Russia- Ukraine War: ಯುದ್ಧದಿಂದ ತಪ್ಪಿಸಿಕೊಳ್ಳಲು ಕೈ ಕಾಲು ಮುರಿದುಕೊಳ್ಳಲು ಮುಂದಾಗುತ್ತಿರುವ ಯುವಕರು, ಗಡಿ ತೊರೆಯುತ್ತಿರುವ ಜನರು

ರಷ್ಯಾದ ಅಧ್ಯಕ್ಷರು ಮಿಲಿಟರಿ ಕರೆ ನೀಡಿದ ಬೆನ್ನಲ್ಲೆ ಅಲ್ಲಿನ ಯುವಕರು ಯುದ್ಧದಿಂದ ತಪ್ಪಿಸಿಕೊಳ್ಳಲು ಗಡಿ ತೊರೆಯುತ್ತಿದ್ದು, ಕೆಲವರು ತಮ್ಮ ಅಂಗಾಂಗಗಳನ್ನು ಮುರಿದುಕೊಳ್ಳಲು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಬಂಧನಕ್ಕೊಳಲಾಗಲು ಮುಂದಾಗುತ್ತಿದ್ದಾರೆ.

Russia- Ukraine War: ಯುದ್ಧದಿಂದ ತಪ್ಪಿಸಿಕೊಳ್ಳಲು ಕೈ ಕಾಲು ಮುರಿದುಕೊಳ್ಳಲು ಮುಂದಾಗುತ್ತಿರುವ ಯುವಕರು, ಗಡಿ ತೊರೆಯುತ್ತಿರುವ ಜನರು
ರಷ್ಯಾ ಗಡಿ ತೊರೆಯಲು ಸಾಲುಗಟ್ಟಿ ನಿಂತಿರುವ ವಾಹನಗಳು
TV9kannada Web Team

| Edited By: Rakesh Nayak

Sep 23, 2022 | 8:09 AM

ಉಕ್ರೇನ್ ಮತ್ತು ರಷ್ಯಾ ಬಿಕ್ಕಟ್ಟು (Russia- Ukraine Crisis) ತಣ್ಣಗಾಗೆ ಹೆಚ್ಚುತ್ತಲೇ ಇದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಸೇರಿಕೊಳ್ಳುವಂತೆ ಮಿಲಿಟರಿ ಕರೆ ನೀಡಿದ ಬೆನ್ನಲ್ಲೆ ಯುದ್ಧದಿಂದ ತಪ್ಪಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಷ್ಯಾದಿಂದ ಪಲಾಯಾನ ಮಾಡುತ್ತಿರುವುದು ಕಂಡುಬಂದಿದೆ. ಅಧ್ಯಕ್ಷರ ಮಿಲಿಟರಿ ಕರೆಯ ಬೆನ್ನಲ್ಲೆ ರಷ್ಯಾ ಮತ್ತು ಜಾರ್ಜಿಯಾ ಗಡಿ ಭಾಗದಲ್ಲಿ ಯುದ್ಧದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಯುವಕರು ವಾಹನಗಳ ಮೂಲಕ ಗಡಿ ಭಾಗಕ್ಕೆ ತೆರಳುತ್ತಿದ್ದು, ಮೈಲುಗಳಷ್ಟು ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿವೆ. ಅಪ್ಪರ್ ಲಾರ್ಸ್​ ಚೆಕ್​ಪಾಯಿಂಟ್​ನಲ್ಲಿ ಸುಮಾರು 5 ಕಿ.ಮೀ ಉದ್ದಗಳಷ್ಟು ಕಾರುಗಳು ಸಾಲುಗಟ್ಟಿ ನಿಂತಿವೆ. ಅಧ್ಯಕ್ಷ ಪುಟಿನ್ ಅವರು ಘೋಷಣೆ ಮಾಡಿದ ತಕ್ಷಣ ಪಾಸ್​ಪೋರ್ಟ್ ಹಿಡಿದುಕೊಂಡು ಗಡಿಯತ್ತ ಹೊರಟಿರುವುದಾಗಿ ವ್ಯಕ್ತಿಯೊಬ್ಬರು ಬಿಬಿಸಿಗೆ ಹೇಳಿದ್ದಾರೆ. ಗುಂಪೊಂದು ಗಡಿಯನ್ನು ದಾಟಲು 7 ಗಂಟೆಗಳನ್ನು ತೆಗೆದುಕೊಂಡಿದೆ ಎಂದು ಹೇಳಿದೆ. ವಾಹನ ದಟ್ಟಣೆ ಹೆಚ್ಚಾದ ಹಿನ್ನೆಲೆ ಕೆಲವರು ತಮ್ಮ ವಾಹನಗಳನ್ನು ಬಿಟ್ಟು ಹೋಗುತ್ತಿದ್ದಾರೆ.

ಗಗನಕ್ಕೇರಿದ ವಿಮಾನ ಟಿಕೆಟ್ ಬೆಲೆ

ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಗಡಿ ತೊರೆಯುತ್ತಿರುವ ನಡುವೆ ವಿಮಾನದ ಮೂಲಕ ತಲುಪಬಹುದಾದ ಇಸ್ತಾನ್​ಬುಲ್​, ಬೆಲ್​ಗ್ರೇಡ್ ಅಥವಾ ದುಬೈನಲ್ಲಿ ವಿಮಾನದ ಟಿಕೆಟ್ ದರಗಳನ್ನು ಹೆಚ್ಚಿಸಲಾಗಿದೆ. ಏಕಮುಖ ಟಿಕೆಎಟ್ ಮಾರಾಟದಲ್ಲಿ ದೊಡ್ಡ ಏರಿಕೆಯನ್ನು ಮಾಡಲಾಗಿದೆ ಎಂದು ಟರ್ಕಿಯ ಮಾಧ್ಯಮವು ವರದಿ ಮಾಡಿದೆ. ವೀಸಾ ಅಲ್ಲದ ಸ್ಥಳಗಳಿಗೆ ಉಳಿದಿರುವ ವಿಮಾನಗಳಲ್ಲಿ ಪ್ರಯಾಣಿಸಬೇಕಾದರೆ ಜನರು ಸಾವಿರಾರು ಯುರೋಗಳನ್ನು ನೀಡಬೇಕಾಗುತ್ತದೆ. ಇನ್ನೊಂದೆಡೆ ಯುದ್ಧದಿಂದ ತಪ್ಪಿಸಿಕೊಳ್ಳಲು ಬಯಸುತ್ತಿರುವ ರಷ್ಯನ್ನರನ್ನು ತಮ್ಮ ದೇಶ ಸ್ವಾಗತಿಸುತ್ತದೆ ಎಂದು ಜರ್ಮನಿ ಹೇಳಿಕೊಂಡಿದೆ. ಆದರೆ ಲಿಥುವೇನಿಯಾ, ಲಾಟ್ವಿಯಾ, ಎಸ್ಟೋನಿಯಾ ಮತ್ತು ಜೆಕ್​ ರಿಪಬ್ಲಿಕ್ ಪಲಾಯನ ಮಾಡುವ ರಷ್ಯನ್ನರಿಗೆ ಆಶ್ರಯ ನೀಡುವುದಿಲ್ಲ ಎಂದು ಹೇಳಿದೆ.

ಡ್ರಾಫ್ಟ್ ಅನ್ನು ತಪ್ಪಿಸಿಕೊಳ್ಳುವುದು ರಷ್ಯಾದಲ್ಲಿ ಕ್ರಿಮಿನಲ್ ಅಪರಾಧ

ಯುದ್ಧಕ್ಕೆ ಯುವಕರು ಸೇರುವಂತೆ ಕರೆ ನೀಡಿದ ಬೆನ್ನಲ್ಲೆ ಮಿಲಿಟರಿಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಮಿಲಿಟರಿ ಸೇವೆಯನ್ನು ಮಾಡಿದ ಮತ್ತು ವಿಶೇಷ ಕೌಶಲ್ಯ ಹಾಗೂ ಯುದ್ಧ ಅನುಭವವನ್ನು ಹೊಂದಿರುವ ಜನರನ್ನು ಮಾತ್ರ ಕರೆಯಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ಪಿಎಚ್‌ಡಿ ವಿದ್ಯಾರ್ಥಿ ಮತ್ತು ರಷ್ಯಾದ ಪ್ರಮುಖ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರೊಬ್ಬರ ಬಳಿಯಿಂದ ಮಿಲಿಟರಿಗೆ ಪೇಪರ್​ಗೆ ಸಹಿ ಹಾಕಿಸಿಕೊಳ್ಳಲಾಗಿದೆ. ಗುರುವಾರ ಕರಡು ಕೇಂದ್ರಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. ಆದರೆ ಈ ಉಪನ್ಯಾಸಕರಿಗೆ ಯಾವುದೇ ಮಿಲಿಟರಿ ಅನುಭವ ಇಲ್ಲ. ಇದು ಅವರ ಮಲತಂದೆಯನ್ನು ಚಿಂತೆಗೀಡು ಮಾಡಿದೆ ಎಂದು ಬಿಬಿಸಿ ವರದಿ ಮಾಡಿದೆ.

ಯುದ್ಧದಿಂದ ತಪ್ಪಿಸಲು ಅಂಗಾಂಗ ಮುರಿಯಲು ಮುಂದಾಗುತ್ತಿರುವ ಯುವಕ

ಯುದ್ಧದಿಂದ ತಪ್ಪಿಸಿಕೊಳ್ಳಲು ಯುವಕರು ಬೇರೆಬೇರೆ ಕಾರಣಗಳನ್ನು ಹುಡುಕುತ್ತಿದ್ದಾರೆ. “ವಾಹನ ಚಲಾಯಿಸುತ್ತಾ ಕಲ್ಲು ಎಸೆದು ಬಂಧಿಸಲ್ಪಟ್ಟರೆ ಪರವಾನಗಿ ರದ್ದುಗೊಳಿಸಲಾಗತ್ತದೆ. ಸೇನೆ ತೆಗೆದುಕೊಳ್ಳುವುದನ್ನು ತಪ್ಪಿಸಲು ಇದು ಸಾಕಾಗುತ್ತದೆ” ಎಂದು ಒಂದಷ್ಟು ಮಂದಿ ಯೋಚಿಸುತ್ತಿದ್ದಾರೆ. ಆದರೆ ಕಲಿನಿನ್‌ಗ್ರಾಡ್‌ನ ವ್ಯಕ್ತಿಯೊಬ್ಬ ಯುದ್ಧದಿಂದ ತಪ್ಪಿಸಿಕೊಳ್ಳಲು “ತನ್ನ ಕೈ, ಕಾಲು ಮುರಿದುಕೊಳ್ಳುತ್ತೇನೆ, ನಾನು ಜೈಲಿಗೆ ಹೋಗಲು ಬಯಸುತ್ತೇನೆ, ಯುದ್ಧದಿಂದ ತಪ್ಪಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತೇನೆ” ಎಂದು ಬಿವಿಸಿಗೆ ಹೇಳಿದ್ದಾನೆ.

ಬುಧವಾರ ರಾತ್ರಿ ನಗರಗಳಲ್ಲಿ ಸಾವಿರಾರು ಜನರಿಂದ ಯುದ್ಧವನ್ನು ವಿರೋಧಿಸಿ ಭಾರೀ ಪ್ರತಿಭಟನೆ ನಡೆಯಿತು. ಹೀಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಜನರನ್ನು ಬಂಧಿತರಾದವರಿಗೆ ಮಿಲಿಟರಿ ಕರೆ ಪೆಪರ್​ ಅನ್ನು ನೀಡಿದ್ದಾರೆ ಎಂದು ಹಲವರು ಹೇಳಿದ್ದಾರೆ. ಇದನ್ನು ನಿಕಾರಿಸಿದವರಿಗೆ ಕ್ರಿಮಿನಲ್ ಪ್ರಕರಣದ ಬೆದರಿಕೆಯನ್ನು ಹಾಕಿರುವುದಾಗಿಯೂ ಹೇಳಿಕೊಂಡಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬುಧವಾರ ಭಾಗಶಃ ಮಿಲಿಟರಿ ಸಜ್ಜುಗೊಳಿಸುವಿಕೆಯನ್ನು ಘೋಷಿಸಿದ ನಡುವೆ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ನಡೆಸುವ ಸುಳಿವು ನೀಡಿರುವುದು ಜನರ ನೆಮ್ಮದಿ ಕೆಡಿಸಿದೆ. ಒಂದು ವೇಳೆ ಅವರು ಪರಮಾಣು ಬ್ಲ್ಯಾಕ್‌ಮೇಲ್ (Nuclear Blackmail) ಎಂದು ಕರೆಯುವುದನ್ನು ಮುಂದುವರೆಸಿದರೆ ಮಾಸ್ಕೋ (Moscow) ತನ್ನ ಎಲ್ಲಾ ಅಗಾಧವಾದ ಶಸ್ತ್ರಾಸ್ತ್ರಗಳ ಪ್ರದರ್ಶನ ಮಾಡಲಿದೆ ಎಂದು ಪುಟಿನ್ ಎಚ್ಚರಿಸಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada