ ಸಂಪುಟ ಸಭೆಯ ಮುಕ್ತಾಯದ ನಂತರ, ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್, “ಈ ಘಟನೆಯ ತನಿಖೆಯನ್ನು ಅತ್ಯಂತ ತುರ್ತಾಗಿ ಮತ್ತು ವೃತ್ತಿಪರತೆಯಿಂದ ಮುಂದುವರಿಸಬೇಕೆಂದು ಸಂಪುಟವು ನಿರ್ದೇಶಿಸಿದೆ” ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos

