Covid Vaccination: ಮುಂದಿನ ತಿಂಗಳು ಮಕ್ಕಳಿಗೂ ಕೋವಿಡ್ ಲಸಿಕೆ ಲಭ್ಯ; ಕೇಂದ್ರ ಸರ್ಕಾರ ಮಾಹಿತಿ

Covid Vaccine for Children: ಕೆಲವು ದಿನಗಳ ಹಿಂದೆ, ಭಾರತದಲ್ಲಿ ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೂ ಕೊರೊನಾ ಲಸಿಕೆ ನೀಡುವ ಅಭಿಯಾನ ಆರಂಭವಾಗಬಹುದು ಎಂದು ಏಮ್ಸ್ ನಿರ್ದೇಶಕ ಡಾ. ರಣದೀಪ್‌ ಗುಲೇರಿಯಾ ತಿಳಿಸಿದ್ದರು. ಆದರೆ, ಆಗಸ್ಟ್​ನಲ್ಲೇ ಮಕ್ಕಳಿಗೆ ಕೋವಿಡ್ ಲಸಿಕೆ ಲಭ್ಯವಾಗಲಿದೆ.

Covid Vaccination: ಮುಂದಿನ ತಿಂಗಳು ಮಕ್ಕಳಿಗೂ ಕೋವಿಡ್ ಲಸಿಕೆ ಲಭ್ಯ; ಕೇಂದ್ರ ಸರ್ಕಾರ ಮಾಹಿತಿ
ಲಸಿಕೆ (ಪ್ರಾತಿನಿಧಿಕ ಚಿತ್ರ)
Follow us
| Updated By: ಸುಷ್ಮಾ ಚಕ್ರೆ

Updated on:Jul 27, 2021 | 1:59 PM

ನವದೆಹಲಿ: ಕೋವಿಡ್ ಮೂರನೇ ಅಲೆ ವಯಸ್ಕರಿಗಿಂತ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಮುಂದಿನ ತಿಂಗಳ ವೇಳೆಗೆ ಭಾರತದಲ್ಲಿ ಮಕ್ಕಳಿಗೂ ಕೋವಿಡ್ ಲಸಿಕೆ (COVID Vaccine for Children) ನೀಡುವುದಾಗಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು  ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇಂದು ಬೆಳಗ್ಗೆ ಸಂಸತ್​ನಲ್ಲಿ ನಡೆದ ಬಿಜೆಪಿ ಸಂಸದರ ಸಭೆ ವೇಳೆ ತಿಳಿಸಿದ್ದಾರೆ. ಹೀಗಾಗಿ, ಮುಂದಿನ ತಿಂಗಳ ವೇಳೆಗೆ ಮಕ್ಕಳಿಗೂ ಕೊರೋನಾ ಲಸಿಕೆ (Coronavirus Vaccine) ಅಭಿಯಾನ ಶುರುವಾಗುವುದು ಬಹುತೇಕ ಖಚಿತವಾಗಿದೆ.

ಕೆಲವು ದಿನಗಳ ಹಿಂದೆ, ಭಾರತದಲ್ಲಿ ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೂ ಕೊರೊನಾ ಲಸಿಕೆ ನೀಡುವ ಅಭಿಯಾನ ಆರಂಭವಾಗಬಹುದು ಎಂದು ಏಮ್ಸ್ ನಿರ್ದೇಶಕ ಡಾ. ರಣದೀಪ್‌ ಗುಲೇರಿಯಾ ತಿಳಿಸಿದ್ದರು. ಕೋವಿಡ್ ಲಸಿಕೆಯ ರಾಷ್ಟ್ರೀಯ ತಜ್ಞರ ತಂಡದ ಮುಖ್ಯಸ್ಥ ಡಾ. ಎನ್​ಕೆ ಅರೋರ ಕೂಡ ಸೆಪ್ಟೆಂಬರ್​ನಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ ಲಭ್ಯವಾಗುವ ಸಾಧ್ಯತೆಯಿದೆ ಎಂದಿದ್ದರು. ಆದರೆ, ಒಂದು ತಿಂಗಳು ಮುಂಚಿತವಾಗಿ ಅಂದರೆ ಆಗಸ್ಟ್​ ವೇಳೆಗೆ ಭಾರತದಲ್ಲಿ ಮಕ್ಕಳಿಗೂ ಕೋವಿಡ್ ಲಸಿಕೆ ಲಭ್ಯವಾಗಲಿದೆ.

ಈಗಾಗಲೇ ಹಲವು ಕಂಪನಿಗಳು ಮಕ್ಕಳಿಗೆ ಕೋವಿಡ್‌ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿವೆ. ಭಾರತ್ ಬಯೋಟೆಕ್​ನ ಕೋವ್ಯಾಕ್ಸಿನ್ ಮತ್ತು ಝಿಡಸ್ ಕ್ಯಾಡಿಲಾ ಮಕ್ಕಳ ಕೋವಿಡ್ ಲಸಿಕೆಯ ಬಗ್ಗೆ ಪ್ರಯೋಗಗಳನ್ನು ನಡೆಸುತ್ತಿವೆ. ಕೋವ್ಯಾಕ್ಸಿನ್​ ಪರೀಕ್ಷೆಯ ಫಲಿತಾಂಶ ಸೆಪ್ಟೆಂಬರ್ ವೇಳೆಗೆ ಲಭ್ಯವಾಗಲಿದೆ ಎಂದು ಏಮ್ಸ್​ ಮುಖ್ಯಸ್ಥ ರಣದೀಪ್ ತಿಳಿಸಿದ್ದರು. ಝಿಡಸ್ ಸಂಸ್ಥೆ ಕೂಡ ಮಕ್ಕಳ ಕೋವಿಡ್ ಲಸಿಕೆಯ ತುರ್ತು ಬಳಕೆಯ ಅನುಮೋದನೆಗಾಗಿ ಕಾಯುತ್ತಿದೆ.

ಈವರೆಗೆ ಭಾರತದಲ್ಲಿ 42 ಕೋಟಿಗೂ ಹೆಚ್ಚು ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ದೇಶದ ಎಲ್ಲ ವಯಸ್ಕರಿಗೆ ಕೊರೋನಾ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಪ್ರತಿದಿನವೂ ಸುಮಾರು 1 ಕೋಟಿ ಲಸಿಕೆ ನೀಡಬೇಕಾಗಿದೆ. ಮಕ್ಕಳಿಗಾಗಿ ತಯಾರಿಸಿದ ಫೈಝರ್ ಲಸಿಕೆಗೆ ಈಗಾಗಲೇ ಅಮೆರಿಕದಲ್ಲಿ ಅನುಮೋದನೆ ಸಿಕ್ಕಿದೆ. ಮೂರನೇ ಅಲೆ ಆರಂಭವಾಗುವುದರೊಳಗೆ ಮಕ್ಕಳಿಗೂ ಕೋವಿಡ್ ಲಸಿಕೆ ಹಾಕಿಸುವ ಯೋಚನೆ ಕೇಂದ್ರ ಸರ್ಕಾರದ್ದಾಗಿದೆ.

ಇದನ್ನೂ ಓದಿ: Explainer: ಕೊವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ ಕಂಡುಬರುವ ಕೊರೊನಾವೈರಸ್ ಸೋಂಕು ಲಕ್ಷಣಗಳು

ಲಸಿಕೆಗಾಗಿ ಫೈಜರ್‌ನೊಂದಿಗೆ ಸರ್ಕಾರದ ತಜ್ಞರ ಗುಂಪು ಮಾತುಕತೆ ನಡೆಸುತ್ತಿದೆ: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ

(Covid Vaccine For Children Likely Next Month in India PM Narendra Modi Told To BJP MPs Today)

Published On - 1:51 pm, Tue, 27 July 21

Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್