AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ: ರಾಜಕೀಯ ವಿಷಯಕ್ಕೆ ಸಂಬಂಧಿಸಿದ ಜಗಳದ ನಂತರ ಚಾಲಕನೊಬ್ಬ 18ರ ಯುವಕನನ್ನು ಉದ್ದೇಪೂರ್ವಕವಾಗಿ ಕಾರ್​​ನಿಂದ ಡಿಕ್ಕಿ ಹೊಡೆದು ಸಾಯಿಸಿದ!

ಎಲ್ಲಿಂಗ್ಸನ್ ಸಾವಿಗೆ ಕಾರಣವಾದ ಅಂಶವನ್ನು ವಿವರಿಸುವ ಅಫಿಡವಿಟ್ ಒಂದರ ಪ್ರಕಾರ ಎಲ್ಲಿಂಗ್ಸನ್ ಗೆ ಡಿಕ್ಕಿ ಹೊಡೆದ ನಂತರ ಬ್ರ್ಯಾಂಡ್ ಅಲ್ಲಿಂದ ಪರಾರಿಯಾಗಿ ಸ್ವಲ್ಪ ಸಮಯದ ನಂತರ ವಾಪಸ್ಸು ಬಂದು 911ಗೆ ಕರೆ ಮಾಡಿ ಪುನಃ ಅಲ್ಲಿಂದ ಹೋಗಿಬಿಟ್ಟಿದ್ದಾನೆ.

ಅಮೆರಿಕ: ರಾಜಕೀಯ ವಿಷಯಕ್ಕೆ ಸಂಬಂಧಿಸಿದ ಜಗಳದ ನಂತರ ಚಾಲಕನೊಬ್ಬ 18ರ ಯುವಕನನ್ನು ಉದ್ದೇಪೂರ್ವಕವಾಗಿ ಕಾರ್​​ನಿಂದ ಡಿಕ್ಕಿ ಹೊಡೆದು ಸಾಯಿಸಿದ!
ಕೇಯ್ಲರ್ ಎಲ್ಲಿಂಗ್ಸನ್ ಮತ್ತು ಹಂತಕ ಶ್ಯಾನನ್ ಬ್ರ್ಯಾಂಡ್
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Sep 23, 2022 | 7:28 AM

Share

ರಾಜಕೀಯ ವಿಷಯಕ್ಕೆ ಸಂಬಂಧಿಸಿದಂತೆ ಯುವಕನೊಯೊಬ್ಬನೊಂದಿಗೆ ವಾದ ನಡೆದ ಬಳಿಕ ಕಾರು ಚಾಲಕನೊಬ್ಬ ಅವನನ್ನು ಉದ್ದೇಶಪೂರ್ವಕವಾಗಿ ಕಾರಿಂದ ಡಿಕ್ಕಿ ಹೊಡೆದು ಸಾಯಿಸಿದ ಪ್ರಕರಣ ಅಮೆರಿಕಾದ ನಾರ್ಥ್ ಡಕೋಟಾದಿಂದ (North Dakota) ವರದಿಯಾಗಿದೆ. ಕೋರ್ಟಿಗೆ ಸಲ್ಲಿಸಲಾಗಿರುವ ದಾಖಲೆಗಳಲ್ಲಿ ಈ ಅಂಶ ಬಹಿರಂಗಪಡಿಸಲಾಗಿದೆ. ರವಿವಾರ ಬೆಳಗ್ಗೆ ಮ್ಯಾಕ್ ಹೆನ್ರಿಯಲ್ಲಿ (McHenri) ನಡೆದ ಒಂದು ಬೀದಿ ಡ್ಯಾನ್ಸ್ ಬಳಿಕ 18-ವರ್ಷ-ವಯಸ್ಸಿನ ಕೇಯ್ಲರ್ ಎಲ್ಲಿಂಗ್ಸನ್ ಗೆ (Cayler Ellingson) ಕಾರು ಡಿಕ್ಕಿ ಹೊಡೆದಿದ್ದರಿಂದ ಮೃತಪಟ್ಟಿದ್ದ. ಓಣಿಯೊಂದರಲ್ಲಿ ಅವನಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಸಾಯಿಸಿ ಅದೊಂದು ಅಪಘಾತ ಎನ್ನುವಂತೆ ಚಿತ್ರಿಸಲು ಪ್ರಯತ್ನಿಸಿದ 41-ವರ್ಷ ವಯಸ್ಸಿನ ಶ್ಯಾನನ್ ಬ್ರ್ಯಾಂಡ್ ಎಂಬ ವ್ಯಕ್ತಿ ವಿರುದ್ಧ ಫೋಸ್ಟರ್ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಸ್ಟಂಟ್ಸ್ ಮನ್ ಕೌಂಟಿ ಜೈಲು ದಾಖಲೆಗಳ ಪ್ರಕಾರ ಬ್ರ್ಯಾಂಡ್ ಮಂಗಳವಾರದಂದು 50,000 ಡಾಲರ್ ಮೊತ್ತದ ಬಾಂಡ್ ಒದಗಿಸಿ ಜೈಲಿಂದ ಹೊರಬಂದಿದ್ದಾನೆ. ಮಾಧ್ಯಮದ ವರದಿಗಾರರು ಮಾಡಿದ ಕರೆಗಳಿಗೆ ಬ್ರ್ಯಾಂಡ್ ಪರ ವಕೀಲ ಉತ್ತರಿಸಲಿಲ್ಲ.

ಎಲ್ಲಿಂಗ್ಸನ್ ಸಾವಿಗೆ ಕಾರಣವಾದ ಅಂಶವನ್ನು ವಿವರಿಸುವ ಅಫಿಡವಿಟ್ ಒಂದರ ಪ್ರಕಾರ ಎಲ್ಲಿಂಗ್ಸನ್ ಗೆ ಡಿಕ್ಕಿ ಹೊಡೆದ ನಂತರ ಬ್ರ್ಯಾಂಡ್ ಅಲ್ಲಿಂದ ಪರಾರಿಯಾಗಿ ಸ್ವಲ್ಪ ಸಮಯದ ನಂತರ ವಾಪಸ್ಸು ಬಂದು 911ಗೆ ಕರೆ ಮಾಡಿ ಪುನಃ ಅಲ್ಲಿಂದ ಹೋಗಿಬಿಟ್ಟಿದ್ದಾನೆ.

ಎಲಿಂಗ್ಸನ್‌ಗೆ ಡಿಕ್ಕಿ ಹೊಡೆಯುವ ಮೊದಲು ತಾನು ಮದ್ಯಪಾನ ಮಾಡುತ್ತಿದ್ದೆ ಮತ್ತು ಅವನೊಂದಿಗೆ ವಾದ ನಡೆದ ನಂತರ ಆ ಹದಿಹರೆಯದ ಹುಡುಗ ತನಗೆ ಹಾನಿ ಉಂಟು ಮಾಡುವ ಉದ್ದೇಶದಿಂದ ಜನರನ್ನು ಜಮಾಯಿಸುತ್ತಿದ್ದಾನೆ ಅಂತ ಅನಿಸಿ ಹೆದರಿ ಬಿಟ್ಟಿದ್ದೆ ಎಂದು ಬ್ರಾಂಡ್ ತನಿಖಾಧಿಕಾರಿಗಳಿಗೆ ತಿಳಿಸಿರುವುದಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದಾಖಲೆ ಹೇಳಿದೆ.

ಎಲಿಂಗ್ಸನನ್ನು ಕ್ಯಾರಿಂಗ್ಟನ್‌ ನ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತಾದರೂ ಸ್ವಲ್ಪ ಸಮಯದ ಬಳಿಕ ಅವನು ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಯಿತು.

ಭಾನುವಾರ ಸಾಯಂಕಾಲ ಗ್ಲೆನ್‌ಫೀಲ್ಡ್‌ನಲ್ಲಿರುವ ಬ್ರ್ಯಾಂಡ್ ಮನೆಯಲ್ಲಿ ಪೊಲೀಸರು ಅವನನ್ನು ಬಂಧಿಸಿದರು. ಬಂಧನದ ಬಳಿಕ ಅವನ ಕೆಮಿಕಲ್ ಉಸಿರಾಟ ಪರೀಕ್ಷೆ ನಡೆಸಿದಾಗ ರಕ್ತದಲ್ಲಿ 0.08% ಕ್ಕಿಂತ ಹೆಚ್ಚಿನ ಆಲ್ಕೋಹಾಲ್ ಅಂಶ ಕಂಡು ಬಂತು. ಇದು ಅಮೆರಿಕದಲ್ಲಿ ವಾಹನ ಚಲಾಯಿಸುವಾಗ ಕಾನೂನಿನನ್ವಯ ಅನುಮತಿಯಿರುವ ಮಿತಿಯಾಗಿದೆ.

ಸಾವಿನ ತನಿಖೆಗೆ ಸಹಾಯ ಮಾಡಿದ ನಾರ್ತ್ ಡಕೋಟಾ ಹೈವೇ ಪೆಟ್ರೋಲ್‌ನ ಕ್ಯಾಪ್ಟನ್ ಬ್ರಿಯಾನ್ ನಿವಿಂಡ್, ಬ್ರ್ಯಾಂಡ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿರುವ ರಾಜಕೀಯ ವಾದಕ್ಕೆ ಪುಷ್ಠೀಕರಣ ಸಿಗುತ್ತಿಲ್ಲ. ತನಿಖೆ ಜಾರಿಯಲ್ಲಿದೆ ಮತ್ತು ಇನ್ನೂ ಕೆಲ ಸಾಕ್ಷ್ಯಗಳನ್ನು ಪರಿಶೀಲಿಸಬೇಕಿದೆ, ಎಂದು ಹೇಳಿದ್ದಾರೆ. ಆರೋಪಿತ ರಾಜಕೀಯ ವಾದದ ಬಗ್ಗೆ ನಿರ್ದಿಷ್ಟ ಮಹಿತಿಯನ್ನು ಬಿಡುಗಡೆ ಮಾಡಲಾಗಿಲ್ಲ.

ಬ್ರ್ಯಾಂಡ್ ತಮ್ಮ ಪರಿಚಯಸ್ಥನೇ ಅಂತ ಎಲಿಂಗ್ಸನ್ ಪೋಷಕರು ಪೊಲೀಸರಿಗೆ ತಿಳಿಸಿರುವರಾದರೂ ಅವನ ಪರಿಚಯ ತಮ್ಮ ಮಗನಿಗೂ ಇತ್ತೆಂದು ಗೊತ್ತಿರಲಿಲ್ಲ ಎಂದಿದ್ದಾರೆ. ಎಲಿಂಗ್ಸನ್ ತಾಯಿ, ಮೆಕ್‌ಹೆನ್ರಿಯಿಂದ ತನ್ನ ಮಗನನ್ನು ಮನೆಗೆ ಕರೆತರಲು ಹೋಗುತ್ತಿದ್ದಾಗ ಸುಮಾರು 2:40 ಗಂಟೆಗೆ ಅವರಿಗೆ ಯಾರೋ ಒಬ್ಬರು ಕರೆಮಾಡಿ ‘ಬ್ರ್ಯಾಂಡ್ ನಿಮಗೆ ಗೊತ್ತಾ?’ ಎಂದು ಕೇಳಿದ್ದಾರೆ. ಎಲಿಂಗ್ಸನ್ ಸ್ವಲ್ಪ ಸಮಯದ ನಂತರ ಕರೆ ಮಾಡಿ ‘ಅವನು ಆಥವಾ ಅವರು’ ನನ್ನ ಬೆನ್ನಟ್ಟಿದ್ದಾರೆ ಎಂದು ಹೇಳಿದ, ಎಂದು ಪೊಲೀಸರಿಗೆ ಹೇಳಿರುವ ಅವರು ತಮ್ಮ ಮಗನಿದ್ದ ಸ್ಥಳ ತಲುಪಲು ಸಾಧ್ಯವಾಗಲೇ ಎಂದಿದ್ದಾರೆ.

ಉತ್ತರ ಡಕೋಟಾ ಹೈವೇ ಪೆಟ್ರೋಲ್‌ನಿಂದ ಬಿಡುಗಡೆಯಾದ ಪ್ರಾಥಮಿಕ ವರದಿಯು ಫೋರ್ಡ್ ಎಕ್ಸ್‌ಪ್ಲೋರರ್ ವಾಹನವು ಪಾದಚಾರಿಯೊಬ್ಬನಿಗೆ ಡಿಕ್ಕಿ ಹೊಡೆದ ಕಾರಣ ಗಂಭೀರವಾಗಿ ಗಾಯಗೊಂಡ ಅವನು ನಂತರ ಸಾವನ್ನಪ್ಪಿದ ಅಂತ ಹೇಳಿದೆ.

ಎಲ್ಲಿಸನ್ ಗಾಗಿ ನಡೆದಿರುವ GoFundMe ದೇಣಿಗೆ ಅಭಿಯಾನದಲ್ಲಿ ಗುರುವಾರ ಬೆಳಿಗ್ಗೆವರಗೆ 27,000 ಡಾಲರ್ ಕ್ಕಿಂತ ಹೆಚ್ಚು ಹಣ ಸಂಗ್ರಹವಾಗಿದೆ. ಈ ಪೇಜ್ನಲ್ಲಿ ‘ಎಲಿಂಗ್ಸನ್ ಸ್ವರ್ಗಕ್ಕೆ ತೆರಳಿದ್ದಾನೆ. ಅವನ ತಾಯಿ, ತಂದೆ, ಸಹೋದರ, ಚಿಕ್ಕಪ್ಪ, ಚಿಕ್ಕಮ್ಮ, ಸೋದರಸಂಬಂಧಿಗಳು, ಕುಟುಂಬ ವರ್ಗದವರು ಮತ್ತು ಸ್ನೇಹಿತರೆಲ್ಲ ಅವನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ,’ ಅಂತ ಹೇಳಲಾಗಿದೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ