ಮ್ಯಾರೀಡ್ ಎಟ್ ಫರ್ಸ್ಟ್ ಸೈಟ್ ಖ್ಯಾತಿಯ ಗೆಮ್ಮಾ ರೆಸ್ಟುರಾಂಟ್ ನಲ್ಲೇ ತನ್ನೆದಿರು ಲೈಂಗಿಕ ಕ್ರಿಯೆ ಪ್ರದರ್ಶಿಸಿದ್ದಳು ಅಂತ ಅವರ ಪತಿ ಆರೋಪಿಸಿದ್ದಾರೆ!!
ವಿಷಯವನ್ನು ಗೆಮ್ಮಾ ಪತಿ ಗ್ರೂಮ್ ಮ್ಯಾಟ್ ಚ್ಯಾನೆಲ್ 4 ರ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿ ನಟಿಗೆ ಇರುಸು ಮುರುಸು ಉಂಟಾಗುವಂತೆ ಮಾಡಿದರು. ಆಕೆ ಮಾಡುತ್ತಿದ್ದುದ್ದನ್ನು ನೋಡಿ ಹೇವರಿಕೆ ಉಂಟಾಗಿ ತಾನು ರೆಸ್ಟುರಾಂಟ್ ನಿಂದ ಹೊರ ಹೋದೆ ಎಂದು ಮ್ಯಾಟ್ ಹೇಳಿದ್ದಾರೆ.
ಹಾಲಿವುಡ್ ನಟ-ನಟಿಯರ ಖಾಸಗಿ ಜೀವನ ಸುಲಭಕ್ಕೆ ಅರ್ಥವಾಗುವಂಥದಲ್ಲ. ಇಂಗ್ಲಿಷ್ ಚ್ಯಾನಲ್ ಗಳನ್ನು ನೋಡುವ ಹವ್ಯಾಸ ನಿಮಗಿದ್ದರೆ ಮ್ಯಾರೀಡ್ ಎಟ್ ಫರ್ಸ್ಟ್ ಸೈಟ್ (Married At First Night) ಶೀರ್ಷಿಕೆಯ ಟೆಲಿ ಧಾರಾವಾಹಿ ನೋಡಿರುತ್ತೀರಿ. ಇದರಲ್ಲಿ ನಟಿಸಿದ್ದ ಖ್ಯಾತ ನಟಿ ಗೆಮ್ಮಾ ರೋಸ್ (Gemma Rose) ಒಂದು ವಿಚಿತ್ರ ಸ್ಥಿತಿಯಲ್ಲಿ ಸಿಕ್ಕಿಕೊಂಡು ತೊಳಲಾಡುತ್ತಿದ್ದಾರೆ. ವಿಷಯವೇನೆಂದರೆ ರೆಸ್ಟುರಾಂಟ್ ಒಂದರಲ್ಲಿ ಊಟ ಮಾಡುತ್ತಿದ್ದಾಗ ಆಕೆ ತನ್ನೆದುರೇ ಹಸ್ತಮೈಥುನದಲ್ಲಿ ತೊಡಗಿದ್ದಳು ಎಂದು ಅವರ ಪತಿ ಆರೋಪಿಸಿದ್ದಾರೆ.
ವಿಷಯವನ್ನು ಗೆಮ್ಮಾ ಪತಿ ಮ್ಯಾಟ್ ಚ್ಯಾನೆಲ್ 4 ರ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿ ನಟಿಗೆ ಇರುಸು ಮುರುಸು ಉಂಟಾಗುವಂತೆ ಮಾಡಿದರು. ಆಕೆ ಮಾಡುತ್ತಿದ್ದುದ್ದನ್ನು ನೋಡಿ ಹೇವರಿಕೆ ಉಂಟಾಗಿ ತಾನು ರೆಸ್ಟುರಾಂಟ್ ನಿಂದ ಹೊರ ಹೋದೆ ಎಂದು ಮ್ಯಾಟ್ ಹೇಳಿದ್ದಾರೆ.
ಆ ಘಟನೆ ನಂತರ ಮ್ಯಾಟ್ ಗೆಮ್ಮಾಳ ಲೈಂಗಿಕ ಅಧ್ಯತೆಗಳನ್ನು ಮ್ಯಾಟ್ ಬಹಿರಂಗಪಡಿಸುತ್ತಲೇ ಇದ್ದಾರೆ. ಆದರೆ, ಗೆಮ್ಮಾ ಮಾತ್ರ ರೆಸ್ಟುರಾಂಟ್ ಘಟನೆಯನ್ನು ಸುಮ್ಮನೆ ತಮಾಷೆಗೆ ಮಾಡಿದ್ದು ಅಂತ ಹೇಳುತ್ತಿದ್ದಾರೆ.
ಆದರೆ, ಬುಧವಾರ ರಾತ್ರಿ ದಂಪತಿ ತಮ್ಮ ಸಂಬಂಧ ಕುರಿತು ವಾಗ್ವಾದದಲ್ಲಿ ತೊಡಗಿದ್ದಾಗಲೇ ಮ್ಯಾಟ್ ಈ ಸ್ಪೋಟಕ ವಿಷಯವನ್ನು ಬಹಿರಂಗಗೊಳಿಸಿದ್ದು.
ತಮ್ಮ ಮದುವೆ ದಿನದ ಸಂತೋಷ ಮತ್ತು ರಸಗಳಿಗೆಗಳ ಬಗ್ಗೆ ಕಾರ್ಯಕ್ರಮದಲ್ಲಿ ತಜ್ಞರೊಂದಿಗೆ ಮಾತಾಡುವಾಗ ಗೆಮ್ಮಾ ತಾನವತ್ತು ಆಕಾಶದಲ್ಲಿ ತೇಲಾಡುತ್ತಿದ್ದೆ ಅಂತ ಹೇಳಿ ತಮ್ಮ ಕುಟುಂಬದ ಸದಸ್ಯರು ಸಹ ಆನಂದಸಾಗರದಲ್ಲಿ ಮುಳುಗಿದ್ದರು ಅಂತ ಹೇಳಿದ್ದರು. ಮ್ಯಾಟ್ ಅವರನ್ನು ಕೇಳಿದಾಗ, ‘ನಮ್ಮ ನಡುವಿನ ಸೆಕ್ಸ್ ಕೆಮಿಸ್ಟ್ರಿ ಚೆನ್ನಾಗಿತ್ತು, ಹೆಚ್ಚಿನ ಸಮಯವನ್ನು ಅದರಲ್ಲೇ ಕಳೆದೆವು,’ ಎಂದಿದ್ದರು.
ಆದರೆ, ಕೊಂಚ ಹೊತ್ತಿನ ಬಳಿಕ ಅವರು ಹನಿಮೂನ್ ಗೆ ಲಿಸ್ಬನ್ ಗೆ ಹೋದ ಸಂಗತಿಯನ್ನು ಮಾತಾಡಲಾರಂಭಿಸಿದಾಗ ಸಂಭಾಷಣೆಯ ಸ್ವರೂಪ ಬದಲಾಯಿತು. ಅ ಸಮಯದಲ್ಲೇ ಅವರ ಮದುವೆ ಮುರಿದುಬಿತ್ತು ಎಂದು ವರದಿಯಾಗಿದೆ.
ಟಿವಿ ಕಾರ್ಯಕ್ರಮದಲ್ಲಿ ಗೆಮ್ಮಾ ಹೇಳಿದ್ದು ಇದು: ನನ್ನ ನಿಲುವಿಗೆ ನಾನು ಬದ್ಧಳಾಗಬೇಕಿದೆ, ಯಾಕೆಂದರೆ ನಿನ್ನ ನಿಲುವನ್ನು ನಾನು ಅಂಗೀಕರಿಸುವುದು ಸಾಧ್ಯವಿಲ್ಲ. ನಮ್ಮ ಬದುಕಲ್ಲಿ ನಡೆದ ಅನೇಕ ಸಂಗತಿಗಳ ಬಗ್ಗೆ ಯಾವತ್ತೂ ಮಾತಾಡುವ ಪ್ರಯತ್ನ ನಾನು ಮಾಡಿಲ್ಲ. ಅವೆಲ್ಲವನ್ನು ನಾನು ಬಹಿರಂಗಪಡಿಸಲಾರೆ ಅಂತ ನನಗೆ ಗೊತ್ತಿದೆ. ಒಂದು ಪಕ್ಷ ಮಾತಾಡಿದರೆ ನಿನಗೆ ಕೋಪ ಬರುತ್ತೆ ಮತ್ತು ನೀನು ಇಲ್ಲಿಂದ ಎದ್ದು ಹೋಗುವೆ. ನಾನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ, ಏನು ಮಾಡಿದರೆ ನಿನಗೆ ಕೋಪ ಬರುತ್ತೆ ಅನ್ನೋದನ್ನು ಅರ್ಥಮಾಡಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ.’
‘ಓಕೆ, ಸರಿ, ನಾನು ಮೊದಲ ರಾತ್ರಿ ರೆಸ್ಟುರಾಂಟ್ ನಿಂದ ಯಾಕೆ ಆಚೆ ಹೋದೆ ಅಂತ ನೀನು ಇವರಿಗೆಲ್ಲ ವಿವರಿಬಲ್ಲೆಯಾ?’ ಅಂತ ಮ್ಯಾಟ್ ಕೇಳಿದರು.
ಗೆಮ್ಮಾ ಉತ್ತರಿಸದೆ ಹೋದಾಗ ಮ್ಯಾಟ್ ಹೇಳಿದರು: ‘ನಾನು ಎದ್ದು ಆಚೆ ಹೋಗಿದ್ದು ಯಾಕೆ ಅಂದರೆ, ನೀನು ತಿನ್ನುವ ವಸ್ತುವೊಂದನ್ನು ತೆಗೆದುಕೊಂಡು ಅಸಹ್ಯವಾಗಿ ಹಸ್ತಮೈಥುನದಲ್ಲಿ ತೊಡಗಿದ್ದೆ. ಅದಕ್ಕಾಗೇ ನಾನು ರೆಸ್ಟುರಾಂಟ್ ನಿಂದ ಎದ್ದು ಹೋದೆ.’
ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಹ-ಕಲಾವಿದರು ಮ್ಯಾಟ್ ಹೇಳಿದ್ದು ಕೇಳಿ ದಿಗ್ಭ್ರಮೆಗೊಳಗಾದರು. ತೀವ್ರ ಸ್ವರೂಪದ ಅವಮಾನಕ್ಕೀಡಾಗಿದ್ದ ಗೆಮ್ಮಾ, ನಾನು ಹಾಗೆ ನಾನು ಮಾಡಿದ್ದು ತಮಾಷೆಗೆ, ಅದು ನನ್ನ ‘ಹಾಸ್ಯಪ್ರಜ್ಞೆ’ ಅಂತ ಹೇಳುತ್ತಲೇ ಇದ್ದರು.
ಈ ಸಂವಾದ ಕೇಳಿಸಿಕೊಂಡ ವೀಕ್ಷಕರು ಸಹ ಮಾತು ಹೊರಡದಂತಾಗಿ ಟ್ವಟರ್ ನಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಒಬ್ಬರು ತಮ್ಮ ಟ್ವೀಟ್ ನಲ್ಲಿ ‘ನಿಮ್ಮ ‘ಹಾಸ್ಯಪ್ರಜ್ಞೆ’ ಕಿರಿಕಿರಿ ಉಂಟು ಮಾಡುವಂಥದ್ದು, ಗೆಮ್ಮಾ,’ ಅಂತ ಹೇಳಿದ್ದಾರೆ.
ಮತ್ತೊಬ್ಬರು, ‘ಮ್ಯಾಟ್ ಹೇಳಿದ್ದೇನು? ಗೆಮ್ಮಾ ಊಟ ಮಾಡುವಾಗ ಹಸ್ತಮೈಥುನದಲ್ಲಿ ತೊಡಗಿದ್ದರೆ?’ ಅಂತ ಕಾಮೆಂಟ್ ಮಾಡಿದ್ದಾರೆ.