Saudi Arabia: ಸೌದಿ ಅರೇಬಿಯಾದ ಪ್ರಜೆಗಳು ಭಾರತಕ್ಕೆ ಬಂದರೆ 3 ವರ್ಷ ಪ್ರಯಾಣ ನಿಷೇಧ; ಕಾರಣ ಇಲ್ಲಿದೆ

TV9 Digital Desk

| Edited By: Sushma Chakre

Updated on: Jul 28, 2021 | 12:57 PM

Covid-19 Cases: ಕೊರೋನಾ ಕೇಸು ಮತ್ತು ರೂಪಾಂತರಿ ಕೇಸುಗಳು ಹೆಚ್ಚಾಗಿರುವ ದೇಶಗಳನ್ನು ಸೌದಿ ಅರೇಬಿಯಾ ರೆಡ್ ಪಟ್ಟಿಗೆ ಸೇರಿಸಿದೆ. ಆ ಪಟ್ಟಿಯಲ್ಲಿ ಭಾರತ, ಪಾಕಿಸ್ತಾನ ಸೇರಿ ಹಲವು ರಾಷ್ಟ್ರಗಳಿವೆ.

Saudi Arabia: ಸೌದಿ ಅರೇಬಿಯಾದ ಪ್ರಜೆಗಳು ಭಾರತಕ್ಕೆ ಬಂದರೆ 3 ವರ್ಷ ಪ್ರಯಾಣ ನಿಷೇಧ; ಕಾರಣ ಇಲ್ಲಿದೆ
ಸಾಂದರ್ಭಿಕ ಚಿತ್ರ

ನವದೆಹಲಿ: ಸುಮಾರು ಒಂದೂವರೆ ವರ್ಷಗಳಿಂದ ಇಡೀ ವಿಶ್ವವನ್ನು ಕಾಡುತ್ತಿರುವ ಕೊರೋನಾ ಮಾರಿಯ ಆರ್ಭಟ ಇನ್ನೂ ಕಡಿಮೆಯಾಗಿಲ್ಲ. ಅನೇಕ ದೇಶಗಳಲ್ಲಿ ಕೊರೋನಾ ಮೂರನೇ ಅಲೆಯ ಭೀತಿ ಶುರುವಾಗಿದೆ. ಈಗಾಗಲೇ ಲಸಿಕೆಗಳನ್ನು ಕಂಡುಹಿಡಿದಿದ್ದರೂ ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ಕೋವಿಡ್ ಕೇಸುಗಳು ಕಂಡುಬರುತ್ತಲೇ ಇವೆ. ಹೀಗಾಗಿ, ಕೋವಿಡ್-19 (Covid-19 Cases) ಮತ್ತು ರೂಪಾಂತರಿ ಕೊರೋನಾವೈರಸ್​ (Covid New Variant) ಪ್ರಕರಣಗಳು ಹೆಚ್ಚಾಗಿರುವ ದೇಶಗಳ ಪಟ್ಟಿಯನ್ನು ಸೌದಿ ಅರೇಬಿಯಾ (Saudi Arabia) ಸಿದ್ಧಪಡಿಸಿಕೊಂಡಿದೆ. ಆ ದೇಶಗಳನ್ನು ರೆಡ್ ಜೋನ್​ನಲ್ಲಿರುವ (Red List) ದೇಶಗಳೆಂದು ಪರಿಗಣಿಸಿರುವ ಸೌದಿ ಅರೇಬಿಯಾ ತಮ್ಮ ರಾಷ್ಟ್ರದ ಪ್ರಜೆಗಳು ಆ ರೆಡ್ ಪಟ್ಟಿಯಲ್ಲಿರುವ ದೇಶಗಳಿಗೆ ಪ್ರಯಾಣ ಮಾಡಿದರೆ 3 ವರ್ಷಗಳ ಕಾಲ ಪ್ರಯಾಣಕ್ಕೆ ನಿಷೇಧ (Travel Ban) ಹೇರುವುದಾಗಿ ಎಚ್ಚರಿಕೆ ನೀಡಿದೆ. ಅಲ್ಲದೆ, ರೆಡ್ ಪಟ್ಟಿಯಲ್ಲಿರುವ ದೇಶಗಳಿಗೆ ತೆರಳಿ ವಾಪಾಸಾಗುವ ತನ್ನ ದೇಶದ ಪ್ರಜೆಗಳು ದುಬಾರಿ ದಂಡ ಕಟ್ಟಬೇಕೆಂದು ಕೂಡ ಹೊಸ ಆದೇಶ ಹೊರಡಿಸಿದೆ.

ಅಂದಹಾಗೆ, ಸೌದಿ ಅರೇಬಿಯಾದ ರೆಡ್ ಪಟ್ಟಿಯಲ್ಲಿರುವ ದೇಶಗಳಲ್ಲಿ ಭಾರತ ಕೂಡ ಇದೆ! ಹೀಗಾಗಿ, ಸೌದಿ ಅರೇಬಿಯಾದವರು ಭಾರತಕ್ಕೆ ಬಂದರೆ ಮೂರು ವರ್ಷಗಳ ಕಾಲ ಪ್ರಯಾಣಕ್ಕೆ ನಿಷೇಧ ಹೇರಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ಈಗ ಕೋವಿಡ್ ಕೇಸುಗಳು ಕೊಂಚ ನಿಯಂತ್ರಣಕ್ಕೆ ಬರುತ್ತಿವೆ. ಈ ವೇಳೆಯಲ್ಲಿ ಬೇರೆ ದೇಶಗಳಿಗೆ ಪ್ರಯಾಣ ಮಾಡುವ ಅಥವಾ ಬೇರೆ ದೇಶಗಳಿಂದ ಆಗಮಿಸುವವರಿಂದ ಕೊರೋನಾ ಸೋಂಕು ಮತ್ತೆ ಹರಡದಿರುವಂತೆ ಎಚ್ಚರ ವಹಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ರೆಡ್ ಪಟ್ಟಿಯಲ್ಲಿರುವ ದೇಶಗಳಿವು: ಕೊರೋನಾ ಕೇಸು ಮತ್ತು ರೂಪಾಂತರಿ ಕೇಸುಗಳು ಹೆಚ್ಚಾಗಿರುವ ದೇಶಗಳನ್ನು ಸೌದಿ ಅರೇಬಿಯಾ ರೆಡ್ ಪಟ್ಟಿಗೆ ಸೇರಿಸಿದೆ. ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಅರ್ಜೆಂಟಿನಾ, ಬ್ರೆಜಿಲ್, ಈಜಿಪ್ಟ್, ಇಂಡೋನೇಷ್ಯಾ, ಲೆಬನಾನ್, ದಕ್ಷಿಣ ಆಫ್ರಿಕಾ, ಟರ್ಕಿ, ವಿಯೆಟ್ನಾಂ ಮತ್ತು ಯುಎಇ ರಾಷ್ಟ್ರಗಳಿಗೆ ಪ್ರಯಾಣಿಸುವ ಸೌದಿ ಪ್ರಜೆಗಳು 3 ವರ್ಷಗಳ ಕಾಲ ಪ್ರಯಾಣ ನಿಷೇಧ ಎದುರಿಸಬೇಕಾದೀತು.

ಗಲ್ಫ್ ರಾಷ್ಟ್ರಗಳ ಪೈಕಿ ಅತಿ ವಿಸ್ತಾರವಾಗಿರುವ ಸೌದಿ ಅರೇಬಿಯಾದಲ್ಲಿ 30 ಮಿಲಿಯನ್ ಜನಸಂಖ್ಯೆಯಿದೆ. ಸೌದಿಯಲ್ಲಿ ಮಂಗಳವಾರ 1,376 ಕೋವಿಡ್ ಕೇಸುಗಳು ಪತ್ತೆಯಾಗಿವೆ. ಸೌದಿಯಲ್ಲಿ ಕೊರೋನಾ ಕೇಸುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಸಾಕಷ್ಟು ಹೊಸ ಆದೇಶವನ್ನು ಹೊರಡಿಸಲು ಸೌದಿ ಅರೇಬಿಯಾ ನಿರ್ಧರಿಸಿದೆ.

ಇದನ್ನೂ ಓದಿ: Covid Vaccine: ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಭಾರತದ ಈ ರಾಜ್ಯಕ್ಕೆ ಪ್ರವೇಶ ನಿಷೇಧ!

Covid Vaccination: ಮುಂದಿನ ತಿಂಗಳು ಮಕ್ಕಳಿಗೂ ಕೋವಿಡ್ ಲಸಿಕೆ ಲಭ್ಯ; ಕೇಂದ್ರ ಸರ್ಕಾರ ಮಾಹಿತಿ

(Saudi Arabia Threatens 3 year Travel Ban for Citizens who Visit Red List Countries Including India, Pakistan)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada