Tokyo Olympics: ಒಲಿಂಪಿಕ್ಸ್ನಲ್ಲೊಂದು ಅದ್ಭುತ ಕ್ಷಣ; ಆಟದಲ್ಲಿ ಸೋತ ಫೆನ್ಸರ್ಗೆ ಕೋಚ್ ಕೊಟ್ಟ ಭರ್ಜರಿ ಸರ್ಪ್ರೈಸ್ ಇದು !
ಫೆನ್ಸರ್ ಮಾರಿಯಾ ಬೆಲೆನ್ಗೆ ಇದು ಮೂರನೇ ಒಲಿಂಪಿಕ್. ಸೋಮವಾರ ಮೊದಲ ಸುತ್ತಿನಲ್ಲೇ ಸೋತು ಆಟದಿಂದ ಹೊರಬಿದ್ದರು. ಈ ಬಗ್ಗೆ ಮಾಧ್ಯಮದವರ ಬಳಿ ಮಾತನಾಡುತ್ತ, ಅವರು ಕೇಳಿದ ಪ್ರಶ್ನೆಗೆ ಬೇಸರದಿಂದಲೇ ಉತ್ತರ ನೀಡುತ್ತಿದ್ದರು.
ಜಪಾನ್ನ ಟೋಕಿಯೋದಲ್ಲಿ ಒಲಿಂಪಿಕ್ಸ್ 2020 (Tokyo Olympic) ನಡೆಯುತ್ತಿದ್ದು, ಇದರಲ್ಲಿ ಪಾಲ್ಗೊಂಡಿರುವ ಎಲ್ಲ ದೇಶಗಳ ಆಟಗಾರರೂ ಪದಕ ಬೇಟೆಯತ್ತ ಮುನ್ನುಗ್ಗುತ್ತಿದ್ದಾರೆ. ಕೆಲವರು ಸೋತು, ಬೇಸರದಿಂದಲೇ ಆಟದಿಂದ ಹೊರನಡೆದಿದ್ದಾರೆ. ಆದರೆ ಅರ್ಜಿಂಟಿನಾದ ಫೆನ್ಸರ್ ಮಾರಿಯಾ ಬೆಲೆನ್ ಪೆರೆಜ್ ಮಾರಿಸ್ಗೆ ಸೋತ ನೋವಿನ ಮಧ್ಯೆಯೂ ಒಂದು ಭರ್ಜರಿ ಖುಷಿ ಸಿಕ್ಕಿದೆ. ಆ ಸಂತೋಷ ತಾಳಲಾರದೆ ಆಟಗಾರ್ತಿ ಆನಂದ ಭಾಷ್ಪ ಸುರಿಸಿದ್ದಾರೆ.
ಫೆನ್ಸರ್ ಮಾರಿಯಾ ಬೆಲೆನ್ಗೆ ಇದು ಮೂರನೇ ಒಲಿಂಪಿಕ್. ಸೋಮವಾರ ಮೊದಲ ಸುತ್ತಿನಲ್ಲೇ ಸೋತು ಆಟದಿಂದ ಹೊರಬಿದ್ದರು. ಈ ಬಗ್ಗೆ ಮಾಧ್ಯಮದವರ ಬಳಿ ಮಾತನಾಡುತ್ತ, ಅವರು ಕೇಳಿದ ಪ್ರಶ್ನೆಗೆ ಬೇಸರದಿಂದಲೇ ಉತ್ತರ ನೀಡುತ್ತಿದ್ದರು. ಅವರ ಮಾತಿನಲ್ಲಿ ನಿರಾಸೆ ಎದ್ದು ಕಾಣುತ್ತಿತ್ತು. ಆದರೆ ಅಷ್ಟರಲ್ಲಿ ಆಕೆಯ ಹಿಂದಿನಿಂದ ಬಂದ ಕೋಚ್ ಲ್ಯೂಕಾಸ್ ಸೌಸೆಡೊ ಒಂದು ಸರ್ಪ್ರೈಸ್ನೊಂದಿಗೆ ಬಂದರು. ಒಂದು ದೊಡ್ಡದಾದ ಪೇಪರ್ ಮೇಲೆ, ನೀನು ನನ್ನನ್ನು ಮದುವೆಯಾಗುತ್ತೀಯಾ? (Will You Marry Me?) ಎಂದು ಬರೆದು ಅದನ್ನು ಹಿಡಿದು ಬಂದಿದ್ದಾರೆ. ಆದರೆ ಕೆಲ ಸಮಯವಾದರೂ ಮರಿಯಾ ಬೆಲೆನ್ಗೆ ಅದು ಗೊತ್ತಾಗಲೇ ಇಲ್ಲ. ಆಕೆಯನ್ನು ಮಾತನಾಡಿಸುತ್ತಿದ್ದ ರಿಪೋರ್ಟರ್ ತಿರುಗಿ ನೋಡುವಂತ ಹೇಳಿದಾಗ, ತುಸು ಅಚ್ಚರಿಯಿಂದಲೇ ನೋಡಿದರು. ಬಳಿಕ ಮಾತ್ರ ಅತ್ಯಂತ ಸಂತೋಷ ಪಡುವ ಸಮಯ ಅವರದ್ದಾಗಿತ್ತು. ಕೋಚ್ ಪ್ರಪೋಸ್ಗೆ ಒಪ್ಪಿಗೆಯನ್ನೂ ನೀಡಿದರು. ಇಬ್ಬರೂ ಪರಸ್ಪರ ಅಪ್ಪಿಕೊಂಡು ಚುಂಬಿಸುವ ಮೂಲಕ, ಹೊಸ ಜೀವನದತ್ತ ಒಂದು ಹೆಜ್ಜೆಯನ್ನು ಇಟ್ಟರು. ಇದೆಲ್ಲವೂ ಆ ಸುದ್ದಿ ಮಾಧ್ಯಮದ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಾರಿಯಾ ಮತ್ತು ಅವರ ತರಬೇತಿದಾರ ಲ್ಯೂಕಾಸ್ ಸೌಸೆಡೊ 17 ವರ್ಷಗಳಿಂದ ರಿಲೇಶನ್ಶಿಪ್ನಲ್ಲಿದ್ದಾರೆ. ಇಂದು ಟಿವಿ ಕ್ಯಾಮರಾ ಎದುರೇ ಲ್ಯೂಕಾಸ್ ಮದುವೆ ಪ್ರಪೋಸ್ ಮಾಡಿದ್ದನ್ನು ನೋಡಿ ತಾನು ಮೂಕವಿಸ್ಮಿತಳಾಗಿದ್ದಾಗಿ ಮರಿಯಾ ಹೇಳಿಕೊಂಡಿದ್ದಾರೆ. ಹಾಗೇ, ಅರ್ಜಿಂಟಿನಾಕ್ಕೆ ತೆರಳಿ, ಅದ್ದೂರಿಯಾಗಿ, ಸಂಪ್ರದಾಯ ಬದ್ಧವಾಗಿ ಮದುವೆಯಾಗುವುದೊಂದೇ ಬಾಕಿ ಇರುವುದಾಗಿ ಹೇಳಿಕೊಂಡಿದ್ದಾರೆ.
ಭಾನುವಾರವೂ ಇಂಥದ್ದೇ ಒಂದು ಘಟನೆ ನಡೆದಿತ್ತು. ಜರ್ಮನಿಯ ಫೂಟ್ಬಾಲ್ ಆಟಗಾರ ಮ್ಯಾಕ್ಸ್ ಕ್ರೂಸೆ ತನ್ನ ಪ್ರೇಯಸಿಗೆ ಮದುವೆ ಪ್ರಮೋಸ್ ಮಾಡಿದ್ದರು. ಅವರ ತಂಡ ಸೌದಿ ಅರೆಬಿಯಾ ವಿರುದ್ಧ 3-2 ಅಂತರದಲ್ಲಿ ಗೆದ್ದ ಬಳಿಕ ಟಿವಿಗಳ ಕ್ಯಾಮರಾ ಎದುರೇ ಪ್ರಪೋಸ್ ಮಾಡಿದ್ದರು.
Y después del combate de esgrima le pidieron casamiento a María Belén Pérez Maurice en vivo. pic.twitter.com/wEmGuOW7CB
— Rústico (@lautarojl) July 26, 2021
ಇದನ್ನೂ ಓದಿ: Karnataka New CM: ಕರ್ನಾಟಕ ಮುಖ್ಯಮಂತ್ರಿ ಅಯ್ಕೆ ಇಂದೇ -ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್ ಘೋಷಣೆ
Coach Proposes To Argentine Fencer In ongoing Olympics