AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

EPF Interest Rate: ಭವಿಷ್ಯ ನಿಧಿ ಮೇಲಿನ ಬಡ್ಡಿದರದಲ್ಲಿ ಕಡಿತ ಸಾಧ್ಯತೆ.. ಶೀಘ್ರವೇ ಹೊಸ ಅಧಿಸೂಚನೆ?

ಮಾರ್ಚ್​ 4ರಂದು ನಡೆಯುವ ಎಪಿಎಫ್​ಒನ 228ನೇ ಸಭೆಯಲ್ಲಿ ಕೇಂದ್ರ ಮಂಡಳಿ ( CBT) ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಕೇಂದ್ರ ಕಾರ್ಮಿಕ ಸಚಿವ ಸಂತೋಷ್​​ ಕುಮಾರ್​ ಗಂಗಾವರ್​ ಸಿಬಿಟಿಯ ಮುಖ್ಯಸ್ಥರಾಗಿದ್ದಾರೆ.

EPF Interest Rate: ಭವಿಷ್ಯ ನಿಧಿ ಮೇಲಿನ ಬಡ್ಡಿದರದಲ್ಲಿ ಕಡಿತ ಸಾಧ್ಯತೆ.. ಶೀಘ್ರವೇ ಹೊಸ ಅಧಿಸೂಚನೆ?
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
|

Updated on:Feb 17, 2021 | 2:00 PM

Share

ನವದೆಹಲಿ: ಭವಿಷ್ಯ ನಿಧಿ ಮೇಲಿನ ಬಡ್ಡಿದರವನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ಮಾರ್ಚ್​ 4ರಂದು ಸಭೆ ನಡೆಸಲಿದೆ. ಈ ವೇಳೆ ಪಿಎಫ್​ ಮೇಲಿನ ಬಡ್ಡಿ ದರವನ್ನು ಕಡಿತ ಮಾಡುವ ನಿರ್ಧಾರಕ್ಕೆ EPFO ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ಅನೇಕರು ಉದ್ಯೋಗ ಕಳೆದುಕೊಂಡಿದ್ದರು. ಕೆಲವರಿಗೆ ವೇತನದಲ್ಲಿ ಕತ್ತರಿ ಹಾಕಲಾಗಿತ್ತು. ಹೀಗಾಗಿ, ಉಳಿತಾಯ ರೂಪದಲ್ಲಿದ್ದ ಪಿಎಫ್​ ಹಣ ತೆಗೆಯಲು ಆರಂಭಿಸಿದ್ದರು. ಅಧಿಕವಾಗಿ ಹಣ ವಿತ್​ಡ್ರಾ ಮಾಡಲಾಗುತ್ತಿದ್ದು, ಇದಕ್ಕೆ ಕೊಡುಗೆ ನೀಡುವವರ ಸಂಖ್ಯೆ ಕಡಿಮೆ ಆಗಿದೆ. ಹೀಗಾಗಿ, 2020-21ರ EPFO ಬಡ್ಡಿ ದರ ಕಡಿತಗೊಳಿಸುವ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ವರ್ಷದಿಂದ ವರ್ಷಕ್ಕೆ ಪಿಎಫ್​ ಬಡ್ಡಿದರ ಕಡಿಮೆ ಆಗುತ್ತಿದೆ. ಹೀಗಾಗಿ, ಇದರ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಕೂಡ ಕಡಿಮೆ ಆಗುತ್ತಿದೆ. 2018-19ರಲ್ಲಿ ಪಿಎಫ್​ ಬಡ್ಡಿದರ ಶೇ 8.65 ಇತ್ತು. 2019-20ರಲ್ಲಿ ಇದನ್ನು 8.50ಗೆ ಇಳಿಕೆ ಮಾಡಲಾಗಿತ್ತು. ಈಗ ಈ ಬಡ್ಡಿದರ ಮತ್ತೂ ಕಡಿತಗೊಳ್ಳಲಿದೆ ಎನ್ನುವ ಸುದ್ದಿ ಹರಿದಾಡಿದೆ.

ಇದನ್ನೂ ಓದಿ: ವೇತನ ಪಡೆಯುವ ವರ್ಗಕ್ಕೆ ಹೊರೆಯಾದ ವೇಜ್​ ಕೋಡ್​-ಬಜೆಟ್​; ಭವಿಷ್ಯ ನಿಧಿಯೇ ತೊಡಕಾಗ್ತಿದೆ..ಟೇಕ್​ ಹೋಂ ಸ್ಯಾಲರಿ ಕಡಿಮೆ ಆಗ್ತಿದೆ !

ಮಾರ್ಚ್​ 4ರಂದು ನಡೆಯುವ ಎಪಿಎಫ್​ಒನ 228ನೇ ಸಭೆಯಲ್ಲಿ ಕೇಂದ್ರ ಮಂಡಳಿ ( CBT) ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಕೇಂದ್ರ ಕಾರ್ಮಿಕ ಸಚಿವ ಸಂತೋಷ್​​ ಕುಮಾರ್​ ಗಂಗಾವರ್​ ಸಿಬಿಟಿಯ ಮುಖ್ಯಸ್ಥರಾಗಿದ್ದಾರೆ. 6 ಕೋಟಿ ವೇತನದಾರರು ಇಪಿಎಫ್​ಒದಲ್ಲಿ ಖಾತೆ ಹೊಂದಿದ್ದಾರೆ. ಕೊರೊನಾ ಸಂದರ್ಭದಲ್ಲಿ 1 ಲಕ್ಷ ರೂಪಾಯಿವರೆಗೆ ಹಣ ವಿತ್​ಡ್ರಾ ಮಾಡಲು ಸರ್ಕಾರ ಅವಕಾಶ ನೀಡಿತ್ತು. ಹೀಗಾಗಿ, ಸಾಕಷ್ಟು ಮಂದಿ ಹಣ ತೆಗೆದಿದ್ದರಿಂದ, ಸಂಚಿತ ನಿಧಿ ಕಡಿಮೆ ಆಗಿದೆ. 2020ರ ಏಪ್ರಿಲ್​-ಜೂನ್​ ಅವಧಿಯಲ್ಲಿ 80 ಲಕ್ಷ ಚಂದಾದಾರು ಹಣವನ್ನು ಹಿಂಪಡೆದಿದ್ದಾರೆ.

EPF ಬಡ್ಡಿದರ: ಪ್ರಸ್ತುತ, EPF ಠೇವಣಿಗಳ ಮೇಲೆ ಚಾಲ್ತಿಯಲ್ಲಿರುವ ದರವು ಶೇ 8.65. ಬಡ್ಡಿದರವನ್ನು ಪ್ರತಿವರ್ಷ ಪರಿಶೀಲಿಸಲಾಗುತ್ತದೆ. ಕಳೆದ ಆರು ವರ್ಷಗಳಲ್ಲಿ EPF ಮೇಲಿನ ಬಡ್ಡಿದರ ಹೇಗೆ ಬದಲಾಗಿದೆ ಎಂಬುದು ಈ ಕೆಳಗಿನಂತಿದೆ.

ವರ್ಷ, EPF, ಬಡ್ಡಿದರ 2019 – 20  8.65% 2018 – 19  8.65% 2017 – 18  8.55% 2016 – 17  8.80% 2015 – 16  8.80% 2014 – 15  8.75%

Published On - 1:50 pm, Wed, 17 February 21

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್