ಜಾಗತಿಕ ಮಟ್ಟದಲ್ಲಿ ಕೊವಿಡ್ ಸಾವು ಶೇ 21ರಷ್ಟು ಏರಿಕೆ; ಎರಡು ವಾರಗಳಲ್ಲಿ ಪ್ರಕರಣಗಳು 20 ಕೋಟಿ ಮೀರುವ ಸಾಧ್ಯತೆ: ವಿಶ್ವ ಆರೋಗ್ಯ ಸಂಸ್ಥೆ

TV9 Digital Desk

| Edited By: Rashmi Kallakatta

Updated on:Jul 28, 2021 | 8:04 PM

Coronavirus: ಕಳೆದ ವಾರದಲ್ಲಿ ಸರಾಸರಿ 5,40,000 ದೈನಂದಿನ ಸೋಂಕುಗಳು ವರದಿಯಾಗಿರುವುದರಿಂದ ವಿಶ್ವದಾದ್ಯಂತ ಒಟ್ಟಾರೆ ಕೊವಿಡ್ -19 ಪ್ರಕರಣಗಳು ಶೇ 8ರಷ್ಟು ಹೆಚ್ಚಾಗಿದೆ. "ಈ ಪ್ರವೃತ್ತಿಗಳು ಮುಂದುವರಿದರೆ, ಜಾಗತಿಕವಾಗಿ ವರದಿಯಾದ ಒಟ್ಟು ಪ್ರಕರಣಗಳು ಮುಂದಿನ ಎರಡು ವಾರಗಳಲ್ಲಿ 20 ಕೋಟಿ ಮೀರಬಹುದು"

ಜಾಗತಿಕ ಮಟ್ಟದಲ್ಲಿ ಕೊವಿಡ್ ಸಾವು ಶೇ 21ರಷ್ಟು ಏರಿಕೆ; ಎರಡು ವಾರಗಳಲ್ಲಿ ಪ್ರಕರಣಗಳು 20 ಕೋಟಿ ಮೀರುವ ಸಾಧ್ಯತೆ: ವಿಶ್ವ ಆರೋಗ್ಯ ಸಂಸ್ಥೆ
ಮಾಸ್ಕೊದಲ್ಲಿ ಲಸಿಕೆ ಪಡೆಯಲು ಸರದಿಯಲ್ಲಿರುವ ಜನರು

ವಾಷಿಂಗ್ಟನ್: ಡೆಲ್ಟಾ ರೂಪಾಂತರವು ಹಾನಿ ಸೃಷ್ಟಿಸುತ್ತಿದ್ದು ಕಳೆದ ವಾರದಲ್ಲಿ ಕೊರೊನಾವೈರಸ್ ಕಾಯಿಲೆಯಿಂದ (Covid-19) ವಿಶ್ವದಾದ್ಯಂತ ಸಾವನ್ನಪ್ಪಿದವರ ಸಂಖ್ಯೆ ಶೇ 21ರಷ್ಟು ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ತನ್ನ ಸಾಪ್ತಾಹಿಕ ಅಪ್‌ಡೇಟ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ 69,000 ಸಾವುಗಳಲ್ಲಿ ಹೆಚ್ಚಿನವು ಅಮೆರಿಕ ಮತ್ತು ಆಗ್ನೇಯ ಏಷ್ಯಾದಲ್ಲಿ ವರದಿಯಾಗಿದೆ ಎಂದು ಹೇಳಿದ್ದು, ಒಟ್ಟು ಸಾವುಗಳು 0.4 ಕೋಟಿ ತಲುಪಿದೆ ಎಂದಿದೆ. ಅಮೆರಿಕ ಮತ್ತು ಆಗ್ನೇಯ ಏಷ್ಯಾ ಪ್ರದೇಶಗಳಲ್ಲಿ ಕಳೆದ ಒಂದು ವಾರದಲ್ಲಿ 1,00,000 ಜನಸಂಖ್ಯೆಗೆ ಪ್ರತಿಯಾಗಿ ಅತಿ ಹೆಚ್ಚು ಸಾವುಗಳು ಕಂಡುಬಂದಿವೆ ಇದು 1,00,000 ಜನಸಂಖ್ಯೆಗೆ ಕ್ರಮವಾಗಿ 2.8 ಮತ್ತು 1.1 ಹೊಸ ಸಾವುಗಳನ್ನು ವರದಿ ಮಾಡಿದೆ ”ಎಂದು ವರದಿ ತಿಳಿಸಿದೆ.

ಕಳೆದ ವಾರದಲ್ಲಿ ಸರಾಸರಿ 5,40,000 ದೈನಂದಿನ ಸೋಂಕುಗಳು ವರದಿಯಾಗಿರುವುದರಿಂದ ವಿಶ್ವದಾದ್ಯಂತ ಒಟ್ಟಾರೆ ಕೊವಿಡ್ -19 ಪ್ರಕರಣಗಳು ಶೇ 8ರಷ್ಟು ಹೆಚ್ಚಾಗಿದೆ. “ಈ ಪ್ರವೃತ್ತಿಗಳು ಮುಂದುವರಿದರೆ, ಜಾಗತಿಕವಾಗಿ ವರದಿಯಾದ ಒಟ್ಟು ಪ್ರಕರಣಗಳು ಮುಂದಿನ ಎರಡು ವಾರಗಳಲ್ಲಿ 20 ಕೋಟಿ ಮೀರಬಹುದು” ಎಂದು ಕೊವಿಡ್ -19 ಪ್ರಕರಣಗಳ ಏರಿಕೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಕಳೆದ ವಾರ ಅಮೆರಿಕ, ಬ್ರೆಜಿಲ್, ಇಂಡೋನೇಷ್ಯಾ, ಬ್ರಿಟನ್ ಮತ್ತು ಭಾರತದಿಂದ ಹೆಚ್ಚಿನ ಸಂಖ್ಯೆಯ ಹೊಸ ಕೊವಿಡ್ -19 ಪ್ರಕರಣಗಳು ವರದಿಯಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಮೆರಿಕ ಮತ್ತು ಬ್ರೆಜಿಲ್ ಕೊವಿಡ್ -19 ಪ್ರಕರಣಗಳ ಹೆಚ್ಚಳವನ್ನು ವರದಿ ಮಾಡಿದರೆ, ಇಂಡೋನೇಷ್ಯಾ ಮತ್ತು ಬ್ರಿಟನ್ ಕುಸಿತವನ್ನು ವರದಿ ಮಾಡಿದೆ. ಕಳೆದ ವಾರದಲ್ಲಿ ಭಾರತದ ಕೊವಿಡ್ -19 ಪ್ರಕರಣಗಳಲ್ಲಿ ಗಣನೀಯ ಇಳಿಕೆ ವರದಿಯಾಗಿದೆ. ಹೆಚ್ಚು ಸಾಂಕ್ರಾಮಿಕವಾಗಿರುವ ಡೆಲ್ಟಾ ರೂಪಾಂತರವು ಈಗ 132 ದೇಶಗಳಲ್ಲಿ ಪತ್ತೆಯಾಗಿದೆ. ವರದಿಯ ಪ್ರಕಾರ ಎಂಟು ಹೊಸ ದೇಶಗಳಿಗೆ ಇದು ಹರಡಿದೆ.

ಕಾಳಜಿಯ ರೂಪಾಂತರಗಳ ವಿರುದ್ಧ ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ವ್ಯಾಪಕವಾದ ಕಾಳಜಿಯನ್ನು ಉದ್ದೇಶಿಸಿದ ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನಗಳು ರೂಪಾಂತರಗಳ ವಿರುದ್ಧ ತಟಸ್ಥೀಕರಣದಲ್ಲಿ ಹಲವಾರು ಪಟ್ಟು ಕಡಿತವನ್ನು ತೋರಿಸಿದರೂ, ಇದು ಕಡಿಮೆ ಲಸಿಕೆ ಪರಿಣಾಮಕಾರಿತ್ವದೊಂದಿಗೆ ನೇರವಾಗಿ ಸಂಬಂಧ ಹೊಂದಿಲ್ಲ ಎಂದು ಹೇಳಿದರು. ಇದರ ಕಾರಣಗಳನ್ನು ವಿವರಿಸಿದ ಸಂಸ್ಥೆ ಪ್ರಸ್ತುತ ತಟಸ್ಥೀಕರಣದ ಯಾವುದೇ ಮಿತಿ ಇಲ್ಲ ಎಂದು ತಿಳಿಸಿದೆ. ಲಸಿಕೆಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಕೆಲವು ಲಸಿಕೆಗಳು ಹೆಚ್ಚಿನ ತಟಸ್ಥಗೊಳಿಸುವ ಪ್ರತಿಕಾಯ ಸಾಂದ್ರತೆಯನ್ನು ಉತ್ಪತ್ತಿ ಮಾಡುತ್ತವೆ ಎಂದು ಅದು ಗಮನಿಸಿದೆ, ಆದ್ದರಿಂದ ಕಡಿತವು ಲಸಿಕೆ ಪರಿಣಾಮಕಾರಿತ್ವದ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ಇದನ್ನೂ ಓದಿ:  Basavaraj Bommai: ಕೊವಿಡ್ ನಿಯಂತ್ರಿಸಲು ಹಗಲಿರುಳು ಶ್ರಮಿಸುವೆ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ: ‘ಐಟಿ ನಿಯಮಗಳನ್ನು ಪಾಲಿಸದಿರುವುದರ’ ಕುರಿತು ಟ್ವಿಟರ್‌ನ ಅಫಿಡವಿಟ್ ತಿರಸ್ಕರಿಸಿದ ದೆಹಲಿ ಹೈಕೋರ್ಟ್

(worldwide deaths from coronavirus disease up by 21 percent cases could exceed 200 mn in two weeks says WHO)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada