ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಿವೆ!
ತೀವ್ರವಾಗಿ ಗಾಯಗೊಂಡಿದ್ದ ಸಂತ್ರಸ್ತೆಯನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಾಗ ಅಲ್ಲಿದ್ದ ವೈದ್ಯಾಧಿಕಾರಿ ಚಿಕಿತ್ಸೆ ನೀಡಲು ನಿರಾಕರಿಸಿದನಲ್ಲದೆ ಆಕೆಗೆ ಅಗತ್ಯವಿದ್ದ ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡಲಿಲ್ಲ ಎಂದು ಪ್ರತಿಭಟನೆಕಾರರು ಹೇಳಿದ್ದಾರೆ.
ಇಸ್ಲಾಮಾಬಾದ್: ಕಳ್ಳತನದ ಸುಳ್ಳು ಅರೋಪ ಹೊರೆಸಿ ಒಬ್ಬ ಹಿಂದೂ ಮಹಿಳೆಯ ಮೇಲೆ ನಡೆಸಿದ ಹಲ್ಲೆಯನ್ನು ಖಂಡಿಸಿ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರು ಪ್ರತಿಭಟನೆ ನಡೆಸಿದರೆಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಸೋಮವಾರದಂದು ಭಾವಲ್ಪುರದ ಜಿಲ್ಲಾ ಪೊಲೀಸ್ ಕಚೇರಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಭಾರೀ ಸಂಖ್ಯೆಯಲ್ಲಿ ನೆರೆದ ಜನ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಒಬ್ಬ ಹಿಂದೂ ಮಹಿಳೆಯ ಮೇಲೆ ಕಳ್ಳತನದ ಸುಳ್ಳು ಆರೋಪ ಹೊರಿಸಿ ಅದೇ ನೆಪದಲ್ಲಿ ಆಕೆಯನ್ನು ಥಳಿಸಲಾಗಿದೆ ಎಂದು ಪ್ರತಿಭಟನೆಕಾರರು ಹೇಳಿದರು. ಸಂತ್ರಸ್ತೆಯು ಯಜಮಾನ ಮಂಡಿಯ ನಿವಾಸಿಯಾಗಿದ್ದು ಮನೆಗೆಲಸದವಳಾಗಿ ಕೆಲಸ ಮಾಡುತ್ತಾಳೆ.
ವರದಿಯ ಪ್ರಕಾರ ಜನರ ಗುಂಪೊಂದು ಹಿಂದೂ ಮಹಿಳೆಯ ನಿವಾಸದ ಮೇಲೆ ದಾಳಿ ನಡೆಸಿ ಆಕೆಯನ್ನು ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಸಂತ್ರಸ್ತೆಯನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಾಗ ಅಲ್ಲಿದ್ದ ವೈದ್ಯಾಧಿಕಾರಿ ಚಿಕಿತ್ಸೆ ನೀಡಲು ನಿರಾಕರಿಸಿದನಲ್ಲದೆ ಆಕೆಗೆ ಅಗತ್ಯವಿದ್ದ ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡಲಿಲ್ಲ ಎಂದು ಪ್ರತಿಭಟನೆಕಾರರು ಹೇಳಿದ್ದಾರೆ.
ಪ್ರತಿಭಟನಾ ರ್ಯಾಲಿಯಲ್ಲಿ ಮಾತಾಡಿದ ಅಲ್ಪಸಮುದಾಯಗಳ ಕೆಲ ಮುಖಂಡರು ಪ್ರಕರಣದ ಸೂಕ್ತ ಮತ್ತು ನ್ಯಾಯಯುತ ತನಿಖೆಯಾಗಬೇಕೆಂದು ಆಗ್ರಹಿಸಿದರು. ಮಹಿಳೆ ಮೇಲೆ ಹಲ್ಲೆ ನಡೆಸಿದವರು ಮತ್ತು ವೈದ್ಯನ ವಿರುದ್ಧ ಕ್ರಮ ಜರುಗಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಅಪಹರಣ, ಹತ್ಯೆ, ರೇಪ್ ಮತ್ತು ಬಲವಂತದ ಮತಾಂತರ ಸೇರಿದಂತೆ ಪಾಕಿಸ್ತಾನದ ಅಲ್ಪಸಂಖ್ಯಾತರ ಮೇಲೆ ಅನೇಕ ದೌರ್ಜನ್ಯಗಳು ನಡೆಯುತ್ತಿದ್ದು ಅವರು ದಯನೀಯ ಮತ್ತು ಅತ್ಯಂತ ಕಳವಳಕಾರಿ ಸ್ಥಿತಿಯಲ್ಲಿ ಬ್ಉಕು ನಡೆಸುತ್ತಿದ್ದಾರೆ. ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲೆ ಹಿಂಸಾಚಾರದ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ.
ವೈಯಕ್ತಿಕ ದ್ವೇಷಗಳನ್ನು ಸಾಧಿಸಲು, ಅಲ್ಪಸಂಖ್ಯಾತರು ಮತ್ತು ಮುಸ್ಲಿಂ ಸಮುದಾಯದ ಸದಸ್ಯರ ವಿರುದ್ಧ ಕ್ರೂರವೆನಿಸುವ ಧರ್ಮನಿಂದೆಯ ಕಾನೂನುಗಳ ದುರುಪಯೋಗ ಹೆಚ್ಚುತ್ತಲೇ ಇದೆ.
ಪಾಕಿಸ್ತಾನದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯಗಳು ದುಸ್ಥಿತಿಯಲ್ಲಿ ಜೀವಿಸುತ್ತಿರುವುದು ನಿಜವೇ, ಆದರೆ ಈ ಸಮುದಾಯಗಳ ಮಹಿಳೆಯರು ಅಧಿಕಾರಿ ವರ್ಗದ, ರಾಜಕೀಯ ಗುಂಪು, ಧಾರ್ಮಿಕ ಪಕ್ಷಗಳು, ಊಳಿಗಮಾನ್ಯ ಮತ್ತು ಮುಸ್ಲಿಂ ಬಹುಸಂಖ್ಯಾತರ ತಾರತಮ್ಯದ ಧೋರಣೆಗಳಿಗೆ ಬಲಿಪಶುಗಳಾಗಿದ್ದಾರೆ.
ಬಲವಂತದ ಮತಾಂತರ ಮತ್ತು ವಿವಾಹಗಳ ಸಂದಿಗ್ಧತೆಯು ಅಲ್ಪಸಂಖ್ಯಾತ ಮಹಿಳೆಯರನ್ನು ಅಪಾಯಕ್ಕೆ ದೂಡುತ್ತಿದೆ ಮತ್ತು ಈ ದೇಶದಲ್ಲಿ ಅವರಿಗೆ ತಮ್ಮ ಕಾನೂನುಬದ್ಧ ಹಕ್ಕುಗಳನ್ನು ದೊರಕಿಸಿಕೊಡುವುದು ಜಟಿಲ ಸಮಸ್ಯೆಯೆನಿಸಿದೆ.