ನರಭಕ್ಷಕನೊಬ್ಬ ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ಯುವಕನನ್ನು ಕೊಂದು ದೇಹದ ಭಾಗಗಳನ್ನು ಒಂದೊಂದಾಗಿ ಬೇಯಿಸಿಕೊಂಡು ತಿಂದ!
ಕೆವಿನನ್ನು ಗಂಟಲು ಸೀಳಿ ಕೊಂದ ಬಳಿಕ ಅವನ ದೇಹವನ್ನು ತನ್ನ ಗ್ಯಾರೇಜಿಗೆ ಎಳೆದೊಯ್ದು ಹಗ್ಗಗಳ ಮೂಲಕ ನೇತು ಹಾಕಿ ಅಂಗಾಂಗಗಳನ್ನು ಕತ್ತರಿಸಿಕೊಳ್ಳುತ್ತಿದ್ದೆ ಅಂತ ಅವನು ಪೊಲೀಸರಿಗೆ ಹೇಳಿದ್ದಾನೆ.
ಅಮೆರಿಕಾದ ಮಿಚಿಗನ್ ನಿವಾಸಿಯಾಗಿರುವ 53-ವರ್ಷ-ವಯಸ್ಸಿನ ಮಾರ್ಕ್ ಲಾತುಂಸ್ಕಿ (Mark Latunski) ಹೆಸರಿನ ನರಭಕ್ಷಕನೊಬ್ಬ ತನಗೆ ಡೇಟಿಂಗ್ ಌಪ್ ವೊಂದರಲ್ಲಿ ಪರಿಚಯವಾದ ಕೆವಿನ್ ಬೇಕನ್ (Kevin Bacon) ಎಂಬ ವ್ಯಕ್ತಿಯನ್ನು ಕೊಂದು ತಿಂದಿರುವ ಭಯಾನಕ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಗ್ರಿಂಡ್ (Grindr) ಌಪ್ ನಲ್ಲಿ ಪರಿಚಯವಾದ ಕೇಶವಿನ್ಯಾಸಕಾರ ಕೆವಿನನ್ನು ಡಿಸೆಂಬರ್ 19, 2019ರಂದು ಮನೆಗೆ ಬರುವಂತೆ ಪುಸಲಾಯಿಸಿದ ಬಳಿಕ ಅವನನ್ನು ಕೊಂದು ತಿಂದಿರುವುದಾಗಿ ಮಾರ್ಕ್ ಪೊಲೀಸರ ಮುಂದೆ ಅಂಗೀಕರಿಸಿದ್ದಾನೆ.
Mlive.com ನಲ್ಲಿ ಬಿತ್ತರಗೊಂಡ ವರದಿಯೊಂದರ ಪ್ರಕಾರ, ಕೆವಿನನ್ನು ತಿವಿದು ಕೊಂದ ನಂತರ ಅಡುಗೆ ಮನೆಯಲ್ಲಿ ಅವನ ದೇಹದ ಒಂದೊಂದೇ ಭಾಗವನ್ನು ಪ್ರತ್ಯೇಕಿಸಿ ಬೇಯಿಸಿಕೊಂಡು ತಿಂದಿರುವುದಾಗಿ ನರಭಕ್ಷಕ ಹೇಳಿದ್ದಾನೆ. ಕೆವಿನ್ ವೃಷಣಗಳನ್ನು ಸಹ ಕತ್ತರಿಸಿಕೊಂಡು ತಿಂದಿರುವುದಾಗಿ ಮಾರ್ಕ್ ಹೇಳಿದ್ದಾನೆ.
ಕೆವಿನ್ ಗಂಟಲು ಸೀಳಿ ಕೊಂದ ಬಳಿಕ ಅವನ ದೇಹವನ್ನು ತನ್ನ ಗ್ಯಾರೇಜಿಗೆ ಎಳೆದೊಯ್ದು ಹಗ್ಗಗಳ ಮೂಲಕ ನೇತು ಹಾಕಿ ಅಂಗಾಂಗಗಳನ್ನು ಕತ್ತರಿಸಿಕೊಳ್ಳುತ್ತಿದ್ದೆ ಅಂತ ಅವನು ಪೊಲೀಸರಿಗೆ ಹೇಳಿದ್ದಾನೆ.
2019 ರ ಕ್ರಿಸ್ಮಸ್ ಈವ್ ರಂದು ಒಂದು ಯೋಜಿತ ಬೆಳಗಿನ ಉಪಹಾರಕ್ಕೆ ಕೆವಿನ್ ಹಾಜರಾಗದೆ ಹೋದಾಗ ಕಳವಳ ಶುರುವಾಗಿತ್ತು. ಮಿಸ್ಸಿಂಗ್ ದೂರು ದಾಖಲಾದ ಮೇಲೆ ಪೊಲೀಸರು ಅವನ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಸೂಪರ್ ಮಾರ್ಕೆಟ್ ಒಂದರ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಕೆವಿನ್ ಮೊಬೈಕ್ ಅನ್ನು ಪೊಲೀಸರು ಪತ್ತೆಹಚ್ಚಿದ್ದರು.
ಕೆವಿನ್ ಎಲ್ಲೆಲ್ಲಿ ಓಡಾಡಿದ್ದ ಅನ್ನೋದನ್ನು ಡಿಸೆಂಬರ್ 28, 2019 ರಂದು ಜಿಪಿಎಸ್ ಮೂಲಕ ಪೊಲೀಸರು ಗೊತ್ತು ಮಾಡಿಕೊಂಡರು ಮತ್ತು ಕೊನೆಯಬಾರಿಗೆ ಅವನು ಮಾರ್ಕ್ ಮನೆಯಲ್ಲಿದ್ದಿದನ್ನು ಅವರು ಕಂಡುಕೊಂಡರು.
ಪೊಲೀಸರು ವಿಚಾರಣೆ ಅರಂಭಿಸಿದಾಗ ಮಾರ್ಕ್ ಮೊದಮೊದಲು, ಕೆವಿನ್ ಕಾಣೆಯಾಗಿರುವ ವಿಷಯದಲ್ಲಿ ತಾನು ನಿರ್ದೋಷಿ ಅಂತ ಸಾಧಿಸಿದ.
ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಅವನು ಮಾನಸಿಕ ಅಸ್ವಸ್ಥನಂತೆ ನಟಿಸುತ್ತಿದ್ದನಂತೆ. ಆದರೆ ಅಕ್ಟೋಬರ್ 18 ರಂದು ನ್ಯಾಯಾಲಯಲ್ಲಿ ವಿಚಾರಣೆ ಶುರುವಾಗಲಿರುವುದರಿಂದ ಅವನು ತನ್ನ ಮನವಿಯನ್ನು ಬದಲಾಯಿಸಿದ್ದಾನೆ.
‘ಮಾನಸಿಕ ರೋಗಿ, ಮಾನಸಿಕ ಕಾಯಿಲೆಯಿಂದ ಬಳಲಿತ್ತಿದ್ದೇನೆ ಅಂತ ಹೇಳೋದನ್ನು ಮೊದಲು ನಿಲ್ಲಿಸು,’ ಅಂತ ಅವನ ಲಾಯರ್ ಮೇರಿ ಚಾರ್ಟಿಯರ್ ಹೇಳಿದ್ದರಂತೆ.
ಕೆವಿನನ್ನು ಕೊಂದು ಅವನ ದೇಹದ ಭಾಗಗಳನ್ನು ಭಕ್ಷಿಸಿರುವುದಾಗಿ ಪೊಲೀಸರ ಎದುರು ಅಂಗೀಕರಿಸಿರುವ ನರಭಕ್ಷನಿಗೆ ಜೀವಾವಧಿ ಸೆರೆವಾಸದ ಶಿಕ್ಷೆ ಘೋಷಣೆಯಾಗುವ ನಿರೀಕ್ಷೆ ಇದೆ.
ಮೊದಲ ಇಲ್ಲವೇ ಎರಡನೇ ಡಿಗ್ರಿ ಕೊಲೆ ಅಪರಾಧದಲ್ಲಿ ಮಾರ್ಕ್ ಗೆ ಶಿಕ್ಷೆಯ ಅಗುತ್ತದೆಯೋ ಅಥವಾ ನರಹತ್ಯೆ ಅಪರಾಧದಲ್ಲಿ ಶಿಕ್ಷೆ ಘೋಷಣೆಯಾಗುತ್ತದೋ ಅನ್ನೋದು ಅಕ್ಟೋಬರ್ 18 ರಂದು ಗೊತ್ತಾಗಲಿದೆ.