EPF Online Transfer: ಇಪಿಎಫ್ ಖಾತೆಯ ಆನ್​ಲೈನ್ ವರ್ಗಾವಣೆ ಹೇಗೆ? ಇಲ್ಲಿದೆ ವಿವರ

ಮೆಂಬರ್ ಇ-ಸೇವಾ ಹೆಸರಿನ ಪೋರ್ಟಲ್, ಉದ್ಯೋಗಿಯೊಬ್ಬನ ಈಪಿಎಫ್ ಖಾತೆಯಲ್ಲಿರುವ ಹಣವನ್ನು ಹೊಸ ಕಂಪನಿಗೆ ವರ್ಗಾಯಿಸುವ ಅವಕಾಶ ನೀಡುತ್ತದೆ. ಅಂದಹಾಗೆ, ಅವನ ಯೂನಿವರ್ಸಲ್ ಅಕೌಂಟ್ ನಂಬರ್ (ಯೂಎಎನ್) ಬದಲಾಗುವುದಿಲ್ಲ.

EPF Online Transfer: ಇಪಿಎಫ್ ಖಾತೆಯ ಆನ್​ಲೈನ್ ವರ್ಗಾವಣೆ ಹೇಗೆ? ಇಲ್ಲಿದೆ ವಿವರ
ಪ್ರಾತಿನಿಧಿಕ ಚಿತ್ರ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 01, 2021 | 7:43 PM

ಒಬ್ಬ ವ್ಯಕ್ತಿ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯೊಂದಿಗೆ (Employee Provident Fund – EPF) ನೋಂದಣಿಯಾಗಿರುವ ಯಾವುದಾದರೂ ಒಂದು ಕಂಪನಿಯಲ್ಲಿ ಅಥವಾ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿ ತನ್ನ ವೃತ್ತಿಬದುಕನ್ನು ಆರಂಭಿಸಿದ ನಂತರ ಅವನ ಹೆಸರು ಇಪಿಎಫ್ ಸಂಸ್ಥೆಯೊಂದಿಗೆ ದಾಖಲಾಗಿಬಿಡುತ್ತದೆ. ಅವನ ಹೆಸರಿನಲ್ಲಿ ಒಂದು ಖಾತೆಯೂ ತೆರೆಯಲ್ಪಡುತ್ತದೆ. ಪ್ರತಿ ತಿಂಗಳೂ ಅವನ ಸಂಬಳದಿಂದ ಮತ್ತು ಅದಕ್ಕೆ ಸರಿಸಮಾನದ ಪೂರ್ವ ನಿರ್ಧಾರಿತ ಮೊತ್ತವನ್ನು ಅವನಿಗೆ ಸಂಬಳ ನೀಡುವ ಸಂಸ್ಥೆ ಅವನ ಖಾತೆಗೆ ಜಮೆ ಮಾಡುತ್ತದೆ. ಆ ನಿರ್ದಿಷ್ಟ ಉದ್ಯೋಗಿಯು ಈ ಖಾತೆಯಿಂದ ಹಣವನ್ನು ವಿತ್​ಡ್ರಾ ಮಾಡುವ ಸಮಯದಲ್ಲಿ ಇಪಿಎಫ್ ಸಂಸ್ಥೆಯು ಜಮೆಯಾಗಿರುವ ಮೊತ್ತಕ್ಕೆ ಬಡ್ಡಿಯನ್ನು ನೀಡಿ ಹಣ ಹಿಂತಿರುಗಿಸುತ್ತದೆ. ಹಾಗೆಯೇ, ಈ ಉದ್ಯೋಗಿಯು ತಾನು ಕೆಲಸ ಮಾಡುತ್ತಿರುವ ಕಂಪನಿಯನ್ನು ಬಿಟ್ಟು ಬೇರೊಂದು ಕಂಪನಿ ಸೇರಿದರೆ, ಬಿಟ್ಟು ಹೋಗುವ ಕಂಪನಿಯಿಂದ ಅವನ ಇಪಿಎಫ್ ಖಾತೆಯಲ್ಲಿ ಜಮೆಯಾಗಿರುವ ದುಡ್ಡನ್ನು ಹೊಸ ಕಂಪನಿಯಿಂದಾಗಿ ಆರಂಭವಾಗುವ ಅವನ ಹೊಸ ಇಪಿಎಫ್ ಖಾತೆಗೆ ಆನ್​ಲೈನ್ ಮೂಲಕ ವರ್ಗಾಯಿಸಬಹುದಾಗಿದೆ.

ಮೆಂಬರ್ ಇ-ಸೇವಾ ಹೆಸರಿನ ಪೋರ್ಟಲ್, ಉದ್ಯೋಗಿಯೊಬ್ಬನ ಇಪಿಎಫ್ ಖಾತೆಯಲ್ಲಿರುವ ಹಣವನ್ನು ಹೊಸ ಕಂಪನಿಗೆ ವರ್ಗಾಯಿಸುವ ಅವಕಾಶ ನೀಡುತ್ತದೆ. ಅಂದಹಾಗೆ, ಅವನ ಯೂನಿವರ್ಸಲ್ ಅಕೌಂಟ್ ನಂಬರ್ (Universal Account Nubmer – UAN) ಬದಲಾಗುವುದಿಲ್ಲ. ಹಾಗೆ ಹಣವನ್ನು ವರ್ಗಾಯಿಸಬೇಕಾದರೆ, ಸದರಿ ಉದ್ಯೋಗಿಯು ಮಾಡಬೇಕಿರುವುದೇನೆಂದು ತಿಳಿದುಕೊಳ್ಳೋಣ.

ಆನ್​ಲೈನ್ ವರ್ಗಾಯಿಸಿವುದಕ್ಕೆ ಇವೆಲ್ಲಾ ಅಗತ್ಯ -ಇಪಿಎಫ್ ಖಾತೆದಾರನೊಬ್ಬ ತನ್ನ ಯೂಎಎನ್ ಸಂಖ್ಯೆಯು ಮೆಂಬರ್ ಇ-ಸೇವಾ ಪೋರ್ಟಲ್​ನಲ್ಲಿ ಸಕ್ರಿಯವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. -ಖಾತೆದಾರನು ತನ್ನ ಹೆಸರು, ವಿಳಾಸ, ವಿವಾಹಿತನೇ/ಅವಿವಾಹಿತನೇ ಮೊದಲಾದ ಆಂಶಗಗಳು ಮೆಂಬರ್ ಇ-ಸೇವಾ ಹೆಸರಿನ ಪೋರ್ಟಲ್​ನಲ್ಲಿ ಯಥಾವತ್ತಾಗಿ ಪ್ರತಿಬಿಂಬಗೊಳ್ಳುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. -ಖಾತೆದಾರನು ಮೆಂಬರ್ ಇ-ಸೇವಾ ಹೆಸರಿನ ಪೋರ್ಟಲ್​ನಲ್ಲಿ ತನ್ನ ಬ್ಯಾಂಕ್ ಖಾತೆ ಸಂಖ್ಯೆ, ಐಎಫ್​ಎಸ್​ಸಿ ಮತ್ತು ಆಧಾರ್ ಕಾರ್ಡ್​ ವಿವರಗಳು ಸರಿಯಾಗಿವೆಯೆನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. -ಬ್ಯಾಂಕ್ ಖಾತೆ ಮತ್ತು ಆಧಾರ್ ವಿವಿರಗಳು ಉದ್ಯೋಗದಾತ ಮತ್ತು ಆಧಾರ್ ಸಂಖ್ಯೆಯ ಮೂಲಕ ಡಿಜಿಟಲ್ ಮಾನ್ಯತೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. -ಬ್ಯಾಂಕ್ ಖಾತೆ ಆಧಾರ್ ವಿವರಗಳು ಡಿಜಿಟಲ್ ರೂಪುದಲ್ಲಿ ಉದ್ಯೋಗದಾತ ಅಂಗೀಕರಿಸಿದ ನಂತರ ಅವು ಸೀಡ್​ ಆಗಿ ಯುಐಡಿಎಐನಿಂದ ಪರಿಶೀಲಿಸಲ್ಪಪಡುತ್ತವೆ.

ಇಪಿಎಫ್​ ಖಾತೆಯನ್ನು ಆನ್​ಲೈನ್ ವರ್ಗಾಯಿಸುವುದು ಹೇಗೆ? 1. ಉದ್ಯೋಗಿಯು ಯುನಿಫೈಡ್ ಮೆಂಬರ್ ಪೋರ್ಟಲ್​ಗೆ ಹೋಗಿ ಇಪಿಎಫ್ ಖಾತೆಗೆ ಜೊತೆ ಯುಎಎನ್ ಮತ್ತು ಪಾಸ್​ವರ್ಡ್​ನೊಂದಿಗೆ ಲಾಗಿನ್ ಅಗಬೇಕು. 2. ಅಲ್ಲಿಂದ ಆನ್​ಲೈನ್ ಸರ್ವಿಸಸ್​ಗೆ ಹೋಗಿ ಒನ್ ಮೆಂಬರ್-ಒನ್ ಇಪಿಎಫ್ ಅಕೌಂಟ್​ ಮೇಲೆ ಕ್ಲಿಕ್ ಮಾಡಬೇಕು, (ಇದು ಖಾತೆ ವರ್ಗಾವಣೆ ಮನವಿ). 3. ಪರ್ಸನಲ್ ಇನ್​ಫರ್ಮೇಶನ್ ಮತ್ತು ಪ್ರಸ್ತುತ ಕೆಲಸ ಮಾಡುತ್ತಿರುವ ಪಿಎಫ್ ಖಾತೆಯನ್ನು ಪರಿಶೀಲಿಸಬೇಕು. 4. ನಂತರ ಗೆಟ್​ ಡಿಟೇಲ್ಸ್ ಮೇಲೆ ಕ್ಲಿಕ್ ಮಾಡಿದರೆ ಹಿಂದಿನ ಉದ್ಯೋಗದಾತ ಕಂಪನಿಯ ಪಿಎಫ್ ಖಾತೆ ವಿವರಗಳು ಲಭ್ಯವಾಗುತ್ತವೆ. 5. ಅಟೆಸ್ಟಿಂಗ್ ಫಾರಂಗೋಸ್ಕರ ಹಳೆಯ ಇಲ್ಲವೇ ಪ್ರಸ್ತುತವಾಗಿ ಕೆಲಸ ಮಾಡುತ್ತಿರುವ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಬೇಕು. 6. ನಂತರ ಗೆಟ್​ ಒಟಿಪಿ ಮೇಲೆ ಕ್ಲಿಕ್ ಮಾಡಿದರೆ ಯುಎಎನ್​ನಲ್ಲಿ ದಾಖಲಾಗಿರುವ ಮೊಬೈಲ್ ನಂಬರಿನಲ್ಲಿ ಒಟಿಪಿ ಬರುತ್ತದೆ. ಒಟಿಪಿಯನ್ನು ಅಲ್ಲಿ ನೋಂದಾಯಿಸಿ ಸಬ್​ಮಿಟ್​ ಮೇಲೆ ಕ್ಲಿಕ್​ ಮಾಡಬೇಕು.

ಒಮ್ಮೆ ಉದ್ಯೋಗಿಯ ಈಗಿನ ಇಲ್ಲವೇ ಹಿಂದಿನ ಉದ್ಯೋಗದಾತ ಕಂಪನಿಯು ಸಲ್ಲಿಸಲಾಗಿರುವ ವಿವರಗಳನ್ನು ಸಬ್​ಮಿಟ್​ ಮಾಡಿದ ನಂತರ ಅವನ ಪಿಎಫ್ ಖಾತೆಯು ಖಾತೆಯಲ್ಲಿ ಜಮೆಯಾಗಿರುವ ಹಣದೊಂದಿಗೆ ವರ್ಗಾವಣೆಗೊಳ್ಳುತ್ತದೆ. ಹಾಗೆ ಹಳೇ ಪಿಎಫ್ ಮೊತ್ತವು ಹೊಸ ಪಿಎಫ್ ಖಾತೆಗೆ ಜಮೆಯಾದರೆ ಉದ್ಯೋಗಿಯು ಹೆಚ್ಚಿನ ಹಣವನ್ನು ವಿತ್​ಡ್ರಾ ಮಾಡಲು ಅರ್ಹನಾಗಿರುತ್ತಾನೆ

ಹಾಗೆ ಆನ್​ಲೈನ್ ಮೂಲಕ ಪಿಎಫ್ ಖಾತೆಯನ್ನು ವರ್ಗಾಯಿಸಿಕೊಳ್ಳುವಾಗ ಅಟ್ಟೆಸ್ಟೇಶನ್ ಹಳೆಯ ಉದ್ಯೋಗದಾತನ ಇಲ್ಲವೇ ಹಾಲಿ ಉದ್ಯೋಗದಾತನಿಂದ ಆಗುಬೇಕೆನ್ನುವ ಅಂಶವನ್ನು ಉದ್ಯೋಗಿಯು ಆಯ್ಕೆ ಮಾಡಿಕೊಳ್ಳಬೇಕು. ಉದ್ಯೋಗದಾತನು ಪೋರ್ಟ್​ಲ್​ನೊಂದಿಗೆ ನೋಂದಾಯಿಸಿಕೊಳ್ಳುವ ಅವಶ್ಯಕತೆಯಿದ್ದು ಡೆಎಸ್​ಸಿ (ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್) ಮೂಲಕ ಅಟೆಸ್ಟ್​ ಮಾಡಬೇಕಿರುವುದರಿಂದ ಹಳೆಯ ಇಲ್ಲವೇ ಹೊಸ ಉದ್ಯೋಗದಾತನ ಆಯ್ಕೆ ಸೂಚಿಸಿವುದು ಅಗತ್ಯವಾಗಿದೆ. ಹಾಗಾಗಿ ಕನಿಷ್ಠ ಒಬ್ಬ ಉದ್ಯೋಗದಾತ-ಹಳೆಯ ಇಲ್ಲವೇ ಪ್ರಸಕ್ತ; ಡಿಎಸ್​ಸಿ ಪೋರ್ಟ್​ಲ್​ನೊಂದಿಗೆ ನೋಂದಣಿಯಾಗಿರುವದು ಅತ್ಯವಶ್ಯಕವಾಗಿದೆ.

ಇದನ್ನೂ ಓದಿEPF Interest Rate: ಭವಿಷ್ಯ ನಿಧಿ ಮೇಲಿನ ಬಡ್ಡಿದರದಲ್ಲಿ ಕಡಿತ ಸಾಧ್ಯತೆ.. ಶೀಘ್ರವೇ ಹೊಸ ಅಧಿಸೂಚನೆ?

Published On - 7:40 pm, Mon, 1 March 21

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ