ಮತ್ತೊಮ್ಮೆ ಭಾರತದ ಪ್ರಧಾನಿ ಮೋದಿಯನ್ನು ಹೊಗಳಿ ಪಾಕಿಸ್ತಾನಿಯರ ಕೆಂಗಣ್ಣಿಗೆ ಗುರಿಯಾದ ಇಮ್ರಾನ್ ಖಾನ್

ಭಾರತದ ಪ್ರಧಾನಿ ಮೋದಿ ಭಾರತದ ಹೊರಗೆ ಎಷ್ಟು ಆಸ್ತಿ ಹೊಂದಿದ್ದಾರೆ? ನವಾಜ್ ಷರೀಫ್ ವಿದೇಶದಲ್ಲಿ ಎಷ್ಟು ಆಸ್ತಿ ಮತ್ತು ಆಸ್ತಿ ಹೊಂದಿದ್ದಾರೆಂದು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ಇಮ್ರಾನ್ ಖಾನ್ ಟೀಕಿಸಿದ್ದಾರೆ.

ಮತ್ತೊಮ್ಮೆ ಭಾರತದ ಪ್ರಧಾನಿ ಮೋದಿಯನ್ನು ಹೊಗಳಿ ಪಾಕಿಸ್ತಾನಿಯರ ಕೆಂಗಣ್ಣಿಗೆ ಗುರಿಯಾದ ಇಮ್ರಾನ್ ಖಾನ್
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್
TV9kannada Web Team

| Edited By: Sushma Chakre

Sep 22, 2022 | 4:59 PM

ಇಸ್ಲಾಮಾಬಾದ್: ಭ್ರಷ್ಟಾಚಾರದ ವಿಷಯದಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ನಾಯಕ ನವಾಜ್ ಷರೀಫ್ (Nawaz Sharif) ವಿರುದ್ಧ ಹರಿಹಾಯ್ದಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯನ್ನು (Narendra Modi) ಹೊಗಳಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಟೀಕಿಸಿರುವ ಇಮ್ರಾನ್ ಖಾನ್, ವಿಶ್ವದ ಯಾವುದೇ ರಾಜಕಾರಣಿ ಅಥವಾ ನಾಯಕ ನವಾಜ್ ಷರೀಫ್ ರೀತಿ ವಿದೇಶಗಳಲ್ಲಿ ಶತಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, “ಒಂದು ದೇಶದಲ್ಲಿ ಕಾನೂನಿನ ನಿಯಮವಿಲ್ಲದಿದ್ದಾಗ ಭ್ರಷ್ಟಾಚಾರ ನಡೆಯುತ್ತದೆ. ನಮ್ಮ ನೆರೆಯ ದೇಶವಾದ ಭಾರತದಲ್ಲೇ ನೋಡುವುದಾದರೆ, ಪ್ರಧಾನಿ ಮೋದಿ ಅವರು ಭಾರತದ ಹೊರಗೆ ಎಷ್ಟು ಆಸ್ತಿ ಹೊಂದಿದ್ದಾರೆ? ನವಾಜ್ ವಿದೇಶದಲ್ಲಿ ಎಷ್ಟು ಆಸ್ತಿ ಮತ್ತು ಆಸ್ತಿ ಹೊಂದಿದ್ದಾರೆಂದು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: Big News: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಕೇಸ್ ದಾಖಲು; ಭಾಷಣದ ನೇರ ಪ್ರಸಾರಕ್ಕೂ ತಡೆ

ತನ್ನ ನಾಯಕತ್ವದಲ್ಲಿ ವಿಶ್ವಾಸ ಮತವನ್ನು ಕಳೆದುಕೊಂಡ ನಂತರ ಏಪ್ರಿಲ್‌ನಲ್ಲಿ ಇಮ್ರಾನ್ ಖಾನ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದರು. ಭಾರತವು ತನ್ನ ಸ್ವತಂತ್ರ ವಿದೇಶಾಂಗ ನೀತಿಗಾಗಿ ಮತ್ತು ಪಾಶ್ಚಿಮಾತ್ಯರ ಒತ್ತಡದ ನಡುವೆ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲವನ್ನು ಖರೀದಿಸಿದ್ದಕ್ಕಾಗಿ ಈ ಮೊದಲು ಅವರು ಹೊಗಳಿದ್ದರು. ಕ್ವಾಡ್‌ನ ಭಾಗವಾಗಿದ್ದರೂ ಭಾರತವು ಅಮೆರಿಕಾದಿಂದ ಒತ್ತಡವನ್ನು ಎದುರಿಸಿತು ಮತ್ತು ಜನಸಾಮಾನ್ಯರಿಗೆ ಪರಿಹಾರವನ್ನು ಒದಗಿಸಲು ರಿಯಾಯಿತಿ ದರದಲ್ಲಿ ರಷ್ಯಾದ ತೈಲವನ್ನು ಖರೀದಿಸಿತು ಎಂದು ಈ ಮೊದಲು ಇಮ್ರಾನ್ ಖಾನ್ ಟ್ವೀಟ್ ಮಾಡಿ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಕಳೆದ ಏಪ್ರಿಲ್‌ನಲ್ಲಿಯೂ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಭಾರತೀಯರು ಬಹಳ ಸ್ವಾಭಿಮಾನಿ ಜನರು ಎಂದು ಶ್ಲಾಘಿಸಿದ್ದರು. ಯಾವುದೇ ಮಹಾಶಕ್ತಿಯು ನೆರೆಯ ದೇಶ ಭಾರತಕ್ಕೆ ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ. ನಾವು ಮತ್ತು ಭಾರತ ಒಟ್ಟಿಗೆ ನಮ್ಮ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದೇವೆ. ಆದರೆ, ಪಾಕಿಸ್ತಾನವನ್ನು ಟಿಶ್ಯೂ ಪೇಪರ್ ಆಗಿ ಬಳಸಿ, ಎಸೆಯಲಾಗುತ್ತದೆ. ಭಾರತ ಎಲ್ಲ ಕ್ಷೇತ್ರದಲ್ಲೂ ಮುಂದುವರೆಯುತ್ತಲೇ ಇದೆ ಎಂದು ಹೇಳಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada